ಮಂಗಳೂರು: ಜಾತಿ-ಧರ್ಮದ ಹೆಸರಲ್ಲಿ ಇತ್ತೀಚೆಗೆ ಸಂಘರ್ಷಗಳು ಹೆಚ್ಚುತ್ತಿರುವ ಬೆನ್ನಲ್ಲೇ ದ.ಕ. ಜಿಲ್ಲೆಯ ಬಂಟ್ವಾಳ (Bantwal)ತಾಲೂಕಿನ ವಿಟ್ಲ ಸಮೀಪದ ಬೈರಿಕಟ್ಟೆಯಲ್ಲಿ (Birikatte) ಮದುಮಗನೋರ್ವ ಮುಸ್ಲಿಂ ಬಾಂಧವರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ವಿದ್ಯಮಾನ ನಡೆದಿದೆ. ಹಿಜಾಬ್, ಹಲಾಲ್ ಕಟ್-ಜಟ್ಕಾ ಕಟ್, ಆಝಾನ್ ದಂಗಲ್, ವ್ಯಾಪಾರ ಬಹಿಷ್ಕಾರ ಮುಂತಾದ ಕ್ಷಣಕ್ಕೊಂದು ರಂಪಾಟ ತೀವ್ರಗೊಂಡಿದ್ದು ಪರಸ್ಪರ ಎರಡು ಸಮುದಾಯಗಳು ಮುಖ ನೋಡದಂತಹ ಸ್ಥಿತಿ ನಿರ್ಮಾಣವಾಗಿದೆ.
ಅದರೆ ವಿಟ್ಲ(Vitla) ಸಮೀಪದ ಬೈರಿಕಟ್ಟೆ ಎಂಬ ಪುಟ್ಟ ಊರು ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಗೆಳೆಯರ ಬಳಗ ಬೈರಿಕಟ್ಟೆಯ ಸದಸ್ಯರಾದ ಚಂದ್ರಶೇಖರ ಜೆಡ್ಡು ಅವರ ವಿವಾಹ ಸಮಾರಂಭ ಎ.24 ರಂದು ನಡೆದಿತ್ತು. ಆದರ ಮುಸ್ಲಿಂ ಸಮುದಾಯದವರಿಗೆ ರಂಝಾನ್ ತಿಂಗಳಾದ ಕಾರಣಕ್ಕಾಗಿ ಮದುವೆಗೆ ಬರಲಾಗಿಲ್ಲ ಎಂಬ ಕಾರಣಕ್ಕಾಗಿ ಮದುಮಗ ಚಂದ್ರಶೇಖರ್ ತನ್ನ ಊರಿನ ಎಲ್ಲಾ ಮುಸ್ಲಿಂ ಬಂಧುಗಳಿಗಾಗಿ (Muslim Comunity) ಮದುವೆ ಪ್ರಯುಕ್ತ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ (Iftar Party) ಏರ್ಪಡಿಸಿದ್ದರು.
ಭಾರತದ ರಾಯಭಾರಿ ಕರೆದ ಇಫ್ತಾರ್ ಕೂಟದ ಅತಿಥಿಗಳನ್ನು ತಡೆದ ಪಾಕ್!
ಬೈರಿಕಟ್ಟೆಯ ಜುಮಾ ಮಸೀದಿಯಲ್ಲಿ ತನ್ನ ಊರಿನ ಎಲ್ಲಾ ಮುಸ್ಲಿಂ ಬಾಂಧವರಿಗಾಗಿ ಚಂದ್ರಶೇಖರ್ ಇಫ್ತಾರ್ ಕೂಟ ಆಯೋಜಿಸಿದ್ದಾರೆ. ಹಣ್ಣು ಹಂಪಲು, ಜ್ಯೂಸ್ ಮತ್ತು ವಿವಿಧ ಬಗೆಯ ತಿಂಡಿಗಳನ್ನು ಇಫ್ತಾರ್ ಕೂಟದಲ್ಲಿ ಚಂದ್ರಶೇಖರ್ ನೀಡಿದ್ದಾರೆ. ಚಂದ್ರಶೇಖರ್ ಮತ್ತು ಅವರ ಮುಸ್ಲಿಂ ಗೆಳೆಯರೂ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಎಲ್ಲರೂ ಸಹ ಭೋಜನ ಮಾಡಿದ್ದಾರೆ.
ಇಫ್ತಾರ್ ಕೂಟವನ್ನು ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರಿಗೆ ಜಲಾಲಿಯಾ ಜುಮ್ಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಂ ಯುವಜನ ಕಮಿಟಿ(MIYC)ಯ ಅದ್ಯಕ್ಷರು, ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳ ಮುಖಾಂತರ ಸನ್ಮಾನ ಮಾಡಿದರು. ಸೌಹಾರ್ದ ಇಫ್ತಾರ್ ಕೂಟಕ್ಕೆ ಆಗಮಿಸಿದ ಎಲ್ಲರೂ ನವ ದಂಪತಿಯ ಮುಂದಿನ ದಾಂಪತ್ಯ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಪವಿತ್ರ ರಂಜಾನ್: ಜೆಡಿಎಸ್‌ನಿಂದ ಇಫ್ತಿಯಾರ್ ಕೂಟ
ಸದ್ಯ ರಾಜ್ಯದಲ್ಲಿ ಕೋಮು ಸಂಘರ್ಷದ ವಾತಾವರಣ ಇದೆ. ಆದರೆ ವಿಟ್ಲದ ಬೈರಿಕಟ್ಟೆ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಸದ್ಯ ಜಿಲ್ಲೆಯ ಹಲವೆಡೆ ಹಲವು ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲೂ ಸೌಹಾರ್ದ ಇಫ್ತಾರ್ ಆಯೋಜಿಸಲಾಗ್ತಿದೆ. ಹಲವು ಹಿಂದೂ-ಮುಸಲ್ಮಾನರು ಇಫ್ತಾರ್ ನಲ್ಲಿ ಪಾಲ್ಗೊಳ್ಳುವ ಮೂಲಕ ಕೋಮು ಸೂಕ್ಷ್ಮ ಕರಾವಳಿಯಲ್ಲಿ ಮಾದರಿಯ ಸೌಹಾರ್ದ ಸಂದೇಶ ಸಾರುತ್ತಿದ್ದಾರೆ.