Daily Horoscope: ಈ ರಾಶಿಗೆ ಹಿತಶತ್ರುಗಳಿಂದ ಸಮಸ್ಯೆ.. ಎಚ್ಚರ ಅಗತ್ಯ

Published : May 07, 2022, 05:00 AM IST
Daily Horoscope: ಈ ರಾಶಿಗೆ ಹಿತಶತ್ರುಗಳಿಂದ ಸಮಸ್ಯೆ.. ಎಚ್ಚರ ಅಗತ್ಯ

ಸಾರಾಂಶ

7 ಮೇ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಧನಸ್ಸಿಗೆ ಉತ್ತಮ ದಿನ

ಮೇಷ(Aries): ಕೃಷಿಕರಿಗೆ ಉತ್ತಮ ಆದಾಯ ಬರುತ್ತದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಸಿಗಲಿದೆ. ಆತ್ಮ ವಿಶ್ವಾಸದಿಂದಾಗಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು. ಗೆಳೆಯರನ್ನು ಕಣ್ಣು ಮುಚ್ಚಿ ನಂಬಬೇಡಿ. ಆಹಾರದ ಬಗ್ಗೆ ಎಚ್ಚರ ವಹಿಸಿ. ಶನಿ ಸ್ಮರಣೆ ಮಾಡಿ. 

ವೃಷಭ(Taurus): ಗಣ್ಯ ವ್ಯಕ್ತಿಗಳಿಗೆ ಸಮಾಜ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ, ಗೌರವಗಳು ಲಭಿಸಲಿವೆ. ಜತೆಯಲ್ಲೇ ಇದ್ದು ನಿಮಗೆ ಕೇಡು ಬಯಸುವವರ ಬಗ್ಗೆ ಎಚ್ಚರವಾಗಿರಿ. ವಾತ ಸಮಸ್ಯೆ ಕಾಡುವುದು. ಆಹಾರದಲ್ಲಿ ಪಥ್ಯ ಸಾಧಿಸಿ. ಕಪ್ಪು ವಸ್ತ್ರ ಧರಿಸಿ ಕಪ್ಪು ಧಾನ್ಯಗಳನ್ನು ದಾನ ಮಾಡಿ. 

ಮಿಥುನ(Gemini): ಗೃಹಾಲಂಕಾರ ವಸ್ತುಗಳ ಖರೀದಿ ಮಾಡುವಿರಿ. ಮೆಕ್ಯಾನಿಕ್‌ಗಳಿಗೆ ಆದಾಯ ಹೆಚ್ಚುವುದು. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವ ಹೆಚ್ಚಾಗಿ ದೊರೆಯಲಿದೆ. ಕೆಲಸಕಾರ್ಯಗಳಲ್ಲಿ ವಿಘ್ನ ಎದುರಾಗಬಹುದು. ಜೀವನಶೈಲಿ ಕಾಯಿಲೆಗಳು ಸಮಸ್ಯೆ ತರುವುವು. ಅಶ್ವತ್ಥ ಮರದ ಬುಡದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ. 

ಕಟಕ(Cancer): ವ್ಯಾಪಾರ ವಹಿವಾಟುಗಳು ಹೆಚ್ಚಿನ ಲಾಭ ತರಲಿವೆ. ಕೌಟುಂಬಿಕ ಜೀವನ ಸುಖಮಯವಾಗಿರುವುದು. ಸಾಲ ಕೊಡುವುದು, ಪಡೆಯುವುದು ಅಥವಾ ಮಧ್ಯಸ್ಥಿಕೆ ನಡೆಸುವ ಕೆಲಸಕ್ಕೆ ಮುಂದಾಗದಿರಿ. ಮಕ್ಕಳ ಅಸಹಕಾರ, ದುಡುಕು ವರ್ತನೆ ಚಿ೦ತೆ ತರುವುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಸಿಂಹ(Leo): ಹೊಸ ಮನೆಯ ನಿರ್ಮಾಣದ ಕೆಲಸಗಳನ್ನು ಪೂರೈಸಿಕೊಳ್ಳಲು ಹೆಚ್ಚಿನ ಶ್ರಮ ಪಡುವಿರಿ. ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವಿಜ್ಞಾನ ವಿದ್ಯಾಭ್ಯಾಸಗಳಲ್ಲಿ ಹೆಚ್ಚಿನ ಪರಿಣತಿ ಸಾಧಿಸುವರು. ಸಂಗಾತಿಯ ವಿಷಯವಾಗಿ ಸಂತಸವಾಗುವುದು. ಶನಿ ಸ್ಮರಣೆ ಮಾಡಿ. 

ಕನ್ಯಾ(Virgo): ಕುಟುಂಬದಲ್ಲಿನ ಸಣ್ಣಪುಟ್ಟ ಸಮಸ್ಯೆಗಳು ದೂರಾಗುವುದು. ದೈವಾನುಗ್ರಹ ಚೆನ್ನಾಗಿದ್ದು ದೇವತಾ ದರ್ಶನ ಭಾಗ್ಯವಿದೆ. ಅಡೆತಡೆಗೆ ಒಳಗಾಗಿದ್ದ ಶುಭ ಕಾರ್ಯ ನೆರವೇರಲು ದಿನವನ್ನು ನಿಗದಿ ಪಡಿಸುವಿರಿ. ಹತ್ತಿರದ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ತುಲಾ(Libra): ಮಾಡೆಲಿಂಗ್ ಮತ್ತು ಅಡ್ವರ್ಟೈಸಿಂಗ್ ಏಜೆನ್ಸಿಯವರಿಗೆ ಉತ್ತಮ ಅವಕಾಶಗಳು ಒದಗಿ ಬರಲಿವೆ. ರೈತರಿಗೆ ಅಡಕೆ ಮತ್ತು ತೆಂಗು ಬೆಳೆಗಳು ಹೆಚ್ಚಿನ ಲಾಭ ತರುವುದು. ಹೊಸ ಕಲಿಕೆಗಳು ಸಂತಸ ತರಲಿವೆ. ದೂರಪ್ರಯಾಣದಿಂದ ಉಲ್ಲಾಸ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

Lunar Eclipse 2022: 2022 ರ ಮೊದಲ ಚಂದ್ರಗ್ರಹಣ ಯಾವಾಗ, ಇದರ ಪರಿಣಾಮವೇನು?

ವೃಶ್ಚಿಕ(Scorpio): ಅವಿವಾಹಿತರಿಗೆ ಉತ್ತಮ ವ್ಯಕ್ತಿಯೊಂದಿಗೆ ವಿವಾಹ ನಿಶ್ಚಯವಾಗಿ ಮನಸ್ಸಿಗೆ ಹರ್ಷ ಸಿಗುವುದು. ಉದ್ಯೋಗಾರ್ಥಿಗಳು ಉತ್ತಮ ಯಶಸ್ಸು ಗಳಿಸಲು ಉತ್ತಮ ತಯಾರಿ ಮಾಡಿಕೊ೦ಡಿದ್ದರೂ ಅನಿರೀಕ್ಷಿತ ಅಡಚಣೆಗಳು ದೃತಿಗೆಡಿಸುವವು. ಬಡವರಿಗೆ ದಾನ ಮಾಡಿ. 

ಧನುಸ್ಸು(Sagittarius): ನಿಮ್ಮ ಮಾತಿಗೆ ಎಲ್ಲರೂ ಮನ್ನಣೆ ಕೊಡುವರು. ಕ್ರಯ ವಿಕ್ರಯ, ಬಂಡವಾಳ ಹೂಡಿಕೆ, ಷೇರು ಖರೀದಿ ವಿಚಾರಗಳತ್ತ ಆಸಕ್ತಿ ಹೆಚ್ಚಲಿದೆ. ಮನೋರಂಜನೆಗಾಗಿ ವ್ಯಯ ಹೆಚ್ಚುವುದು. ಸಂಗಾತಿಯ ಬೆಂಬಲ ಚೆನ್ನಾಗಿರಲಿದೆ. ತಿಲ ದಾನ ಮಾಡಿ.

ಮಕರ(Capricorn): ಹಲವು ದಿನಗಳಿಂದ ಬಾಕಿ ಇರುವ ಕೆಲಸಗಳು ಇಂದು ಮುಕ್ತಾಯದ ಹಂತ ತಲುಪಲಿವೆ. ಖರ್ಚುವೆಚ್ಚಗಳ ಕಡೆ ಹೆಚ್ಚಿನ ಗಮನ ಅಗತ್ಯ. ತಾಳ್ಮೆಯಿ೦ದ ವಿವೇಚನೆಯಿ೦ದ ಅಡೆತಡೆ ನಿವಾರಿಸಿ ಕೊಳ್ಳಿ. ಸಹೋದರರ ಸಹಕಾರ ಸಿಗಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಈ ರಾಶಿಯವರನ್ನು ಸೋಮಾರಿ ಮಠದ ಅಧ್ಯಕ್ಷರನ್ನಾಗಿಸಬಹುದು!

ಕುಂಭ(Aquarius): ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ. ಖರ್ಚು ಅಧಿಕವಾಗಿರುವುದು. ಬಂಧುಮಿತ್ರರ ಭೇಟಿಯಿಂದ ಸಂತಸವಾಗುವುದು. ವೃದ್ಧರು ಪಿತ್ತ ಸ೦ಬ೦ಧಿ ಕಾಯಿಲೆಯಿ೦ದ, ಕಣ್ಣಿನ ಸಮಸ್ಯೆಯಿ೦ದ ಬಳಲುವ ಸಾಧ್ಯತೆ ಇದೆ. ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಬಹುದು. ಶನಿ ಸ್ಮರಣೆ ಮಾಡಿ. 

ಮೀನ(Pisces): ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಬಂಧುಮಿತ್ರರ ಭೇಟಿ ಸಂತಸ ತರುವುದು. ಹೊಸ ವಸ್ತುಗಳ ಖರೀದಿ ಮಾಡುವಿರಿ. ಮನೆಯ ಬಾಕಿ ಉಳಿದ ಕೆಲಸಗಳು ಪೂರೈಸಲಿವೆ. ಅವಿವಾಹಿತರಿಗೆ ಸಂತಸದ ಸುದ್ದಿ ಸಿಗುವುದು.  ನವಗ್ರಹ ಶ್ಲೋಕ ಹೇಳಿಕೊಳ್ಳಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ