Daily Horoscope: ಕಟಕಕ್ಕೆ ಧನನಷ್ಟ, ವೃಶ್ಚಿಕಕ್ಕೆ ಕಾಡುವ ಆತಂಕ

Published : May 05, 2022, 07:10 AM IST
Daily Horoscope: ಕಟಕಕ್ಕೆ ಧನನಷ್ಟ, ವೃಶ್ಚಿಕಕ್ಕೆ ಕಾಡುವ ಆತಂಕ

ಸಾರಾಂಶ

5 ಮೇ 2022, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಿಥುನಕ್ಕೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಪಾಯ

ಮೇಷ(Aries): ಸಂಪಾದನೆಯೆಲ್ಲವೂ ಎಲ್ಲೋ ಸಿಕ್ಕಿಕೊಂಡು ಕೈಲಿ ಹಣವಿಲ್ಲದಂತೆನಿಸಬಹುದು. ಕಚೇರಿಯಲ್ಲಿ ಸಹದ್ಯೋಗಿಗಳ ಸಹಕಾರ ಸಿಕ್ಕಿ ಕೆಲಸ ಮಾಡಿದ್ದೇ ತಿಳಿಯದೆ ಹೋಗಬಹುದು. ವಾಹನಗಳ ಚಾಲನೆಯಲ್ಲಿ ಎಚ್ಚರ ಅಗತ್ಯ. ಮಕ್ಕಳನ್ನು ಸೃಜನಾತ್ಮಕ ಕಲಿಕೆಯಲ್ಲಿ ತೊಡಗಿಸಿ. ವಿಷ್ಣು ಸ್ಮರಣೆ ಮಾಡಿ. 

ವೃಷಭ(Taurus): ಸಹೋದ್ಯೋಗಿಗಳೊಂದಿಗೆ ಸ್ನೇಹದಿಂದ ವರ್ತಿಸಿ. ಕೆಲಸ ಸುಗಮವಾಗುವುದು. ಜವಾಬ್ದಾರಿಗಳು ಕೊಂಚ ಬದಲಾಗಬಹುದು. ಸಂಗಾತಿಯನ್ನು ಸ್ನೇಹದಿಂದ ನೋಡಿ. ಅಧಿಕಾರಯುತ ವರ್ತನೆಯಿಂದ ಪ್ರೀತಿ ಸಾಧ್ಯವಿಲ್ಲ. ಗುರು ರಾಘವೇಂದ್ರ ಸ್ವಾಮಿ ಶತನಾಮಾವಳಿ ಹೇಳಿಕೊಳ್ಳಿ. 

ಮಿಥುನ(Gemini): ನೂತನ ಗೃಹ, ನಿವೇಶನ ಖರೀದಿ ಪೂರ್ವತಯಾರಿಗಳು ನಡೆಯುವುವು. ದೊಡ್ಡ ಲಾಭಕ್ಕಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.  ಸರ್ಕಾರಿ ವಲಯದ ಕೆಲಸಗಳಲ್ಲಿ ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಉದ್ಯಮದ ನಷ್ಟದಿಂದಾಗಿ ಖಿನ್ನತೆ ಆವರಿಸಬಹುದು. ಸಕಾರಾತ್ಮಕ ಚಿಂತನೆ ನಡೆಸಲು ಪ್ರಯತ್ನಿಸಿ. ಸರಿಯಾಗಿ ಯೋಜಿಸದೆ ತೊಡಗಿಸಿದ ಹಣ ಕಳೆದುಕೊಳ್ಳುವ ಸಾಧ್ಯತೆ. ಮಕ್ಕಳ ವಿಷಯದಲ್ಲಿ ಅತಿ ನಾಜೂಕುತನ ಬೇಡ. ಗುರು ರಾಘವೇಂದ್ರ ಸ್ವಾಮಿ ಸ್ಮರಣೆ ಮಾಡಿ. 

Vastu tips: ಮಣ್ಣಿನ ಮಡಿಕೆಯನ್ನು ಈ ದಿಕ್ಕಿನಲ್ಲಿಟ್ಟರೆ… ಸಂಪತ್ತು ವೃದ್ಧಿ

ಸಿಂಹ(Leo): ಬೆನ್ನನೋವು, ಕಾಲುನೋವು ಕಾಡಬಹುದು. ನಿಮ್ಮ ಮನೆಯ ಯೋಜನೆಗಳಿಗೆ ಗೆಳೆಯರ ಸಹಕಾರ ಸಿಕ್ಕುವುದು. ಅದೃಷ್ಟಕ್ಕಾಗಿ ಕಾಯುತ್ತಾ ಕುಳಿತರೆ ಪ್ರಯೋಜನವಿಲ್ಲ. ನಿಮ್ಮ ಬಳಿ ಇರುವುದೆಲ್ಲವೂ ಅದೃಷ್ಟದ ಕಾರಣಕ್ಕಾಗಿಯೇ ಎಂದು ನಂಬಿ ಮುನ್ನಡೆಯಿರಿ. ಕುಟುಂಬ ಸೌಖ್ಯ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ಕನ್ಯಾ(Virgo): ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಎದುರಾಗುತ್ತವೆ. ಬೃಹಸ್ಪತಿಯ ಸ್ಮರಣೆ ಮಾಡಿ. 

ತುಲಾ(Libra): ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಸಂತೋಷದ ಅನ್ವೇಷಣೆಯಲ್ಲಿ, ಇಂದು ನಿಮ್ಮ ಕೈಯಲ್ಲಿ ಕೆಲವು ಅನಗತ್ಯ ಖರ್ಚುಗಳು ಇರಬಹುದು. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಕುಲ ದೇವರಿಗೆ ತುಪ್ಪದ ದೀಪ ಹಚ್ಚಿ. 

ವೃಶ್ಚಿಕ(Scorpio): ಮನಸ್ಸು ಚಂಚಲವಾಗಿರುವುದು. ಆತಂಕಗಳು ಕಾಡುವುವು. ದೃಢ ಮನಸ್ಸಿನಿಂದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಷ್ಟವೆನಿಸುವುದು. ದೂರ ಪ್ರಯಾಣ ಹಿತ ತರುವುದು. ಸ್ನೇಹಿತರಿಂದ ಮನಸ್ಸಿಗೆ ಕೊಂಚ ಸಮಾಧಾನ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ಖುಷಿಯಾಗಿರುವುದು ಈ ರಾಶಿಗಳಿಗೆ ಸುಲಭ

ಧನುಸ್ಸು(Sagittarius): ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಆರೋಗ್ಯ ಸುಧಾರಿಸುವುದು. ಮನೆ ದೇವರ ಸ್ಮರಣೆ ಮಾಡಿ. 

ಮಕರ(Capricorn): ಹೊಸ ವ್ಯಕ್ತಿಗಳ ಪರಿಚಯದಿಂದ ಸಂತಸ. ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ಸಾಹ, ಗೌರವ, ಮನ್ನಣೆ. ಸಂಗಾತಿಯೊಂದಿಗೆ ಮನಸ್ತಾಪ ಉಂಟಾಗಬಹುದು. ಸ್ವಲ್ಪ ಸೋತು ಗೆಲ್ಲಲು ಪ್ರಯತ್ನಿಸಿ. ಬೆಳ್ಳಿ ಬಂಗಾರ, ಗೃಹಾಲಂಕಾರ ವಸ್ತುಗಳಿಗಾಗಿ ಖರ್ಚು ಹೆಚ್ಚು. ರಾಮ ನಾಮ ಸ್ಮರಣೆ ಮಾಡಿ. 

ಕುಂಭ(Aquarius): ವ್ಯಾಪಾರದ ವಿಷಯಗಳಲ್ಲಿ ತುಂಬಾ ಆತುರ ಪಡಬೇಡಿ. ನಿಧಾನವೇ ಪ್ರಧಾನ. ಸಂಕುಚಿತ ಮನೋಭಾವ ತೊರೆಯಲು ಪ್ರಯತ್ನಿಸಿ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಪೂರ್ವ ತಯಾರಿಯಲ್ಲಿ ತೊಡಗುವಿರಿ. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

ಮೀನ(Pisces): ವ್ಯಾಪಾರ- ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಆದಾಯ, ಬಹುಕಾಲದಿಂದ ಮನಸ್ಸನ್ನು ಹದಗೆಡಿಸಿದ್ದ ಸಮಸ್ಯೆಗೆ ಪರಿಹಾರ. ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಹೋಗುವುದು. ಕಚೇರಿಯಲ್ಲಿ ಬಡ್ತಿ ಅವಕಾಶವಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ