Daily Horoscope: ವೃಷಭಕ್ಕೆ ವಾಹನ ಲಾಭ, ಮಕರಕ್ಕೆ ಲಾಭವಿದ್ದರೂ ಅಶಾಂತಿ ತಪ್ಪದು..

Published : Apr 28, 2022, 07:03 AM IST
Daily Horoscope: ವೃಷಭಕ್ಕೆ ವಾಹನ ಲಾಭ, ಮಕರಕ್ಕೆ ಲಾಭವಿದ್ದರೂ ಅಶಾಂತಿ ತಪ್ಪದು..

ಸಾರಾಂಶ

28 ಏಪ್ರಿಲ್ 2022, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೀನಕ್ಕೆ ಉತ್ತಮ ದಿನ

ಮೇಷ(Aries): ನಿಮ್ಮ ಮನದಿಂಗಿತ ಕೈಗೂಡುವುದು. ಉದ್ಯೋಗ ಸ್ಥಳದಲ್ಲಿ ಹೊಸ ಸ್ನೇಹಿತರು ಸಿಗುವ ಜೊತೆಗೆ, ಕೆಲಸವನ್ನು ಹುಮ್ಮಸ್ಸಿನಲ್ಲಿ ಮಾಡಲಿದ್ದೀರಿ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ನಿಮ್ಮ ಹಾಸ್ಯಪ್ರಜ್ಞೆ ನಿಮ್ಮನ್ನು ಕಾಪಾಡಲಿದೆ. ಗುರು ರಾಘವೇಂದ್ರ ಸ್ವಾಮಿಯನ್ನು ನೆನೆಯಿರಿ. 

ವೃಷಭ(Taurus): ಹೊಸ ವಾಹನ, ಒಡವೆ ಖರೀದಿಸುವಿರಿ. ಭೌತಿಕ ಸುಖಕ್ಕಾಗಿ ಸಾಕಷ್ಟು ವ್ಯಯಿಸಿದರೂ ಅವೆಲ್ಲವೂ ಬದುಕನ್ನು ಸುಲಭಗೊಳಿಸುವುದರಿಂದ ಖರ್ಚು ಭಯ ಹುಟ್ಟಿಸುವುದಿಲ್ಲ. ಹಲ್ಲು ನೋವು ಕಾಡುವುದು. ಕುಟುಂಬದಲ್ಲಿ ಸಂತೋಷ ಇರಲಿದೆ. ವಿಷ್ಣು ಸಹಸ್ರನಾಮ ಹೇಳಿ.

ಮಿಥುನ(Gemini): ಹೊಸ ಜವಾಬ್ದಾರಿಗಳು ಹೆಗಲಿಗೇರಲಿವೆ. ಗಣ್ಯರ ಸಹಕಾರ ಬಲವಿರುತ್ತದೆ. ಸಂಸಾರ ಜೀವನ ನೀರಸವಾಗಿದ್ದರೆ ಅದನ್ನು ವಿಶೇಷವಾಗಿಸಲು ನೀವೇ ಪ್ರಯತ್ನ ಹಾಕಿ. ಮನಸ್ಸಿನಲ್ಲಿ ಯಾವುದೋ ಗೊಂದಲವಿದ್ದರೆ ಮನೆ ಹಿರಿಯರ ಬಳಿ ಆ ಬಗ್ಗೆ ಮಾತನಾಡಿ. ವಿಷ್ಣು ಸಹಸ್ರನಾಮ ಹೇಳಿ.

ಕಟಕ(Cancer): ಹೊಸ ಯೋಜನೆಗೆ ಕುಟುಂಬ ಸದಸ್ಯರ ಸಹಕಾರ ದೊರೆಯುವುದು. ಸ್ನೇಹಿತರು ನಿಮ್ಮ ಗುಟ್ಟನ್ನು ರಟ್ಟು ಮಾಡಿ ನಂಬಿಕೆ ಕಳೆದುಕೊಳ್ಳುವರು. ಹಣದ ವಿಷಯದಲ್ಲಿ ಮೋಸ ಹೋಗಬಹುದು, ಎಚ್ಚರ. ನಿಮ್ಮ ಕರ್ತವ್ಯ ಪ್ರಜ್ಞೆಯಿಂದಲೇ ಲಾಭ ಪಡೆಯುವಿರಿ. ಲಕ್ಷ್ಮೀ ವೆಂಕಟೇಶ್ವರ ಧ್ಯಾನ ಮಾಡಿ. 

ಸಿಂಹ(Leo): ಸಹೋದರಿಯ ಮನಸ್ಥಿತಿಯಿಂದಾಗಿ ಸಮಸ್ಯೆಯು ಬಿಡಿಸಲಾರದ ಕಗ್ಗಂಟಾಗಿ ಕೂರುವುದು. ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಫಲ, ಹೂಡಿಕೆ ಮಾಡಬೇಡಿ. ಕ್ರೀಡಾ ಚಟುವಟಿಕೆಗಳು ಸಂತಸ ತರಲಿವೆ. ಕೆಲಸದ ಭಾರ ಕೊಂಚ ಕಡಿಮೆಯಾಗಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕನ್ಯಾ(Virgo): ಸಾಕಷ್ಟು ಸತಾಯಿಸುತ್ತಿದ್ದ ಹಣ ಸುಲಭವಾಗಿ ಕೈ ಸೇರಲಿದೆ. ಉದ್ಯೋಗದಲ್ಲಿ ಉನ್ನತಿ ಹೊಂದುವಿರಿ. ಬಹಳ ತಾಳ್ಮೆಯನ್ನು ಒಗ್ಗೂಡಿಸಿಕೊಳ್ಳಲು ಪ್ರಯತ್ನಿಸಿ. ಯಾವುದೇ ಸನ್ನಿವೇಶಕ್ಕೂ ತಕ್ಷಣ ಪ್ರತಿಕ್ರಿಯಿಸಬೇಡಿ. ನಿಶ್ಶಕ್ತಿ ಕಾಡಲಿದೆ. ರಾಘವೇಂದ್ರ ಸ್ವಾಮಿ ಅಷ್ಟೋತ್ತರ ಹೇಳಿಕೊಳ್ಳಿ.

ತುಲಾ(Libra): ಅಣ್ಣ ತಮ್ಮಂದಿರ ತಕರಾರು ಅಂತ್ಯ ಕಾಣುವುದು. ಮನೆ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ. ಸಂಗಾತಿಯಿಂದ ನೀವು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಸುಸ್ತಿಗೆ ದೈಹಿಕವಾಗಿ ಪೋಷಕಾಂಶಗಳ ಕೊರತೆ ಕಾರಣವಿರಬಹುದು. ಐರನ್, ವಿಟಮಿನ್ ಕೊರತೆಯನ್ನು ನೀಗಿಸಿಕೊಳ್ಳುವತ್ತ ಗಮನ ಹರಿಸಿ. ರಾಯರ ಮಠಕ್ಕೆ ಭೇಟಿ ನೀಡಿ. 

ವೃಶ್ಚಿಕ(Scorpio): ಸರಿಯಾದ ನಿರ್ಧಾರ ತೆಗೆದುಕೊಂಡರೆ ಇದುವರೆಗಿನ ಮಾನಸಿಕ ಯಾತನೆಗೆ ಮುಕ್ತಿ ಸಿಗಲಿದೆ. ನಿರ್ಧಾರ ತೆಗೆದುಕೊಳ್ಳಲು ತಡ ಮಾಡಿ ಸಮಯ ವ್ಯರ್ಥ ಮಾಡಿ. ನಿಮ್ಮ ಅಭಿಪ್ರಾಯ, ಇಷ್ಟಕಷ್ಟಗಳಂತೆ ಇತರರದೂ ಇರುತ್ತದೆ ಎಂದು ನಂಬಿ ಅದನ್ನು ಗೌರವಿಸಿ. ರಾಮ ಧ್ಯಾನ ಮಾಡಿ. 

ವರ್ಷದ ಮೊದಲ ಸೂರ್ಯಗ್ರಹಣ : ಸಮಯ, ಸ್ಥಳ, ಪರಿಣಾಮ ತಿಳಿಯಿರಿ

ಧನುಸ್ಸು(Sagittarius): ಕೋಪ ನಿಯಂತ್ರಿಸಲು ಪ್ರಯತ್ನಿಸಿ. ಸೋಮಾರಿತನ ಬೇಡ. ಲಸದಲ್ಲಿ ಕಲಿಯಲು ಸಹಾಯ ಮಾಡುವ ಮತ್ತು ಮಾರ್ಗದರ್ಶನ ನೀಡುವ ಒಳ್ಳೆಯ ಜನರೊಂದಿಗೆ ನೀವು ಸಂಪರ್ಕವನ್ನು ಸ್ಥಾಪಿಸಿಕೊಳ್ಳಿ. ವಿಷ್ಣುವಿನ ಸ್ಮರಣೆ ಮಾಡಿ.

ಮಕರ(Capricorn): ಉದ್ಯೋಗ ಸ್ಥಳದಲ್ಲಿ ಅಶಾಂತಿ ತಲೆದೋರುವುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುವವರು ಅಪಾರ ಆರ್ಥಿಕ ಲಾಭಗಳನ್ನು ಪಡೆಯಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ. ಗೋ ಗ್ರಾಸ ನೀಡಿ.

ಕುಂಭ(Aquarius): ಹೊಸ ಮನೆಯ ಕೆಲಸ ಹೊಸ ಹುರುಪು ತರಲಿದೆ. ಚಿನ್ನ ಖರೀದಿಸಲಿರುವಿರಿ. ಕಾರ್ಯಕ್ಷೇತ್ರದ ಬದಲಾವಣೆ ಕೊಂಚ ಚಿಂತೆ ತರುವುದು. ಕಣ್ಣಿನ ಸಮಸ್ಯೆಗಳು ಕಾಡಬಹುದು. ನಿರ್ಲಕ್ಷಿಸಬೇಡಿ. ಮಕ್ಕಳ ಕಡೆ ಹೆಚ್ಚಿನ ನಿಗಾ ವಹಿಸಿ.  ಬಡವರಿಗೆ ಆಹಾರ ನೀಡಿ. 

Chanakya Neeti: ಯಶಸ್ಸಿಗೆ ಪಾಲಿಸಿ ಈ ಐದು ಸೂತ್ರ

ಮೀನ(Pisces): ಬ್ಯಾಂಕ್ ಕೆಲಸಗಳು ನೆರವೇರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ದಿನವಾಗಿದೆ. ಸಾಲದ ಹಣ ಮರು ಪಾವತಿಯಾಗುವುದು. ಕುಟುಂಬದಲ್ಲಿ ನಿಮ್ಮಿಂದಾಗಿ ಉತ್ತಮ ಕಾರ್ಯಗಳು ಜರುಗಬಹುದು. ವಿಷ್ಣು ಸಹಸ್ರನಾಮ ಪಠಿಸಿ. 

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ