Daily Horoscope:ಈ ರಾಶಿಯವರಿಗೆ ಇಂದು ಅಧಿಕ ಕೆಲಸದೊತ್ತಡದಿಂದ ಮನಸ್ಸಿಗೆ ಕಿರಿಕಿರಿ

By Chirag Daruwalla  |  First Published Sep 8, 2023, 5:00 AM IST

ಇಂದು 08ನೇ ಸೆಪ್ಟೆಂಬರ್ 2023 ಶುಕ್ರವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.


ಮೇಷ ರಾಶಿ  (Aries): ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಇಂದು ಒಂದಿಷ್ಟು ಪರಿಶ್ರಮ ಪಡುತ್ತೀರಿ ಹಾಗೂ ಅದರಲ್ಲಿ ಯಶಸ್ಸು ಗಳಿಸುತ್ತೀರಿ ಕೂಡ. ಕುಟುಂಬ ಸದಸ್ಯರೊಂದಿಗೆ ಸ್ವಲ್ಪ ಸಮಯ ಕಳೆಯೋದ್ರಿಂದ ಮನಸ್ಸಿಗೆ ನೆಮ್ಮದಿ. ಸ್ನೇಹಿತರೊಂದಿಗೆ ಮಹತ್ವದ ಮಾತುಕತೆ ನಡೆಸುತ್ತೀರಿ. ಇನ್ನೊಬ್ಬರ ಮಾತು ಕೇಳಿ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರ ವಹಿಸಿ. ವೈವಾಹಿಕ ಜೀವನ ಖುಷಿಯಿಂದ ಕೂಡಿರಲಿದೆ.

ವೃಷಭ ರಾಶಿ  (Taurus): ಕುಟುಂಬದ ಕೆಲಸಗಳಲ್ಲಿ ನಿಮಗೆ ಇಂದು ವಿಶೇಷ ನೆರವು ಸಿಗಲಿದೆ. ನಿಮಗೆ ಆಸಕ್ತಿಯಿರುವ ಚಟುವಟಿಕೆಗಳಿಗೆ ಒಂದಿಷ್ಟು ಸಮಯ ಮೀಸಲಿಡಿ. ಇದು ನಿಮ್ಮ ಪ್ರತಿಭೆಯನ್ನು ಗುರುತಿಸಲು ಅವಕಾಶ ಕಲ್ಪಿಸುವ ಜೊತೆಗೆ ಆಧ್ಯಾತ್ಮಿಕ ಖುಷಿಯನ್ನು ಕೂಡ ನೀಡುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಆತ್ಮೀಯ ಸ್ನೇಹಿತನ ನೆರವು ಪಡೆಯಲು ಮರೆಯಬೇಡಿ. ಉದ್ಯಮ ಸಂಬಂಧಿ ಕೆಲಸಗಳಲ್ಲಿ ಇಂದು ನಿಮಗೆ ಜಯ ಸಿಗಲಿದೆ.  

Tap to resize

Latest Videos

undefined

ಮಿಥುನ ರಾಶಿ (Gemini): ಇಂದು ಎಂಥ ಸಂಕಷ್ಟದ ಪರಿಸ್ಥಿತಿ ಎದುರಾದರೂ ಆತ್ಮವಿಶ್ವಾಸ ಹಾಗೂ ಪರಿಸ್ಥಿತಿಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುವ ಮೂಲಕ ನಿಭಾಯಿಸುತ್ತೀರಿ. ಎಂದೋ ನೀಡಿದ ಸಾಲ ಇಂದು ಮರಳಿ ನಿಮ್ಮ ಕೈಸೇರುತ್ತದೆ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವಾಗ ಸಮಸ್ಯೆ ಎದುರಾಗಬಹುದು. ಇಂಥ ಸಮಯದಲ್ಲಿ ಅನುಭವವುಳ್ಳ ವ್ಯಕ್ತಿಯ ಸಲಹೆ ಪಡೆಯಿರಿ. ಇನ್ನೊಬ್ಬರ ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚು ಮಧ್ಯಪ್ರವೇಶಿಸಬೇಡಿ.

ಕಟಕ ರಾಶಿ  (Cancer):ಇಂದು ನಿಮ್ಮ ಆರೋಗ್ಯ ಸುಧಾರಿಸಲಿದೆ. ಮರಳಿ ಹೊಸ ಉತ್ಸಾಹ ಹಾಗೂ ಶಕ್ತಿಯಿಂದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೀರಿ. ದೀರ್ಘಸಮಯದಿಂದ ಬಾಕಿ ಉಳಿದಿದ್ದ ಕೆಲಸವನ್ನು ಇಂದು ಪೂರ್ಣಗೊಳಿಸುತ್ತೀರಿ. ಮಕ್ಕಳ ವರ್ತನೆ ಮನಸ್ಸಿಗೆ ನೋವುಂಟು ಮಾಡಬಹುದು. ಆದರೆ, ಕೋಪಗೊಳ್ಳದೆ ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಿ. ಉದ್ಯಮಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸರಿಯಾಗಿ ಯೋಚಿಸಿ.

ಮೈಸೂರಿನಲ್ಲಿ ಕಳೆಗಟ್ಟಿದ ದಸರಾ ವೈಭವ: ತೂಕದಲ್ಲೂ ಮೇಲುಗೈ ಸಾಧಿಸಿದ ಕ್ಯಾಪ್ಟನ್ ಅಭಿಮನ್ಯೂ..!

ಸಿಂಹ ರಾಶಿ  (Leo): ಸ್ನೇಹಿತರು ಹಾಗೂ ಬಂಧುಗಳ ಜೊತೆಗೆ ಫೋನ್ ನಲ್ಲಿ ಮಾತನಾಡಿ ಮನಸ್ಸಿಗೆ ನೆಮ್ಮದಿಯ ಭಾವನೆ. ಕೆಲವೊಂದು ವಿಷಯಗಳ ಬಗ್ಗೆ ನೀವು ಇಂದು ಮನಸ್ಸು ಬಿಚ್ಚಿ ಮಾತನಾಡುವ ಕಾರಣ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮುಂಗೋಪದಿಂದ ಮನೆಯ ನೆಮ್ಮದಿ ಕೆಡಬಹುದು, ಎಚ್ಚರ. ಉದ್ಯೋಗದಲ್ಲಿ ಯಾವುದೇ ಸಮಸ್ಯೆ ಕಾಡದು.

ಕನ್ಯಾ ರಾಶಿ (Virgo):ಕಷ್ಟದ ಪರಿಸ್ಥಿತಿಯಲ್ಲಿ ಇಂದು ನಿಮ್ಮ ಆತ್ಮವಿಶ್ವಾಸ ಜೊತೆ ನೀಡಲಿದೆ. ಇದರಿಂದ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಯಶಸ್ಸು ಸಿಗಲಿದೆ. ತಾಯಿಯಿಂದ ವಿಶೇಷ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲಿ ಕೂಡ ಆಸಕ್ತಿ ತೋರುತ್ತಾರೆ. ಮಗುವಿನ ಆರೋಗ್ಯದ ಕುರಿತು ಚಿಂತೆ ಮೂಡಬಹುದು. ಶೀಘ್ರದಲ್ಲೇ ಸಮಸ್ಯೆ ಪರಿಹರಿಯಲಿದೆ. ಸಿಟ್ಟಿನಲ್ಲಿ ಕೆಟ್ಟ ಪದಗಳನ್ನು ಬಳಸಬೇಡಿ. 

ತುಲಾ ರಾಶಿ (Libra):ಇಂದು ಅದೃಷ್ಟ ನಿಮ್ಮ ಕಡೆಗಿದೆ. ತಂದೆ ಅಥವಾ ತಂದೆಯ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂದು ನಿಮಗೆ ಬೆಂಬಲ ಸಿಗಲಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೀರಿ. ನಿಮ್ಮ ಅನುಮಾನದ ಸ್ವಭಾವ ನಿಮಗೇ ತೊಂದರೆ ತಂದೊಡ್ಡುವ ಸಾಧ್ಯತೆಯಿದೆ. ಒತ್ತಡದ ಕಾರಣಕ್ಕೆ ನಿಮ್ಮ ಕೆಲವು ಕೆಲಸಗಳು ಇಂದು ಅಪೂರ್ಣವಾಗಿಯೇ ಉಳಿಯಲಿವೆ. ಉದ್ಯಮದಲ್ಲಿ ಏರಿಳಿತ ಅನುಭವಕ್ಕೆ ಬರಲಿದೆ. 

ವೃಶ್ಚಿಕ ರಾಶಿ (Scorpio):ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗೆ ವಿಶೇಷ ಬೆಂಬಲ ನೀಡಲಿದ್ದೀರಿ. ಇದರಿಂದ ನಿಮಗೆ ಮಾನಸಿಕ ಹಾಗೂ ಆಧ್ಯಾತ್ಮಿಕ ನೆಮ್ಮದಿ ಸಿಗಲಿದೆ. ಬಹುದಿನಗಳಿಂದ ಬಾಕಿ ಉಳಿದಿರುವ ಪ್ರಮುಖ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಇನ್ನೊಬ್ಬರ ವಿಚಾರದಲ್ಲಿ ನೀವು ಅತೀಯಾಗಿ ತಲೆ ಹಾಕುವುದರಿಂದ ಅವರಿಗೆ ಕಿರಿಕಿರಿಯುಂಟಾಗಲಿದೆ. ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. 

ಧನು ರಾಶಿ (Sagittarius):ಪ್ರಭಾವಿ ಹಾಗೂ ಅನುಭವಿ ವ್ಯಕ್ತಿಯೊಬ್ಬರ ನೆರವಿನಿಂದ ಇಂದು ನಿಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಅಧಿಕ ಕೆಲಸದೊತ್ತಡದ ಕಾರಣಕ್ಕೆ ಮನಸ್ಸಿಗೆ ಕಿರಿಕಿರಿಯುಂಟಾಗಬಹುದು. ನಿಮ್ಮ ಕೆಲಸವನ್ನು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. 

ರಾಧಾ-ಕೃಷ್ಣನ ವಿಗ್ರಹವನ್ನು ಇಡುತ್ತಿದ್ದರೆ, ಈ ವಾಸ್ತು ನಿಯಮಗಳನ್ನು ಅನುಸರಿಸಿ

ಮಕರ ರಾಶಿ (Capricorn):ಇಂದಿನ ದಿನ ನಿಮಗೆ ಶುಭದಾಯಕವಾಗಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ನೀವು ಮಾಡಿದ ಪ್ರಯತ್ನ ಕೂಡ ಇಂದು ಫಲ ನೀಡಲಿದೆ.  ಬೇರೆ ವ್ಯಕ್ತಿಗಳು ನಿಮಗೆ ಹಾನಿ ಮಾಡುವ ಸಾಧ್ಯತೆಯಿದೆ. ಹೀಗಾಗಿ ಎಚ್ಚರದಿಂದ ಇರಿ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಇತರರು ಮೂಗು ತೂರಿಸದಂತೆ ಎಚ್ಚರ ವಹಿಸಿ. 

ಕುಂಭ ರಾಶಿ (Aquarius): ಒತ್ತಡದಿಂದ ಮುಕ್ತರಾಗಲು ಇಂದು ನೀವು ಹೆಚ್ಚಿನ ವಿಶ್ರಾಂತಿ ಪಡೆಯುವ ಮೂಡ್ ನಲ್ಲಿರುತ್ತೀರಿ. ನಿಮಗೆ ಆಸಕ್ತಿಯಿರುವ ಚಟುವಟಿಕೆಗಳಲ್ಲಿ ಸಮಯ ಕಳೆಯೋದ್ರಿಂದ ಖುಷಿಯಾಗಲಿದೆ. ನೀವು ಮಾಡುವ ಕೆಲಸದಲ್ಲಿ ಇಂದು ಅನಿರೀಕ್ಷಿತ ಯಶಸ್ಸು ಸಿಗಲಿದೆ. ಹಿರಿಯರ ಜೊತೆಗೆ ಮಾತನಾಡುವಾಗ ಕೆಟ್ಟ ಪದಗಳನ್ನು ಬಳಸಬೇಡಿ. ನಿಮ್ಮ ಆಲಸ್ಯವನ್ನು ಆದಷ್ಟು ದೂರ ಮಾಡಲು ಪ್ರಯತ್ನಿಸಿ. 

ಮೀನ ರಾಶಿ  (Pisces): ಹಿರಿಯ ವ್ಯಕ್ತಿಗಳ ಸಾಂಗತ್ಯದಿಂದ ಮನಸ್ಸಿಗೆ ನೆಮ್ಮದಿ. ಹಿಂದೆ ನೀಡಿರುವ ಸಾಲವನ್ನು ಮರಳಿ ಪಡೆಯಲು ಇದು ಸೂಕ್ತ ಸಮಯ. ನೀವು ಅಂದುಕೊಂಡ ರೀತಿಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಬೇಸರಿಸಬೇಡಿ. ಸಮಯ ಸರಿದಂತೆ ಅನುಕೂಲಕರವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಒಳ್ಳೆಯ ದಿನಗಳು ಮುಂದಿವೆ. ಹೀಗಾಗಿ ಆ ಬಗ್ಗೆ ಚಿಂತಿಸುತ್ತ ಕೂರಬೇಡಿ. 


 

click me!