Daily Horoscope: ಕೃಷ್ಣ ಜನ್ಮಾಷ್ಟಮಿ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ?

By Chirag Daruwalla  |  First Published Sep 6, 2023, 5:00 AM IST

ಇಂದು 06ನೇ ಸೆಪ್ಟೆಂಬರ್ 2023 ಬುಧವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.


ಮೇಷ ರಾಶಿ  (Aries) : ನೀವು ಮನಸ್ಸಿನಿಂದ ಕೆಲಸ ಮಾಡಿ ನಿಮ್ಮ ಆದಾಯದ ಮಾರ್ಗಗಳು ಸುಧಾರಿಸುತ್ತವೆ ಮತ್ತು ಆರ್ಥಿಕ ಚಟುವಟಿಕೆಗಳು ಸುಧಾರಿಸುತ್ತವೆ. ಯಾವುದೇ ವಿಷಯದಲ್ಲಿ ಆತುರಪಡಬೇಡಿ.  ಈ ದಿನ ನಿಮಗೆ ಚೆನ್ನಾಗಿದೆ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು.  ಗೊಂದಲದ ಸಂದರ್ಭದಲ್ಲಿ ಸಂಗಾತಿಯ ಸಲಹೆ ನಿಮ್ಮ ಆತ್ಮಬಲವನ್ನು ಹೆಚ್ಚಿಸುತ್ತದೆ. 

ವೃಷಭ ರಾಶಿ  (Taurus):   ವಾಸ್ತು ನಿಯಮಗಳನ್ನು ಪಾಲಿಸಿದರೆ  ಮನೆ ಸುಧಾರಣೆಯಾಗುತ್ತದೆ.  ಸಾಲ ನೀಡುವಾಗ ಜಾಗರೂಕರಾಗಿರಿ.ಹಣವನ್ನು ಮರಳಿ ಪಡೆಯುವ ಸಂಭವನೀಯತೆ ತುಂಬಾ ಕಡಿಮೆ. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು ಆರೋಗ್ಯ ಚೆನ್ನಾಗಿರುತ್ತದೆ.

Tap to resize

Latest Videos

undefined

ಮಿಥುನ ರಾಶಿ (Gemini) : ದೈನಂದಿನ ಜೀವನದಿಂದ ಬೇಸತ್ತಿರುವ ನೀವು ಇಂದು ನಿಮ್ಮ ಸಮಯವನ್ನು ವಿಶ್ರಾಂತಿ ಯಿಂದ ಕಳೆಯುತ್ತೀರಿ.  ಪ್ರತಿಭೆಯನ್ನು ಬಳಸಿಕೊಂಡು ನೀವು ನಿಮ್ಮನ್ನು ಪುನಃ ಚೈತನ್ಯಗೊಳಿಸುತ್ತೀರಿ. ಕೆಲವೊಮ್ಮೆ ಋಣಾತ್ಮಕ ಆಲೋಚನೆಯು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಕುಟುಂಬದ ವಾತಾವರಣ ಉತ್ತಮವಾಗಿರುತ್ತದೆ. ಧ್ಯಾನ ಮತ್ತು ಯೋಗಕ್ಕೆ ಹೆಚ್ಚಿನ ಗಮನ ಕೊಡಿ.

ಕಟಕ ರಾಶಿ  (Cancer) : ನೀವು  ಆತ್ಮವಿಶ್ವಾಸ ಹೆಚ್ಚುತ್ತದೆ. ಸ್ನೇಹಿತರೊಂದಿಗೆ ಸುತ್ತಾಡುವುದು ಮತ್ತು ಮನರಂಜನಾ ಚಟುವಟಿಕೆಗಳನ್ನು ಮಾಡುವುದು. ವೆಚ್ಚಗಳು ಹೆಚ್ಚಾಗಲಿವೆ. ಸ್ನೇಹಿತರಿಗೆ ಹಣದ ಸಹಾಯ ಮಾಡಬೇಕಾಗಬಹುದು. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ. ಹೆಚ್ಚು ಕೋಪಗೊಳ್ಳಬೇಡಿ.

ಕೃಷ್ಣ ಜನ್ಮಾಷ್ಟಮಿ 2023 ಶುಭ ಮುಹೂರ್ತ,ಮಹತ್ವ

 

ಸಿಂಹ ರಾಶಿ  (Leo) :   ಸಿಂಹ ರಾಶಿಯ ಅಧಿಪತಿ ಸೂರ್ಯದೇವನು ನಿಮಗೆ ಸಂಪೂರ್ಣ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ನೀಡುತ್ತಾನೆ. ಈ ಸಮಯದಲ್ಲಿ ಗ್ರಹಗಳ ಸ್ಥಾನವು ಸಂಪೂರ್ಣವಾಗಿ ನಿಮ್ಮ ಪರವಾಗಿರುತ್ತದೆ. ಸಂಗಾತಿಯೊಂದಿಗೆ ಸ್ವಲ್ಪ ಒತ್ತಡ ಉಂಟಾಗಬಹುದು. ಕೀಲು ನೋವು ಸಮಸ್ಯೆಯಾಗಿರಬಹುದು.

ಕನ್ಯಾ ರಾಶಿ (Virgo) :  ಕುಟುಂಬ ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಸಂಗಾತಿಯ ಸಂಪೂರ್ಣ ಬೆಂಬಲ ಇರುತ್ತದೆ..ಮನೆಯಲ್ಲಿ ಧಾರ್ಮಿಕ ಯೋಜನೆ ಹಮ್ಮಿಕೊಳ್ಳಲಾಗುತ್ತದೆ. ಆಸಿಡಿಟಿ ಮತ್ತು ಗ್ಯಾಸ್ ಇರುತ್ತದೆ

ತುಲಾ ರಾಶಿ (Libra) : ಹಣಕಾಸಿನ ಸ್ಥಿತಿಯನ್ನು ಬಲಪಡಿಸುವ ಬಗ್ಗೆ  ಗಮನ ಹರಿಸಿ.ನಿಮ್ಮ ಕಾರ್ಯಗಳನ್ನು ತಾಳ್ಮೆಯಿಂದ ಪೂರ್ಣಗೊಳಿಸಿ. ತ್ವರಿತವಾಗಿ ಶ್ರೀಮಂತರಾಗುವ ಬಯಕೆ ಬೇಡ. ಸಂಗಾತಿಯ ಬೆಂಬಲವು ಅನೇಕ ಕಾರ್ಯಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿ.

ವೃಶ್ಚಿಕ ರಾಶಿ (Scorpio) : ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಲಾಗುವುದು. ಯಾವುದಾದರು ಹಿಂದಿನ ಸಮಸ್ಯೆಗಳು ಮತ್ತೆ ಉದ್ಭವಿಸಬಹುದು. ಇದರಿಂದಾಗಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಮನೆಯ ಹಿರಿಯರ ಸಹಕಾರದಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. 

ಧನು ರಾಶಿ (Sagittarius): ವ್ಯಾಪಾರ ಚಟುವಟಿಕೆಗಳು ಸರಿಯಾಗಿ ನಡೆಯಲಿವೆ. ಸಂಬಂಧಿಕರು ನಿಮಗೆ ಕೆಲವು ತೊಂದರೆ ಉಂಟುಮಾಡಬಹುದು.. ಕಾರಾತ್ಮಕ ಪ್ರಭಾವ ತೊಂದರೆಗೆ ಕಾರಣವಾಗಬಹುದು.ನಿಮ್ಮ ಆದರ್ಶವಾದಿ  ಸ್ವಭಾವವು  ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಯಾವುದೇ ರೀತಿಯ ಅಲರ್ಜಿಯ ಅಥವಾ ಸೋಂಕು  ಸಾಧ್ಯತೆಯಿದೆ.

ಮಕರ ರಾಶಿ (Capricorn) :  ಪ್ರತಿ ಕೆಲಸವನ್ನು ಮೊದಲು ಯೋಜನಾಬದ್ಧವಾಗಿ ಯೋಚಿಸುವುದು ನಿಮಗೆ ಸಹಕಾರಿಯಾಗುತ್ತದೆ.  ವಿದೇಶಕ್ಕೆ ಹೋಗಲು ಉದ್ದೇಶಿಸಿರುವ ವ್ಯಕ್ತಿಗಳಿಗೆ ಶುಭ ಸೂಚನೆಗಳು ಬರಲಿವೆ. ಕೆಲವೊಮ್ಮೆ ಪ್ರಮುಖ ಸಾಧನೆಗಳು ಅತಿಯಾದ ಚಿಂತನೆ ಉಂಟುಮಾಡಬಹುದು. ಪತಿ-ಪತ್ನಿಯರ ನಡುವೆ ಕಲಹ ಉಂಟಾಗಬಹುದು

ಯಾವಾಗ ನೋಡಿದ್ರೂ ದುಡ್ಡು ದುಡ್ಡು ಅಂತ ಸಾಯೋ ರಾಶಿಗಳಿವು!

 

ಕುಂಭ ರಾಶಿ (Aquarius):  ಕಲಾತ್ಮಕ ಮತ್ತು ಕ್ರೀಡೆಗೆ ಸಂಬಂಧಿಸಿದ ಆಸಕ್ತಿಗಳಲ್ಲಿ ಸಮಯವನ್ನು ಕಳೆಯುತ್ತೀರಿ.  ದೈನಂದಿನ ಕೆಲಸಗಳಲ್ಲಿ ಬೇಸರ. ಇಂದು ನೀವು ಹೆಚ್ಚಿನ ಸಮಯವನ್ನು ಮನೆಯ ಹೊರಗೆ ಕಳೆಯುತ್ತೀರಿ. ಪತಿ-ಪತ್ನಿ ಇಬ್ಬರಿಗೂ ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ ತಮ್ಮ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಕೆಮ್ಮು, ಜ್ವರ ಮತ್ತು ಗಂಟಲು ನೋವಿನ ಸಮಸ್ಯೆ ಇರುತ್ತದೆ.

ಮೀನ ರಾಶಿ  (Pisces): ಹೊಸ ಆದಾಯದ ಮೂಲಗಳು ದೊರೆಯಲಿವೆ.   ಈ ಸಮಯದಲ್ಲಿ ನಿಮ್ಮ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಸಾರ್ವಜನಿಕ ವಿಷಯಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಪಿತ್ತ ಸಂಬಂಧಿ ಸಮಸ್ಯೆ ಉಂಟಾಗಬಹುದು.

click me!