Daily Horoscope: ಈ ರಾಶಿಯವರ ಅದೃಷ್ಟ ಪರೀಕ್ಷೆಗೆ ಸುದಿನ

Published : Nov 29, 2021, 06:18 AM IST
Daily Horoscope: ಈ ರಾಶಿಯವರ ಅದೃಷ್ಟ ಪರೀಕ್ಷೆಗೆ ಸುದಿನ

ಸಾರಾಂಶ

29 ನವೆಂಬರ್ 2021, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಯಾರಿಗೆ ಶುಭ ಸೋಮವಾರ? ಯಾರಿಗೆಲ್ಲ ವಿಹಿತ?

ಮೇಷ(Aries): ವ್ಯಯದ ದಿನ, ಸ್ತ್ರೀಯರೇ ಶತ್ರುಗಳಾಗುವ ಸಾಧ್ಯತೆ, ಉದ್ಯೋಗದಲ್ಲಿ ಅನುಕೂಲ, ಆದೇಶ ನೀಡುವ ಯೋಗ. ನಿರುದ್ಯೋಗಿಗಳಿಗೆ ಶುಭ ಸಮಾಚಾರ ಬರುವ ಸಾಧ್ಯತೆ. ವ್ಯಾಪಾರ ಲಾಭ ಇಳಿಕೆ. ವಾಹನ ಖರೀದಿ ಯತ್ನ. ದೇವತಾಕಾರ್ಯಗಳಲ್ಲಿ ಭಾಗಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ವೃಷಭ(Taurus): ಲಾಭ ಸಮೃದ್ಧಿ, ವಿದೇಶಿ ಕೆಲಸಗಳಲ್ಲಿ ಸಹಕಾರ. ತಂಟೆ ತಕರಾರುಗಳಲ್ಲಿ ಜಯ. ಮಕ್ಕಳಿಂದ ಸಮಾಧಾನ. ಉದ್ಯೋಗದಲ್ಲಿ ಮಾನ್ಯತೆ ಸಿಗಲಿದೆ. ಪ್ರೇಮ ವ್ಯವಹಾರಗಳಲ್ಲಿ ಸಂತೋಷ. ಪ್ರಯಾಣ ಸೌಖ್ಯ. ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ.

ಮಿಥುನ(Gemini): ವೃತ್ತಿಯಲ್ಲಿ ಕಿರಿಕಿರಿ, ಹಿತಶತ್ರುಗಳ ಕಾಟ. ಕಿರಿಯರನ್ನು ಸ್ನೇಹಮಯವಾಗಿ ನಡೆಸಿಕೊಳ್ಳಿ. ಕುಟುಂಬದಲ್ಲಿ ಸಮಾಧಾನ, ಹಾಲು-ಹೈನುಗಾರರಿಗೆ ಲಾಭ.  ಆರೋಗ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ. ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.

ಕಟಕ(Cancer): ಧೈರ್ಯ ಇರಲಿದೆ, ತಂದೆ-ಮಕ್ಕಳಲ್ಲಿ ಸ್ವಲ್ಪ ವಿರೋಧ, ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಉದ್ಯೋಗರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಏಕಾಗ್ರತೆಗೆ ಭಂಗವಾಗುತ್ತದೆ, ಆಂಜನೇಯ ಪ್ರಾರ್ಥನೆ ಮಾಡಿ.

ಸಿಂಹ(Leo): ಸುಗ್ರಾಸ ಭೋಜನ, ಅತಿಯಾದ ಸೇವನೆಯಿಂದ ತೊಂದರೆ. ನೀರಿನಿಂದ ಎಚ್ಚರವಾಗಿರಿ. ಸ್ತ್ರೀಯರಿಗೆ ಬಲ, ಉದ್ಯೋಗಿಗಳಿಗೆ ಸಾಧನೆ, ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗಕ್ಕೆಡೆಯಿದೆ. ಕಾರ್ತವೀರ್ಯಾರ್ಜುನ ಸ್ಮರಣೆ ಮಾಡಿ.

ಕನ್ಯಾ(Virgo): ದಾಂಪತ್ಯದಲ್ಲಿ ಅಸಮಾಧಾನ, ಸ್ನೇಹ ಮುರಿದು ಹೋಗುವ ಸಾಧ್ಯತೆ. ರಾಜಕೀಯ ವರ್ಗದವರಿಗೆ ಸ್ಥಾನಮಾನ ಬಲಪಡಿಸುವ ಅವಕಾಶ. ವಿರೋಧಿಗಳಿಗೆ ಅಪಜಯ. ವಾಹನ-ವಸ್ತ್ರ ವ್ಯಾಪಾರಿಗಳಿಗೆ ಲಾಭ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

Interpretation of Dreams: ಸ್ವಪ್ನಕ್ಕೇನು ಅರ್ಥ?

ತುಲಾ(Libra): ಉದ್ಯೋಗಿಗಳಿಗೆ ದೂರ ಪ್ರಯಾಣ, ಸ್ತ್ರೀಯರ ಸಲುವಾಗಿ ಖರ್ಚು, ವ್ಯಯದ ದಿನ. ಸಾಲ ಮಾಡಬೇಡಿ, ಆರೋಗ್ಯವೃದ್ಧಿ. ಕುಟುಂಬದಲ್ಲಿ ಒಮ್ಮತ, ಕೋರ್ಟ್ ವ್ಯವಹಾರಗಳಲ್ಲಿ ನಿಶ್ಫಲ. ಋಣ ಮೋಚನ ಮಂಗಲ ಸ್ತೋತ್ರ ಪಠಿಸಿ.

ವೃಶ್ಚಿಕ(Scorpio): ಲಾಭ ಸಮೃದ್ಧಿ, ದೈವಾನುಕೂಲ, ಕೆಲಸಗಳು ಸುಲಲಿತವಾಗಿ ಸಾಗುತ್ತವೆ. ವೃತ್ತಿಯಲ್ಲಿ ಬಲ, ಅದೃಷ್ಟಪರೀಕ್ಷೆಗಿದು ಸಕಾಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು  ಮಾರುಕಟ್ಟೆ ವ್ಯವಹಾರದಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಏಕಾಗ್ರತೆ. ಈಶ್ವರ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ಪ್ರಯಾಣದಲ್ಲಿ ತೊಡಕು, ಕಿರಿಕಿರಿ, ನಷ್ಟಫಲವಿದೆ. ಆದರೂ ಕೈ ಹಿಡಿದ ಕೆಲಸಗಳು ಪೂರ್ಣವಾಗಲಿವೆ, ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ. ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ. ನವಧಾನ್ಯ ದಾನ ಮಾಡಿ.

Zodiac Signs and Luck: ಈ ರಾಶಿಯವರು ಹುಟ್ಟಿನಿಂದಲೇ ಶ್ರೀಮಂತರು!

ಮಕರ(Capricorn): ಹೊಸ ಹೂಡಿಕೆ ಫಲಕಾರಿಯಾಗದು. ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ. ಭಯದ ವಾತಾವರಣ, ಮಾತು-ಬರವಣಿಗೆ ಅವಲಂಬಿಸಿರುವವರಿಗೆ ಅನುಕೂಲ ಫಲ, ಸಹೋದರ ವರ್ಗದಿಂದ ಸಂತಸದ ಸುದ್ದಿ ಕಿವಿಗೆ ಬೀಳಲಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ಕುಂಭ(Aquarius): ವಾಹನ, ಯಂತ್ರೋಪರಣಗಳಿಂದ ಕಷ್ಟನಷ್ಟ. ದೂರ ಪ್ರಯಾಣ ಮಾಡುವ ಮುನ್ನ ಮನೆದೇವರ ಪ್ರಾರ್ಥನೆ ಮಾಡಿ. ಆಹಾರದಲ್ಲಿ ವ್ಯತ್ಯಾಸ, ಹಣಕಾಸು-ವ್ಯವಹಾರದಲ್ಲಿ ತೊಡಕು, ಎಚ್ಚರ ಇರಲಿ, ಕುಟುಂಬದಲ್ಲಿ ಕಹಿಯಾದ ವಾತಾವರಣ, ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮೀನ(Pisces): ಆರೋಗ್ಯದಲ್ಲಿ ಏರುಪೇರು, ಸಂಗಾತಿಯ ಸಹಕಾರ, ಮಕ್ಕಳ ಸಹಕಾರದಿಂದ ನೆಮ್ಮದಿ. ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿ, ಹೋಟೆಲ್ ವ್ಯವಹಾರದಲ್ಲಿ ಲಾಭ. ದುಡುಕು ವರ್ತನೆಯಿಂದ ಧನನಷ್ಟ. ಲಲಿತಾ ಪರಮೇಶ್ವರಿ ಪ್ರಾರ್ಥನೆ ಮಾಡಿ.
 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ