Daily Horoscope: ವೃಶ್ಚಿಕ ರಾಶಿಗಿಂದು ಆರೋಗ್ಯದಲ್ಲಿ ಏರುಪೇರು, ಎಚ್ಚರ ಅಗತ್ಯ

Published : Nov 27, 2021, 06:22 AM IST
Daily Horoscope: ವೃಶ್ಚಿಕ ರಾಶಿಗಿಂದು ಆರೋಗ್ಯದಲ್ಲಿ ಏರುಪೇರು, ಎಚ್ಚರ ಅಗತ್ಯ

ಸಾರಾಂಶ

27 ನವೆಂಬರ್ 2021, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಶ್ಚಿಕ  ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರು

ಮೇಷ(Aries): ಕೌಟುಂಬಿಕವಾಗಿ ಕಿರಿಕಿರಿಗಳು ತಪ್ಪಲಾರವು. ಮಕ್ಕಳಿಂದ ಕೊಂಚ ಸಮಾಧಾನ. ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ. ವೈದ್ಯಕೀಯ ಖರ್ಚು ಹಾಗೂ ದುಂದುವೆಚ್ಚ ಒದಗ್ಿ ಮನೋನೆಮ್ಮದಿ ಕೆಡಲಿದೆ. ಶುಭಾಶುಭ ಮಿಶ್ರಫಲ. ನಿಮ್ಮ ನಿರ್ಧಾರಗಳು ಗಟ್ಟಿಯಾಗುವ ಹೊತ್ತಿಗೆ ಕಾರ್ಯವೇ ಮುಗಿದಿರುತ್ತದೆ. ಪಿತೃದೇವತೆಗಳ ಆರಾಧನೆ ಮಾಡಿ.

ವೃಷಭ(Taurus): ವಿದೇಶ ಪ್ರಯಾಣದಲ್ಲಿ ಸ್ವಲ್ಪ ತೊಡಕು, ದಾಂಪತ್ಯ-ಪ್ರೇಮ ವಿಚಾರಗಳಲ್ಲಿ ಅಸಮಾಧಾನ. ಸಂಗಾತಿಯೊಂದಿಗೆ ಹೊರಗೆ ಹೋಗಿ ಸಮಯ ಕಳೆಯುವುದರಿಂದ ಮನಸ್ಸು ಕೊಂಚ ನಿರಾಳವಾಗುವುದು. ಕೃಷಿ-ಹಾಲು-ಹೈನುಗಾರರಿಗೆ ಲಾಭ, ನೂತನ  ಗೃಹದ ವ್ಯಾವಹಾರಿಕ ರೂಪದ ಯೋಜನೆಗಳಲ್ಲಿ ಓಡಾಟ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಮಿಥುನ(Gemini): ಶತ್ರುಗಳ ಭಯ, ಪೆಟ್ಟುಬೀಳುವ ಸಾಧ್ಯತೆ ಇದೆ. ಆದಷ್ಟು ಜಾಗ್ರತೆಯಿಂದ ಕಾರ್ಯ ನಿರ್ವಹಿಸಿ. ದೈವಾನುಕೂಲ ಇದೆ. ಅವಿವಾಹಿತರಿಗೆ ಮಂಗಲಕಾರ್ಯಕ್ಕೆ ಕಂಕಣಬಲವಿದೆ. ಗೃಹೋಪಕರಣಗಳ ಖರೀದಿಯಿಂದ ಮಂಗಲದ್ರವ್ಯಗಳು ಮನೆಗೆ ಬಂದಾವು. ಸುಬ್ರಹ್ಮಣ್ಯ ಶ್ಲೋಕ ಪಠಣ ಮಾಡಿ.

ಕಟಕ(Cancer): ನೆಂಟರ ಆಗಮನ, ಅನ್ನ ಸಮೃದ್ಧಿ, ಗೃಹ ಸೌಖ್ಯದಿಂದ ಮನಸ್ಸು ಪ್ರಫುಲ್ಲ. ಗೃಹದಲ್ಲಿ ಮಂಗಲಕಾರ್ಯಕ್ಕೆ ಅವಕಾಶಗಳು ಒದಗಿ ಬಂದು ಚಟುವಟಿಕೆ ಹೆಚ್ಚಲಿದೆ. ರಾಜಕಾರಣಿಗಳಿಗೆ ಹಿನ್ನೆಡೆ. ಸೂರ್ಯ ಪ್ರಾರ್ಥನೆ ಮಾಡಿ

Colors and Emotions: ಯಾವ ಸಂದರ್ಭದಲ್ಲಿ ಯಾವ ಬಣ್ಣ ಬಳಸಬಾರದು? ವಾಸ್ತು ಏನು ಹೇಳುತ್ತೆ?

ಸಿಂಹ(Leo): ವಿವಿಧ ಮೂಲಗಳಿಂದ ಧನಾಗಮ ಹೆಚ್ಚಿದ್ದರೂ ಅನವಶ್ಯಕವಾಗಿ ಖರ್ಚು ವೆಚ್ಚಗಳು ಹೆಚ್ಚಲಿವೆ. ಇದರಿಂದ ಅಸಮಾಧಾನ ಉಂಟಾಗಬಹುದು. ದೂರ ಪ್ರಯಾಣ ಕೈಗೊಳ್ಳುವ ಮುನ್ನ ಕುಲದೇವತಾ ಪ್ರಾರ್ಥನೆ ಮಾಡಿ. ನದಿ-ಸೇತುವೆಗಳ ಬಳಿ ಎಚ್ಚರ ಇರಲಿ. 

ಕನ್ಯಾ(Virgo): ಮಾತು ಕಠಿಣವಾಗುತ್ತದೆ, ಸ್ವಭಾವದಲ್ಲಿ ಬದಲಾವಣೆ, ಸಹೋದರರಿಂದ ಕಿರಿಕಿರಿ, ಆದರೆ ಗ್ರಾಮದಲ್ಲಿ ಪರಸ್ಪರ ಸಹಕಾರ ಇರಲಿದೆ. ಅವಿವಾಹಿತರಿಗೆ ಕಂಕಣ ಬಲದ ಸುಯೋಗವಿದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ ಸುಕಾರ್ಯಕ್ಕೆ ಮುನ್ನಡಿ ಇಡಿ. 

Rituals: ಸಂಭೋಗಿಸಿ, ಸ್ನಾನ ಮಾಡದೇ ಪೂಜಿಸಿದರೆ ತಟ್ಟುತ್ತೆ ಶಾಪ!

ತುಲಾ(Libra): ಉದ್ಯೋಗಿಗಳಿಗೆ ಲಾಭ, ಅನುಕೂಲದ ದಿನ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷ. ಕ್ರೀಡಾಪಟುಗಳಿಗೆ ಚಟುವಟಿಕೆಯುಕ್ತ ದಿನ. ಆಭರಣ ಲಾಭವಿದೆ. ಒಳ್ಳೆಯ ಜನಾದರಣೆಯಿಂದ  ಉಲ್ಲಾಸ. ಬಂಧು ಮಿತ್ರರ ಸಹಕಾರದಿಂದ ಗೃಹ ತಾಪತ್ರಯ ಕಡಿಮೆಯಾಗುತ್ತದೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ವೃಶ್ಚಿಕ(Scorpio): ಆರೋಗ್ಯದಲ್ಲಿ ವ್ಯತ್ಯಾಸ, ದೇಹಬಲ ಕುಸಿಯಲಿದೆ. ಆದಷ್ಟು ಸಾತ್ವಿಕ ಆಹಾರ ಸೇವಿಸಿ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ.  ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ, ವಿವಾಹಿತರಿಗೆ ಶುಭದಿನ. ಧರ್ಮಕಾರ್ಯಕ್ಕೆ ಅನುಕೂಲಕರ ವಾತಾವರಣ ತೋರಿಬರಲಿದೆ. ಆದಿತ್ಯ ಹೃದಯ ಪಠಣದಿಂದ ಒಳಿತು. 

ಧನುಸ್ಸು(Sagittarius): ಅಧಿಕ ವ್ಯಯ, ಲಾಭವೂ ಇದೆ, ನಷ್ಟವೂ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಲವಾರು ಅವಕಾಶಗಳು ಕಂಡುಬರುತ್ತದೆ. ಬೆಳ್ಳಿ ಬಂಗಾರ, ಗೃಹಾಲಂಕಾರ ವಸ್ತುಗಳಿಗಾಗಿ ಖರ್ಚು ಹೆಚ್ಚು. ವಿಷ್ಣು ಸಹಸ್ರನಾಮ ಪಠಿಸಿ.

ಮಕರ(Capricorn): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸುವ ಮೂಲಕ ನಿಮ್ಮ ಆತ್ಮಶಕ್ತಿಯ ಬಗ್ಗೆ ನಿಮಗೇ ಅಚ್ಚರಿಯೆನಿಸುವುದು. ಲಾಭ, ಉತ್ಸಾಹದ ದಿನ, ಮನೆಗೆಲಸಗಳಲ್ಲಿ ಲಾಭ, ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಕ್ಷೀರ ದಾನ ಮಾಡಿ.

ಕುಂಭ(Aquarius): ವೃತಿಯಲ್ಲಿ ಅಸಮಧಾನ, ಕಾರ್ಯಗಳಲ್ಲಿ ವಿಘ್ನಗಳಾಗುವ ಸಾಧ್ಯತೆ, ಸಂಗಾತಿಯಿಂದ ಸ್ವಲ್ಪ ವಿರೋಧದ ಮಾತುಗಳು ಮನಸ್ಸು ಕೆಡಿಸುತ್ತವೆ. ಮಕ್ಕಳಿಂದ ಕೊಂಚ ನೆಮ್ಮದಿ. ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ. ದುರ್ಗಾ ಪ್ರಾರ್ಥನೆ ಮಾಡಿ.

ಮೀನ(Pisces): ವೃತ್ತಿಯಲ್ಲಿ ಮಿಶ್ರಫಲ, ನಿರುದ್ಯೋಗಿಗಳು ಬಂದ ಅವಕಾಶಕ್ಕೆ ನೆಪ ಹೇಳಿ ಕೈ ಬಿಡಬೇಡಿ. ಅವಕಾಶಗಳನ್ನು ಬಳಸಿಕೊಳ್ಳುವುದೇ ಜಾಣತನ. ಶತ್ರುಗಳಿಂದ ಸ್ವಲ್ಪ ಪರದಾಟ, ಕೌಟುಂಬಿಕವಾಗಿ ಹಿರಿಯರ ತಾಟಸ್ತ್ಯ ಧೋರಣೆಯಿಂದ ಬೇಸರ.

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ