Daily Horoscope: ಮಿಥುನಕ್ಕೆ ಲಾಟರಿ, ವೃಶ್ಚಿಕಕ್ಕೆ ಪಾಲುದಾರಿಕೆಯಲ್ಲಿ ಮೋಸ

Published : May 02, 2022, 05:01 AM IST
Daily Horoscope: ಮಿಥುನಕ್ಕೆ ಲಾಟರಿ, ವೃಶ್ಚಿಕಕ್ಕೆ ಪಾಲುದಾರಿಕೆಯಲ್ಲಿ ಮೋಸ

ಸಾರಾಂಶ

2 ಮೇ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೀನದ ಹೆಗಲೇರುವ ಹೆಚ್ಚು ಜವಾಬ್ದಾರಿಗಳು..

ಮೇಷ(Aries): ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಬಹಳ ಕಾಳಜಿ ವಹಿಸಿ. ನಿಮ್ಮ ಭಾವನಾತ್ಮಕ ಬೆಂಬಲವೇ ಅವರಿಗೆ ಶಕ್ತಿ ತುಂಬಲಿದೆ. ಪ್ರೀತಿ-ಪ್ರೇಮ ವಿಚಾರಗಳು ಬಹಿರಂಗವಾಗಲಿವೆ. ಉದ್ಯೋಗದಲ್ಲಿ ಬ್ಯುಸಿ ದಿನ. ಸಾಲ ತೀರಲಿವೆ. ಸುಬ್ರಹ್ಮಣ್ಯ ಪ್ರಾರ್ಥನೆ ಹಾಗೂ ನಾಗ ಪ್ರಾರ್ಥನೆ ಮಾಡಿ.

ವೃಷಭ(Taurus): ಸರ್ಕಾರಿ ಕೆಲಸಗಳಲ್ಲಿ ಯಶಸ್ಸು, ಷೇರು ವ್ಯವಹಾರಗಳು ಉತ್ತಮ ಫಲ ಕೊಡಲಿವೆ. ಕಚೇರಿಯ ಕೆಲಸಗಳಲ್ಲಿ ಮರೆವು ಸಮಸ್ಯೆ ತರಬಹುದು. ತಿರುಗಾಟಗಳು ಫಲಪ್ರದವಾಗಿರಲಿವೆ. ಹೊಸ ವಸ್ತುಗಳು ಮನೆಗೆ ಬರಬಹುದು. ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಮಿಥುನ(Gemini): ಕಚೇರಿಯಲ್ಲಿ ತೆಗೆದುಕೊಂಡ ಷೇರುಗಳು ಲಾಟರಿಯಂತೆ ಹಣ ತರುವುವು. ಕೆಲಸಗಲ್ಲಿ ಬಡ್ತಿ, ಸಂಬಳ ಹೆಚ್ಚಳ ಇರಲಿದೆ. ಉದರ ಸಂಬಂಧಿ ಬಾಧೆ ಕಾಡಬಹುದು. ಮಕ್ಕಳ ವಿಚಾರದಲ್ಲಿ ಅತಿಯಾಗಿ ತಲೆ ಕೆಡಿಸಿಕೊಳ್ಳುವುದನ್ನು ಬಿಡಿ. ನಾಗ ದೇವಸ್ಥಾನ ದರ್ಶನ ಮಾಡಿ. 

ಕಟಕ(Cancer): ಮಕ್ಕಳ ವಿಚಾರದಲ್ಲಿ ನೋವು ಹೆಚ್ಚುವುದು. ಸಹೋದರರ ಸಹಕಾರದಿಂದ ಗೃಹ ಕಾರ್ಯಗಳು ಸುಲಭವಾಗುವುವು. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ತ್ವಚೆಯ ಸಮಸ್ಯೆಗಳು ಕಾಡಬಹುದು. ಸಿಹಿಕಹಿಗಳ ಮಿಶ್ರ ಫಲ. ಶಿವ ಶಕ್ತಿಯರ ಸ್ಮರಣೆ ಮಾಡಿ. 

ಸಿಂಹ(Leo): ಕೆಲ ಕೆಲಸಗಳು ಎಷ್ಟೇ ಪ್ರಯತ್ನ ಹಾಕಿದರೂ ಅಭಿವೃದ್ಧಿ ಹಿನ್ನಡೆಯಾಗುತ್ತಿರುವುದು ದೊಡ್ಡ ಸಮಸ್ಯೆಯಾಗಿ ಕಾಡುವುದು. ಇದನ್ನು ಪರಿಹರಿಸುವ ಬಗೆ ತಿಳಿಯದೆ ಕಿರಿಕಿರಿಯಾಗುವುದು. ಉದ್ಯೋಗಿಗಳಿಗೆ ಅವಿರತ ದುಡಿಮೆಯ ದಿನ. ಸುಬ್ರಹ್ಮಣ್ಯ ಸ್ಮರಣೆ ಮಾಡಿ. 

ಕನ್ಯಾ(Virgo): ವಾಗ್ವಾದ ಘರ್ಷಣೆಗಳಿಂದ ದು:ಖ, ಲಾಭದಲ್ಲೂ ವ್ಯತ್ಯಾಸ, ಅಧಿಕ ನಷ್ಟ ಸಾಧ್ಯತೆ, ಕೆಲ ವಿಚಾರಗಳಲ್ಲಿ ಈಗಾಗಲೇ ಹೆಜ್ಜೆ ಮುಂದಿರಿಸಿದ್ದೀರಿ. ಅದನ್ನು ಕೈ ಬಿಡುವ ಯೋಚನೆ ಶುರುವಾಗಬಹುದು. ಸಂಗಾತಿಯಿಂದ ನೋವು, ಸುಬ್ರಹ್ಮಣ್ಯ ಕವಚ ಪಠಣ ಮಾಡಿ. 

ತುಲಾ(Libra): ಸಂಗಾತಿಯ ಮಾತು ಅವಮಾನ ತರಬಹುದು. ಹಿರಿಯರಿಂದ ಮನಸ್ಸಿಗೆ ನೋವಾಗುವ ಮಾತು, ನಡೆಗಳು ಕೇಳಿ ಬರಲಿವೆ. ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿವೆ. ಬಳಸಿಕೊಳ್ಳಿ. ಸೋಮಾರಿತನದಿಂದ ಅಗೌರವ ಹೆಚ್ಚುವುದು. ಶಿವ ದೇವಾಲಯಕ್ಕೆ ಭೇಟಿ ನೀಡಿ. 

Weekly Horoscope: ಸಿಂಹಕ್ಕೆ ಬದಲಾವಣೆಯ ವಾರ, ಮಕರಕ್ಕೆ ನೆಮ್ಮದಿ

ವೃಶ್ಚಿಕ(Scorpio): ಒಡವೆ, ಗೃಹ ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವಿರಿ. ಸುಸ್ತು, ಆಯಾಸ ಕಾಡಲಿವೆ. ಪಾಲುದಾರಿಕೆ ಕೆಲಸಗಳಲ್ಲಿ ಮೋಸವಾಗಬಹುದು. ನಿಮ್ಮ ಅದೃಷ್ಟವನ್ನು ನೆನೆದು ಸಂತೋಷ ಪಡುವುದನ್ನು ಕಲಿಯಿರಿ, ಇಲ್ಲದ್ದರ ಕೊರಗು ಬೇಡ. ಈಶ್ವರ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ಕುಟುಂಬದಲ್ಲಿ ಕಲಹಗಳುಂಟಾಗಲಿವೆ. ಮಾತು-ಬರವಣಿಗೆಗಳಲ್ಲಿ ವ್ಯತ್ಯಾಸ. ವಾಹನ ಖರೀದಿ, ಹಾಗೂ ಎಲೆಕ್ಟ್ರಿಕ್ ಉಪಕರಣಗಳ ಖರೀದಿಗೆ ಮುಂದಾಗಬಹುದು. ಅನಾರೋಗ್ಯ ಕಾಡುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ಮಕರ(Capricorn): ಅಪಘಾತ ಸಂಭವ ಹೆಚ್ಚು. ಎಚ್ಚರವಾಗಿರಿ. ವ್ಯಾಪಾರ, ಉದ್ಯೋಗ ಉತ್ತಮವಾಗಿರುತ್ತದೆ. ಸಂಬಂಧಿಕರು, ಸ್ನೇಹಿತರ ಜೊತೆಗಿನ ಬಾಂಧವ್ಯ ವೃದ್ಧಿಸಲಿದೆ. ಹೂಡಿಕೆ ಹಣ ದುಪ್ಪಟ್ಟಾಗಲಿದೆ. ಸಂಗಾತಿಯ ಆರೋಗ್ಯ ಚಿಂತೆ ತರುವುದು. ಅಗತ್ಯವಿದ್ದವರಿಗೆ ಸಹಾಯ ಮಾಡಿ. 

ಕುಂಭ(Aquarius): ಹಣದ ವಿಷಯವಾಗಿ ಅಗತ್ಯ ಹೆಚ್ಚುವುದು. ಹೊಸ ಆದಾಯ ಮೂಲಗಳ ಹುಡುಕಾಟದಲ್ಲಿ ತೊಡಗುವಿರಿ. ಸಂಗಾತಿಗೆ ಆರ್ಥಿಕ ನೆರವು ನೀಡಲು ಉತ್ಸುಕರಾಗುವಿರಿ. ಮಗುವಿನ ವಿಷಯವಾಗಿ ಚಿಂತೆಗಳು ಕಾಡುವುವು. ವೃತ್ತಿಯಲ್ಲಿ ಮಿಶ್ರ ಫಲವಿರಲಿದೆ. ಲಿಂಗಾಸ್ಟಕ ಹೇಳಿಕೊಳ್ಳಿ. 

Akshaya Tritiyaದ ದಿನ ಈ ವಸ್ತುಗಳನ್ನು ದಾನ ಮಾಡಿದ್ರೆ ನಿಮ್ಮ ಸಂಪತ್ತು ಅಕ್ಷಯವಾಗುವುದು..

ಮೀನ(Pisces): ಸಂಬಂಧ ವಿಚಾರವಾಗಿ ಜಟಿಲ ಸಮಸ್ಯೆಯೊಂದು ಕಾಡುವುದು. ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಎಲ್ಲ ಸಮಸ್ಯೆಗಳಿಂದ ಎಲ್ಲಾದರೂ ದೂರ ಓಡಿಹೋಗೋಣ ಎನಿಸಬಹುದು. ಆದರೆ, ಇದ್ದು ಹೋರಾಡುವುದರಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ನೆನಪಿಡಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ