Daily Horoscope: ಈ ರಾಶಿಯವರಿಗಿಂದು ಮುಂಬಡ್ತಿಯ ಹರ್ಷ

Published : Mar 31, 2022, 07:37 AM IST
Daily Horoscope: ಈ ರಾಶಿಯವರಿಗಿಂದು ಮುಂಬಡ್ತಿಯ ಹರ್ಷ

ಸಾರಾಂಶ

31 ಮಾರ್ಚ್ 2022, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವಿಶ್ವಾಸ ದ್ರೋಹದಿಂದ ಮೇಷ ಕಂಗಾಲು

ಮೇಷ(Aries): ಈ ರಾಶಿಯ ಮಹಿಳೆಯರಿಗೆ ಅನವಶ್ಯಕ ಚಿಂತೆಗಳು ಕಾಡಬಹುದು. ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿ ಬಂದು ವಿಶ್ವಾಸ ದ್ರೋಹ ಮನಸ್ಸನ್ನು ಹಾಳು ಮಾಡುವುದು. ದಾಯಾದಿಗಳ ಕಿರಿಕಿರಿಗೆ ನೆಮ್ಮದಿ ಹಾಳಾಗುವುದು. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ವೃಷಭ(Taurus): ಧನಾದಾಯ ಚೆನ್ನಾಗಿದ್ದು, ಖರ್ಚು ವೆಚ್ಚಗಳೂ ಅಷ್ಟೇ ಹೆಚ್ಚಲಿವೆ. ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯ ಸಲಹೆ ಪಡೆಯಿರಿ. ವಿರೋಧಿಗಳ ಕುಚೋದ್ಯದಿಂದ ನ್ಯಾಯಾಲಯ ಪ್ರಕರಣಗಳಲ್ಲಿ ಹಿನ್ನೆಡೆಯಾಗಬಹುದು. ಗೋ ಗ್ರಾಸ ನೀಡಿ. 

ಮಿಥುನ(Gemini): ಆದಾಯ ಚೆನ್ನಾಗಿದ್ದು, ಹೊಸ  ಹೊಸ ಯೋಜನೆಗೆ ಕೈ ಹಾಕುವಿರಿ. ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಚಿಂತಿತರಾಗುವಿರಿ. ಸಣ್ಣ ಪುಟ್ಟ ತಿರುಗಾಟಗಳು ಸಂತಸ ತರಲಿವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ, ಯಶೋಲಾಭವಿರುತ್ತದೆ.  ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕಟಕ(Cancer): ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುವುದು. ವಾಹನ ಖರೀದಿಗೆ ಯಶ ಸಿಗಲಿದೆ. ಏಜೆಂಟರು, ಗುತ್ತಿಗೆದಾರರು ಪ್ರಯತ್ನ ಹೆಚ್ಚಿಸಿದರೆ ಫಲವೂ ಅತ್ಯಧಿಕವಾಗಿ ಹೆಚ್ಚಲಿದೆ. ಸಂಗಾತಿಯೊಂದಿಗೆ ಮಾತನಾಡುವಾಗ ಸಂಯಮ ವಹಿಸಿ. ರಾಮ ಧ್ಯಾನ ಮಾಡಿ. 

ಸಿಂಹ(Leo): ಗೃಹ ಖರೀದಿ ಇಲ್ಲವೇ ನಿವೇಶನ ಖರೀದಿಯಿಂದ ಸಂತಸ ಹೆಚ್ಚುವುದು. ಅಧಿಕ ಮೊತ್ತದ ವ್ಯವಹಾರ ಕೊಂಚ ಆತಂಕವನ್ನೂ ತರುವುದು. ವ್ಯಾಪಾರ, ವ್ಯವಹಾರಗಳು ಸರಾಗವಾಗಿ ನಡೆಯಲಿವೆ. ಆರೋಗ್ಯವು ಸುಧಾರಿಸಿ ತೃಪ್ತಿ ತರಲಿದೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ಮಾ.31ಕ್ಕೆ ಶುಕ್ರ ಗೋಚಾರ, ಅಂತೂ ಬದಲಾಗಲಿದೆ ಈ ರಾಶಿಗಳ luck

ಕನ್ಯಾ(Virgo): ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶ ನಿಮ್ಮ ಕೈ ಸೇರದೆ ಕಿರಿಕಿರಿಯಾದೀತು. ತಾಳ್ಮೆ, ಸಂಯಮದಿಂದ ಮುಂದುವರಿಯಿರಿ. ಚಿನ್ನಾಭರಣಗಳ ಖರೀದಿ ಮಾಡಲಿರುವಿರಿ. ಗೃಹದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ರಾಘವೇಂದ್ರ ಶತನಾಮಾವಳಿ ಹೇಳಿಕೊಳ್ಳಿ. 

ತುಲಾ(Libra): ಕೌಟುಂಬಿಕ ಸಮಸ್ಯೆಗಳು ಕಂಗೆಡಿಸಲಿವೆ. ವ್ಯಾಪಾರಸ್ಥರಿಗೆ ಅಧಿಕ ಲಾಭವಿದ್ದು ಬಹಳ ಬ್ಯುಸಿಯಾದ ದಿನವಾಗಲಿದೆ. ಸರ್ಕಾರಿ ಕೆಲಸ ಕಾರ್ಯಗಳು ಮಂದಗತಿಯಿಂದಾಗಿ ಬೇಸರ ತರಲಿವೆ. ಮನೆಯಲ್ಲಿ ಸಂಗಾತಿ ಹಾಗೂ ಮಕ್ಕಳಿಂದ ಬುದ್ಧಿ ಮಾತು ಕೇಳಬೇಕಾಗಿ ಬರುವುದು. ಲಕ್ಷ್ಮೀ ನರಸಿಂಹ ಸ್ವಾಮಿಯ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ವಿಲಾಸೀ ಜೀವನಕ್ಕಾಗಿ ಧನವ್ಯಯ ಮಾಡುವಿರಿ. ವಾಹನ ಚಾಲನೆಯಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಉದ್ಯೋಗಸ್ಥರಿಗೆ ಮುಂಬಡ್ತಿ ದೊರಕಿ ಸಂತಸ ಹೆಚ್ಚಲಿದೆ. ವಿಷ್ಣು ಸಹಸ್ರನಾಮ ಪಠಣ ಮಾಡಿ. ಲಕ್ಷೀ ವೆಂಕಟೇಶ್ವರ ಸ್ಮರಣೆ ಮಾಡಿ. 

ಧನುಸ್ಸು(Sagittarius): ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿ ಇರಲಿದೆ. ರಾಜಕೀಯ ವಲಯದವರಿಗೆ ಸ್ಥಾನಮಾನ ಬಲ ಪಡಿಸಿಕೊಳ್ಳುವ ಅವಕಾಶಗಳು ಲಭಿಸಲಿವೆ. ದೇವತಾರಾಧನೆಯಿಂದ ಕಷ್ಟಗಳು ಪರಿಹಾರವಾಗುವುವು. ಆರೋಗ್ಯ ಸಮಸ್ಯೆಗಳು ಕಂಡುಬರಲಿವೆ. ಕೃಷ್ಣ ನಾಮ ಸ್ಮರಣೆ ಮಾಡಿ. 

ಮಕರ(Capricorn): ನಾನಾ ಕಡೆಗಳಿಂದ ನಾನಾ ರೀತಿಯಲ್ಲಿ ಖರ್ಚು ವೆಚ್ಚಗಳು ಕಂಡುಬರಲಿವೆ. ಬಹುದಿನಗಳಿಂದ ಕಾಯುತ್ತಿದ್ದ ಅವಿವಾಹಿತರಿಗೆ ಸಮಾಧಾನದ ನಿಟ್ಟುಸಿರು ಬಿಡುವ ಸಮಯ ಬರಲಿದೆ. ರಾಘವೇಂದ್ರ ಸ್ವಾಮಿ ಭಜನೆ ಮಾಡಿ. 

ಕುಂಭ(Aquarius): ಅನಿರೀಕ್ಷಿತವಾಗಿ ಅಚ್ಚರಿಯ ಕಾರ್ಯಸಾಧನೆ ಮಾಡುವಿರಿ. ಇದರಿಂದ ಮನೆಯಲ್ಲಿ ಹರ್ಷದ ವಾತಾವರಣ ಕಂಡುಬರಲಿದೆ. ಕಲಾವಿದರಿಗೆ ಸೂಕ್ತ ಸಂಭಾವನೆ, ಗೌರವ, ಮನ್ನಣೆ ದೊರಕಲಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿರುವವರಿಗೆ ಉತ್ತಮ ಲಾಭ. ಗೋ ಗ್ರಾಸ ನೀಡಿ. 

ಏಕಾಂತದಲ್ಲೇ ಆತ್ಮಾನಂದ ಕಾಣುವ ರಾಶಿಯವರಿವರು

ಮೀನ(Pisces): ಆತ್ಮವಿಶ್ವಾಸ, ಸ್ವಪ್ರಯತ್ನದಲ್ಲಿ ನಂಬಿಕೆ ಇರಿಸಿದರೆ ಅದೃಷ್ಟ ಸಾಥ್ ನೀಡಲಿದೆ. ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಮನೆಯಲ್ಲಿ ಶುಭ ಕಾರ್ಯ ನಡೆಯಲು ನಾಂದಿ ಹಾಡಲಿದ್ದೀರಿ. ರಾಘವೇಂದ್ರ ಶತನಾಮಾವಳಿ ಹೇಳಿಕೊಳ್ಳಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ