Daily Horoscope: ಮಿಥುನಕ್ಕೆ ಶುಭ ದಿನ, ವೃಷಭಕ್ಕೆ ಎಚ್ಚರ ಅಗತ್ಯ

Published : Mar 29, 2022, 07:36 AM IST
Daily Horoscope: ಮಿಥುನಕ್ಕೆ ಶುಭ ದಿನ, ವೃಷಭಕ್ಕೆ ಎಚ್ಚರ ಅಗತ್ಯ

ಸಾರಾಂಶ

29 ಮಾರ್ಚ್ 2022, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಇಂದು ಯಾವ ದೊಡ್ಡ ನಿರ್ಧಾರ ತೆಗೆದುಕೊಳ್ಳದಿರಲು ಮೀನಕ್ಕೆ ಸಲಹೆ

ಮೇಷ(Aries): ನಿಮ್ಮನ್ನು ಹತ್ತಿರದವರೇ ಸಂಪೂರ್ಣ ತಪ್ಪು ತಿಳಿಯಬಹುದು. ವಿವರಣೆ ನೀಡುವುದು ಟೈಂ ವೇಸ್ಟ್ ಎಂದು ಸುಮ್ಮನಾಗಬೇಡಿ. ಅವರಿಗೆ ನಿಮ್ಮ ಮನಸ್ಥಿತಿ, ಕಾರ್ಯದ ಹಿಂದಿನ ಕಾರಣಗಳನ್ನು ವಿವರಿಸಿ. ಸಂಬಂಧಗಳನ್ನು ಚೆನ್ನಾಗಿಟ್ಟುಕೊಳ್ಳುವುದು ಕೂಡಾ ಉತ್ತಮ ಜೀವನಕ್ಕೆ ಕಾರಣವಾಗುತ್ತದೆ ಎಂಬುದು ನೆನಪಿರಲಿ. ಆಂಜನೇಯ ಸ್ಮರಣೆ ಮಾಡಿ. 

ವೃಷಭ(Taurus): ಬೆಣ್ಣೆಯಿಂದ ಕೂದಲು ತೆಗೆದವರಂತೆ ನಯವಾಗಿ ಮಾತನಾಡುವವರ ಬಗ್ಗೆ ಎಚ್ಚರಿಕೆ ಅಗತ್ಯ. ಅದೃಷ್ಟ ನಿಮ್ಮ ಜೊತೆಗಿದೆ. ಪರಿಶ್ರಮ ಹೆಚ್ಚು ಹಾಕಿ. ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಕೊಂಚ ಹೆಚ್ಚಿನ ಧೈರ್ಯ ತೋರಬೇಕು. ಮಹಾಲಕ್ಷ್ಮೀ ಆರಾಧನೆ ಮಾಡಿ. 

ಮಿಥುನ(Gemini): ಮಕ್ಕಳಿಗೆ ಹೊಸ ನೌಕರಿ ದೊರೆತು ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ವಿದ್ಯಾಭ್ಯಾಸ ವಿಷಯದಲ್ಲೂ ಮಕ್ಕಳು ನಿರ್ದಿಷ್ಟ ಗುರಿ ತಲುಪುವರು. ಅನಿರೀಕ್ಷಿತ ಧನಲಾಭವಿರಲಿದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಿ. ಮನೆ ದೇವರನ್ನು ಸ್ಮರಿಸಿಕೊಳ್ಳಿ. 

ಕಟಕ(Cancer): ಅನುಮಾನ ಯಾವತ್ತಿಗೂ ಒಳ್ಳೆಯದು ಮಾಡುವುದಿಲ್ಲ. ಅತಿಯಾಗಿ ಅನುಮಾನಿಸಿ ಹತ್ತಿರದವರ ದೃಷ್ಟಿಯಲ್ಲಿ ಸಣ್ಣವರಾಗಬೇಡಿ. ಆಧ್ಯಾತ್ಮಿಕವಾಗಿ ಹೆಚ್ಚು ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ಸಮಾಧಾನ ತಪ್ಪುವುದು. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ಮಿತಿ ಮೀರೋಷ್ಟು Romantic ಈ ರಾಶಿಯ ಹುಡುಗೀರು, ಕಟ್ಟಿಕೊಳ್ಳೋನೇ ಪುಣ್ಯವಂತ!

ಸಿಂಹ(Leo): ಏನೇ ವಿಷಯಕ್ಕೆ ಕೈ ಹಾಕಿದರೂ ಅದು ತೊಡಕಾದಂತೆನಿಸುವುದು. ಯಾವುದೂ ಮುಂದೆ ಹೋಗದೆ ಕಿರಿಕಿರಿಗೊಳ್ಳುವಿರಿ. ಮನೆಯ ಸದಸ್ಯರ ವರ್ತನೆ ಹಿಡಿಸದೆ ಅಸಮಾಧಾನ ಹೆಚ್ಚುತ್ತದೆ. ವಿವಾಹಿತರಿಗೆ ನೆಮ್ಮದಿ ಇರಲಿದೆ. ಆಂಜನೇನಿಗೆ ಕೆಂಪು ಹೂಗಳನ್ನು ಅರ್ಪಿಸಿ. 

ಕನ್ಯಾ(Virgo): ಗೆಲ್ಲಲೇಬೇಕೆಂಬ ಹಟವಿದ್ದರೆ ಗೆಲುವು ಸಿಗುತ್ತದೆ. ದಾಂಪತ್ಯದಲ್ಲಿ ಸ್ವಲ್ಪ ಅಸಮಾಧಾನವಾದರೂ ಚಿಂತೆ ಬೇಡ, ಕ್ಷಣಿಕವಷ್ಟೇ. ವಾಹನ ಸವಾರರಿಗೆ ಹೆಚ್ಚಿನ ಜಾಗ್ರತೆ ಅಗತ್ಯ. ದೇವತಾ ಕಾರ್ಯಗಳಲ್ಲಿ ಭಾಗಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ತುಲಾ(Libra): ಅಂದುಕೊಂಡಿದ್ದೆಲ್ಲವೂ ನೆರವೇರಲಿದೆ. ಯಾವ ವಿಚಾರದ ಬಗ್ಗೆಯೂ ಅರ್ಧಂಬರ್ಧ ತಿಳಿದುಕೊಂಡು ಮಾತಾಡಬೇಡಿ. ಮಕ್ಕಳಿಂದ ಕೊರಗು. ಅವರಿಗೆ ಬಯ್ಯುವ ಮುನ್ನ ನೀವು ನಿಮ್ಮ ಹೆತ್ತವರನ್ನು ಸರಿಯಾಗಿ ನಡೆಸಿಕೊಂಡಿದ್ದೀರಾ ಎಂದು ಪರಾಮರ್ಶಿಸಿಕೊಳ್ಳಿ. ಕೆಂಪು ಧಾನ್ಯಗಳನ್ನು ದಾನ ಮಾಡಿ. 

ವೃಶ್ಚಿಕ(Scorpio): ಮನೆಯ ಯಾವೊಂದು ವಿಚಾರಗಳೂ ನಿಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಇರುವುದನ್ನು ಬಿಡದೆ ಹೋದರೆ ಸಾಕಷ್ಟು ಪ್ರತಿಫಲಗಳನ್ನ ಅನುಭವಿಸಬೇಕಾಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ಅಹಂಕಾರದಿಂದ ಕಳಚಿಕೊಳ್ಳುವತ್ತ ಗಮನ ಹರಿಸಿ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.

ಈ ರಾಶಿಯವರ ಬಗ್ಗೆ ತಪ್ಪು ತಿಳಿಯೋದೇ ಹೆಚ್ಚು!

ಧನುಸ್ಸು(Sagittarius): ಮಾತಿನಲ್ಲೇ ಅರಮನೆ ಕಟ್ಟುವುದು ಬಿಟ್ಟು ಕೆಲಸದತ್ತ ಗಮನ ಹರಿಸಿ. ಆರೋಗ್ಯದಲ್ಲಿ ವ್ಯತ್ಯಾಸವಿದ್ದರೂ ಚಿಂತಿಸುವ ಅಗತ್ಯವಿಲ್ಲ. ದೇಹಬಲ ಇರಲಿದ್ದು ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಉತ್ಸಾಹ ಹೆಚ್ಚುತ್ತದೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ. 

ಮಕರ(Capricorn): ನಿಮ್ಮ ನಿಲುವು ಬದಲಾವಣೆಯಾಗದೆ ಹೋದಲ್ಲಿ ಯಾವುದೂ ಸರಿಯಾಗದು. ಇನ್ನೊಬ್ಬರಲ್ಲಿ ಬರೀ ತಪ್ಪು ಹುಡುಕುತ್ತಾ ಹೋಗಬೇಡಿ. ಪಾಲುದಾರರ ಕಡೆಯಿಂದ ವಂಚನೆಗೊಳಗಾಗದಂತೆ ಹೆಚ್ಚಿನ ಎಚ್ಚರಿಕೆ ವಹಿಸಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ಕುಂಭ(Aquarius): ಕೆಲಸಗಳು ಮಂದ ಗತಿಯಲ್ಲಿ ಸಾಗಿ ಕಿರಿಕಿರಿಯಾಗುವುದು. ವಿನಾ ಕಾರಣ ಮನಸ್ಸಿನ ನೆಮ್ಮದಿ ಕೆಡುವುದು. ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಲಿದೆ. ಹಲ್ಲು ನೋವು ಬಾಧಿಸಬಹುದು. ವಸ್ತು ಕಳವಾಗುವ ಸಾಧ್ಯತೆ. ಇಡೀ ದಿನ ಮೈಯ್ಯೆಲ್ಲ ಕಣ್ಣಾಗಿರಿ. ಆಂಜನೇಯನಿಗೆ ವೀಳ್ಯದ ಹಾರ ಅರ್ಪಿಸಿ.

ಮೀನ(Pisces): ಸಹೋದರರ ಸಹಕಾರದಿಂದ ಗೃಹಕಾರ್ಯಗಳು ಸುಲಭವಾಗುವುವು. ಕುಟುಂಬ ಸೌಖ್ಯವಿದ್ದರೂ ಶತ್ರುಬಾಧೆ ಕಿರಿಕಿರಿ ಉಂಟು ಮಾಡಲಿದೆ. ಯಾವ ದೊಡ್ಡ ನಿರ್ಧಾರವನ್ನೂ ಇಂದು ತೆಗೆದುಕೊಳ್ಳಬೇಡಿ. ಮಹಾಲಕ್ಷ್ಮೀ ಸ್ಮರಣೆ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ