23 ಜನವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಹೊಸ ವಸ್ತು ಖರೀದಿ ಯೋಗ, ನಿಮ್ಮ ರಾಶಿಯ ಇಂದಿನ ಭವಿಷ್ಯ ನೋಡಿ
ಮೇಷ(Aries): ದೂರ ಪ್ರಯಾಣದಿಂದ ಕಾರ್ಯ ಸಿದ್ಧಿ. ಅಂದುಕೊಂಡ ಕೆಲಸಗಳು ಆಗುತ್ತವೆ. ಆದರೆ, ಕೋಪ ಅಡ್ಡ ಬರಬಹುದು ಎಚ್ಚರ. ಕೋಪದ ಕೈಗೆ ಬುದ್ಧಿ ಕೊಡಬೇಡಿ. ಸ್ನೇಹಿತರು ಸಾಲ ಕೇಳಬಹುದು. ಕೊಟ್ಟು ಕೋಡಂಗಿ ಆಗುವ ಬದಲು ಕೊಡದೇ ಇರುವುದೇ ಉತ್ತಮ. ಗಣಪತಿ ಸ್ಮರಣೆ ಮಾಡಿ.
ವೃಷಭ(Taurus): ಹೊಸ ವಸ್ತುಗಳ ಖರೀದಿಯಿಂದ ಉತ್ಸಾಹ ಹೆಚ್ಚುವುದು. ಸಂಗಾತಿಯ ಸಹಕಾರದಿಂದ ಕಾರ್ಯಗಳು ಸುಗಮವಾಗುವುವು. ದಾಂಪತ್ಯಸುಖವಿದೆ. ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. ವಾಹನ ಯೋಗವಿದೆ. ನವಗ್ರಹ ಪ್ರಾರ್ಥನೆ ಮಾಡಿ.
undefined
ಮಿಥುನ(Gemini): ಅಂದುಕೊಂಡ ಕಾರ್ಯಗಳು, ಮನೆಯ ಬಾಕಿ ಕೆಲಸಗಳು ಮುಗಿದು ನಿರಾಳವಾಗುವಿರಿ. ಸ್ನೇಹಿತರ ಭೇಟಿಯಿಂದ ಸಂತೋಷ. ತಾಯಿಯ ಕಡೆಯಿಂದ ಬರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಮಕ್ಕಳ ಮಾನಸಿಕ ಬೆಳವಣಿಗೆ ಕಡೆ ಗಮನ ಹರಿಸಿ. ಆದಿತ್ಯ ಹೃದಯ ಪಠಿಸಿ.
ಕಟಕ(Cancer): ಯಾರೋ ಮನೆಯವರ ಬಗ್ಗೆ ತಪ್ಪು ಮಾತನಾಡುತ್ತಿದ್ದಾರೆ ಎಂದರೆ ಹಿತ್ತಾಳೆ ಕಿವಿಯವರಂತೆ ಕೇಳಿಸಿಕೊಳ್ಳಬೇಡಿ. ಮನೆಯ ಸದಸ್ಯರ ಪರ ನಿಂತು ಮಾತಾಡಿ. ಬೆನ್ನಿಗೆ ಇರಿಯುವ ಸ್ನೇಹಿತರನ್ನು ದೂರವಿಡಿ. ಪಾಲುದಾರಿಕೆ ಕೆಲಸಗಳಲ್ಲಿ ಮನಸ್ತಾಪ. ಸೂರ್ಯನಿಗೆ ಅರ್ಘ್ಯ ಬಿಡಿ.
Vastu colours: ಬದುಕನ್ನು ನಿರ್ಧರಿಸೋ ಬಣ್ಣಗಳು.. ನಿಮ್ಮ ಮನೆಗೆ ಯಾವುದು ಒಳ್ಳೆಯದು ನೋಡಿ..
ಸಿಂಹ(Leo): ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗುವುವು. ಆತಂಕ ತರುವಂಥ ಹೊಸ ತಲೆಬಿಸಿಗಳು ಎದುರಾಗಬಹುದು. ಮಕ್ಕಳ ವಿದ್ಯಾಭ್ಯಾಸ ವಿಚಾರವಾಗಿ ವಿಚಾರಿಸಿ. ತಾಯಿಯ ಆರೋಗ್ಯ ಸುಧಾರಿಸಿ ಕೊಂಚ ಸಮಾಧಾನವಾಗುವುದು. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಕನ್ಯಾ(Virgo): ನಿಮ್ಮ ಸಣ್ಣ ಪುಟ್ಟ ಆದಾಯದ ಮೂಲಗಳಿಂದ ಲಾಭವಿರಲಿದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಗಮನ ಅಗತ್ಯ. ಬಹಳ ಕಾಲದಿಂದ ಆಸೆ ಪಟ್ಟ ವಸ್ತುಗಳು ಮನೆಗೆ ಬರಬಹುದು. ಪ್ರವಾಸ ಯೋಜನೆ ರೂಪಿಸಲಿರುವಿರಿ. ಕುಲ ದೇವರ ಸ್ಮರಣೆ ಮಾಡಿ.
ತುಲಾ(Libra): ಮನೆಯ ಹಣದ ಸಮಸ್ಯೆಗಳು ಕಂಗಾಲಾಗಿಸಲಿವೆ. ಆರ್ಥಿಕ ವಿಷಯವಾಗಿ ಅವಮಾನ ಎದುರಿಸಬೇಕಾಗಬಹುದು. ಸ್ನೇಹಿತರ ಕಡೆಯಿಂದ ಸಹಾಯ ದೊರಕಲಿದೆ. ಸಂಗಾತಿಯೊಂದಿಗೆ ಸಣ್ಣ ಪುಟ್ಟ ವಿಷಯಕ್ಕೆ ಮುನಿಸಾಗಬಹುದು. ಗೋವಿಗೆ ಹಸಿರು ಸೊಪ್ಪು ತಿನ್ನಿಸಿ.
Vastu Tips : ಈ ರೀತಿಯ ಪೀಠೋಪಕರಣಗಳನ್ನು ಮನೆಯಲ್ಲಿಟ್ಟರೆ ಸಮಸ್ಯೆ ಖಚಿತ!
ವೃಶ್ಚಿಕ(Scorpio): ಬದುಕು ನಿಂತ ನೀರಾದರೆ ಅದರಿಂದ ಆರೋಗ್ಯಕರ ಬೆಳವಣಿಗೆ ಸಾಧ್ಯವಿಲ್ಲ. ಬದುಕು ಮುಂದುವರಿಯಲು ಏನಾಗಬೇಕೋ ಅದಕ್ಕಾಗಿ ನೀವೇ ಮಾನಸಿಕವಾಗಿ ಬದಲಾವಣೆಗಳನ್ನು ತಂದುಕೊಳ್ಳಬೇಕು. ಧನ ಲಾಭವಿದೆ. ಪಕ್ಷಿಗಳಿಗೆ ಧಾನ್ಯ ಹಾಕಿ.
ಧನುಸ್ಸು(Sagittarius): ಮನಸ್ಸು ಬಿಚ್ಚಿ ಮಾತಾಡದೆ ಯಾವೊಂದು ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಕುಟುಂಬದೊಂದಿಗೆ ಪ್ರಯಾಣ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗಬಹುದು. ಸಂಗಾತಿಯ ಸಹಕಾರ ಇರಲಿದೆ. ಆದಿತ್ಯ ಹೃದಯ ಪಠಿಸಿ.
ಮಕರ(Capricorn): ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ಅನಗತ್ಯ ಆತಂಕಗಳು ಕಾಡುವುವು. ವಿರೋಧಿಗಳ ಉಪದ್ರವ ಹೆಚ್ಚಬಹುದು. ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.
ಕುಂಭ(Aquarius): ವ್ಯಾಪಾರ ವಹಿವಾಟಿನಲ್ಲಿ ಲಾಭ. ನಿರೀಕ್ಷೆಯನ್ನೇ ಕೈ ಬಿಟ್ಟಿದ್ದ ದೊಡ್ಡ ಮೊತ್ತದ ಸಾಲ ಹಿಂದಿರುಗಿ ಬರಲಿದೆ. ಸಹೋದರರ ಸಹಕಾರ, ನೆರವು ದೊರೆತು ದೊಡ್ಡ ಕಾರ್ಯಗಳು ಸುಲಭವಾಗಿ ಜರುಗುವುವು. ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಧನ್ವಂತರಿ ಸ್ಮರಣೆ ಮಾಡಿ.
ಮೀನ(Pisces): ದೇವರ ವಿಚಾರದಲ್ಲಿ ಶ್ರದ್ಧೆ ಹೆಚ್ಚುವುದು. ನೆಂಟರಿಷ್ಟರ ಭೇಟಿಯಿಂದ ಸಂತಸ. ಮಾನಸಿಕ ನೆಮ್ಮದಿ ಇರುವುದು. ಸಣ್ಣ ಪುಟ್ಟ ತಿರುಗಾಟದಿಂದ ಸಂತಸ. ಧನಲಾಭ ಇರಲಿದೆ. ಮನೆ ಕೆಲಸಗಳು ಹೆಚ್ಚು ಶ್ರಮದಾಯಕ ಎನಿಸುವುದು. ಬಡವರಿಗೆ ಹೊಟ್ಟೆ ತುಂಬಿಸಿ.