Daily Horoscope: ಸಿಂಹಕ್ಕೆ ಚಿಂತೆಗಳ ಭಾರ, ಧನಸ್ಸಿಗೆ ಸಂಗಾತಿಯ ಸಹಕಾರ

Published : Feb 25, 2022, 05:10 AM IST
Daily Horoscope: ಸಿಂಹಕ್ಕೆ ಚಿಂತೆಗಳ ಭಾರ, ಧನಸ್ಸಿಗೆ ಸಂಗಾತಿಯ ಸಹಕಾರ

ಸಾರಾಂಶ

25 ಫೆಬ್ರವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕುಂಭಕ್ಕೆ ಕಾಡುವ ಚರ್ಮ ಸಮಸ್ಯೆ, ನಿಮ್ಮ ರಾಶಿಯ ಫಲವೇನಿದೆ?

ಮೇಷ(Aries): ನಿಮಗೀಗ ಉತ್ತಮ ಕಾಲ. ಕಚೇರಿಯಲ್ಲಿ, ವ್ಯಾಪಾರ ಉದ್ಯಮಗಳಲ್ಲಿ ಉತ್ತಮ ಹೆಸರು, ಲಾಭ ಮಾಡುವಿರಿ. ಅಹಂಕಾರ ನಿಮ್ಮನ್ನು ತಲುಪಲು ಬಿಡಬೇಡಿ. ಯಶಸ್ಸಿಗೆ ಅಹಂಕಾರವೇ ಅಡ್ಡಿಯಾದೀತು. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಲಕ್ಷ್ಮೀ ಪ್ರಾರ್ಥನೆ ಮಾಡಿ. 

ವೃಷಭ(Taurus): ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಸಂಗಾತಿಯ ಕಡೆಯಿಂದ ಅನಿರೀಕ್ಷಿತ ಸಂತೋಷಗಳು ಸಿಗಲಿವೆ. ಕಚೇರಿಯಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ಗೊಣಗದೆ ಹೆಚ್ಚಿನ ಶ್ರಮ ಹಾಕಿ ಕಾರ್ಯ ನಿರ್ವಹಿಸಿ. ಅದಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ. ದುರ್ಗಾ ಅಷ್ಟೋತ್ತರ ಹೇಳಿ.

ಮಿಥುನ(Gemini): ಹೊರಗಿನ ದ್ವೇಷ ಕಾರುವ ವಿಷಯಗಳಿಗೆ ಮೂಗು ತೂರಿಸಲು ಹೋಗಬೇಡಿ. ನಿಮ್ಮ ಪಾಡಿಗೆ ನೀವು ಬದುಕನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿ. ಇಲ್ಲಸಲ್ಲದ ಪುಡಿ ರಾಜಕೀಯದಿಂದ ಮನಸ್ಸು ಹಾಳು ಮಾಡಿಕೊಳ್ಳಬೇಡಿ. ವಿಪರೀತ ಮೈ ಕೈ ನೋವುಗಳು ಕಾಡಲಿವೆ. ಲಲಿತಾ ಸಹಸ್ರನಾಮ ಹೇಳಿ.

ಕಟಕ(Cancer): ಅವರಿವರ ಮನೆಯ ಸಮಸ್ಯೆ ಬಗೆಹರಿಸುವ ಮುನ್ನ ನಿಮ್ಮ ಮನೆಯಲ್ಲಿ ನೀವು ವಹಿಸಿಕೊಳ್ಳಬೇಕಾದ ಜವಾಬ್ದಾರಿಗಳ ಕಡೆಗೆ ಗಮನ ಹರಿಸಿ. ನಿರುದ್ಯೋಗಿಗಳು ಭರವಸೆ ಕಳೆದುಕೊಳ್ಳುವುದರ ಬದಲು ಹೆಚ್ಚು ಪರಿಶ್ರಮ ಹಾಕಿ ಹೊಸ ಕಲಿಕೆಯಲ್ಲಿ ತೊಡಗುವುದೊಳಿತು. ಶಾರದಾಂಬೆಯನ್ನು ಸ್ಮರಿಸಿ.

ಸಿಂಹ(Leo): ಮನೆಯಲ್ಲಿ ಯಾವೊಂದು ಕಾರ್ಯವೂ ಕೈಗೂಡುತ್ತಿಲ್ಲ ಎಂಬ ಚಿಂತೆಗಳು ಬಾಧಿಸಬಹುದು. ಧನಾತ್ಮಕವಾಗಿ ಯೋಚಿಸಿ, ನಿಮ್ಮಿಂದ ಅದಕ್ಕಾಗಿ ಪ್ರಯತ್ನ ಹೆಚ್ಚಿಸಬೇಕಾಗಿದೆ ಎಂದು ತಿಳಿಯಿರಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿಲ್ಲದಿದ್ದರೆ ಕ್ಲೇಶಗಳು ಹೆಚ್ಚಲಿವೆ. ಗೃಹಶಾಂತಿಗಾಗಿ ಪಾರಾಯಣ ವ್ರತ ಮಾಡಿಸಿ. 

Swapna Shastra : ಕನಸಿನಲ್ಲಿ ಈ ಪ್ರಾಣಿಗಳು ಕಂಡ್ರೆ ಜೀವನದಲ್ಲಾಗಲಿದೆ ಹಣದ ಹೊಳೆ

ಕನ್ಯಾ(Virgo): ಕೂಡಿ ಬಂದ ವಿವಾಹ ಸಂಬಂಧವೊಂದು ಮುರಿದು ಬೀಳುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ವಸ್ತುಗಳು ದುರಸ್ತಿಗೆ ಬರಬಹುದು. ರೈತರು, ವ್ಯಾಪಾರಸ್ಥರಿಗೆ ನಷ್ಟದ ದಿನ. ಎದುರಿಂದ ನಯವಾದ ಮಾತುಗಳಾಡುವವರೆಲ್ಲ ಸಾಚಾ ಅಲ್ಲ ಎಂಬುದು ಮನಸ್ಸಿಗೆ ಗೊತ್ತಿರಲಿ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.

ತುಲಾ(Libra): ಹಿರಿಯರಿಗೆ ಅಗೌರವ ತೋರುವುದು, ಅವರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡುವುದು ಮಾಡಬೇಡಿ. ಹಿರಿಯರ ಆಶೀರ್ವಾದವೇ ಬಲವಾಗುವುದು ಎಂದು ನೆನಪಿಡಿ. ಕಲಿಕೆಯಲ್ಲಿ ಆಸಕ್ತಿ ಹೆಚ್ಚುವುದು. ಪ್ರೀತಿಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ.

ವೃಶ್ಚಿಕ(Scorpio): ಯಾರನ್ನೋ ಒಂದು ಮಾತಿನಿಂದ ಅಳೆಯಬೇಡಿ. ಕೊಂಚ ಸಮಯ ಕೊಟ್ಟು ನೋಡಿ. ನಿಮ್ಮ ಅಭಿಪ್ರಾಯ ಬದಲಾಗಬಹುದು. ಉದ್ಯೋಗಿಗಳಿಗೆ ಕೆಲಸದಲ್ಲಿ ಸಾಮಾನ್ಯ ಉತ್ಸಾಹ. ವ್ಯಾಪಾರಗಳಲ್ಲಿ ಮಿಶ್ರಫಲ ಇರಲಿದೆ. ಕುಲದೇವರ ಸ್ಮರಣೆ ಮಾಡಿ.

Mars Transit: ಮಂಗಳ ಗೋಚಾರದಿಂದ ಈ ನಾಲ್ಕು ರಾಶಿಗೆ ಲಾಟ್ರಿ

ಧನುಸ್ಸು(Sagittarius): ಜೀವನ ಸಂಗಾತಿಯಿಂದ ಪ್ರೀತಿ ಮತ್ತು ಸಹಕಾರದ ವಿಷಯದಲ್ಲಿ ದಿನವು ಅದ್ಭುತವಾಗಿದೆ. ಹಿರಿಯರ, ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿ. ವೈದ್ಯರ ಬಳಿ ಪರಿಶೀಲಿಸುವುದೂ ಒಳ್ಳೆಯದು. ಸಾಮಾಜಿಕ ಮನ್ನಣೆ ಸಿಗಲಿದೆ. ಮಹಾಲಕ್ಷ್ಮೀಯನ್ನು ಪೂಜಿಸಿ. 

ಮಕರ(Capricorn): ಗೃಹಸೌಖ್ಯ, ವಾಹನ ಸೌಖ್ಯ ಇರಲಿದೆ. ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಮಕ್ಕಳ ಭವಿಷ್ಯಕ್ಕಾಗಿ ಹೊಸ ಕಲಿಕೆಯಲ್ಲಿ ತೊಡಗಿಸಿ. ನೆಂಟರಿಷ್ಟರು ಮನೆಗೆ ಭೇಟಿ ನೀಡಬಹುದು. ಮಕ್ಕಳ ಕಡೆಯಿಂದ ಶುಭವಾರ್ತೆ ಕೇಳಬಹುದು. ಲಲಿತಾ ಸಹಸ್ರನಾಮ ಪಠಿಸಿ.

ಕುಂಭ(Aquarius): ಚರ್ಮ ಸಂಬಂಧಿ ಕಾಯಿಲೆಗಳು ಇದ್ದಕ್ಕಿದ್ದಂತೆ ಬಾಧಿಸಬಹುದು. ಇದರಿಂದ ಮನಸ್ಸಿನ ಸಮಾಧಾನ ಕದಡಿ ಯಾವ ಕೆಲಸ ಮಾಡಲು ಆಸಕ್ತಿ ಇಲ್ಲದೆ ಹೋಗಬಹುದು. ದೂರ ಪ್ರಯಾಣ ಸಾಧ್ಯತೆಗಳಿವೆ. ಪ್ರಮುಖ ಕಾರ್ಯಗಳನ್ನು ಮುಂದೂಡಬೇಕಾದ ಸಂದರ್ಭ ಎದುರಾಗಬಹುದು. ಗೋವಿಗೆ ಹಸಿರು ತಿನ್ನಿಸಿ. 

ಮೀನ(Pisces): ಗೌರವ ಕೊಟ್ಟರೆ ಗೌರವ ತಾನಾಗೇ ಪ್ರಾಪ್ತಿಯಾಗುವುದು ಎಂಬುದು ತಿಳಿದಿರಲಿ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟು ಖರ್ಚು ಮಾಡಿ. ವೈದ್ಯ ವೃತ್ತಿಯಲ್ಲಿರುವವರಿಗೆ ದೇಹಾಯಾಸ. ಮಹಿಳೆಯರಿಗೆ ಅನಾರೋಗ್ಯ ಕಾಡಬಹುದು. ಸರಸ್ವತಿ ಶ್ಲೋಕ ಹೇಳಿಕೊಳ್ಳಿ. ಬಿಳಿ ವಸ್ತುಗಳು, ಧಾನ್ಯಗಳ ದಾನ ಮಾಡಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ