Daily Horoscope: ಮೇಷಕ್ಕೆ ಕಾದಿದೆ ಅಚ್ಚರಿ, ಕುಂಭಕ್ಕೆ ಎದುರಾಗುವ ಕಿರಿಕಿರಿ

Published : Feb 23, 2022, 07:05 AM IST
Daily Horoscope: ಮೇಷಕ್ಕೆ ಕಾದಿದೆ ಅಚ್ಚರಿ, ಕುಂಭಕ್ಕೆ ಎದುರಾಗುವ ಕಿರಿಕಿರಿ

ಸಾರಾಂಶ

23 ಫೆಬ್ರವರಿ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಸಿಂಹದ ಗೊಂದಲ ನಿವಾರಣೆಗೆ ಸಕಾಲ

ಮೇಷ(Aries): ಪ್ರೀತಿಪಾತ್ರರಿಂದ ಕೆಲ ಆಶ್ಚರ್ಯ ಆನಂದಗಳು ಕಾದಿವೆ. ಹೊಸ ಕಲಿಕೆಯಿಂದ ಸಂತಸ. ಉದ್ಯೋಗ ಸ್ಥಳದಲ್ಲಿ ಹೊಸ ಯೋಜನೆ ಹೆಗಲಿಗೇರಬಹುದು. ವ್ಯಾಪಾರಸ್ಥರಿಗೆ ಲಾಭ. ತಲೆನೋವು, ಕಾಲುನೋವು ಕಾಡಿಸಬಹುಗು. ಬಡವರಿಗೆ ವಸ್ತ್ರ ದಾನ ಮಾಡಿ. 

ವೃಷಭ(Taurus): ಎಲ್ಲರನ್ನೂ ಮೆಚ್ಚಿಸುವ ಕಾರ್ಯ ಅಗತ್ಯವಿಲ್ಲ. ನಿಮ್ಮ ಪಾಡಿಗೆ ಪ್ರಾಮಾಣಿಕವಾಗಿದ್ದರೆ ಸಾಕು. ತೆಗೆದುಕೊಂಡ ಸಾಲ ಹಿಂದೆ ಕೊಡದಿರುವ ಯೋಚನೆಯೇ ಮುಳುವಾದೀತು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಂಪೂರ್ಣ ಪ್ರಯತ್ನ ಹಾಕಿ. ಗಣೇಶನ ಪ್ರಾರ್ಥನೆ ಮಾಡಿ. 

ಮಿಥುನ(Gemini): ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ. ಉದ್ಯೋಗದಲ್ಲಿ ಬೋನಸ್ ಸಿಗಬಹುದು. ಹೂಡಿಕೆಗಳು ಫಲ ಕೊಡಲಿವೆ. ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡಬೇಡಿ. ವಿವಾಹಾಕಾಂಕ್ಷಿಗಳಿಗೆ ಶುಭ ಸಂಬಂಧ ಕೂಡಿ ಬರಲಿದೆ. ಗಣಪತಿಗೆ ದೂರ್ವೆ ಅರ್ಪಿಸಿ. 

ಕಟಕ(Cancer): ಅಪರಿಚಿತರನ್ನು ಕೂಡಾ ಅನುಮಾನ ಪ್ರವೃತ್ತಿಯಿಂದ ನೋಡಬೇಡಿ. ಎಲ್ಲರನ್ನೂ, ಎಲ್ಲವನ್ನೂ ಒಳ್ಳೆಯ ದೃಷ್ಟಿಯಿಂದ ನೋಡಿ. ಒಳ್ಳೆಯದನ್ನೇ ಯೋಚಿಸಿ. ಪ್ರವಾಸ ಯೋಜನೆ ಮಾಡುವಿರಿ. ಪ್ರೇಮಿಗಳಿಗೆ ಶುಭದಿನ. ವ್ಯಾಪಾರಿಗಳಿಗೆ ಸಾಮಾನ್ಯ ಲಾಭ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಸಿಂಹ(Leo): ಹೊಸದೊಂದು ಯೋಜನೆಗೆ ಕೈ ಹಾಕುವ ಬಗ್ಗೆ ಗೊಂದಲ ಬಹಳ ಸಮಯದಿಂದ ಕಾಡುತ್ತಲೇ ಇದೆ. ಬಂದದ್ದೆಲ್ಲ ಬರಲಿ, ಆ ದೇವರ ದಯೆಯೊಂದಿರಲಿ ಎಂದುಕೊಂಡು ಮುನ್ನಡಿ ಇಡಿ. ಸಹೋದರಿಯ ವಿವಾಹ ವಿಷಯ ಚಿಂತೆಯಾಗಿ ಕೊರೆಯಬಹುದು. ಕುಟುಂಬ ಸದಸ್ಯರ ನಡುವೆ ಸಮನ್ವಯ ಕೊರತೆಯಿಂದ ಕಸಿವಿಸಿಯಾಗಬಹುದು. ಗಣೇಶನ ದೇವಾಲಯಕ್ಕೆ ಭೇಟಿ ನೀಡಿ.

Saturday Born Personality: ಶನಿವಾರ ಜನಿಸಿದವರಿಗಿರುತ್ತಾ ಶನಿ ಕೃಪೆ?

ಕನ್ಯಾ(Virgo): ವಾಹನಗಳು ದುರಸ್ಥಿಗೆ ಬರುವ ಸಾಧ್ಯತೆ ಇದೆ. ಸಣ್ಣ ವಿಷಯಕ್ಕೆ ಅತಿಯಾಗಿ ಕೊರಗುವುದು ಬಿಟ್ಟರೆ ಮಾತ್ರ ನೆಮ್ಮದಿ ಸಾಧ್ಯ. ಉದ್ಯೋಗರಂಗದಲ್ಲಿ ನಿರ್ಧಾರಗಳು ತಪ್ಪಬಹುದು. ಷೇರು ವ್ಯವಹಾರಗಳು ನಷ್ಟ ಉಂಟು ಮಾಡಲಿವೆ. ಗೋ ಗ್ರಾಸ ನೀಡಿ. 

ತುಲಾ(Libra): ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ, ಬಾಕಿ ಇರಿಸಿದ ಹಿಂದಿನ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಪ್ರಯತ್ನಬಲದಿಂದ ಯೋಜಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ತೋರಿಬರುವುದು. ವ್ಯಾಪಾರಿಗಳಿಗೆ, ಚಾಲಕರಿಗೆ ಸಾಧಾರಣ ಲಾಭ ಇರಲಿದೆ. ಸೊಂಟ, ಬೆನ್ನು ನೋವು ಕಾಡಿಸಬಹುದು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ವೃಶ್ಚಿಕ(Scorpio): ಕಾಯುತ್ತಿರುವ ಯೋಜನೆಗಳು ಕೈ ತಪ್ಪಬಹುದು. ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಮನೆಯಿಂದ ಬೇಡದ ವಸ್ತುಗಳನ್ನು ಹೊರಗೆ ದಾಟಿಸಿ.  ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಮನಸ್ಸಿನ ಕೊರಗು ಕೊಂಚ ಕಡಿಮೆಯಾಗಲಿದೆ. ಪಕ್ಷಿಗಳಿಗೆ ಕಾಳು ನೀಡಿ. 

Zodiac signs and Love: ಆಕಸ್ಮಿಕವಾಗಿ ತಮ್ಮ ಜೀವನಸಂಗಾತಿ ಕಂಡುಕೊಳ್ಳೋ ಅದೃಷ್ಟ ಈ 5 ರಾಶಿಯದು..

ಧನುಸ್ಸು(Sagittarius): ನಿಮ್ಮ ಶತ್ರುಗಳ ಕಾರ್ಯವೈಖರಿ ಮೇಲೆ ಹದ್ದಿನ ಕಣ್ಣಿಡಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚು. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಅವಮಾನಕರ ಘಟನೆಗಳು ಜರುಗುವ ಸಾಧ್ಯತೆ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

ಮಕರ(Capricorn): ವೃತ್ತಿ ಸಂಬಂಧ ಸಂಶಯಗಳಿದ್ದರೆ, ಗೊಂದಲದಲ್ಲಿದ್ದರೆ, ಇಂದು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವಿನಾ ಕಾರಣ ಇನ್ನೊಬ್ಬರನ್ನು ಚುಚ್ಚಿ ಮಾತಾಡಿ ನೋಯಿಸಬೇಡಿ. ನಿಮ್ಮ ಈ ಅಸ್ತ್ರ ನಿಮಗೇ ತಿರುಗುಬಾಣವಾಗಬಹುದು. ಇರುವೆಗಳಿಗೆ ಸಿಹಿ ತಿನ್ನಿಸಿ.

ಕುಂಭ(Aquarius): ಹಿರಿಯರ ಚುಚ್ಚು ಮಾತುಗಳಿಗೆ ಉದಾಸೀನವೇ ಮದ್ದು. ಕಡಿವಾಣವಿಲ್ಲದ ಖರ್ಚಿನಿಂದ ಮನಸ್ಸು ವ್ಯಾಕುಲಗೊಳ್ಳುವುದು. ದಿಢೀರ್ ಪ್ರಯಾಣ ಕೈಗೊಳ್ಳಬಹುದು. ಆದಷ್ಟು ಸಾತ್ವಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ಸಂಗಾತಿಯ ಮಾತಿಗೆ ಬೆಲೆ ಕೊಡಿ. ತಾಯಿಯ ಆಶೀರ್ವಾದ ಪಡೆಯಿರಿ. 

ಮೀನ(Pisces): ಕೆಲಸ ಕಾರ್ಯಗಳಲ್ಲಿ ಎಡವಟ್ಟು, ತಪ್ಪುಗಳು ಇಣುಕಬಹುದು. ಇದರಿಂದ ಮುಜುಗರ ಎದುರಿಸಬೇಕಾಗುವುದು. ಎಲ್ಲ ಕೆಲಸಗಳನ್ನು ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಯಿರಿ. ಮನೆಯಲ್ಲಿ ನಿಮ್ಮ ಮನೋಭಾವನೆಗೆ ವಿರೋಧ ವ್ಯಕ್ತವಾಗಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

PREV
Read more Articles on
click me!

Recommended Stories

ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ