24 ಫೆಬ್ರವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಗೆ ಮೇಲಧಿಕಾರಿಗಳ ಒತ್ತಡ
ಮೇಷ(Aries): ನಿಮ್ಮ ಮನೋಭಿಲಾಷೆಯೊಂದು ಈಡೇರಲಿದೆ. ಆಪ್ತರೊಂದಿಗೆ ಬಹು ಕಾಲದ ಮುನಿಸು ಶಮನವಾಗಲಿದೆ. ನಿಮ್ಮ ದೌರ್ಬಲ್ಯವನ್ನು ಯಾರೆದುರೂ ಬಿಟ್ಟು ಕೊಡದಂತೆ ಜಾಗ್ರತೆ ವಹಿಸಿ. ಅದನ್ನವರು ತಮ್ಮ ಲಾಭಕ್ಕೆ ಬಳಸಬಹುದು. ಉದ್ಯೋಗದಲ್ಲಿ ಸಹಕಾರ ಸಿಗಲಿದೆ. ರಾಘವೇಂದ್ರ ಸ್ವಾಮಿಯ ಶತನಾಮಾವಳಿ ಹೇಳಿಕೊಳ್ಳಿ.
ವೃಷಭ(Taurus): ಚುರುಕಿನಿಂದ ಕೆಲಸಗಳು ಸಾಗುತ್ತಾ ಹೋಗುತ್ತವೆ. ಸುಲಭವಾಗಿ ಕೆಲಸ ಮಾಡುವುದು ಸಾಧ್ಯವಾಗುತ್ತದೆ. ಸಂಗಾತಿಯಿಂದ ನಿಮ್ಮ ಕೆಲಸಕ್ಕೆ ಸಹಾಯ ಸಿಗುತ್ತದೆ. ಪಾಲುದಾರಿಕೆಯ ಕೆಲಸದಲ್ಲಿ ಉತ್ತಮ ಲಾಭ ಗಳಿಸುತ್ತೀರಿ. ವಿಷ್ಣು ಸಹಸ್ರನಾಮ ಹೇಳಿ.
undefined
ಮಿಥುನ(Gemini): ಶೇರು ವ್ಯವಹಾರಗಳಲ್ಲಿ ಧನ ಲಾಭವಿರಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಲಿವೆ. ವಾಹನ ಸೌಖ್ಯವಿದೆ, ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸುಸ್ತು, ಸೊಂಟ ನೋವು ಕಾಡಬಹುದು. ನೆಂಟರಿಷ್ಟರ ಆಗಮನದಿಂದ ಸಂತಸವಾಗುವುದು. ನವಗ್ರಹ ಪ್ರಾರ್ಥನೆ ಮಾಡಿ.
ಕಟಕ(Cancer): ಹಿತೈಷಿಗಳೊಂದಿಗೆ ಜೀವನದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವಿರಿ. ನಿಮ್ಮ ವಾಕ್ಚಾತುರ್ಯವನ್ನು ಎಲ್ಲರೂ ಮೆಚ್ಚುವರು. ಉದ್ಯೋಗ ರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ. ಕುಟುಂಬ ವರ್ಗದಲ್ಲಿ ವಿಚಾರ ವಿನಿಮಯದಿಂದ ಕಾರ್ಯಸಿದ್ದಿ, ರಾಯರ ಮಠಕ್ಕೆ ಭೇಟಿ ನೀಡಿ.
ಸಿಂಹ(Leo): ಸರ್ಕಾರಿ ಅಥವಾ ಖಾಸಗಿ ಕೆಲಸದಲ್ಲೂ ಲಾಭವನ್ನೇ ಗಳಿಸುತ್ತೀರಿ. ಅಧಿಕಾರಿ ವರ್ಗಕ್ಕೆ ಸ್ಥಾನ ಬದಲಾವಣೆ, ಶೇರು ವ್ಯವಹಾರಗಳಲ್ಲಿ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ. ಆಹಾರ ಸಮೃದ್ಧಿ ಇರಲಿದೆ. ಮಕ್ಕಳ ವಿದ್ಯಾಭ್ಯಾಸ ವಿಷಯವಾಗಿ ಖರ್ಚು ಹೆಚ್ಚು. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಉದ್ಯೋಗದಲ್ಲಿ ಇರುವ ಅಡೆತಡೆಗಳು ನಿವಾರಣೆ ಆಗುತ್ತದೆ. ಅಂದುಕೊಂಡ ಕೆಲಸಗಳು ವೇಗ ಗತಿಯಲ್ಲಿ ನಡೆಯುತ್ತದೆ. ಜೀವನದ ಕಷ್ಟದ ಸಂದರ್ಭದಲ್ಲಿ ಆದವರನ್ನು ಸ್ಮರಿಸಿ ಅವರೊಂದಿಗೆ ಮಾತನಾಡಿ. ಆರೋಗ್ಯದಲ್ಲಿ ಏರುಪೇರಾಗಬಹುದು. ಚರ್ಮ ಸಂಬಂಧಿ ಸಮಸ್ಯೆ ಹೆಚ್ಚಬಹುದು. ಗೋ ಗ್ರಾಸ ನೀಡಿ.
ತುಲಾ(Libra): ಸರ್ಕಾರಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಒತ್ತಡ(Stress) ಹೆಚ್ಚಾಗಬಹುದು. ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದಿಗ್ಧತೆ ಇದ್ದರೆ, ನಂತರ ನೀವು ಉತ್ತಮ ಸಲಹೆಗಾರರಿಂದ ಸಲಹೆ ಪಡೆಯುವುದೊಳಿತು. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ.
Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!
ವೃಶ್ಚಿಕ(Scorpio): ಹಣಕಾಸಿನ ಅಡಚಣೆಗಳು ಕಂಗೆಡಿಸಬಹುದು. ಮಾತಿನ ಚಕಮಕಿಯಿಂದ ದಾಂಪತ್ಯದಲ್ಲಿ ಅಸಮಾಧಾನ, ವ್ಯವಸಾಯದಲ್ಲಿ, ರಾಜಕೀಯದದಲ್ಲಿ ಏರುಪೇರಿಲ್ಲ. ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಪರರಿಂದ ವಂಚನೆ, ಮಾನ-ಮನಸ್ಸಿಗೆ ಭಂಗ. ಹಕ್ಕಿಗಳಿಗೆ ಕಾಳು ತಿನ್ನಿಸಿ.
ಧನುಸ್ಸು(Sagittarius): ಸಹೋದ್ಯೋಗಿಗಳ ಎಡವಟ್ಟಿನಿಂದ ಕೋಪ ಬರಬಹುದು. ನಿಧಾನವಾಗಿ ಸನ್ನಿವೇಶ ನಿಭಾಯಿಸಿ. ಕಾರ್ಯನಿಮಿತ್ತ ಕೈಗೊಂಡ ದೂರ ಪ್ರವಾಸ ಯಶಸ್ವಿಯಾಗುವುದು. ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ.
ಮಕರ(Capricorn): ದಾಂಪತ್ಯದಲ್ಲಿ ಮಧುರ ಸಂಬಂಧ ಇರಲಿದೆ. ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಹಿಂದೆ ಯಾವುದೋ ಕಾರಣಕ್ಕೆ ಅರ್ಧಕ್ಕೆ ನಿಂತ ಕೆಲಸ ಈಗ ಪೂರ್ಣವಾಗಬಹುದು. ಹೊಸ ಹೂಡಿಕೆ ಸಧ್ಯ ಫಲಕಾರಿಯಾಗದು. ನಿಮ್ಮ ಗುರು ಹಿರಿಯರನ್ನು ಸ್ಮರಿಸಿಕೊಳ್ಳಿ.
Mahashivratri : ಈ ಶಿವರಾತ್ರಿಗೆ ಜ್ಯೋತಿರ್ಲಿಂಗಗಳ ದರ್ಶನ ಪಡೆದು ಪುನೀತರಾಗಿರಿ..
ಕುಂಭ(Aquarius): ನೆರವು ಕೇಳಿ ಬಂದವರನ್ನು ಹಾಗೆಯೇ ಕಳುಹಿಸದೆ ಸಾಧ್ಯವಾದ ನೆರವು ನೀಡಿ. ನಿಮ್ಮ ಅಜಾಗರೂಕತೆಯ ಹಾಗೂ ಅಸಡ್ಡೆಯ ಕಾರಣಗಳಿಂದ ಅನಾರೋಗ್ಯ ಸಮಸ್ಯೆ ಕಾಡಬಹುದು. ಗೃಹದಲ್ಲಿ ಮಂಗಳ ಕಾರ್ಯಕ್ಕೆ ನಾಂದಿ. ರಾಮ ನಾಮ ಧ್ಯಾನ ಮಾಡಿ.
ಮೀನ(Pisces): ಒಗ್ಗೂಡಿರುವ ಹಣದ ಪ್ರದರ್ಶನ ಸಲ್ಲದು. ನಿಮ್ಮ ಪ್ರಾಮಾಣಿಕತೆ ಹಾಗೂ ಶ್ರಮಕ್ಕೆ ಬೆಲೆ ಇದ್ದೇ ಇದೆ. ನಿಮ್ಮ ಸಂಪರ್ಕಗಳ ಮೂಲಕ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕುಟುಂಬದ ಇತರ ಸದಸ್ಯರ ಮಾತುಗಳಿಗೆ ಬೆಲೆ ನೀಡಿ. ಕೃಷ್ಣನಿಗೆ ತುಳಸಿ ಅರ್ಪಿಸಿ.