Daily Horoscope: ಕಟಕಕ್ಕೆ ಕೂಡಿಟ್ಟ ಹಣ ಕಳೆದುಕೊಳ್ಳುವ ಸಾಧ್ಯತೆ, ಸಿಂಹಕ್ಕೆ ಸಂಬಂಧದಲ್ಲಿ ಬಿರುಕು

By Suvarna NewsFirst Published Feb 22, 2022, 5:00 AM IST
Highlights

22 ಫೆಬ್ರವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕುಂಭಕ್ಕೆ ಕೋರ್ಟ್ ಕಾರ್ಯಗಳಲ್ಲಿ ಯಶಸ್ಸು, ನಿಮ್ಮ ಫಲವೇನಿದೆ?

ಮೇಷ(Aries): ಅವಿವಾಹಿತರಿಗೆ ತಮ್ಮ ಪ್ರೀತಿ ದಕ್ಕಬಹುದು. ಉದ್ಯೋಗರಂಗದಲ್ಲಿ ನೀವು ಏಳ್ಗೆಯ ಪಥದಲ್ಲಿರುವಿರಿ. ಆದರೆ, ಕೋಪದ ಕಾರಣದಿಂದ ಅಮೂಲ್ಯವಾದುದನ್ನು ಹಾಳು ಮಾಡಿಕೊಳ್ಳುವ ಸಂಭವಗಳಿವೆ. ಹಣಕಾಸಿನ ವಿಚಾರದಲ್ಲಿ ಪೋಷಕರ ನೆರವು ಸಿಗಲಿದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ವೃಷಭ(Taurus): ಉದ್ಯೋಗ ಸ್ಥಳದಲ್ಲಿ ಹೆಸರು ಮಾಡುವಿರಿ. ಅನುಭವಿಗಳಿಗೆ ಬದಲಿ ಉದ್ಯೋಗ ದೊರಕಬಹುದು. ವಿದ್ಯಾರ್ಥಿಗಳು ಬುದ್ಧಿಬಲದಿಂದ ಮೆಚ್ಚುಗೆಗೆ ಪಾತ್ರರಾಗುವರು. ಮಕ್ಕಳನ್ನು ನೀರಿನ ಬಳಿ ಬಿಡುವಾಗ ಹೆಚ್ಚು ಜಾಗ್ರತೆ ವಹಿಸಿ. ಆಂಜನೇಯನಿಗೆ ತುಳಸಿ ಮಾಲೆ ಮಾಡಿ ಅರ್ಪಿಸಿ. 

Latest Videos

ಮಿಥುನ(Gemini): ಸಂಬಂಧಿಕರ ವಿಚಾರದಲ್ಲಿ ಮೂಗು ತೂರಿಸಬೇಡಿ. ಖಾಸಗಿತನಕ್ಕೆ ಬೆಲೆ ಕೊಡಿ. ಸಭೆ ಸಮಾರಂಭಗಳಿಗೆ ಹೋಗುವ ಅವಕಾಶಗಳಿವೆ. ಮಾತು ಮಿತಿಯಲ್ಲಿರಲಿ. ನೀವು ಮಾಡಿದ ಹೂಡಿಕೆಗಳು ಉತ್ತಮ ಫಲ ಕೊಡಲಿವೆ. ಸಹೋದರರ ಸಹಕಾರದಿಂದ ಕಾರ್ಯಗಳಲ್ಲಿ ಯಶ ದಕ್ಕಲಿದೆ. ನವಗ್ರಹ ಪ್ರಾರ್ಥನೆ ಮಾಡಿ. 

ಕಟಕ(Cancer): ಕೂಡಿಟ್ಟ ಹಣ ವ್ಯರ್ಥ ವ್ಯಯ ಮಾಡುವ ಸಾಧ್ಯತೆಗಳಿವೆ. ಆದಷ್ಟು ಹಣದ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಮಾನಸಿಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿ. ಆರೋಗ್ಯದ ವಿಷಯದಲ್ಲಿ ಆಟವಾಡಬೇಡಿ, ಯಾವುದನ್ನೂ ಹಗುರವಾಗಿ ಪರಿಗಣಿಸಬೇಡಿ. ಕೆಂಪು ವಸ್ತ್ರ ದಾನ ನೀಡಿ. 

ಸಿಂಹ(Leo): ಬುದ್ಧಿ ಹೇಳಲು ಹೋಗಿ ಸಂಬಂಧ ಕೆಡಿಸಿಕೊಳ್ಳುವ ಸಾಧ್ಯತೆ ಇದೆ. ಅಧಿಕಾರಿ ವರ್ಗದವರಿಗೆ ರಾಜಕಾರಣಿಗಳ ಕಿರುಕುಳ ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಅವಕಾಶಗಳು ಬರಲಿವೆ. ಧಾರ್ಮಿಕ ವಿಚಾರಗಳಲ್ಲಿ ಮನಸ್ಸು ತೊಡಗಿಸಿಕೊಳ್ಳುವುದು. ರಾಮ ನಾಮ ಜಪ ಮಾಡಿ. 

Vastu For Health: ಉತ್ತಮ ಆರೋಗ್ಯಕ್ಕೆ ವಾಸ್ತುವಿನ 10 ಸಲಹೆಗಳು..

ಕನ್ಯಾ(Virgo): ದಿನಸಿ ಅಂಗಡಿ ಇರುವವರಿಗೆ ಬಹಳಷ್ಟು ಲಾಭ. ಸಾಲ ವಾಪಾಸಾತಿಯಿಂದ ಖುಷಿಯಾಗುವುದು. ಹಠಾತ್ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಹೊಸ ಆರ್ಥಿಕ ಮೂಲಗಳ ಬಗ್ಗೆ ತಿಳಿಯುವಿರಿ. ಕೆಂಪು ಧಾನ್ಯಗಳನ್ನು ದಾನ ನೀಡಿ.

ತುಲಾ(Libra): ಎಷ್ಟೇ ನಂಬಿಕೆಯ ಜನರಾದರೂ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಬಹಳ ದಿನದಿಂದ ತಲೆಯಲ್ಲಿ ಕೊರೆಯುತ್ತಿರುವ ವಿಚಾರಕ್ಕೆ ಆತಂಕ ಬೇಡ, ಎಲ್ಲವೂ ಒಳಿತೇ ಆಗಿ ಸಮಾಧಾನ ಇರಲಿದೆ. ಉದ್ಯೋಗರಂಗದಲ್ಲಿ ಏರುಪೇರಿಲ್ಲ. ಕುಲದೇವತಾ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಹಿಂದೆ ಜಗಳ ಮುನಿಸಿನಿಂದ ಬೇರೆಯಾದ ಸಂಬಂಧಗಳು, ನೆಂಟರಿಷ್ಟರು ಆಕಸ್ಮಿಕವಾಗಿ ನಿಮ್ಮೊಂದಿಗೆ ರಾಜಿಯಾಗಬಹುದು. ಇದರಿಂದ ಮನಸ್ಸಿಗೆ ಸಂತೋಷ ದಕ್ಕಲಿದೆ. ಉದ್ಯೋಗ ರಂಗದಲ್ಲಿ ನಿಮ್ಮ ಚಾಕಚಕ್ಯತೆಯಿಂದ ಶ್ಲಾಘನೆಗೆ ಒಳಗಾಗುವಿರಿ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಧನುಸ್ಸು(Sagittarius): ಸಂಶೋಧನಾ ಕ್ಷೇತ್ರದಲ್ಲಿರುವವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯಿಂದ ಮನಸ್ಸು ಮುದಗೊಳ್ಳುವುದು. ವಾತ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಆಸ್ತಿ ವಿಚಾರವಾಗಿ ಹೆಚ್ಚು ಕೆದಕಲು ಹೋಗಬೇಡಿ. ಕೆಂಪು ಬಟ್ಟೆ ಧರಿಸಿ. 

ಮಕರ(Capricorn): ಕಚೇರಿ ಕೆಲಸಗಳಲ್ಲಿ, ವ್ಯಾಪಾರ, ಉದ್ಯಮಗಳಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನಿಮ್ಮ ಬೆನ್ನಿಗೆ ಚೂರಿ ಹಾಕುವ ಕಾರ್ಯ ಆತ್ಮೀಯರಿಂದಲೇ ಆಗಬಹುದು. ತಂದೆಯ ಮಾತಿಗೆ ಬೆಲೆ ಕೊಡಿ. ಅವರ ಸಲಹೆಗಳನ್ನು ಪರಿಗಣಿಸಿ. ಅದರಿಂದ ಒಳಿತೇ ಆಗಲಿದೆ. ಹತ್ತಿರದ ರಾಮ ಇಲ್ಲವೇ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

Falgun Maas 2022: ಹಿಂದೂ ವರ್ಷದ ಕೊನೆಯ ಮಾಸದ ವ್ರತ, ಹಬ್ಬ ಹರಿದಿನಗಳೇನು?

ಕುಂಭ(Aquarius): ಕೆಲಸದ ಮೇಲಿನ ನಿಮ್ಮ ಶ್ರದ್ಧೆ ಹೆಚ್ಚಲಿದೆ. ಸ್ನೇಹಿತರ ಸಹಕಾರದಿಂದ ಕನಸುಗಳು ಈಡೇರುವುವು. ಕೋರ್ಟು ಕಚೇರಿ ಕೆಲಸಗಳು ಸುಗಮವಾಗಿ ಸಾಗುತ್ತವೆ. ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಸಿಗಲಿದೆ. ಪೋಷಕರೊಂದಿಗೆ ಕೊಂಚ ಸಮಯ ಕಳೆಯಿರಿ. ಮನೆದೇವರಲ್ಲಿ ಪ್ರಾರ್ಥಿಸಿ. 

ಮೀನ(Pisces): ಭಾವನೆಗಳ ಸರಮಾಲೆಗೆ ಸಿಕ್ಕು ವಿವೇಚನಾ ಶಕ್ತಿ ಕಳೆದುಕೊಳ್ಳಬೇಡಿ. ಅಪರಾಧೀ ಪ್ರವೃತ್ತಿಯ ಬಗ್ಗೆ ಎಚ್ಚರವಿರಲಿ. ಹೊಸ ಹೂಡಿಕೆಯಲ್ಲಿ ತೊಡಗಬೇಡಿ. ನಿರುದ್ಯೋಗಿಗಳಿಗೆ ಜೀವನ ಬೇಸರ ಎನಿಸಬಹುದು. ಆಶಾವಾದ ಇರಲಿ. ರಾಮ ಧ್ಯಾನ ಮಾಡಿ. 

click me!