21 ಫೆಬ್ರವರಿ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಅಸೂಯಾಪರರಿಂದ ಕಟಕಕ್ಕೆ ಕಂಟಕ
ಮೇಷ(Aries): ಕಚೇರಿಯಲ್ಲಾಗುವ ದೊಡ್ಡ ಬದಲಾವಣೆ ನಿಮ್ಮ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದು. ಹೆತ್ತವರ ಹಾಗೂ ಗುರುವಿನ ಸೇವೆ ಅವಕಾಶ ಸಿಗುವುದು. ಚೆನ್ನಾಗಿ ಮಾಡಿ ಆಶೀರ್ವಾದ ಫಲ ಪಡೆಯಿರಿ. ಸಂಗಾತಿಯೊಂದಿಗೆ ಮೌನ ಯುದ್ಧ ನಡೆಯಬಹುದು. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.
ವೃಷಭ(Taurus): ಇಂದು ಯಾರಿಗೂ ಸಾಲ ನೀಡಬೇಡಿ. ಅದು ಮರಳುವ ಸಾಧ್ಯತೆ ಕಡಿಮೆ. ಸಹೋದರರ ಸಹಕಾರದಿಂದ ಗೃಹಕಾರ್ಯಗಳು ಸುಲಭವಾಗುವುವು. ದಾಂಪತ್ಯದಲ್ಲಿ ಅಸಮಾಧಾನ, ಬಯಕೆಗಳು ಅಪೂರ್ಣವಾಗುತ್ತವೆ, ಮಕ್ಕಳಿಂದ ಕೊರಗು. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.
undefined
ಮಿಥುನ(Gemini): ಪ್ರಗತಿಯ ಹಲವು ಮಾರ್ಗಗಳು ತೆರೆಯಲಿವೆ. ಹೆಚ್ಚು ನಗುತ್ತಾ ಕಾಲ ಕಳೆಯುವಿರಿ. ಸಾತ್ವಿಕ ಆಹಾರ ಹಾಗೂ ವಿಶ್ರಾಂತಿ ಪಡೆಯಿರಿ. ಕೇವಲ ಮತ್ತೊಬ್ಬರ ಕ್ಷೇಮವನ್ನು ನೋಡುತ್ತಾ ನಿಮ್ಮ ಆರೋಗ್ಯ ಕಡೆಗಣಿಸದಿರಿ. ಸಂಬಂಧಿಕರ ಕಡೆಯಿಂದ ಶುಭ ಸುದ್ದಿ ಕೇಳಿ ಸಂತೋಷ ಹೆಚ್ಚುವುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಕಟಕ(Cancer): ನಿಮ್ಮ ಮೇಲೆ ಅಸೂಯೆ ಪಡುವ ಜನರ ಬಗ್ಗೆ ಎಚ್ಚರವಿರಲಿ. ಜೊತೆಯಲ್ಲೇ ಇದ್ದು ನಿಮ್ಮ ಪ್ರಗತಿಯನ್ನು ಜೀರ್ಣಿಸಿಕೊಳ್ಳಲಾಗದವರು ಅವರು. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ, ನಿರೀಕ್ಷೆ ಹುಸಿಯಾಗಲಿವೆ. ಮಾತಿನ ಮೇಲೆ ಬಹಳ ನಿಗಾ ಬೇಕು. ಶಿವನಿಗೆ ಜಲಾಭಿಷೇಕ ಮಾಡಿಸಿ.
ಸಿಂಹ(Leo): ಅನೇಕ ಕೆಲಸಗಳ ಜವಾಬ್ದಾರಿ ನಿಮ್ಮ ಹೆಗಲಿಗೆ ಬಿದ್ದು ಒತ್ತಡವೆನಿಸಬಹುದು. ಬುದ್ಧಿ ಬಲವಿರುವುದರಿಂದ ಒಂದಾದ ಮೇಲೊಂದರಂತೆ ಕೆಲಸವನ್ನು ಸಮಾಧಾನವಾಗಿ ನಿರ್ವಹಿಸಿದರೆ ದಿನಾಂತ್ಯಕ್ಕೆ ಖುಷಿ ಇರಲಿದೆ. ದೇವರ ವಿಚಾರ ನಿರ್ಲಕ್ಷ್ಯ ಮಾಡದಿರಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.
Black Magic: ವಾಮಾಚಾರದ ಪರಿಣಾಮ ತಗ್ಗಿಸಲು ಮನೆಯಲ್ಲೇ ಈ ರಕ್ಷಣಾತ್ಮಕ ಪರಿಹಾರ ಮಾಡಿಕೊಳ್ಳಿ
ಕನ್ಯಾ(Virgo): ಬಹುಕಾಲದಿಂದ ಮುಂದೂಡಿದ್ದ ಕೆಲಸ ಕೈಗೆತ್ತಿಕೊಳ್ಳುವಿರಿ. ದೇವತಾಕಾರ್ಯಗಳಲ್ಲಿ ಭಾಗಿಯಾಗುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗಿ ಬಂದು ಮನೆಯಲ್ಲಿ ಸಂತಸದ ವಾತಾವರಣ ಏರ್ಪಡುವುದು. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಲಾಭ, ತಿಲ ಹಾಗೂ ಕ್ಷೀರ ದಾನ ಮಾಡಿ.
ತುಲಾ(Libra): ಇಂದು ಹೊರ ಹೋಗುವಾಗ ಅತ್ಯಂತ ಜಾಗರೂಕರಾಗಿರಿ. ವಸ್ತು ನಷ್ಟ ಸಾಧ್ಯತೆ ಇದೆ. ಇಡೀ ದಿನ ಮೈಯ್ಯೆಲ್ಲ ಕಣ್ಣಾಗಿರಿ. ಆನ್‌ಲೈನ್ ವ್ಯವಹಾರಗಳನ್ನೂ ಎರಡೆರಡು ಬಾರಿ ಪರಿಶೀಲಿಸಿ ಮುಂದುವರಿಸಿ. ಸ್ವಯಂಕೃತಾಪರಾಧದಿಂದ ಮಾನಸಿಕ ವೇದನೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ವೃಶ್ಚಿಕ(Scorpio): ಹಣಕಾಸಿನ ಅನುಕೂಲ ಇರಲಿದೆ. ಶೇರು ವ್ಯವಹಾರಗಳಲ್ಲಿ ಅದೃಷ್ಟ ಪರಿಶೀಲಿಸಬಹುದು. ತ್ವಚೆಯ ಸಮಸ್ಯೆಗಳು ಕಾಡಬಹುದು. ನೆಂಟರಿಷ್ಟರ ನಡೆಗಳು ಮನಸ್ಸಿನಲ್ಲಿ ಕ್ಲೇಶ ಉಂಟು ಮಾಡಬಹುದು. ಉದ್ಯೋಗದಲ್ಲಿ ಏರುಪೇರಿಲ್ಲ. ಶಿವ ಶತನಾಮಾವಳಿ ಹೇಳಿಕೊಳ್ಳಿ.
ಧನುಸ್ಸು(Sagittarius): ಇಂದು ನಿಮಗೆ ವ್ಯಯ ಹೆಚ್ಚು. ವಸ್ತ್ರ, ಒಡವೆ, ಗೃಹ ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡುವಿರಿ. ಬಹಳ ನಿರೀಕ್ಷೆಯಿಟ್ಟುಕೊಂಡಿದ್ದ ವಿಷಯವೊಂದು ನಿರಾಸೆ ಮೂಡಿಸುವುದು. ವ್ಯಾಪಾರದಲ್ಲಿ ನಷ್ಟ. ಬೇಡದ ಅತಿಥಿಯ ಆಗಮನವಾಗಬಹುದು. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಮಕರ(Capricorn): ವಿದ್ಯಾರ್ಥಿಗಳಿಗೆ ಲವಲವಿಕೆ. ನೆಂಟರಿಷ್ಟರ ಭೇಟಿಯಿಂದ ಮನೋಲ್ಲಾಸ. ಹಳೆ ಸ್ನೇಹಿತರ ಭೇಟಿ ಸಾಧ್ಯತೆ. ವಾಹನ ಖರೀದಿ, ಹಾಗೂ ಎಲೆಕ್ಟ್ರಿಕ್ ಉಪಕರಣಗಳ ಖರೀದಿಗೆ ಶುಭ ದಿನ. ಕುಟುಂಬದಲ್ಲಿ ಮಾತುಕತೆಯಿಂದ ಸಂತಸ. ಶಿವ ಪಾರ್ವತಿಯರನ್ನು ಪೂಜಿಸಿ.
Faith And Reason: ಕಪ್ಪು ಬೆಕ್ಕು ನಿಮ್ಮ ದಾರಿಗೆ ಅಡ್ಡ ಹೋದರೆ ಅನಾಹುತದ ಸೂಚನೆಯೇ?
ಕುಂಭ(Aquarius): ತಂದೆ-ಮಕ್ಕಳಲ್ಲಿ ವಿರೋಧದಿಂದ ಮನಸ್ಸಿಗೆ ಕಸಿವಿಸಿ, ಏಕಾಗ್ರತೆ ತಪ್ಪಿ ತಪಸ್ಸು ಭಂಗವಾಗಲಿದೆ. ಕೆಲ ವಿಚಾರಗಳಲ್ಲಿ ಈಗಾಗಲೇ ಹೆಜ್ಜೆ ಮುಂದಿರಿಸಿದ್ದೀರಿ. ಅದನ್ನು ಕೈ ಬಿಡುವ ಯೋಚನೆ ಶುರುವಾಗಿರಬಹುದು. ಆದರೆ, ಮುಂದಿಟ್ಟ ಹೆಜ್ಜೆ ಹಿಂತೆಗೆಯಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಮೀನ(Pisces): ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ನಿರುದ್ಯೋಗಿಗಳು ನೀವು ಹುಡುಕದೆ ಇರುವ ಕ್ಷೇತ್ರದಿಂದ ಬರುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಈಶ್ವರ ಪ್ರಾರ್ಥನೆ ಮಾಡಿ.