Daily Horoscope: ಸಿಂಹಕ್ಕೆ ವೃತ್ತಿ ಸಂಬಂಧಿ ಬದಲಾವಣೆ, ಕುಂಭಕ್ಕೆ ಅನಿರೀಕ್ಷಿತ ಶುಭ

Published : Feb 16, 2022, 05:00 AM IST
Daily Horoscope: ಸಿಂಹಕ್ಕೆ ವೃತ್ತಿ ಸಂಬಂಧಿ ಬದಲಾವಣೆ, ಕುಂಭಕ್ಕೆ ಅನಿರೀಕ್ಷಿತ ಶುಭ

ಸಾರಾಂಶ

16 ಫೆಬ್ರವರಿ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ದೊಡ್ಡವರ ಸಣ್ಣತನದಿಂದ ಕಟಕಕ್ಕೆ ಘಾಸಿ, ಏನನ್ನುತ್ತೆ ನಿಮ್ಮ ರಾಶಿ?

ಮೇಷ(Aries): ನೀವು ಪ್ರೀತಿಸುವ ಜನರಿಗೆ ನಿಮ್ಮ ಕಾಳಜಿಯನ್ನು ವ್ಯಕ್ತಪಡಿಸಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾಲೆಳೆಯುವವರು ಹೆಚ್ಚಾಗಬಹುದು. ಮೇಲಧಿಕಾರಿಯಿಂದ ಬೈಸಿಕೊಳ್ಳುವ ಸಂಭವವಿದೆ. ಕೆಲಸ ಬದಲಿಸುವ ಯೋಚನೆ ಬರಬಹುದು. ಗಣಪತಿ ಪೂಜೆ ಮಾಡಿ. 

ವೃಷಭ(Taurus): ಸ್ನೇಹ ಮಾಡುವಾಗ ಸಜ್ಜನರ ಸಂಗ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಹೋದರರೊಂದಿಗೆ ಪೋಷಕರ ವಿಚಾರವಾಗಿ ದೊಡ್ಡ ಗಲಾಟೆ ಆಗಬಹುದು. ವಿವಾಹ ವಿಚಾರದಲ್ಲಿ ಅಡೆತಡೆಗಳು ಎದುರಾಗಲಿವೆ. ಕೋರ್ಟ್ ವ್ಯಾಜ್ಯಗಳಲ್ಲಿ ಹಿನ್ನಡೆ ಉಂಟಾಗುವುದು. ಗೋವಿಗೆ ಗ್ರಾಸ ನೀಡಿ.

ಮಿಥುನ(Gemini): ಹೂಡಿಕೆ ಮಾಡುವ ಮುನ್ನ ನುರಿತರ ಬಳಿ ಚರ್ಚಿಸಿ ಮುಂದುವರಿಯಿರಿ. ಪತ್ನಿಯ ಹಾಗೂ ನಿಮ್ಮ ತಾಯಿಯ ನಡುವೆ ಮುಸುಕಿನ ಗುದ್ದಾಟ ನಡೆಯಬಹುದು. ಯಾರೊಬ್ಬರ ಪರ ವಹಿಸದೆ ಮಾತುಗಳನ್ನು ಕೇಳಿಸಿಕೊಳ್ಳಿ. ನಂತರ ಎಲ್ಲರ ಸಂತೋಷಕ್ಕೆ ಏನು ಮಾಡಬಹುದು ಯೋಚಿಸಿ. ಗಣಪತಿಗೆ ದೂರ್ವೆ ಅರ್ಪಿಸಿ. 

ಕಟಕ(Cancer): ದೊಡ್ಡವರ ಸಣ್ಣತನದ ನಡೆಗಳು ನಿಮ್ಮ ಮನಸ್ಸನ್ನು ಘಾಸಿ ಮಾಡಬಹುದು. ನಿರ್ಲಕ್ಷ್ಯ ಧೋರಣೆಯೇ ಉತ್ತಮ. ಯಾರಿಗೆ ಎಷ್ಟು ಬೆಲೆ ಕೊಡಬೇಕು ಎಂಬುದು ತಿಳಿದಿರಲಿ. ಉದ್ಯೋಗದಲ್ಲಿ ಏರುಪೇರಿಲ್ಲ. ಷೇರು ವ್ಯವಹಾರಗಳಲ್ಲಿ ಬುದ್ಧಿವಂತಿಕೆ ತೋರಿಸಿದರೆ ಲಾಭ. ಗಣೇಶ ದೇವಾಲಯಕ್ಕೆ ಭೇಟಿ ನೀಡಿ. 

ಸಿಂಹ(Leo): ವೃತ್ತಿ ಸಂಬಂಧಿ ಬದಲಾವಣೆಗಳು ಹೆಚ್ಚಬಹುದು. ನೀವು ಹೊಸ ಕಲಿಕೆಗೆ, ಪರಿಸರಕ್ಕೆ ಆದಷ್ಟು ಬೇಗ ಹೊಂದುವ ಅಭ್ಯಾಸ ಮಾಡಿಕೊಳ್ಳಲೇಬೇಕು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಚೆನ್ನಾಗಿರಲಿದೆ. ಹಿರಿಯರ ಆಶೀರ್ವಾದ ಪಡೆಯಿರಿ. 

ಕನ್ಯಾ(Virgo): ಇನ್ನೊಬ್ಬರ ಬಗ್ಗೆ ಮನಸ್ಸಿನಲ್ಲಿ ದ್ವೇಷ ತುಂಬಿಕೊಂಡರೆ, ಆಪ್ತರಿಗೆ ಪ್ರೀತಿ ತೋರಲು ಮನಸ್ಸಿನಲ್ಲಿ ಜಾಗ ಉಳಿಯದು. ಮನಸ್ಸನ್ನು ಸ್ವಚ್ಛವಾಗಿಸುವ ಬಗ್ಗೆ ಗಮನ ಹರಿಸಿ. ಆರೋಗ್ಯ ಹದಗೆಟ್ಟಿರುವ ನೆಂಟರಿಷ್ಟರನ್ನು ಭೇಟಿಯಾಗಿ ವಿಚಾರಿಸಿ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ತುಲಾ(Libra): ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ವಿಶೇಷ ಕಾಳಜಿ ವಹಿಸುವಂತೆ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಗಮನ ಹರಿಸಿ. ಕೇವಲ ಸಕಾರಾತ್ಮಕ ಯೋಚನೆಗಳಿಗೆ ಆಸ್ಪದ ನೀಡಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಮತ್ಸರ ಹೆಚ್ಚಬಹುದು. ಗೆಳೆಯರ ಸಹಕಾರ ಚೆನ್ನಾಗಿರಲಿದೆ. ಇರುವೆಗೆ ಸಿಹಿ ತಿನ್ನಿಸಿ. 

Dream Interpretation: ಕನಸಲ್ಲಿ ಹಾವು ಪದೇ ಪದೇ ಬರ್ತಿದ್ಯಾ? ಕಾರಣ ಹೀಗಿರಬಹುದು..

ವೃಶ್ಚಿಕ(Scorpio): ಉದ್ಯಮಿಗಳಿಗೆ ದೊಡ್ಡ ದೊಡ್ಡ ಡೀಲ್‌ಗಳು ಸಿಗಲಿವೆ. ಉದ್ಯೋಗಿಗಳು ಭಡ್ತಿ ಅವಕಾಶ ಪಡೆಯಬಹುದು. ಕಾರ್ಯ ನಿಮಿತ್ತ ವಿದೇಶಕ್ಕೆ ಹೋಗುವ ಅವಕಾಶಗಳು ಲಭಿಸಲಿವೆ. ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಹೋಗುವುದು. ಸರಸ್ವತಿ ಪೂಜೆ ಮಾಡಿ. 

ಧನುಸ್ಸು(Sagittarius): ದುಂದು ವೆಚ್ಚ ಮಾಡುವಿರಿ. ಆದರೆ, ಎಲ್ಲವೂ ನಿಮ್ಮ ಹಾಗೂ ಕುಟುಂಬದ ಸಂತೋಷಕ್ಕಾಗಿ ಆಗಿರುವುದರಿಂದ ತೊಂದರೆಯಿಲ್ಲ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ಹಿರಿಯರ ಸೇವೆಯಿಂದ ಆಶೀರ್ವಾದ ಫಲ ಪಡೆಯಿರಿ. 

ಮಕರ(Capricorn): ಮಾಡುವ ಯಾವುದೇ ಕೆಲಸದಲ್ಲೂ ನ್ಯಾಯ ನಿಷ್ಠೆ ತಪ್ಪದಂತೆ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ಬೆಲೆ ಕಟ್ಟಬೇಕಾದೀತು. ವ್ಯಾಪಾರಿಗಳು ಹೆಚ್ಚಿನ ಲಾಭಕ್ಕಾಗಿ ಹೆಚ್ಚು ಶ್ರಮಿಸಬೇಕಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಂಗೆಡಿಸಬಹುದು. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

Weekly Horoscope: ವೃಷಭಕ್ಕೆ ಉತ್ತಮ ಹಣದ ಹರಿವು, ಧನುವಿಗೆ ಭೂಮಿಯಿಂದ ಲಾಭ

ಕುಂಭ(Aquarius): ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯಲ್ಲಿ ಬದಲಾವಣೆ ಮಾಡಬೇಕಾಗಬಹುದು.  ವೃತ್ತಿ ಬದುಕಿನಲ್ಲಿ ಬೆಳವಣಿಗೆಗೆ ಸಾಕಷ್ಟು ಅವಕಾಶಗಳು ಎದುರಾಗಲಿವೆ. ಅವುಗಳ ಸದ್ಬಳಕೆ ಮಾಡಿಕೊಳ್ಳಿ. ಅನಿರೀಕ್ಷಿತ ಶುಭದಿಂದ ಸಂತಸ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮೀನ(Pisces): ವ್ಯಾಪಾರಿಗಳಿಗೆ ಲಾಭ ಚೆನ್ನಾಗಿ ದಕ್ಕಲಿದೆ. ಬುದ್ಧಿಶಕ್ತಿಯ ಕಾರಣದಿಂದ ಮೆಚ್ಚುಗೆ ಗಳಿಸುವಿರಿ. ವಿಶೇಷವಾಗಿ ದೊಡ್ಡ ಲಾಭಕ್ಕಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ಎಚ್ಚರ ವಹಿಸಿ. ಹಲವು ಶುಭ ಕಾರ್ಯಗಳಿಗೆ ಧನ ವಿನಿಯೋಗ ಮಾಡುವಿರಿ. ಮನೆದೇವರ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ