Daily Horoscope: ಕಟಕದ ಜೀವನದಲ್ಲಿ ತಿರುವು, ಕುಂಭಕ್ಕೆ ಕಂಕಣಬಲ

Published : Feb 14, 2022, 05:00 AM IST
Daily Horoscope: ಕಟಕದ ಜೀವನದಲ್ಲಿ ತಿರುವು, ಕುಂಭಕ್ಕೆ ಕಂಕಣಬಲ

ಸಾರಾಂಶ

14 ಫೆಬ್ರವರಿ 2022, ಸೋಮವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಷಭಕ್ಕೆ ಮಿಶ್ರಫಲ, ಮೇಷಕ್ಕೆ ನಿರಾಸೆ

ಮೇಷ(Aries): ಪ್ರೇಮದ ವಿಚಾರದಲ್ಲಿ ನಿರಾಶೆಯಾಗಬಹುದು. ಆದರೆ ಭರವಸೆ ಕಳೆದುಕೊಳ್ಳಬೇಕಿಲ್ಲ. ಮುಂದಿನ ದಿನಗಳಲ್ಲಿ ಅದೃಷ್ಟ ನಿಮ್ಮದಾಗಬಹುದು. ಆರೋಗ್ಯ ಸಮಸ್ಯೆ ಅಡ್ಡಿಯಾಗಬಹುದು. ಕಚೇರಿಯಲ್ಲಿ ಏಕಾಗ್ರತೆ ನಿಲ್ಲದೆ ತೊಳಲಾಡುವಿರಿ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

ವೃಷಭ(Taurus): ಕಷ್ಟಗಳು ಹೆಚ್ಚುತ್ತಿವೆ ಎನಿಸಬಹುದು. ಆದರೆ, ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇದೆ ಎಂದು ನಂಬಿ ಮುನ್ನಡೆಯಿರಿ. ಪ್ರೇಮ ವಿಚಾರದಲ್ಲಿ ಮಿಶ್ರಫಲವಿದೆ. ನೀವು ಗೊಂದಲಕ್ಕೆ ಬೀಳುವ ಸಂಭವವಿದೆ. ಷೇರು ವ್ಯವಹಾರದಲ್ಲಿ  ಲಾಭವಿರಲಿದೆ. ಶಿವ ದೇವಾಲಯಕ್ಕೆ ಭೇಟಿ ನೀಡಿ. 

ಮಿಥುನ(Gemini): ನಿಮ್ಮೊಳಗಿನ ಪಶ್ಚಾತ್ತಾಪ ಬಿಡಿ. ಭವಿಷ್ಯವನ್ನು ಯೋಜಿಸಬಹುದೇ ಹೊರತು ನಿರ್ಧರಿಸಲಾಗುವುದಿಲ್ಲ. ಕೆಲವೊಂದನ್ನು ಹೊರಗೆ ಬಿಟ್ಟಾಗ ಮಾತ್ರ ಹೊಸತನ್ನು ಆಸ್ವಾದಿಸಲು ಸಾಧ್ಯ ಎಂಬುದನ್ನು ನೆನಪಿಡಿ. ಯಾರನ್ನೂ ಪೂರ್ತಿ ನಂಬಬೇಡಿ. ಸುಬ್ರಹ್ಮಣ್ಯನಲ್ಲಿ ಪ್ರಾರ್ಥಿಸಿ. 

ಕಟಕ(Cancer): ಬದುಕಿನ ಬಹು ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ಮತ್ತೊಮ್ಮೆ ಚೆನ್ನಾಗಿ ಯೋಚಿಸಿ ಮುಂದುವರಿಯಿರಿ. ಉದ್ಯೋಗದಲ್ಲಿ ಒತ್ತಡದ ದಿನ. ಹೊಸ ವಸ್ತುಗಳನ್ನು ಕೊಳ್ಳುವಿರಿ. ಕೇಳಿದ್ದು, ನೋಡಿದ್ದು ಎಲ್ಲವೂ ಸುಳ್ಳಾಗಬಹುದೆಂಬ ಪರಿಜ್ಞಾನ ಇರಲಿ. ಕೃಷ್ಣನಿಗೆ ತುಳಸಿ ಸಮರ್ಪಿಸಿ.

ಸಿಂಹ(Leo): ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಆದಷ್ಟು ಜಾಣನಡೆ ತೋರಿಸಿ. ತಾಳ್ಮೆ, ಸೋಲುವ ಗುಣ ಮುಂದೆ ನಿಮ್ಮನ್ನು ಗೆಲ್ಲಿಸುತ್ತದೆ ಎಂದು ನೆನಪಿರಲಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಕನ್ಯಾ(Virgo): ಪ್ರೀತಿ ವಿಚಾರದಲ್ಲಿ ಇಂದು ನಿರಾಶೆಯಾಗಿ ಕಾಡಿದ್ದು, ಮುಂದೊಂದು ದಿನ ಒಳ್ಳೆಯದೇ ಆಯಿತೆನ್ನಿಸಬಹುದು. ಚಿಂತಿಸುವ ಅಗತ್ಯವಿಲ್ಲ. ಹಿರಿಯರ ಮಾತುಗಳನ್ನು ಆಲಿಸಿ. ಉದ್ಯೋಗರಂಗದಲ್ಲಿ ನಿಮ್ಮ ಹೆಸರಿಗೆ ಮಸಿ ಬಳಿಯಲು ಕೆಲವರು ಪ್ರಯತ್ನಿಸಬಹುದು. ಶಿವನಿಗೆ ಜಲಾಭಿಷೇಕ ಮಾಡಿ. 

ತುಲಾ(Libra): ಇಂದು ಮನಸ್ಸು ಹೆಚ್ಚು ತಾಜಾತಾನದಿಂದಲೂ, ಚೈತನ್ಯದಿಂದಲೂ ಕೂಡಿರುವುದು. ಇಷ್ಟದ ವ್ಯಕ್ತಿಗಳೊಂದಿಗೆ ಸಮಯ ಕಳೆಯುವಿರಿ. ಕೆಲಸ, ಓದಿನಲ್ಲಿ ಏಕಾಗ್ರತೆ ನಿಲ್ಲದೆ ಕಷ್ಟವಾದೀತು. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇರುವುವು. ಶಿವ ಪಾರ್ವತಿಯ ಪೂಜೆ ಮಾಡಿ. 

Astro tips : ಈ ನಾಲ್ಕು ರಾಶಿಯವರಿಗೆ ಅದೃಷ್ಟ ತರಲಿದೆ ಚಿನ್ನ!

ವೃಶ್ಚಿಕ(Scorpio): ಕಚೇರಿಯ ಕೆಲಸದ ನಡುವೆ ಪ್ರೀತಿಪಾತ್ರರನ್ನು ಭೇಟಿಯಾಗಲು ಸಾಧ್ಯವಾಗದೆ ಮುನಿಸಿಗೆ ಕಾರಣವಾಗಬಹುದು. ಕೊಟ್ಟ ಮಾತಿಗೆ ತಪ್ಪಿ ಕೆಟ್ಟ ಹೆಸರು ಪಡೆಯಬೇಕಾದೀತು. ಸಮರ್ಥನೆಗೆ ನಿಲ್ಲದೆ ಪ್ರಮಾದ ಒಪ್ಪಿಕೊಳ್ಳುವುದು ಸದ್ಗುಣ. ಮನೆ ದೇವರನ್ನು ಸ್ಮರಿಸಿಕೊಳ್ಳಿ. 

ಧನುಸ್ಸು(Sagittarius): ಮನಸ್ಸಿನ ಮಾತು ಹೇಳಲು ಒದ್ದಾಡಿ ಹೋಗುವಿರಿ. ಹೊಗಳಿಕೆ ಮಾತನ್ನು ಕೇಳಿಸಿಕೊಂಡು ಸಂತೋಷ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಉತ್ಸಾಹದ ದಿನ. ಧೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಪಥ್ಯ ತಪ್ಪಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮಕರ(Capricorn): ನಿಮ್ಮ ಹಾದಿಯಲ್ಲಿ ಒಂದಿಷ್ಟು ಸಮಸ್ಯೆಗಳೆದುರಾಗಬಹುದು. ಎದುರಿಸುವ ಛಲವಿದ್ದವರು ಗೆಲ್ಲುತ್ತಾರೆ, ಹೆದರಿದವರು ಸೋಲುತ್ತಾರೆ ಎಂಬುದನ್ನು ನೆನಪಿಡಿ. ಸಂಗಾತಿಯ ಸಹಕಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

Zodiac Style: ರಾಶಿಗನುಗುಣವಾಗಿ ಉಡುಗೆ ತೊಟ್ಟು, ಅದೃಷ್ಟ ನಿಮ್ಮದಾಗಿಸಿಕೊಳ್ಳಿ

ಕುಂಭ(Aquarius): ಎಲ್ಲವೂ ನೀವಂದುಕೊಂಡಂತೆಯೇ ಆಗಲಿದೆ. ಮರೆಯದ ಅನುಭವವೊಂದು ಆಗಬಹುದು. ನೀವು ಕಾಯುತ್ತಿದ್ದ ಸಂದರ್ಭ ಒದಗಲಿದೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಆರೋಗ್ಯ ಸ್ಥಿರವಾಗಿರುವುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ. 

ಮೀನ(Pisces): ಮನಸ್ಸಿಗೆ ಘಾಸಿಯಾಗಬಹುದು. ಆದರೆ, ಇಂಥ ಸಂದರ್ಭಗಳು ಎಲ್ಲರಿಗೂ ಒಂದಿಲ್ಲೊಮ್ಮೆ ಬರುತ್ತವೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬುದನ್ನು ನೆನಪಿಡಿ. ಸಾಲ ಮಾಡುವ ಯೋಚನೆ ಬೇಡ. ಇದ್ದುದರಲ್ಲಿಯೇ ಹಣ ಹೊಂದಿಸಲು ಪ್ರಯತ್ನಿಸಿ. ಶಿವ ಶಕ್ತಿಯರ ಧ್ಯಾನ ಮಾಡಿ. 

PREV
Read more Articles on
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ