Daily Horoscope: ಕುಂಭಕ್ಕೆ ಅನಿರೀಕ್ಷಿತ ಧನಲಾಭ, ಸಿಂಹಕ್ಕೆ ಮನೋಬಲ

By Suvarna News  |  First Published Feb 15, 2022, 5:04 AM IST

15 ಫೆಬ್ರವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕಕ್ಕೆ ಹಗಲುಗನಸಿನಿಂದ ದಿನ ಹಾಳು


ಮೇಷ(Aries): ಸಂಗಾತಿಯ ಮನೋಭಿಲಾಶೆ ಏನೆಂದು ಆಲಿಸಿ. ವಿವಾಹ ಕೆಲಸಗಳು ಸರಾಗಿವಾಗಿ ಸಾಗಲಿವೆ. ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ದೈವಾನುಕೂಲ ಇರಲಿದೆ. ಮನಸ್ಸು ನೆನಪಿನಲ್ಲೇ ಕಳೆದು ಹೋಗಬಹುದು. ಏಕಾಗ್ರತೆ ನಿಲ್ಲದು. ನಿಮ್ಮ ಬದುಕಿನ ಗುರುಗಳನ್ನು ನೆನೆಸಿಕೊಳ್ಳಿ. 

ವೃಷಭ(Taurus): ಖರ್ಚು ವೆಚ್ಚ ಹೆಚ್ಚಲಿದೆ. ಆದರೆ, ಆದಾಯವೂ ಹೆಚ್ಚಿರುವುದರಿಂದ ಚಿಂತೆಯಿಲ್ಲ. ಆದರೂ ಉಳಿತಾಯದ ಕಡೆ ಗಮನ ಹರಿಸಿ. ಕಚೇರಿಯಲ್ಲಿ ಕೀರ್ತಿ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಬಂಧು ಮಿತ್ರರ ಭೇಟಿಯಿಂದ ಸಂತಸ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

Latest Videos

undefined

ಮಿಥುನ(Gemini): ಹಿಂದಿನಿಂದ ಮಾತನಾಡುವವರ ಬಗ್ಗೆ, ಹಲ್ಲು ಮಸೆಯುವವರ ಬಗ್ಗೆ ಎಚ್ಚರಿಕೆ ಅಗತ್ಯ. ಅವಿವಾಹಿತರಿಗೆ ಕ್ಲೇಶ ಉಂಟಾಗುವುದು. ಬೆನ್ನು ನೋವು, ಮಂಡಿ ನೋವಿನಂಥ ಸಮಸ್ಯೆಗಳು ನುಜ್ಜುಗುಜ್ಜಾಗಿಸುವುವು. ಕಚೇರಿಯ ಕೆಲಸ ತಲೆನೋವು ತರಬಹುದು. ಪ್ರಾಣಿ ಪಕ್ಷಿಗಳ ಹಸಿವು ನೀಗಿಸಿ. 

ಕಟಕ(Cancer): ದಿನದ ಆರಂಭದಲ್ಲಿ ಧನ ನಷ್ಟವಾಗಿ ಮನಸ್ಸು ಹಾಳಾಗುವುದು. ಚಿಂತಿಸಿ ಫಲವಿಲ್ಲ. ಸ್ನೇಹಿತವರ್ಗದವರ ಆಮಿಷಗಳಿಗೆ ಬಲಿಯಾಗಿ ಬೇಡದ ಚಟ ರೂಢಿಸಿಕೊಳ್ಳಬೇಡಿ. ದಾಂಪತ್ಯ ಜೀವನದಲ್ಲಿ ಸಂಯಮ ಅಗತ್ಯ. ಆರೋಗ್ಯದ ಬಗ್ಗೆ ಗಮನ ಹೆಚ್ಚಿಸಿ. ಕುಲದೇವರ ಸ್ಮರಣೆ ಮಾಡಿ. 

ಸಿಂಹ(Leo): ಮಾತಿನ ಬಲದಿಂದ ಎಲ್ಲರನ್ನು ಗೆಲ್ಲುವಿರಿ. ಮನರಂಜನೆಗಾಗಿ ಖರ್ಚು ಮಾಡುವಿರಿ. ಹೆತ್ತವರು ಹಾಗೂ ಸಂಗಾತಿಯ ಸಹಕಾರದಿಂದ ಕಷ್ಟದ ಕೆಲಸಗಳು ಸರಾಗವಾಗಿ ಸಾಗುವುವು. ಶತ್ರುಗಳು ನಿಮ್ಮಿಂದ ದೂರಾಗಿ ಮನಸ್ಸಿಗೆ ಸಮಾಧಾನ. ಆರೋಗ್ಯ ಕಿರಿಕಿರಿ ಕಾಣಿಸಿಕೊಳ್ಳಬಹುದು. ಧನ್ವಂತರಿ ಸ್ಮರಣೆ ಮಾಡಿ. 

Personality Traits: ಈ ರಾಶಿಯವರನ್ನು ಅರ್ಥ ಮಾಡ್ಕೊಳೋದು ಕಷ್ಟ ಕಷ್ಟ

ಕನ್ಯಾ(Virgo): ಕೆಲವರೊಂದಿಗಿನ ಭಿನ್ನಾಭಿಪ್ರಾಯ ನಿಮಗೆ ಆತಂಕ, ಬಿಕ್ಕಟ್ಟು ಹೆಚ್ಚಿಸಬಹುದು. ಕುಟುಂಬ ಸದಸ್ಯರೊಡನೆ ಸರ್ವಾಧಿಕಾರಿ ಧೋರಣೆ ತೋರಬೇಡಿ. ಕೆಲಸ ಬಿಡುವ ಯೋಚನೆಯೂ ಬರಲಿದೆ. ಸಂಗಾತಿಯೊಂದಿಗೆ ಕಳೆಯಲು ಸಮಯ ಸಿಗದೆ ನಿರಾಶೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ.

ತುಲಾ(Libra): ಪ್ರಭಾವಿ ಜನರ ಬೆಂಬಲದಿಂದ ಆತ್ಮಸ್ಥೈರ್ಯ ಹೆಚ್ಚುವುದು.  ಶ್ರಮಿಕರಿಗೆ ಲಾಭ. ಕುಟುಂಬ ಜೀವನದಲ್ಲಿ ಸಾಮರಸ್ಯ ಕೊರತೆಗಳು ಕಾಣಿಸಿಕೊಳ್ಳಬಹುದು. ಹೊಸದಾಗಿ ಶುರುವಾದ ಪ್ರೇಮ ಜೀವನದ ಅಮಲಿನಲ್ಲೇ ದಿನ ಕಳೆಯುವುದು. ರಾಮ ಧ್ಯಾನ ಮಾಡಿ.

ವೃಶ್ಚಿಕ(Scorpio): ಹಗಲುಗನಸಿನಿಂದ ದಿನ ಹಾಳು ಮಾಡಿಕೊಳ್ಳುವಿರಿ. ಸಹೋದರರಲ್ಲಿ ಅಸಮಾಧಾನ. ಹೂಡಿಕೆಯಲ್ಲಿ ನಷ್ಟಫಲ. ಉದ್ಯೋಗದಲ್ಲಿ ಸಾಮಾನ್ಯ ದಿನ. ಎಡವಟ್ಟುಗಳಾಗಬಹುದು. ಒಪ್ಪಂದ ವ್ಯವಹಾರಗಳನ್ನು ಮುಂದೂಡಬೇಕಾಗಬಹುದು. ಕೆಂಪು ವಸ್ತ್ರ ಇಲ್ಲವೇ ಧಾನ್ಯ ದಾನ ಮಾಡಿ. 

Feng Shui: ಈ ಸಸ್ಯಗಳು ಮನೆಯೊಳಗಿದ್ದರೆ ದುಃಖ, ದುರದೃಷ್ಟ ಹೊರಗೋಡುತ್ತವೆ!

ಧನುಸ್ಸು(Sagittarius): ಬಹಳ ದಿನಗಳ ನಂತರ ಸ್ವಂತಕ್ಕಾಗಿ ಸಮಯ ಮೀಸಲಿಡುವುದರಿಂದ ಸಂಜೆಯ ಹೊತ್ತಿಗೆ ಸಂತೋಷದಲ್ಲಿರುವಿರಿ. ನಿಮ್ಮ ಮನಸ್ಸಿನ ಕೊರಗನ್ನು ಹತ್ತಿರದವರೊಂದಿಗೆ ಹಂಚಿಕೊಳ್ಳಿ. ವ್ಯಾಪಾರದಲ್ಲಿ ಸಾಮಾನ್ ದಿನ. ವಿಷ್ಣು ಸಹಸ್ರನಾಮ ಪಠಿಸಿ. 

ಮಕರ(Capricorn): ವೈಯಕ್ತಿಕ ಸ್ಥಾನಮಾನ ಹೆಚ್ಚಿಸಿಕೊಳ್ಳಲು ಯತ್ನಿಸಿ.  ಸಮಯದ ಅಭಾವ ಕಾಡುವುದು. ವಿದೇಶಿ ವ್ಯಾಪಾರದಲ್ಲಿರುವ ಉದ್ಯಮಿಗಳಿಗೆ ಅಪಾರ ನಷ್ಟ. ಹಿರಿಯರೊಡನೆ ಯಾವುದೇ ವಿಷಯ ವಾದಿಸಲು ಹೋಗದಿರಿ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಕೆಂಪು ಬಟ್ಟೆ ಧರಿಸಿ ನವಗ್ರಹಗಳ ಪ್ರಾರ್ಥನೆ ಮಾಡಿ. 

ಕುಂಭ(Aquarius): ನಿರೀಕ್ಷೆಯನ್ನೇ ಕೈ ಬಿಟ್ಟಿದ್ದ ದೊಡ್ಡ ಮೊತ್ತದ ಸಾಲ ಹಿಂದಿರುಗಿ ಬರಲಿದೆ. ಒಗ್ಗೂಡಿರುವ ಹಣದ ಪ್ರದರ್ಶನ ಸಲ್ಲದು. ಕೋರ್ಟ್ ವ್ಯಾಜ್ಯಗಳಲ್ಲಿ ಜಯ ಸಿಗಲಿದೆ. ಮಾತು ಹಿಡಿತ ತಪ್ಪುವ ಸಾಧ್ಯತೆ ಇದೆ. ಪ್ರೇಮ ವಿಚಾರದಲ್ಲಿ ಮನಸ್ಸು ಮುಳುಗಲಿದೆ. ಆರೋಗ್ಯ ಚೆನ್ನಾಗಿರಲಿದೆ. ಆಂಜನೇಯ ಸ್ಮರಣೆ ಮಾಡಿ. 

ಮೀನ(Pisces): ವಿನಾ ಕಾರಣ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ಕೊರಗುವಿರಿ. ಇದರಿಂದ ಮನಸ್ಸು ಕ್ಲೇಶಕ್ಕೊಳಗಾಗುವುದು. ಬದುಕಿನಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂಬ ಚಿಂತೆ ಆವರಿಸುವುದು. ಆದಷ್ಟು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಿ. ರಾಮ ಭಜನೆ ಮಾಡಿ. 

click me!