Daily Horoscope: ಮೇಷಕ್ಕೆ ಶಿಸ್ತಿದ್ದರೆ ಸಮೃದ್ಧಿ, ಕಟಕಕ್ಕೆ ಅಭಿವೃದ್ಧಿ

Published : Feb 11, 2022, 07:02 AM IST
Daily Horoscope: ಮೇಷಕ್ಕೆ ಶಿಸ್ತಿದ್ದರೆ ಸಮೃದ್ಧಿ, ಕಟಕಕ್ಕೆ ಅಭಿವೃದ್ಧಿ

ಸಾರಾಂಶ

11 ಫೆಬ್ರವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕನ್ಯಾ ರಾಶಿಗೆ ಮನೋದ್ವೇಗ, ನಿಮ್ಮ ರಾಶಿಫಲ ಏನಿರಲಿದೆ ನೋಡಿ..

ಮೇಷ(Aries): ನಿಮ್ಮ ವ್ಯಕ್ತಿತ್ವ ಇತರರ ಮೇಲೆ ಪ್ರಭಾವ ಬೀರುತ್ತದೆ ನಿಜ. ಅದಕ್ಕಾಗಿ ನೀವು ಕೊಂಚ ಮುಂಚಿತವಾಗಿ ದಿನವನ್ನು ಯೋಜಿಸಬೇಕು. ಶಿಸ್ತು ತಪ್ಪಿದರೆ ನಿಮ್ಮ ಬೆಲೆ ಕಳೆದುಕೊಳ್ಳಲಿದ್ದೀರಿ. ಈ ವಿಷಯದಲ್ಲಿ ಎಚ್ಚರವಾಗಿರಿ. ಲಲಿತಾ ಸಹಸ್ರನಾಮ ಪಠಣ ಮಾಡಿ.

ವೃಷಭ(Taurus): ಇತ್ತೀಚೆಗೆ ಸಂಗಾತಿಯನ್ನು ಹುಡುಕಿಕೊಂಡವರು, ಅವರ ಜೊತೆ ಹೆಚ್ಚಿನ ಸಮಯ ಕಳೆಯದಿದ್ದರೆ ನೋವು ಅನುಭವಿಸಬೇಕಾಗುವುದು. ಬಿಲ್ ಪಾವತಿಗಳನ್ನು ಸಕಾಲಕ್ಕೆ ಮಾಡಿ ಮುಗಿಸಿದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಕ್ಕಳ ಸಹಾಯ ದೊರಕಲಿದೆ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ

ಮಿಥುನ(Gemini): ಕಚೇರಿಯ ಕೆಲಸಗಳನ್ನು ಅರ್ಧಕ್ಕೇ ಬಿಟ್ಟು ಪ್ರವಾಸ ಹೊರಟರೆ ತಿರುಗಾಟದ ಸಂತೋಷ ದಕ್ಕದು. ಮೊದಲು ಕೆಲಸಗಳನ್ನು ಪೂರೈಸಿ ನಂತರ ಪ್ರವಾಸ ಯೋಜನೆ ಮಾಡಿ. ಮನೆಯ ಸದಸ್ಯರೊಡನೆ ಸ್ವಲ್ಪವಾದರೂ ಸಮಯ ಕಳೆಯಿರಿ. ತಾಯಿಯ ಆಶೀರ್ವಾದ ಪಡೆಯಿರಿ. 

ಕಟಕ(Cancer): ಹೊಸ ವಸ್ತುಗಳ ಖರೀದಿಗಾಗಿ ಧನ ವ್ಯಯಿಸುವಿರಿ. ಎಲ್ಲವೂ ನೀವಂದುಕೊಂಡಂತೆಯೇ ಆಗಲಿದೆ. ಆತ್ಮವಿಶ್ವಾಸ ಇರುವ ಕಾರಣ ವಾಗ್ಬಲ ಕೂಡ ಜೊತೆಗೂಡಲಿದೆ. ತಾಯಿಯ ಆರೋಗ್ಯ ಆತಂಕ ತರಿಸಬಹುದು. ಒಮ್ಮೆ ವೈದ್ಯರ ಬಳಿ ಕರೆದೊಯ್ಯುವುದು ಉತ್ತಮ. ಅನ್ನಪೂರ್ಣೇಶ್ವರಿ ಹೆಸರಲ್ಲಿ ಬಡವರಿಗೆ ಅಕ್ಕಿ ದಾನ ಮಾಡಿ. 

ಸಿಂಹ(Leo): ಇನ್ನೊಬ್ಬರಿಗೆ ನೆರವಾಗುವ ನಿಮ್ಮ ಗುಣ ಜನಪ್ರೀತಿಗೆ ಕಾರಣವಾಗುವುದು. ಆತ್ಮೀಯರ ವಲಯದಿಂದ ನಿಮಗೆ ಶುಭವಾರ್ತೆ ಕೇಳಿ ಬರಲಿದೆ. ಕಚೇರಿಯ ಕೆಲಸಗಳು ಹೆಚ್ಚಿದ್ದರೂ ನೀವದನ್ನು ಸಮರ್ಥವಾಗಿ ನಿಭಾಯಿಸಬಲ್ಲಿರಿ. ಬಿಳಿಯ ವಸ್ತ್ರಗಳನ್ನು ದಾನ ಮಾಡಿ. 

ಕನ್ಯಾ(Virgo): ಒಂಟಿತನ ಕಾಡಬಹುದು. ಯಾವುದೇ ಮನೋದ್ವೇಗಗಳಿಗೆ ಕೌನ್ಸೆಲಿಂಗ್ ಸಹಾಯ ಪಡೆಯುವುದು ಉತ್ತಮ. ಇಲ್ಲವೇ ನಿಮ್ಮ ಆತ್ಮೀಯರಲ್ಲಿ ಮನಸ್ಸಿನ ನೋವುಗಳನ್ನು ಹರವಿಡಿ. ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.

ತುಲಾ(Libra): ಜವಾಬ್ದಾರಿ ಹೆಚ್ಚುವುದು. ಸಹೋದ್ಯೋಗಿಗಳ ಸಹಾಯ ಕೇಳಲು ಹಿಂಜರಿಯಬೇಡಿ. ಬಾಯಿ ಬಿಟ್ಟು ಕೇಳಿದಾಗಲೇ ನಿಮ್ಮ ಕಷ್ಟ ಅರಿವಾಗುವುದು, ಸಹಾಯ ದಕ್ಕುವುದು. ಹೊಸ ತಾಂತ್ರಿಕ ವಿಷಯಗಳನ್ನು ಕಲಿಯುವುದರಿಂದ ಕೆಲಸ ಸುಲಭ ಮಾಡಿಕೊಳ್ಳುವತ್ತ ಗಮನ ಹರಿಸಿ. ಶಾರದಾಂಬೆ ಸ್ಮರಣೆ ಮಾಡಿ. 

Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು!

ವೃಶ್ಚಿಕ(Scorpio): ಸಂತೋಷವೇ ಇಲ್ಲವೆಂದು ಕೊರಗುವ ಬದಲು ಮಾಡುವ ಕೆಲಸವನ್ನೇ ಹುರುಪಿನಿಂದ ಮಾಡಿ. ಅತ್ಯುತ್ತಮವಾಗಿ ಪೂರೈಸಿದ ಕೆಲಸ ಖಂಡಿತಾ ಸಂತೋಷ ತರುವುದು. ವಿದ್ಯಾರ್ಥಿಗಳು ಮನೆಯಲ್ಲಿ ಸಣ್ಣ ಪುಟ್ಟ ಜವಾಬ್ದಾರಿ ಹೊರುವುದರಿಂದ ತಂದೆತಾಯಿಗೆ ನೆಮ್ಮದಿ ದೊರೆವುದು. ಲಕ್ಷ್ಮೀ ಪೂಜೆ ಮಾಡಿ. 

ಧನುಸ್ಸು(Sagittarius): ಈ ದಿನ ಅನಿರೀಕ್ಷಿತವಾಗಿ ಧನಲಾಭವೇನೋ ಇದೆ. ಹಾಗಂಥ ಕೂಡಲೇ ಹಣ ತೆಗೆದುಕೊಂಡು ತಿರುಗಾಡಲು ಹೋಗಬೇಡಿ. ವೃಥಾ ಖರ್ಚು ಮಾಡಿ ಆತಂಕ ಎದುರಿಸುವಿರಿ. ಹಣವನ್ನು ಉಳಿತಾಯ ಮಾಡುವತ್ತ ಗಮನ ಹರಿಸಿ. ಮಹಾಲಕ್ಷ್ಮೀ ಅಷ್ಟೋತ್ತರ ಪಠಿಸಿ.

ಮಕರ(Capricorn): ಹಗಲುಗನಸಿನಲ್ಲಿ ಕಾಲಹರಣ ಮಾಡುವಿರಿ. ಹೊಸ ಉದ್ಯಮ, ಕಲಿಕೆ ಆರಂಭಿಸಬೇಕಿದ್ದರೇ ಇಂದೇ ಶುರು ಮಾಡಿ. ಅದು ಬಿಟ್ಟು ಬರಿಯ ಕನಸು ಕಾಣುತ್ತಿದ್ದರೆ ಉಪಯೋಗವಿಲ್ಲ. ಪ್ರತಿಭೆಯಿಂದ ಆರ್ಥಿಕ ಲಾಭ ಗಳಿಸುವಿರಿ. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

ಕೋಪ ನಿಯಂತ್ರಿಸಲು ಸಾಧ್ಯವಾಗ್ತಿಲ್ವೇ? ಈ Vastu Tips ಫಾಲೋ ಮಾಡಿ

ಕುಂಭ(Aquarius): ಸಂಗಾತಿಯೊಂದಿಗೆ ಪ್ರವಾಸ ಹೋಗುವ ಯೋಜನೆ ಸಿದ್ಧಪಡಿಸುವಿರಿ. ಇದರಿಂದ ಮನಸ್ಸು ಉಲ್ಲಸಿತವಾಗುವುದು. ಇಂದು ದೊಡ್ಡ ಬಿಸ್ನೆಸ್ ಡೀಲ್ ಆಗಬಹುದು. ಲಾಭದಾಯಕ ದಾರಿಗಳು ಕಾಣಿಸಬಹುದು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅಪಾರ ಉತ್ಸಾಹ ಇರಲಿದೆ. ಮುತ್ತೈದೆಗೆ ಬಾಗೀನ ನೀಡಿ. 

ಮೀನ(Pisces): ಸ್ನೇಹಿತರಿಗೆ ಕಷ್ಟದಲ್ಲಿ ನೆರವಾಗುವಿರಿ. ಆರೋಗ್ಯದ ವಿಚಾರದಲ್ಲಿ ಕಡೆಗಣನೆ ಬೇಡ. ಮನೆಯ ಸದಸ್ಯರ ಮನಸ್ಸಿನ ಮಾತುಗಳನ್ನು ಆಲಿಸಿ. ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ವಿಷ್ಣು ಸಹಸ್ರನಾಮ ಶ್ರವಣ ಮಾಡಿ.

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ