Daily Horoscope: ಆನ್‌ಲೈನ್ ವಂಚನೆಗೆ ಸಿಂಹ ಕಂಗಾಲು, ಇಷ್ಟವಿಲ್ಲದ ಪ್ರೀತಿ ಧನುವಿಗೆ ದುಂಬಾಲು

Published : Feb 09, 2022, 07:04 AM IST
Daily Horoscope: ಆನ್‌ಲೈನ್ ವಂಚನೆಗೆ ಸಿಂಹ ಕಂಗಾಲು, ಇಷ್ಟವಿಲ್ಲದ ಪ್ರೀತಿ ಧನುವಿಗೆ ದುಂಬಾಲು

ಸಾರಾಂಶ

9 ಫೆಬ್ರವರಿ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಕನ್ಯಾ ರಾಶಿಗೆ ಆಕರ್ಷಣೆಯ ಗುಂಗು, ನಿಮ್ಮ ರಾಶಿ ಫಲ ಏನಿದೆ ನೋಡಿ..

ಮೇಷ(Aries): ಕಚೇರಿಯ ಕೆಲಸಗಳ ಹೊರೆಯಲ್ಲಿ ಮನೆಯ ಕೆಲಸಗಳು ಗುಡ್ಡೆ ಬಿದ್ದು ತಲೆನೋವು ತರುತ್ತವೆ. ಸಂಗಾತಿಯ ಸಹಕಾರ ಸಿಗದೆ ಜಗಳವಾಗಬಹುದು. ಸಾಕುಪ್ರಾಣಿಯಿಂದ ನೆರೆಹೊರೆಯವರಲ್ಲಿ ಜಗಳವಾಡುವಂತಾಗಬಹುದು. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ. 

ವೃಷಭ(Taurus): ಸಹೋದರರ ಸಹಕಾರದಿಂದ ನಿರುದ್ಯೋಗಿಗಳಿಗೆ ಅವಕಾಶ ಎದುರಾಗುವುದು. ತಂದೆಯೊಂದಿಗೆ ಮನಸ್ಸು ಬಿಚ್ಚಿ ಮಾತಾಡಿದರೆ ನಿಮ್ಮ ಕ್ಲೇಶ ಕಳೆಯುವುದು. ಸಣ್ಣಪುಟ್ಟ ಉದ್ಯಮಿಗಳಿಗೆ ಲಾಭವಿರಲಿದೆ. ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿಗಳ ಕಡೆಯಿಂದ ಆಪಾದನೆ ಕೇಳಿ ಬರುವುದು. ಮನೆ ದೇವರ ಪ್ರಾರ್ಥನೆ ಮಾಡಿ.

ಮಿಥುನ(Gemini): ಆಸ್ತಿ, ಸ್ವತ್ತು ವಿಷಯದಲ್ಲಿ ತಗಾದೆಗಳು ಹೆಚ್ಚಬಹುದು. ಸರಕಾರಿ ಅಧಿಕಾರಿಗಳ ಕಿರುಕುಳಕ್ಕೆ ಸುಸ್ತಾಗುವಿರಿ. ತಲೆನೋವು, ಮೈ ಕೈ ನೋವಿನಂಥ ಸಮಸ್ಯೆಗಳು ಬಳಲಿಸಬಹುದು. ಮಕ್ಕಳ ಕಡೆಯಿಂದ ಕೊಂಚ ನೆಮ್ಮದಿ ಸಿಗಲಿದೆ. ವಿಘ್ನ ನಿವಾರಕನಿಗೆ ದೂರ್ವೆ ಸಲ್ಲಿಸಿ. 

Monthly Love Horoscope: ಈ ಪ್ರೀತಿಯ ತಿಂಗಳು ಯಾರಿಗುಂಟು ಯಾರಿಗಿಲ್ಲ ಪ್ರೇಮ?

ಕಟಕ(Cancer): ನೆಂಟರಿಷ್ಟರ ಕಡೆಯಿಂದ ಅವಿವಾಹಿತರಿಗೆ ಸಂಬಂಧ ಕೂಡಿ ಬರುವುದು. ಹೂವು, ಹಣ್ಣು, ಉಡುಗೊರೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ. ಸ್ವತ್ತು ತಗಾದೆಯಲ್ಲಿ ನಿಮ್ಮ ಪರವಾಗಿರುವ ತೀರ್ಪು. ಮನೆಯ ಹಬ್ಬದ ಸಂಭ್ರಮ ಮನಸ್ಸನ್ನೂ ತುಂಬಲಿದೆ. ಕುಲದೇವರ ಸ್ಮರಣೆ ಮಾಡಿ. 

ಸಿಂಹ(Leo): ಆನ್‌ಲೈನ್ ವ್ಯವಹಾರದಲ್ಲಿ ವಂಚನೆಗೊಳಗಾಗುವ ಸಾಧ್ಯತೆ. ತಾಂತ್ರಿಕ ಅಡಚಣೆಗಳು ಹೆಚ್ಚಿ ಕೆಲಸಕ್ಕೆ ತೊಂದರೆ ಉಂಟಾಗಬಹುದು. ಸಾಂಸಾರಿಕವಾಗಿ ಕಿರಿಕಿರಿ ಎನಿಸಿದರೂ ಹೊಂದಿಕೊಂಡು ಹೋಗುವ ನಡೆಯೇ ಉತ್ತಮ. ಸ್ನೇಹಿತಕ ಸಹಕಾರ ಸಿಗಲಿದೆ. ಗಣಪತಿಗೆ ಕಾಯಿ ಕಡಲೆ ಅರ್ಪಿಸಿ. 

ಕನ್ಯಾ(Virgo): ಹೊಸ ವ್ಯಕ್ತಿಯೆಡೆ ಆಕರ್ಷಣೆ ಹೆಚ್ಚಲಿದೆ. ಈ ಯೋಚನೆಯಲ್ಲೇ ದಿನ ಕಳೆಯುವಿರಿ. ಉದ್ಯೋಗ ವಲಯದಲ್ಲಿ ಏರುಪೇರಿಲ್ಲ. ಸ್ವ ಉದ್ಯಮ ನಡೆಸುತ್ತಿರುವವರಿಗೆ ಇಂದಿನ ಒಂದು ಕರೆಯಿಂದ ಅದೃಷ್ಟವೇ ಬದಲಾಗಬಹುದು. ಯಾರಿಗೂ ಸಾಲ ನೀಡಬೇಡಿ. ಸೂರ್ಯ ನಮಸ್ಕಾರ ಮಾಡಿ ದಿನ ಆರಂಭಿಸಿ. 

ತುಲಾ(Libra): ಬ್ಯಾಂಕ್ ಕೆಲಸಗಳನ್ನು ವಿಳಂಬ ಮಾಡುವುದರಿಂದ ನಷ್ಟ. ಹೂಡಿಕೆ ವಿಷಯದಲ್ಲಿ ಗೊಂದಲಕ್ಕೊಳಗಾಗುವಿರಿ. ಸಣ್ಣಪುಟ್ಟ ಆರೋಗ್ಯ ಕಿರಿಕಿರಿಗಳು ಬಾಧಿಸುವುವು. ನಿಮ್ಮನ್ನು ಪ್ರೀತಿಸುವವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಗೋವಿಗೆ ಹಸಿರು ಹುಲ್ಲು ತಿನ್ನಿಸಿ.

Best Dads: ಅಪ್ಪ ಅಂದ್ರೆ ಹೀಗಿರಬೇಕು ಅನ್ನಿಸಿಕೊಳ್ಳೋ ರಾಶಿಯವರಿವರು!

ವೃಶ್ಚಿಕ(Scorpio): ಮನೆಯ ಸೌಕರ್ಯಗಳಿಗಾಗಿ ಖರ್ಚು ಹೆಚ್ಚುವುದು. ಮನೆಯ ಕೆಲ ಸಲಕರಣೆಗಳು ರಿಪೇರಿಗೆ ಬರಬಹುದು. ವಿರೋಧಿಗಳ ಕುಚೋದ್ಯದಿಂದ ನ್ಯಾಯಾಲಯಕ್ಕೆ ಎಡ ತಾಕುವಂತಾಗಬಹುದು. ಆತ್ಮವಿಶ್ವಾಸ ಕೊಂಚ ಕುಗ್ಗುವುದು. ಇರುವೆಗಳಿಗೆ ಸಿಹಿ ನೀಡಿ. 

ಧನುಸ್ಸು(Sagittarius): ಇಷ್ಟವಿಲ್ಲದ ಪ್ರೀತಿ ಒತ್ತಾಯದಿಂದ ಮಾನಸಿಕ ಹಿಂಸೆ. ನೀವು ಬಹುವಾಗಿ ನಂಬಿದ ವ್ಯಕ್ತಿ ಬೆನ್ನಿಗೆ ಇರಿಯಬಹುದು. ಅಧಾರ್ಮಿಕ ನಡೆಯಿಂದ ಪಶ್ಚಾತ್ತಾಪ ಪಡುವಂತಾಗಬಹುದು. ಕೆಲ ದುಡುಕಿನ ಕೆಲಸಗಳಿಂದ ಮನಸ್ಸಿನ ನೆಮ್ಮದಿ ಕಳೆದುಕೊಳ್ಳಲಿರುವಿರಿ. ಅಶ್ವತ್ತ ಕಟ್ಟೆಗೆ ದೀಪ ಹಚ್ಚಿ.

ಮಕರ(Capricorn): ಪಲಾಯನವಾದದಿಂದ ಸಮಸ್ಯೆಗಳು ಹೆಚ್ಚುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಸಮಸ್ಯೆಗಳನ್ನು ನೇರಾನೇರ ಎದುರಿಸಿ. ಮನೆಯಲ್ಲಿ ಪತ್ನಿ, ಮಕ್ಕಳಿಂದ ಬುದ್ಧಿ ಮಾತು ಕೇಳಬೇಕಾಗಿ ಬರುವುದು. ವಿಷ್ಣು ಸಹಸ್ರನಾಮ ಹೇಳಿ.

ಪರ್ವತದ ಮೇಲಿಂದ ಬಿದ್ದು ಸಾವನ್ನಪ್ಪಿದಳೇ ದ್ರೌಪದಿ? ಪಾಂಚಾಲಿಯ ಕುರಿತ Amazing Facts

ಕುಂಭ(Aquarius): ಇನ್ನೂ ನಿಮ್ಮ ಭಾವನೆಗಳನ್ನು ಗುಟ್ಟಾಗಿ ಇಟ್ಟುಕೊಳ್ಳುವುದರಿಂದ ಪ್ರಯೋಜನವಿಲ್ಲ. ಬಾಯಿ ಬಿಟ್ಟು ಹೇಳದೆ ಯಾವೊಂದೂ ಮುಂದುವರಿಯುವುದಿಲ್ಲ. ಉದ್ಯೋಗ ರಂಗದಲ್ಲಿ ಪ್ರಗತಿ ಇರಲಿದೆ. ಷೇರು ವ್ಯವಹಾರಗಳಲ್ಲಿ ಲಾಭ ಹೆಚ್ಚಲಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಮೀನ(Pisces): ಸಣ್ಣ ಜಗಳವೊಂದಕ್ಕೆ ಅತಿಯಾಗಿ ಪ್ರತಿಕ್ರಿಯಿಸಿ ಮನಸ್ಸು ಕೆಡಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಗೆಳೆಯರೊಡನೆ ಜಗಳವಾಡುತ್ತಾರೆ. ಪರಿಚಿತರಿಂದ ಶುಭ ಸುದ್ದಿಯೊಂದು ನಿಮ್ಮನ್ನರಸಿ ಬರಲಿದೆ. ವಿಲಾಸಿ ಜೀವನಕ್ಕಾಗ ಧನವ್ಯಯ. ಬಡಬಗ್ಗರಿಗೆ ದಾನ ಮಾಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ