Daily Horoscope: ಮಕರಕ್ಕೆ ಸಹೋದ್ಯೋಗಿಗಳ ಸಹಕಾರ, ಕಟಕಕ್ಕೆ ಆಸ್ತಿ ತೀರ್ಪು ನಿಮ್ಮ ಪರ

By Suvarna News  |  First Published Feb 10, 2022, 5:15 AM IST

10 ಫೆಬ್ರವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕದ ಕೆಲಸಗಳು ವಿಳಂಬ, ಮೇಷಕ್ಕೆ ಯಶಸ್ಸು


ಮೇಷ(Aries): ಪ್ರಯತ್ನಬಲದಿಂದ ಯೋಜಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ತೋರಿಬರುವುದು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಹಣ ಕೈಲಿ ನಿಲ್ಲದೆ ಆತಂಕ ಕಾಡುವುದು. ಗಾಯತ್ರಿ ಜಪ ಮಾಡಿ.

ವೃಷಭ(Taurus): ಸ್ನೇಹಿತರ ಸಹಕಾರದಿಂದ ದೊಡ್ಡ ಕನಸುಗಳು ಈಡೇರುವುವು.  ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಮನಸ್ಸಿನ ಕೊರಗು ಕೊಂಚ ಕಡಿಮೆಯಾಗಲಿದೆ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಆರೋಗ್ಯ ಸಹಕಾರ ಇರುವುದು. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

Latest Videos

undefined

ಮಿಥುನ(Gemini): ಹೊರಗೆ ಸುತ್ತಾಟದಿಂದ ಮನಸ್ಸಿಗೆ ಪ್ರಫುಲ್ಲತೆ. ನಿಮ್ಮ ಬುದ್ಧಿಯನ್ನೇ ಬಲವಾಗಿ ಪ್ರಯೋಗಿಸಿ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರದಿಂದ ಬಹಳಷ್ಟು ನೆಮ್ಮದಿ ಸಿಗುವುದು. ಗೆಳೆಯರ ಬಳಗದಿಂದ ಒಳ್ಳೆ ಸುದ್ದಿ ಕೇಳುವಿರಿ. ಕೃಷ್ಣನಿಗೆ ಅವಲಕ್ಕಿ ನೈವೇದ್ಯ ಮಾಡಿ. 

ಕಟಕ(Cancer): ಅತಿಥಿಗಳ ಆಗಮನ ಸಂತಸ ತರುವುದು. ಆಸ್ತಿ ವಿಚಾರ ಕೋರ್ಟ್‌ನಲ್ಲಿದ್ದರೆ ತೀರ್ಪು ನಿಮ್ಮ ಪರವಾಗಿ ಆಗುವುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ದೊರೆಯುವುದು. ಚರ್ಮ ಸಂಬಂಧಿ ಕಿರಿಕಿರಿಗಳು ಹೆಚ್ಚಲಿವೆ. ಹಸುವಿಗೆ ಗೋಧಿ ಹಿಟ್ಟು ತಿನ್ನಿಸಿ.

ಸಿಂಹ(Leo): ಮನೆಯಲ್ಲಿ ಸಂಗಾತಿಯೊಂದಿಗೆ ಮುಸುಕಿನ ಮುನಿಸು. ವ್ಯಾಪಾರಿಗಳಿಗೆ ಲಾಭ. ಯಾರೊಂದಿಗಾದರೂ ಏನನ್ನಾದರೂ ಹೇಳುವ ಮೊದಲು ಅದರ ಸಾಧಕ ಬಾಧಕಗಳನ್ನು ಯೋಚಿಸಿ. ಮಕ್ಕಳ ಪ್ರತಿಭೆ ಬೆಳೆಸಲು ಗಮನ ಹರಿಸಿ. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ಕನ್ಯಾ(Virgo): ಕೆಲಸದಲ್ಲಿ ಹಿರಿಯರಿಂದ ಒತ್ತಡ ಹೆಚ್ಚುವುದು. ಕಷ್ಟ ಪಟ್ಟು ದುಡಿಯುತ್ತಿದ್ದರೂ ಮನೆಯಲ್ಲಿ ಮಾತು ಕೇಳಬೇಕಾಗಿ ಬಂದು ಮನಸ್ಸು ಹಾಳಾಗುವುದು. ಸಂಗಾತಿಯ ವಿಷಯದಲ್ಲಿ ಹಟದ ಧೋರಣೆಯಿಂದ ಇಬ್ಬರಿಗೂ ಒಳಿತಾಗುವುದಿಲ್ಲ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ತುಲಾ(Libra): ದೂರ ಪ್ರವಾಸದಿಂದ ಮನಸ್ಸು ಚೇತೋಹಾರಿಯಾಗುವುದು. ತಾಯಿಯ ಆರೋಗ್ಯಕ್ಕಾಗಿ ವೈದ್ಯರಲ್ಲಿ ಅಲೆದಾಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅತ್ಯುತ್ತಮ ಲಾಭ. ಬೇಡದ ವಿಷಯಕ್ಕೆ ಮೂಗು ತೂರಿಸಿ ಸಂಕಷ್ಟ ತಂದುಕೊಳ್ಳಬೇಡಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

Expressing Rejection: ನೀವಿಷ್ಟ ಇಲ್ಲ ಎಂಬುದನ್ನು ಯಾವ ರಾಶಿಯವರು ಹೇಗೆ ತಿಳಿಸುತ್ತಾರೆ ನೋಡಿ..

ವೃಶ್ಚಿಕ(Scorpio): ಬೇರೊಬ್ಬರು ಹೇಳಿದ್ದೆಲ್ಲ ಕೇಳುವ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿ ದಿನಾಂತ್ಯದಲ್ಲಿ ಕೊರಗುವರು. ಅನಿರೀಕ್ಷಿತ ಕಾರಣಕ್ಕೆ ಕೆಲಸಕ್ಕೆ ವಿಳಂಬಗಳೆದುರಾಗಬಹುದು. ಬಂಧುವಲಯದಲ್ಲಿ ಅನಾರೋಗ್ಯ ಪೀಡಿತರ ಆರೋಗ್ಯ ವಿಚಾರಿಸಿ. ಕುಲದೇವರ ಸ್ಮರಣೆ ಮಾಡಿ. 

ಧನುಸ್ಸು(Sagittarius): ಸಂಗಾತಿಯೊಂದಿಗೆ ಕೂಲಂಕುಶವಾಗಿ ಸಮಸ್ಯೆಗಳನ್ನು  ಚರ್ಚಿಸಿ. ವಿದ್ಯಾರ್ಥಿಗಳು ಹಿರಿಯರ ಸಹಾಯದಿಂದ ಓದಿನಲ್ಲಿ ಮುನ್ನಡೆ ಸಾಧಿಸುವರು.  ಪರಿಚಿತರಿಂದ ಉದ್ಯಮಕ್ಕೆ ಸಹಾಯ ದೊರೆಯುವುದು. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ. 

ಮಕರ(Capricorn): ಕುಟುಂಬದೊಂದಿಗೆ ಪ್ರವಾಸ ಯೋಜನೆಗಳನ್ನು ಮಾಡಲಿರುವಿರಿ. ಸಹೋದ್ಯೋಗಿಗಳ ಸಹಕಾರದಿಂದ ಸುಲಭದಲ್ಲಿ ಕೆಲಸಗಳ ಸಾಧನೆ, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ. ಸ್ತ್ರೀಯರು ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕುಂಭ(Aquarius): ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ಬಹುಕಾಲದಿಂದ ಮುಂದೂಡಿದ್ದ ಕೆಲಸ ಕೈಗೆತ್ತಿಕೊಳ್ಳುವಿರಿ. ದೇವತಾಕಾರ್ಯಗಳಲ್ಲಿ ಭಾಗಿ. ಗಣಪತಿಗೆ ದರ್ಬೆ ಅರ್ಪಿಸಿ. 

Faith And Reason: ರಂಗೋಲಿ ಹಾಕಿದರೆ ಯಮ ಮನೆಗೆ ಬರೋಲ್ಲವಂತೆ, ನಿಜವೇ?

ಮೀನ(Pisces): ಉದ್ಯೋಗ ರಂಗದಲ್ಲಿ ದೊಡ್ಡ ಯೋಜನೆಗಳನ್ನು ಮುಗಿಸಿ ಸೈ ಎನಿಸಿಕೊಳ್ಳುವಿರಿ. ತಂದೆ-ಮಕ್ಕಳಲ್ಲಿ ಸಾಮರಸ್ಯ ಹೆಚ್ಚಲಿದೆ. ಉಳಿತಾಯದ ಮಹತ್ವ ಸಧ್ಯದಲ್ಲೇ ಗೊತ್ತಾಗಲಿದೆ. ದೂರ ಪ್ರವಾಸ ಯೋಜನೆ ಸಿದ್ಧಪಡಿಸುವಿರಿ. ವೆಂಕಟೇಶ್ವರ ಸ್ವಾಮಿಯ ಶ್ಲೋಕ ಹೇಳಿಕೊಳ್ಳಿ. 

click me!