Daily Horoscope: ಕನ್ಯಾ ರಾಶಿಯ ನಿರುದ್ಯೋಗಿಗಳಿಗೆ ಅವಕಾಶ, ಮಿಥುನಕ್ಕೆ ಮನೋಕ್ಲೇಶ

Published : Feb 08, 2022, 05:00 AM IST
Daily Horoscope: ಕನ್ಯಾ ರಾಶಿಯ ನಿರುದ್ಯೋಗಿಗಳಿಗೆ ಅವಕಾಶ, ಮಿಥುನಕ್ಕೆ ಮನೋಕ್ಲೇಶ

ಸಾರಾಂಶ

8 ಫೆಬ್ರವರಿ 2022, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಸಂಗಾತಿಯ ಸಂಪ್ರೀತಿಗೆ ಸೋಲುವ ಮಕರ, ವೃಷಭಕ್ಕೆ ನಿರಾಸೆ

ಮೇಷ(Aries): ನಿಮ್ಮ ಉತ್ತಮ ಆಲೋಚನೆ ನಿಮಗೆ ಒಳಿತೇ ಮಾಡುವುದು. ಆತ್ಮವಿಶ್ವಾಸದ ಕಾರಣ ವೃತ್ತಿರಂಗದಲ್ಲಿ ಮುನ್ನುಗ್ಗಿ ಗುರುತಿಸಿಕೊಳ್ಳುವಿರಿ. ಯಾರನ್ನೂ ನೋಯಿಸುವಂತೆ ಚುಚ್ಚು ಮಾತುಗಳನ್ನಾಡಬೇಡಿ. ಹಿತಶತ್ರುಗಳು ಹೆಚ್ಚಲಿದ್ದಾರೆ. ಕೆಂಪು ಧಾನ್ಯವನ್ನು ದಾನ ಮಾಡಿ. 

ವೃಷಭ(Taurus): ಆಸೆಯಿಂದ ಕಾಯುತ್ತಿರುವ ವಿಷಯದಲ್ಲಿ ನಿರಾಸೆ ಕಾದಿದೆ. ಲೇವಾದೇವಿ, ಶೇರು ವ್ಯವಹಾರ, ವ್ಯಾಪಾರದಲ್ಲಿ ನಷ್ಟ ಹೆಚ್ಚಲಿದೆ. ಮನೆಯಲ್ಲಿ ಅಂದುಕೊಂಡ ಕಾರ್ಯಗಳು ಆಗದೆ ಕಂಗಾಲಾಗುವಿರಿ. ತಲೆನೋವು, ಕೆಮ್ಮಿನಂಥ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಅಮ್ಮನವರಿಗೆ ಅರ್ಚನೆ ಮಾಡಿಸಿ. 

ಮಿಥುನ(Gemini): ದೊಡ್ಡವರಿಗೆ ಎದುರಾಡಿ ಅವರ ಮನಸ್ಸಿಗೆ ನೋವು ಮಾಡುವಿರಿ. ಇದರಿಂದ ನಿಮ್ಮ ಮನಸ್ಸೂ ಕೆಡುವುದು. ಎಲ್ಲ ಕೆಲಸಗಳಲ್ಲೂ ಅಡಚಣೆಗಳು ಎದುರಾಗುವುವು. ಕಚೇರಿಯಲ್ಲಿ ಎಡವಟ್ಟುಗಳು ಹೆಚ್ಚಾಗಿ ಬೈಸಿಕೊಳ್ಳುವಿರಿ. ಮಕ್ಕಳ ತಪ್ಪಿಗೆ ತಂದೆತಾಯಿ ಅವಮಾನ ಎದುರಿಸಬೇಕಾಗಬಹುದು. ಆಂಜನೇಯ ಸ್ಮರಣೆ ಮಾಡಿ.                                                

ಕಟಕ(Cancer): ವ್ಯಾಪಾರ ವ್ಯವಹಾರಗಳು ಸಾಮಾನ್ಯವಾಗಿರಲಿವೆ. ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ಹೊಸ ವ್ಯಕ್ತಿಗಳ ಪರಿಚಯ ಲಾಭದಾಯಕವಾಗಲಿದೆ. ವಿವಾಹಾದಿ ಯತ್ನಕ್ಕೆ ಫಲ ಸಿಗಲಿದೆ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಸಿಂಹ(Leo): ಸಣ್ಣ ಪ್ರಮಾಣದ ಉಳಿತಾಯಗಳು ಕೂಡಾ ಕಷ್ಟ ಕಾಲಕ್ಕೆ ದೊಡ್ಡ ಸಹಾಯ ಮಾಡಲಿವೆ ಎಂಬುದನ್ನು ನೆನಪಿಡಿ. ಸ್ವಲ್ಪ ಉಳಿಸಿ ಏನು ಮಾಡುವುದೆಂದು ಎಲ್ಲವನ್ನೂ ಧಾರಾಳವಾಗಿ ಖರ್ಚು ಮಾಡಬೇಡಿ. ತಾಯಿಯ ಸಹಾಯ ಸಿಗುವುದು. ತಾಯಿಯ ಕೈಯಿಂದ ಸಿಹಿ ತಿನಿಸಿಕೊಳ್ಳಿ. 

ಕನ್ಯಾ(Virgo): ಮೇಲಧಿಕಾರಿಗಳ ನಿರ್ಲಕ್ಷದಿಂದ ಉದ್ಯೋಗ ತೊರೆಯುವ ಯೋಚನೆ ಬರಬಹುದು. ನಿರುದ್ಯೋಗಿಗಳಿಗೂ ಅವಕಾಶ ಅರಸಿ ಬರಲಿದೆ. ಹೆಚ್ಚು ಯೋಚಿಸದೆ ಬಳಸಿಕೊಳ್ಳಿ. ಪ್ರೀತಿ ಪ್ರೇಮ ವ್ಯವಹಾರಗಳಿಗೆ ಮನೆಯವರ ಬೆಂಬಲ ದೊರೆತು ಸಂತಸ ಹೆಚ್ಚುವುದು. ಕೆಂಪು ವಸ್ತ್ರ ದಾನ ಮಾಡಿ. 

ತುಲಾ(Libra): ವಿವಾದಗಳಿಂದ ದೂರವಿರಿ. ದೈವಕಾರ್ಯವನ್ನು ಮಾಡುತ್ತೀರಿ. ಕಾಲುನೋವು, ಬೆನ್ನು ನೋವು ಹೆಚ್ಚಾಗಬಹುದು. ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಫಲವಿದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ನೆರವು ಸಿಗಲಿದೆ. ಆಂಜನೇಯನಿಗೆ ಕೆಂಪು ವಸ್ತ್ರ ದಾನ ಮಾಡಿ. 

ವೃಶ್ಚಿಕ(Scorpio): ವಿವಾದಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ. ಮನೆಗೆ ಸಾಕಷ್ಟು ಖರ್ಚು ಮಾಡುವಿರಿ. ಮೈ ಕೈ ನೋವಿನಂಥ ಸಮಸ್ಯೆಗಳು ಕಿರಿ ಕಿರಿ ತರಬಹುದು. ಮನೆಯ ಕಿರಿಯ ಸದಸ್ಯರೊಂದಿಗೆ ಸೌಮ್ಯವಾಗಿ ವರ್ತಿಸಿ. ಸಂಗಾತಿಯೊಂದಿಗೆ ಜಗಳವಾಗಬಹುದು. ಆಂಜನೇಯ ಸ್ಮರಣೆ ಮಾಡಿ. 

Best Dads: ಅಪ್ಪ ಅಂದ್ರೆ ಹೀಗಿರಬೇಕು ಅನ್ನಿಸಿಕೊಳ್ಳೋ ರಾಶಿಯವರಿವರು!

ಧನುಸ್ಸು(Sagittarius): ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿರುತ್ತವೆ. ನಿಷ್ಪ್ರಯೋಜಕ ಚಟುವಟಿಕೆಗಳಲ್ಲಿ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಶೈಕ್ಷಣಿಕ ರಂಗದಲ್ಲಿ, ಪರೀಕ್ಷೆಗಳಲ್ಲಿ ಭಾಗವಹಿಸಿದವರಿಗೆ ಹಾಗೂ ಸಂದರ್ಶನ ಎದುರಿಸಿದವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. 

ಮಕರ(Capricorn): ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಬಹುದು. ಕೂಡಿಟ್ಟ ಹಣದ ಸದುಪಯೋಗವಾಗವಾಗಲಿದೆ. ಕೈಗೆತ್ತಿಕೊಂಡ ಕೆಲಸವನ್ನು ಅವಧಿಪೂರ್ವ ಪೂರ್ಣಗೊಳಿಸಿ ಸೈ ಎನಿಸಿಕೊಳ್ಳುವಿರಿ. ಮಕ್ಕಳಿಗೆ ನಿಮ್ಮ ಬಗ್ಗೆ ಪ್ರೀತಿ ಹೆಚ್ಚುವುದು. ಹಕ್ಕಿಗಳಿಗೆ ಕಾಳು ನೀಡಿ. 

Narmada Jayanti: ಪರಶಿವನ ಬೆವರಾಗಿ ನದಿ ನರ್ಮದೆ ಹುಟ್ಟಿದ ದಿನವಿಂದು, ಏನು ಆಕೆಯ ಕತೆ?

ಕುಂಭ(Aquarius): ದೇವರ ಮೇಲೆ ನಂಬಿಕೆ ಬರುವ ಸನ್ನಿವೇಶಗಳು ಸೃಷ್ಟಿಯಾಗುತ್ತದೆ. ನಿಮ್ಮ ನಿರ್ಧಾರಗಳು ಗಟ್ಟಿಯಾಗುವ ಹೊತ್ತಿಗೆ ಕಾರ್ಯವೇ ಮುಗಿದಿರುತ್ತದೆ. ಅನಗತ್ಯ ಆತಂಕಗಳು ಕಾಡುವುವು. ವಿರೋಧಿಗಳ ಉಪದ್ರವ ಹೆಚ್ಚಬಹುದು. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ಮೀನ(Pisces): ಪ್ರತ್ಯಕ್ಷ ಅಥವಾ ಪರೋಕ್ಷ ರೀತಿಯಲ್ಲಿ ಸರ್ಕಾರದಿಂದ ಪ್ರಯೋಜನಗಳನ್ನು ಪಡೆಯಬಹುದು. ನೀವು ಸಮಯಕ್ಕೆ ಸರಿಯಾಗಿ ಅವಕಾಶವನ್ನು ಬಳಸಿದರೆ, ನಿಮ್ಮ ವೃತ್ತಿಪರ ಜೀವನವು ಭವಿಷ್ಯದಲ್ಲಿ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ.

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ