Daily Horoscope: ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳುವ ಪ್ರಮೇಯ ಈ ರಾಶಿಯವರದು..

Published : Dec 31, 2021, 07:11 AM IST
Daily Horoscope: ಸಾಲ ಕೊಟ್ಟು ಸ್ನೇಹ ಕಳೆದುಕೊಳ್ಳುವ ಪ್ರಮೇಯ ಈ ರಾಶಿಯವರದು..

ಸಾರಾಂಶ

31 ಡಿಸೆಂಬರ್ 2021, ಶುಕ್ರವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷಕ್ಕೆ ತಪ್ಪಿದ್ದಲ್ಲ ಎಡವಟ್ಟು, ಸಿಂಹಕ್ಕೆ  ಸಂತೋಷ

ಮೇಷ(Aries): ಸಣ್ಣ ಸಣ್ಣ ಎಡವಟ್ಟುಗಳಿಂದ ಸಮಸ್ಯೆಯಾದೀತು. ಕೆಲಸದಲ್ಲಿ ಹಾಗೂ ಮಾತನಾಡುವ ಮುಂಚೆ ಬಹಳ ಎಚ್ಚರಿಕೆ ಇರಲಿ. ಮಾಡಿದ ಕೆಲಸದ ಬಗ್ಗೆ ನಕಾರಾತ್ಮಕ ಮಾತುಗಳು ಕೇಳಿ ಬರಬಹುದು. ಕೋಪವನ್ನು ನಿಯಂತ್ರಿಸಿಕೊಳ್ಳಿ. ತಾಯಿ ಶಾರದಾಂಬೆಯನ್ನು ಸ್ಮರಿಸಿಕೊಳ್ಳಿ.

ವೃಷಭ(Taurus): ನೀವಾಗಲೇ ಪಾರ್ಟಿ ಮೂಡ್‌ನಲ್ಲಿದ್ದೀರಿ. ಗೆಳೆಯರ ಭೇಟಿಯಿಂದ ಸಂತಸ. ಹೊಸ ಖಾದ್ಯಗಳ ಸೇವನೆ. ಚಟಗಳು ನಿಯಂತ್ರಣದಲ್ಲಿರಲಿ. ಸಂಗಾತಿಯ ಬಳಿ ಸುಳ್ಳಾಡಿದರೆ ಸಿಕ್ಕಿ ಹಾಕಿಕೊಂಡು ಪಜೀತಿಯಾದೀತು. ವಾಹನ ಚಾಲನೆ ಮಾಡುವ ಎಚ್ಚರ ಅಗತ್ಯ. ದುರ್ಗಾದೇವಿಯಲ್ಲಿ ಪ್ರಾರ್ಥನೆ ಮಾಡಿ. 

ಮಿಥುನ(Gemini): ಬಹಳ ಸಮಯದಿಂದ ದಾರಿ ತಪ್ಪಿದ್ದ ಸಂಗಾತಿ ಮತ್ತೆ ಮೊದಲಿನಂತಾಗಿ ನೆಮ್ಮದಿ ಎನಿಸುವುದು. ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಕಡೆಗಣಿಸಬೇಡಿ. ನಿಮ್ಮ ಉದ್ಯಮ ವಿಸ್ತರಿಸುವ ಯೋಜನೆ ರೆಕ್ಕೆ ಪುಕ್ಕ ಪಡೆದು ಬಲಿಯಲಿದೆ. ಮಕ್ಕಳ ಬೆಳವಣಿಗೆಯಿಂದ ಸಂತಸ. ಲಲಿತಾ ಸಹಸ್ರನಾಮ ಪಠಿಸಿ. 

ಕಟಕ(Cancer): ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಬಂದು ಹರ್ಷಗೊಳ್ಳುವಿರಿ. ರೈತರು, ಉದ್ಯೋಗಿಗಳು ಎಲ್ಲರೂ ಧನಲಾಭದಿಂದ ಇಂದು ಖುಷಿಯಾಗುವರು. ಮನೆಯ ಮಹಿಳೆಯರಿಗೆ ಹೊಸ ಬಟ್ಟೆ ಕೊಡಿಸಿ. ಕುಟುಂಬದಲ್ಲಿ ಸಂತಸ. ನಿರುದ್ಯೋಗಿಗಳಿಗೆ ಆಶಾಕಿರಣ ಕಾಣಿಸುವುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.
 
New Year Gift: ಯಾವ ರಾಶಿಯವರಿಗೆ ಯಾವ ಗಿಫ್ಟ್ ಬೆಸ್ಟ್?

ಸಿಂಹ(Leo): ಮಕ್ಳಳ ಸಲುವಾಗಿ ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ಹೊಸ ವಸ್ತುಗಳ ಖರೀದಿಯಿಂದ ಸಂತಸ ಹೆಚ್ಚುವುದು. ಉಡುಗೊರೆಗಳೂ ದೊರೆಯಬಹುದು. ಕಚೇರಿಯಲ್ಲಿ ಹಿರಿಯ ಉದ್ಯೋಗಿಗಳು ನಿಮ್ಮ ಕೆಲಸವನ್ನು ಮೆಚ್ಚಿ ಮಾತಾಡುವರು. ತಾಯಿಯ ಆಶೀರ್ವಾದ ಪಡೆಯಿರಿ. 

ಕನ್ಯಾ(Virgo): ಜಡದಿಂದ ಅನಾರೋಗ್ಯಗಳು ಎದುರಾಗಬಹುದು. ದೇಹಕ್ಕೆ ಜಡ ಬರದಂತೆ ನೋಡಿಕೊಳ್ಳಲು ಸ್ವಲ್ಪ ವ್ಯಾಯಾಮ ಮಾಡಿ. ಅವಿವಾಹಿತರಿಗೆ ಉತ್ತಮ ಸಂಬಂಧ ಬರಲಿದೆ. ನಿಮ್ಮ ಪ್ರಾಮಾಣಿಕತೆಗೆ ತಕ್ಕ ಫಲ ಸಿಗಲಿದೆ. ಕುಟುಂಬ ಸದಸ್ಯರ ಆರೋಗ್ಯದ ಕಡೆಯೂ ಗಮನವಿರಲಿ. ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ. 

ತುಲಾ(Libra): ಕೊಟ್ಟ ಸಾಲಕ್ಕಾಗಿ ಸ್ನೇಹ ಕಳೆದುಕೊಳ್ಳಬೇಕಾದ ಪ್ರಮೇಯ ಬರಲಿದೆ. ಹಣ, ಸ್ನೇಹ ಎರಡೂ ಕಳೆದುಕೊಂಡು ಕೊರಗುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಮನ್ನಣೆಯೂ ದೊರೆಯುವುದು. ಕುಟುಂಬದವರೊಡನೆ ಹೆಚ್ಚು ಸಮಯ ಕಳೆಯಿರಿ. ಹಸುವಿಗೆ ಹಸಿವು ನೀಗಿಸಿ. 

ವೃಶ್ಚಿಕ(Scorpio): ನಿಮ್ಮ ಆರನೇ ಇಂದ್ರಿಯ ಚೆನ್ನಾಗಿ ಕೆಲಸ ಮಾಡುವುದು. ಮತ್ತೊಬ್ಬರ ಬಗ್ಗೆ ಕೆಟ್ಟ ಯೋಚನೆ ಮಾಡಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಮಕ್ಕಳ ಸಂಬಂಧ ಖರ್ಚು ಹೆಚ್ಚು. ಕುಟುಂಬ ಸದಸ್ಯರ ಜೊತೆ ವೈಮನಸ್ಸು ಮುಂದುವರಿಯುವುದು. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

Numerology: ನಿಮ್ಮ ಜನ್ಮದಿನ ಆಧರಿಸಿ 2022ರಲ್ಲಿ ನಿಮ್ಮ ಭವಿಷ್ಯ ಹೀಗಿರುತ್ತೆ!

ಧನುಸ್ಸು(Sagittarius): ವಿವಾಹ ಕೆಲಸಗಳು ಸರಾಗಿವಾಗಿ ಸಾಗಲಿವೆ. ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ದೈವಾನುಕೂಲ ಇರಲಿದೆ. ಹಿರಿಯರ ಅನುಗ್ರಹವಾಗಲಿದೆ. ಮಕ್ಕಳ ವಿಷಯದಲ್ಲಿ ಆತಂಕಗಳು ಹೆಚ್ಚಬಹುದು. ಗಡಿಬಿಡಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಗುರುಗಳನ್ನು ಸ್ಮರಿಸಿಕೊಳ್ಳಿ. 

ಮಕರ(Capricorn): ವಿದೇಶದಿಂದ ಸುವಾರ್ತೆ ಕೇಳಿ ಬರಲಿದೆ. ಕುಟುಂಬ ಜೀವನದಲ್ಲಿ ಸಾಮರಸ್ಯ ಕೊರತೆಗಳು ಕಾಣಿಸಿಕೊಳ್ಳಬಹುದು. ಸಂಗಾತಿಯ ಮನೋಭಿಲಾಶೆ ಏನೆಂದು ಆಲಿಸಿ. ದೂರ ಪ್ರಯಾಣದಿಂದ ಆಯಾಸ ಹೆಚ್ಚಲಿದೆ. ಯಾರಿಗೂ ಸಾಲ ಕೊಡಬೇಡಿ. ಅಮ್ಮನವರಿಗೆ ಬಿಳಿ ಹೂವು ಏರಿಸಿ. 

ಕುಂಭ(Aquarius): ಶತ್ರುಗಳು ನಿಮ್ಮಿಂದ ದೂರಾಗಿ ಮನಸ್ಸಿಗೆ ಸಮಾಧಾನ. ಆರೋಗ್ಯ ಕಿರಿಕಿರಿ ಕಾಣಿಸಿಕೊಳ್ಳಬಹುದು. ಯಾವುದೇ ಕಷ್ಟ ಎದುರಿಸುತ್ತಿದ್ದರೆ ಅದನ್ನು ನಿಮ್ಮ ಹಿರಿಯರು ಹೇಗೆ ಎದುರಿಸಿದ್ದರು ಎಂದು ಯೋಚಿಸಿ ಪಾಠವಾಗಿ ಪರಿಗಣಿಸಿ ಮುಂದುವರಿಯಿರಿ. ಯಾವುದೋ ಕಾಣಿಕೆ ಹೇಳಿಕೊಂಡಿದ್ದರೆ ತಲುಪಬೇಕಾದಲ್ಲಿಗೆ ಕಳಿಸಿ. 

ಮೀನ(Pisces): ಕೌಟುಂಬಿಕ ಸೌಕರ್ಯಗಳ ವಿಷಯಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ಮಕ್ಕಳ ಅನಾರೋಗ್ಯದಿಂದಾಗಿ ಮನಸ್ಸಿಗೆ ಕಸಿವಿಸಿಯಾಗಬಹುದು. ಇನ್ನೊಬ್ಬರ ಕಷ್ಟಗಳಿಗೆ ನಿಮ್ಮ ಅಸಹಾಯಕತೆ ಕಾರಣವಲ್ಲ, ಅದಕ್ಕಾಗಿ ಕೊರಗಬೇಡಿ. ಮನೆದೇವರ ಸ್ಮರಣೆ ಮಾಡಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ