30 ಡಿಸೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಕ್ಕಳ ಎಡವಟ್ಟಿನಿಂದ ವೃಷಭ ರಾಶಿಯ ಪೋಷಕರಲ್ಲಿ ಆತಂಕ
ಮೇಷ(Aries): ಪೋಷಕರ ಆರೋಗ್ಯ ಸಮಸ್ಯೆಗಳು ಮನಸ್ಸನ್ನು ಕದಡಬಹುದು. ಚಿಕಿತ್ಸೆಗಾಗಿ ಅಪಾರ ಧನವ್ಯಯವಾಗಬಹುದು. ನಿಮ್ಮ ಆರೋಗ್ಯದ ಕಡೆಯೂ ಗಮನ ಹರಿಸಿ. ಉದ್ಯೋಗದಲ್ಲಿ ಏರುಪೇರಿಲ್ಲ. ಕೋರ್ಟ್ ವಿಚಾರಗಳು ವಿಳಂಬವಾಗಲಿವೆ. ಕೃಷ್ಣನಿಗೆ ತುಳಸಿ ಅರ್ಪಿಸಿ.
ವೃಷಭ(Taurus): ಮಕ್ಕಳು ಮಾಡಿಕೊಳ್ಳುವ ಎಡವಟ್ಟುಗಳು ಮನಸ್ಸಿಗೆ ಆಘಾತ ಕೊಡಬಹುದು. ಮಕ್ಕಳನ್ನು ಗದರದೆ ಪ್ರೀತಿಯಿಂದ ಅವರ ಮನಸ್ಸಿನ ಮಾತನ್ನು ಕೇಳಿಸಿಕೊಳ್ಳಿ. ಅಗತ್ಯವಿರುವ ಸಹಾಯ ನೀಡಿ. ಕೌನ್ಸೆಲಿಂಗ್ ಸಹಾಯ ಪಡೆದುಕೊಳ್ಳಬಹುದು. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ.
undefined
ಮಿಥುನ(Gemini): ಉದ್ಯೋಗದಲ್ಲಿ ಮನಸ್ಸಿಗೆ ಕಿರಿಕಿರಿಯಾಗುವಂಥ ಮಾತುಗಳನ್ನು ಕೇಳಬೇಕಾಗಿ ಬರಬಹುದು. ಚಟಗಳಿಂದಾಗಿ ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಈ ಚಟಗಳು ವೈಯಕ್ತಿಕ ಬದುಕನ್ನೂ ಹಾಳು ಮಾಡುತ್ತಿವೆ. ಮೊದಲು ಅದರಿಂದ ಹೊರ ಬರಲು ಪ್ರಯತ್ನಿಸಿ. ವಿಷ್ಣು ಸಹಸ್ರನಾಮ ಪಠಣ ಮಾಡಿ.
ಕಟಕ(Cancer): ಯಾವ ಉದ್ದೇಶದ ಮಾತುಕತೆಯಲ್ಲಿ ತೊಡಗಿದ್ದೀರೋ ಅದು ಮುಂದಿನ ಹಂತಕ್ಕೆ ತಲುಪುತ್ತದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಇರಲಿದೆ. ಮನೆಯಲ್ಲಿ ಮುನಿಸು, ಜಗಳ ಹೆಚ್ಚಿ ಮನಸ್ಸಿನ ಶಾಂತಿ ಕಸಿಯಬಹುದು. ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ನಂಬಿಕೆ ಬರುವಂತೆ ನಡೆದುಕೊಳ್ಳಿ. ರಾಮ ಧ್ಯಾನ ಮಾಡಿ.
Couple Bedroom : ಸುಖ ದಾಂಪತ್ಯ, ಆರ್ಥಿಕ ವೃದ್ಧಿ ಬಯಸುವವರು ಬೆಡ್ ರೂಮ್ನಿಂದ ಈ ವಸ್ತು ಹೊರ ಹಾಕಿ
ಸಿಂಹ(Leo): ಇಂದು ನಿಮ್ಮ ಭವಿಷ್ಯವನ್ನು ನಿರ್ಧರಿಸುವಂಥ ದಿನವಾಗಲಿದೆ. ನೀವು ತೆಗೆದುಕೊಳ್ಳುವ ಮಹತ್ತರ ನಿರ್ಧಾರ ಮುಂದಿನ ಬದುಕಿನ ಗತಿ ಬದಲಿಸಲಿದೆ. ಅದು ಹೇಗಿರಲಿದೆ ಎಂಬುದು ನಿಮ್ಮ ನಿರ್ಧಾರವನ್ನು ಅವಲಂಬಿಸಿರುತ್ತದೆ. ಚೆನ್ನಾಗಿ ಯೋಚಿಸಿ ಪರಿಶೀಲಿಸಿ. ಗುರು ರಾಯರ ಮಠ ಸಮೀಪದಲ್ಲಿದ್ದರೆ ಭೇಟಿ ನೀಡಿ.
ಕನ್ಯಾ(Virgo): ನಿಮ್ಮ ಆಸೆಗಳು ದುರಾಸೆಯಾಗಿ ಬದಲಾಗುವ ಮುಂಚೆ ಒಂದಿಷ್ಟು ಮಿತಿಗಳನ್ನು ಹಾಕಿಕೊಳ್ಳಿ. ಹಳೆಯ ಹರಕೆಗಳನ್ನು ಮುಂದೆ ಹಾಕುತ್ತಾ ಹೋಗುವುದರಿಂದ ಸಮಸ್ಯೆಗಳಾಗಬಹುದು. ಮೊದಲು ಅವನ್ನು ಈಡೇರಿಸಿ. ಮಕ್ಕಳ ಪ್ರಗತಿ ನಿಧಾನಗತಿಯಲ್ಲಿದೆ. ಚಿಂತಿಸುವ ಅಗತ್ಯವಿಲ್ಲ. ಹಸುವಿಗೆ ಆಹಾರ ನೀಡಿ.
ತುಲಾ(Libra): ಪ್ರೀತಿ ಪ್ರೇಮ ವ್ಯವಹಾರಗಳಲ್ಲಿ ಜಗಳ, ತೊಡಕು ಹೆಚ್ಚಲಿವೆ. ದಂಪತಿಯ ಮಧ್ಯೆ ಬಿರುಕು ಮೂಡಬಹುದು. ಈ ಸಂದರ್ಭದಲ್ಲಿ ಸಮಾಧಾನವಾಗಿ ಮಾತನಾಡುವುದಕ್ಕಿಂತ ಬೇರೆ ಅಸ್ತ್ರಗಳಿಲ್ಲ. ಹಣದ ವಿಚಾರಕ್ಕೆ ಕಿತ್ತಾಟಕ್ಕೆ ಹೋಗಬೇಡಿ. ಶೇರು ವ್ಯವಹಾರಗಳಲ್ಲಿ ನಷ್ಟ. ಹೆತ್ತವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ.
Name Astrology : ಈ 5 ಅಕ್ಷರದ ಹುಡುಗಿಯರು ಶೀಘ್ರದಲ್ಲೇ ಹುಡುಗರ ಹೃದಯ ಗೆಲ್ಲುತ್ತಾರೆ !
ವೃಶ್ಚಿಕ(Scorpio): ಚರ್ಮ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುವುವು. ಕಫ, ಕೆಮ್ಮು ಆರೋಗ್ಯ ಸಮಸ್ಯೆಗಳು ಕಾಡಬಹುದು. ಯಾವುದೂ ಕೈಗೂಡುತ್ತಿಲ್ಲವೆಂಬ ಯೋಚನೆ ಕಂಗೆಡಿಸಬಹುದು. ಹೀಗಾಗುತ್ತಿರುವುದರಲ್ಲಿ ನಿಮ್ಮ ನಿರೀಕ್ಷೆಗಳೇ ಹೆಚ್ಚಿರಬಹುದು. ಆ ಬಗ್ಗೆ ಗಮನ ಹರಿಸಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ಜನ ನಿಮ್ಮ ಬಗ್ಗೆ ಸಾವಿರ ಮಾತನಾಡಬಹುದು. ಅವರಿಗೆ ನೀವು ಏನೆಲ್ಲ ಅನುಭವಿಸಿದ್ದೀರಿ ಎಂಬ ಕಲ್ಪನೆಯೂ ಇರುವುದಿಲ್ಲ. ಯಾವುದಕ್ಕೂ ಸೊಪ್ಪು ಹಾಕದೆ, ಯಾರ ಮಾತಿಗೆ ಪ್ರಾಮುಖ್ಯತೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಬಗ್ಗೆ ಜಾಗ್ರತೆ ವಹಿಸಿ. ವಿಷ್ಣುವಿನ ದೇವಾಲಯಕ್ಕೆ ಭೇಟಿ ನೀಡಿ.
ಮಕರ(Capricorn): ನಿಮ್ಮ ಒಳ್ಳೆಯ ಗುಣ ಜನಮನ್ನಣೆ ಗಳಿಸಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಳ. ಹಣದ ವ್ಯವಹಾರ ಸರಿಯಾಗಿರುವಂತೆ ನೋಡಿಕೊಳ್ಳಿ. ದೂರ ಪ್ರಯಾಣದಿಂದ ಕೈಗೊಂಡ ಉದ್ದೇಶಗಳು ಈಡೇರುವುವು. ಆರೋಗ್ಯ ಸಾಥ್ ನೀಡಲಿದೆ. ರಾಘವೇಂದ್ರ ಸ್ವಾಮಿಗೆ ಪ್ರಾರ್ಥನೆ ಮಾಡಿ.
ಕುಂಭ(Aquarius): ಎಲ್ಲರ ಬಗ್ಗೆ ಯೋಚಿಸುವ ನೀವು, ನಿಮ್ಮ ಆರೋಗ್ಯ ಹಾಗೂ ಗಳಿಕೆ ಕಡೆ ಸ್ವಲ್ಪ ಗಮನ ಹೆಚ್ಚಿಸುವುದೊಳಿತು. ಉದ್ಯೋಗದಲ್ಲಿ ಸಮಯ ಸಾಲದೆ ಒದ್ದಾಡುವಿರಿ. ಶುಭ ಕಾರ್ಯ ಸಂಬಂಧಿ ಕೆಲಸಕ್ಕಾಗಿ ಓಡಾಡುವಿರಿ. ಮಕ್ಕಳಿಂದ ಹೆಚ್ಚುವ ಸಂತಸ. ಗುರು ರಾಯರ ಪ್ರಾರ್ಥನೆ ಮಾಡಿ.
ಮೀನ(Pisces): ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ ಎಂದರಿತು ನಿಮ್ಮ ಕೆಲಸ ನೀವು ಮುಂದುವರಿಸಿ. ಮಕ್ಕಳಿಗೆ ನಿಮ್ಮಿಂದ ನೆರವು ಸಿಗುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ನೆಂಟರಿಷ್ಟರ ಭೇಟಿಯಾಗಿ ಸಂತಸ ಹೆಚ್ಚಲಿದೆ. ಭಗವದ್ಗೀತೆ ಶ್ರವಣ ಮಾಡಿ.