Daily Horoscope: ವೃಷಭಕ್ಕೆ ಸಾಲದ ಹೊರೆ, ಉಳಿದ ರಾಶಿಗಳ ಫಲವೇನಿದೆ?

Published : Dec 21, 2021, 05:00 AM IST
Daily Horoscope: ವೃಷಭಕ್ಕೆ ಸಾಲದ ಹೊರೆ, ಉಳಿದ ರಾಶಿಗಳ ಫಲವೇನಿದೆ?

ಸಾರಾಂಶ

21 ಡಿಸೆಂಬರ್ 2021, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮೇಷಕ್ಕೆ ಕೆಲಸ ವಿಳಂಬ, ಮೀನಕ್ಕೆ ಅನಾರೋಗ್ಯ

ಮೇಷ(Aries): ಅನಿರೀಕ್ಷಿತ ಕಾರಣಕ್ಕೆ ಕೆಲಸಕ್ಕೆ ವಿಳಂಬಗಳೆದುರಾಗಬಹುದು. ನೆರೆಹೊರೆಯವರ ಜೊತೆ ಜಗಳವಾಡುವ ಸಂಭವವಿದೆ. ಆದಷ್ಟು ಸೌಮ್ಯವಾಗಿ ಮಾತಾನಾಡುವುದರಿಂದ ಸಮಸ್ಯೆ ಬಗೆ ಹರಿವುದು. ಸಾಕುಪ್ರಾಣಿಗಳಿಂದ ಮನಸ್ಸಿಗೆ ಸಮಾಧಾನ. ಗಾಯತ್ರಿ ಜಪ ಮಾಡಿ.

ವೃಷಭ(Taurus): ಬೇಕೋ ಬೇಡವೋ ಯೋಚಿಸದೆ ಕೊಂಡುಕೊಂಡ ವಸ್ತುಗಳಿಂದ ಎದುರಾದ ಸಾಲದ ಹೊರೆ ಕಂಗೆಡಿಸುವುದು. ಹಣ ಕೈಲಿ ನಿಲ್ಲದೆ ಆತಂಕ ಕಾಡುವುದು. ಕಚೇರಿಯಲ್ಲಿ ಸಹೋದ್ಯೋಗಿಗಳ ಕಿರಿಕಿರಿ. ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಮನೆದೇವರ ಪ್ರಾರ್ಥನೆ ಮಾಡಿ. 

ಮಿಥುನ(Gemini): ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಯಾರದೋ ಬೆನ್ನ ಹಿಂದೆ ಮಾತಾಡಬೇಡಿ. ಜಗಳ ತಂದು ಹಾಕುವವರು ಸಾಕಷ್ಟು ಮಂದಿ ಇರುತ್ತಾರೆ. ಸಂಗಾತಿಯೊಂದಿಗೆ ಕೂಲಂಕುಶವಾಗಿ ಸಮಸ್ಯೆಗಳನ್ನು  ಚರ್ಚಿಸಿ. ಲಕ್ಷ್ಮೀ ಪ್ರಾರ್ಥನೆ ಮಾಡಿ. 

ಕಟಕ(Cancer): ಅವಿವಾಹಿತರಿಗೆ ಸಂಬಂಧ ಅರಸಿ ಬರುವುದು. ಉದ್ಯೋಗದಲ್ಲಿ ಲಾಭವೂ ಇಲ್ಲ, ನಷ್ಟವೂ ಇಲ್ಲ- ಏರುಪೇರಿಲ್ಲದ ದಿನ. ವ್ಯಾಪಾರ ವಹಿವಾಟಿನಲ್ಲಿ ಕೊಂಚ ಲಾಭ. ವಿದ್ಯಾರ್ಥಿಗಳು ಹಿರಿಯರ ಸಹಾಯದಿಂದ ಓದಿನಲ್ಲಿ ಮುನ್ನಡೆ ಸಾಧಿಸುವರು. ಗಣಪತಿಗೆ ದೂರ್ವೆ ಸಲ್ಲಿಸಿ.

Weekly Horoscope: ಈ ವಾರ ನಿಮ್ಮ ಜಾತಕ ಫಲವೇನಿದೆ ನೋಡಿ..

ಸಿಂಹ(Leo): ಮಾಡಿದ ಹಳೆಯ ತಪ್ಪಿಗೆ ಕೊರಗುತ್ತಲೇ ಇರುವುದನ್ನು ಬಿಡಿ. ಹಾಗೆ ಬಿಟ್ಟರಷ್ಟೆ ನೆಮ್ಮದಿ. ವಾಹನಗಳಲ್ಲಿ ಹೋಗುವಾಗ ಹೆಚ್ಚಿನ ಜಾಗರೂಕತೆ ಅಗತ್ಯ. ಸ್ತ್ರೀಯರಿಗೆ ಶುಭದಿನ. ಆರೋಗ್ಯ ಸ್ಥಿರವಾಗಿರುವುದು. ಮಕ್ಕಳ ಮೇಲೆ ವಿನಾ ಕಾರಣ ರೇಗದಿರಿ. ತಾಯಿಯ ಆಶೀರ್ವಾದ ಪಡೆಯಿರಿ. 

ಕನ್ಯಾ(Virgo): ವಾತಾವರಣ ಸಂಬಂಧಿ ಕಾಯಿಲೆಗಳು ಕಂಡು ಬಂದಾವು. ಹೃದಯ ಸಮಸ್ಯೆ ಇರುವವರು ಹೆಚ್ಚು ಜಾಗರೂಕತೆ ವಹಿಸಬೇಕು. ನಿರುದ್ಯೋಗಿಗಳಿಗೆ ಅವಕಾಶ ಬರಬಹುದು. ಪರಿಚಿತರಿಂದ ಉದ್ಯಮಕ್ಕೆ ಸಹಾಯ ದೊರೆಯುವುದು. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ. 

ತುಲಾ(Libra): ಎಷ್ಟೇ ಹತ್ತಿರದವರಾದರೂ ಸಾಲ ನೀಡಬೇಡಿ. ಮುಂದೆ ಅದೇ ಕಾರಣಕ್ಕೆ ವೈಮನಸ್ಸುಗಳು ಸೃಷ್ಟಿಯಾಗುತ್ತವೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಕ್ರೀಡಾಪಟುಗಳಿಗೆ ಹೆಚ್ಚುವ ಉತ್ಸಾಹ. ಪ್ರವಾಸ ಹೋಗುವ ಸಾಧ್ಯತೆ. ಲಲಿತಾ ಪರಮೇಶ್ವರಿಯ ಸ್ಮರಣೆ ಮಾಡಿ. 

Success Mantras For Children: ಮಕ್ಕಳ ಯಶಸ್ಸಿಗೆ ಹೀಗ್ ಮಾಡಿ ಅನ್ನುತ್ತೆ ಜ್ಯೋತಿಷ್ಯ

ವೃಶ್ಚಿಕ(Scorpio): ಇನ್ನೊಬ್ಬರ ವಿಷಯದಲ್ಲಿ ಅನಗತ್ಯ ಮೂಗು ತೂರಿಸಿ ಕಷ್ಟಕ್ಕೆ ಸಿಲುಕುವಿರಿ. ನಿಮ್ಮ ಪಾಡಿಗೆ ನೀವಿರುವುದನ್ನು ರೂಢಿ ಮಾಡಿಕೊಳ್ಳಿ. ಮತ್ತೊಬ್ಬರ ಗುಟ್ಟುಗಳನ್ನು ಬಿಟ್ಟುಕೊಡಬೇಡಿ. ಮನೆಗೆಲಸದಿಂದ ದೇಹಾಯಾಸ. ಅತಿಥಿಗಳ ಆಗಮನ ಸಂತಸ ತರದು. ಲಲಿತ ಸಹಸ್ರನಾಮ ಪಠಣ ಮಾಡಿ. 

ಧನುಸ್ಸು(Sagittarius): ಹತ್ತಿರದ ಸಂಬಂಧಿಗಳ ಆಗಮನ ಎಷ್ಟು ಸಂತೋಷ ತರುವುದೋ, ಅಷ್ಟೇ ಕೆಲಸಗಳು ಹೆಚ್ಚಿ ದಣಿವಾಗುವುದು. ಬಿಡುವಿಲ್ಲದ ಕೆಲಸ. ಮಕ್ಕಳಿಗೆ ಸಂತಸ. ಆಸ್ಪತ್ರೆ ಭೇಟಿಯಿಂದ ಸಮಾಧಾನ. ವ್ಯಾಪಾರಗಳಲ್ಲಿ ಸಾಮಾನ್ಯ ಲಾಭ. ಆಂಜನೇಯನಿಗೆ ಕೆಂಪು ಹೂವು ಸಮರ್ಪಿಸಿ. 

ಮಕರ(Capricorn): ಸಂಗಾತಿಯ ಅನಾರೋಗ್ಯ ಕಾರಣಕ್ಕೆ ಪ್ರಯಾಣ. ನೆಂಟರಿಷ್ಟರ ಭೇಟಿಯಿಂದ ನೆಮ್ಮದಿ. ಷೇರು ವ್ಯವಹಾರಗಳಲ್ಲಿ ಲಾಭ. ಆಸ್ತಿ ವಿಚಾರ ಕೋರ್ಟ್‌ನಲ್ಲಿದ್ದರೆ ತೀರ್ಪು ನಿಮ್ಮ ಪರವಾಗಿ ಆಗುವುದು. ನಿಮ್ಮ ಪ್ರಾಮಾಣಿಕತೆಗೆ ಬೆಲೆ ದೊರೆಯುವುದು. ಹಸುವಿಗೆ ಗೋಧಿ ಹಿಟ್ಟು ತಿನ್ನಿಸಿ.

ಕುಂಭ(Aquarius): ಮಕ್ಕಳ ಪ್ರಗತಿಯಿಂದ ಸಂತಸ. ಸಂಗಾತಿಯ ಸಹಕಾರದಿಂದ ಕೆಲಸಗಳು ಸುಗಮ. ಉದ್ಯೋಗದಲ್ಲಿ ಒತ್ತಡದ ದಿನ. ವಾಹನ ಯೋಗವಿದೆ. ಹೊಸ ವಸ್ತುಗಳನ್ನು ಕೊಳ್ಳುವಿರಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಬಹುದು. ಗಣಪತಿಗೆ ಕಡಲೆ ಸಮರ್ಪಿಸಿ. 

ಮೀನ(Pisces): ಆರೋಗ್ಯ ಸಮಸ್ಯೆಗಳು ಬಾಧಿಸುವುವು. ವೈದ್ಯರ ಭೇಟಿ ಮಾಡಿ. ಎಲ್ಲರ ನೆರವು ಸಿಕ್ಕಿ ಸಮಸ್ಯೆಗಳು ದೂರಾಗುವುವು. ವ್ಯಾಪಾರದಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಏಕಾಗ್ರತೆ. ಅವಿವಾಹಿತರಿಗೆ ಕಂಕಣಬಲವಿದೆ. ಪ್ರಯಾಣ ಯೋಗವಿದೆ. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ. 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ