17 ಡಿಸೆಂಬರ್ 2021, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷ ರಾಶಿಯವರು ಸಾಲ ತೀರಿಸಿ ಸಮಾಧಾನ ಹೊಂದಿ
ಮೇಷ(Aries): ಹಿಂದೆ ಪಡೆದ ಸಾಲಗಳು ಕಂಗೆಡಿಸಲಿವೆ. ಇಲ್ಲದಿದ್ದಲ್ಲಿ ಷೇರು ವ್ಯವಹಾರದಲ್ಲಿ ಧನನಷ್ಟವಾಗುವುದು. ವ್ಯಾಪಾರದಲ್ಲಿ ಮಿಶ್ರಫಲ. ಪ್ರವಾಸಗಳಿಂದ ಸಂತಸ. ಕುಟುಂಬ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಿರಿ. ಮಕ್ಕಳ ಕಲಿಕೆಯಲ್ಲಿ ಪ್ರಗತಿ ಕಂಡುಬರುವುದು. ಮಹಾಲಕ್ಷ್ಮೀ ಆರಾಧನೆ ಮಾಡಿ.
ವೃಷಭ(Taurus): ಮನೆಯು ಶುಭ ಕಾರ್ಯಕ್ಕೆ ಸಜ್ಜಾಗಲಿದೆ. ಹೋಮ ಹವನಗಳಿಂದ ಧನಾತ್ಮಕ ಶಕ್ತಿ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ಧನ ಲಾಭ. ಹಿರಿಯರ ಆಸ್ತಿ ಸಂಬಂಧಿ ಕೆಲಸಗಳು ಮುಂದೆ ಹೋಗುವುದು. ಲಕ್ಷ್ಮೀವೆಂಕಟೇಶ್ವರ ಸ್ಮರಣೆ ಮಾಡಿ.
ಮಿಥುನ(Gemini): ರೈತರಿಗೆ ಬೆಳೆದ ಬೆಳೆಗೆ ಆದಾಯ ಹೆಚ್ಚಿ ಸಂತಸ. ವಸ್ತ್ರ, ಒಡವೆ ವ್ಯಾಪಾರಗಳಲ್ಲಿ ಲಾಭ. ವಾಹನ ಖರೀದಿ ಮಾಡಬಹುದು. ಮನೆಗೆ ಹೊಸ ವಸ್ತುಗಳ ಆಗಮನದಿಂದಾಗಿ ಹೆಚ್ಚುವ ಸಂತಸ. ಮಕ್ಕಳ ಪ್ರತಿಭೆಗೆ ವೇದಿಕೆ ದೊರಕುವುದು. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.
ಕಟಕ(Cancer): ಕಷ್ಟ ಪಟ್ಟು ಕೆಲಸ ಮಾಡಿದರೆ ಖಂಡಿತಾ ಫಲ ದೊರಕುವುದು. ಯಾರದೋ ಅವಮಾನದ ಮಾತಿಗೆ ಕುಗ್ಗದಿರಿ. ನಿಮ್ಮ ಕೆಲಸವೇ ಅವರಿಗೆ ಪ್ರತ್ಯುತ್ತರವಾಗಲಿದೆ. ಹಣದ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆ ಇದೆ. ಮನೆಯಲ್ಲಿ ನೆಮ್ಮದಿ. ಶಾರದಾ ದೇವಿಯ ಸ್ಮರಣೆ ಮಾಡಿ.
Dhanurmasam rituals: ಇಂದಿನಿಂದ ಧನುರ್ಮಾಸ ಆರಂಭ, ಏನಿದರ ವೈಶಿಷ್ಟ್ಯತೆ?
undefined
ಸಿಂಹ(Leo): ಕೋರ್ಟ್ ಕೆಲಸಗಳಲ್ಲಿ ಮುನ್ನಡೆಯಿಂದ ಸಂತಸ. ಕೈಗೊಂಡ ವಿಶೇಷ ಕಾರ್ಯಗಳಲ್ಲಿ ಗೆಲುವಾಗಿ ಆತ್ಮವಿಶ್ವಾಸ ಹೆಚ್ಚಲಿದೆ. ಪ್ರೀತಿಪಾತ್ರರ ಇಷ್ಟಾರ್ಥ ನೆರವೇರಿಸುವಿರಿ. ಪ್ರೇಮ ವ್ಯವಹಾರಗಳಲ್ಲಿ ಸಂತಸ. ಆಸ್ತಿ ಖರೀದಿ ಸಾಧ್ಯತೆ. ಶಿವ ಶಕ್ತಿಯರ ಪೂಜೆ ಮಾಡಿ.
ಕನ್ಯಾ(Virgo): ಕೆಲಸದ ಒತ್ತಡದಿಂದ ದೇಹಾಯಾಸವಾಗಲಿದೆ. ಆರೋಗ್ಯ ಸಂಬಂಧಿ ಸಣ್ಣಪುಟ್ಟ ಕಿರಿಕಿರಿಗಳು ಬಾಧಿಸಲಿವೆ. ಕುಟುಂಬ ಜೀವನದಲ್ಲಿ ಅನುಕೂಲಕರ ಪರಿಸ್ಥಿತಿ ಇದ್ದು, ಮಕ್ಕಳಿಂದ ಸಂತಸ ಹೆಚ್ಚಲಿದೆ. ಹೊಸ ವ್ಯವಹಾರಕ್ಕೆ ಇಂದು ಕೈ ಹಾಕದಿರುವುದೇ ಉತ್ತಮ. ರಾಮಧ್ಯಾನ ಮಾಡಿ.
ತುಲಾ(Libra): ಇಂದು ಮನಸ್ಸು ಹೆಚ್ಚು ತಾಜಾತಾನದಿಂದಲೂ, ಚೈತನ್ಯದಿಂದಲೂ ಕೂಡಿರುವುದು. ಇಷ್ಟದ ವ್ಯಕ್ತಿಗಳೊಂದಿಗೆ ಪ್ರವಾಸ ಹೋಗುವ ಸಾಧ್ಯತೆ. ದೇವತಾ ಕಾರ್ಯಗಳಲ್ಲಿ ಭಾಗಿ. ಹೊಸ ವಸ್ತುಗಳ ಖರೀದಿ. ಉದ್ಯೋಗದಲ್ಲಿ ಪ್ರಶಂಸೆ. ಅಮ್ಮನವರಿಗೆ ಕುಂಕುಮ ಏರಿಸಿ.
UNESCO accords Durga Puja: ಯುನೆಸ್ಕೋ ಪಾರಂಪರಿಕ ಸ್ಥಾನಮಾನ ಪಡೆದ ಬಂಗಾಳದ ದುರ್ಗಾಪೂಜೆ, ದೇಶದ ಹೆಮ್ಮೆ ಎಂದ ಮೋದಿ
ವೃಶ್ಚಿಕ(Scorpio): ಆಸೆಗೆ ವಸ್ತುಗಳನ್ನು ಖರೀದಿಸಿ ನಂತರ ಧನನಷ್ಟ ಎಂದು ಕೊರಗುವಿರಿ. ತಿರುಗಾಟ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ನಿಲ್ಲದ ಏಕಾಗ್ರತೆ. ವಿದ್ಯಾರ್ಥಿಗಳಿಗೂ ಚಂಚಲ ಮನಸ್ಥಿತಿ, ದೇಹಾಲಸ್ಯ. ಅರೋಗ್ಯ ಸಂಬಂಧಿ ಸಣ್ಣಪುಟ್ಟ ಸಮಸ್ಯೆಗಳು ಕಾಡಬಹುದು. ಧನ್ವಂತರಿ ಶ್ಲೋಕ ಹೇಳಿಕೊಳ್ಳಿ.
ಧನುಸ್ಸು(Sagittarius): ಉದ್ಯೋಗ ಸ್ಥಳದಲ್ಲಿ ಮನ್ನಣೆ ದೊರೆತು ಉಲ್ಲಾಸಿತರಾಗುವಿರಿ. ಮುಂದಿನ ದಿನಗಳ ಬಗ್ಗೆ ಕೆಲ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಬರುವುವು. ಕಾಡುತ್ತಿದ್ದ ದೊಡ್ಡ ಸಮಸ್ಯೆ ಪರಿಹಾರ ಕಾಣುವುದು. ತಂದೆತಾಯಿಯ ಆಶೀರ್ವಾದ ಪಡೆಯಿರಿ.
ಮಕರ(Capricorn): ಬಹುಕಾಲದಿಂದ ಬಾಧಿಸುತ್ತಿರುವ ಆರೋಗ್ಯ ತೊಡಕುಗಳಲ್ಲಿ ಕೊಂಚ ಸುಧಾರಣೆ. ವ್ಯಾಪಾರದಲ್ಲಿ ಲಾಭ ಹೆಚ್ಚುವುದು. ಸಂಗಾತಿಯ ಸಹಕಾರದಿಂದ ಕೆಲಸಗಳು ಸುಗಮವಾಗಿ ಸಾಗುವುವು. ನೆಂಟರಿಷ್ಟರ ಆಗಮನ, ಭಕ್ಷ್ಯ ಭೋಜನ ಸವಿಯುವ ಅವಕಾಶ. ಅಮ್ಮನವರನ್ನು ಪ್ರಾರ್ಥಿಸಿ.
ಕುಂಭ(Aquarius): ಸೌಂದರ್ಯವರ್ಧಕಗಳಿಗಾಗಿ ಖರ್ಚು ಹೆಚ್ಚು. ಮಕ್ಕಳ ಸಲುವಾಗಿ ಹೆಚ್ಚಿನ ಸಮಯ ಕಳೆಯುವಿರಿ. ಉದ್ಯೋಗರಂಗದಲ್ಲಿ ಪ್ರಗತಿ. ವ್ಯಾಪಾರ ವಹಿವಾಟಿನಲ್ಲಿ ಮಿಶ್ರಫಲ. ಕುಟುಂಬದೊಳಗಿನ ಮುನಿಸು ತಾತ್ಕಾಲಿಕವಾಗಿ ಶಮನವಾಗುವುದು. ಗುರು ಧ್ಯಾನ ಮಾಡಿ.
ಮೀನ(Pisces): ಆದಷ್ಟು ಸಾತ್ವಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ. ನೀರು, ಬೆಂಕಿಯ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಗೃಹ ಕೆಲಸಗಳಿಗೆ ಪ್ರಶಂಸೆ. ಧಾರ್ಮಿಕ, ಶುಭ ಸಮಾರಂಭಗಳಿಗೆ ಭೇಟಿಯಿಂದ ಸಂತಸ. ಕುಲದೇವರ ಸ್ಮರಣೆ ಮಾಡಿ.