Daily Horoscope: ಈ ರಾಶಿಯವರು ಕೈಗೊಂಡ ಕಾರ್ಯಗಳಿಗೆ ಕೋಪದಿಂದ ವಿಘ್ನ

Published : Dec 16, 2021, 05:10 AM IST
Daily Horoscope: ಈ ರಾಶಿಯವರು ಕೈಗೊಂಡ ಕಾರ್ಯಗಳಿಗೆ ಕೋಪದಿಂದ ವಿಘ್ನ

ಸಾರಾಂಶ

16 ಡಿಸೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಕರ, ಕುಂಭ ರಾಶಿಯವರಿಗೆ ಕಾಡಲಿದೆ ಕ್ಲೇಶ, ಚಿಂತೆ

ಮೇಷ(Aries): ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ನೀವು ಪರರಿಗೆ ಮಾಡಿರುವ ವಂಚನೆ ಬಯಲಿಗೆ ಬರುವ ಸಾಧ್ಯತೆ. ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳದಿದ್ದಲ್ಲಿ ಮತ್ತಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾದೀತು. ರಾಯರ ಸ್ಮರಣೆ ಮಾಡಿ. 

ವೃಷಭ(Taurus): ಹೊಸ ಹೂಡಿಕೆ ಸಧ್ಯ ಫಲಕಾರಿಯಾಗದು. ದುಡುಕು ವರ್ತನೆಯಿಂದ ಧನನಷ್ಟ. ಸ್ಥಿರಾಸ್ತಿ ವಿಚಾರದಲ್ಲಿ ವಂಚನೆ ಸಾಧ್ಯತೆ. ಕುಟುಂಬ ಜೀವನದಲ್ಲಿ ಸುಖ, ಶಾಂತಿ ಇರುತ್ತದೆ. ಸಂಗಾತಿಯ ಸಲಹೆ ಪಡೆಯದೆ ಯಾವೊಂದು ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಮಿಥುನ(Gemini): ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಕಾರ್ಯಗಳಲ್ಲಿ ತೊಡಗುವಿರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ. ಸ್ನೇಹಿತರು, ನೆಂಟರಿಷ್ಟರ ಭೇಟಿಯಿಂದ ಮನೋಲ್ಲಾಸ. ಗುರು ರಾಘವೇಂದ್ರರ ಭಜನೆ ಮಾಡಿ. 

ಕಟಕ(Cancer): ಕೆಲಸ ಕಾರ್ಯಗಳಲ್ಲಿ ಉದಾಸೀನ ಧೋರಣೆ ಕಂಡುಬರುವುದು. ಸ್ನೇಹಿತರೊಂದಿಗೆ ಹೊರಗೆ ಸುತ್ತಾಡುವ ಅವಕಾಶವಿದೆ. ಕೋಪವನ್ನು ನಿಯಂತ್ರಿಸಿಕೊಂಡರಷ್ಟೇ ಮನಸ್ಸಿಗೆ ನೆಮ್ಮದಿ. ಆರೋಗ್ಯ ಸಮಸ್ಯೆಗಳು ಕಿರಿಕಿರಿ ತಂದಾವು. ಗಣಪತಿಗೆ ಕಡಲೆ ಅರ್ಪಿಸಿ. 

Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?

ಸಿಂಹ(Leo): ತೆಗೆದುಕೊಂಡ ಸಣ್ಣಪುಟ್ಟ ಸಾಲವನ್ನು ಇಂದೇ ತೀರಿಸಿ. ನಂತರವಷ್ಟೇ ಕಾರ್ಯಗಳಲ್ಲಿ ಧನಲಾಭ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು. ಹೊಸತನ್ನು ಕಲಿಯುವ ಅವಕಾಶದಿಂದ ನವಚೈತನ್ಯ. ರಾಘವೇಂದ್ರ ಸ್ವಾಮಿಯ ಸ್ಮರಣೆ ಮಾಡಿ.

ಕನ್ಯಾ(Virgo): ಒಳ್ಳೆಯ ಸುದ್ದಿ ಕೇಳುವುದರಿಂದ ದಿನ ಪ್ರಾರಂಭವಾಗುವುದು. ಹೀಗಾಗಿ ದಿನವಿಡೀ ಖುಷಿಯಾಗಿರುವಿರಿ. ಪಾಲುದಾರಿಕೆ ಕೆಲಸಗಳಲ್ಲಿ ಯಶಸ್ಸು. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು  ಮಾರುಕಟ್ಟೆ ವ್ಯವಹಾರದಲ್ಲಿ ಲಾಭದಾಯಕ ಆದಾಯವಿದ್ದರೂ ದುಡುಕದೇ ಮುಂದುವರಿಯಿರಿ. ವಿಷ್ಣು ಸಹಸ್ರನಾಮ ಪಠಿಸಿ. 

ತುಲಾ(Libra): ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಶುಭಸುದ್ದಿ ಇಂದು ಕೇಳಿಬರಲಿದೆ. ಗುರುಹಿರಿಯರಿಗೆ ಗೌರವ ತೋರಿ ಆಶೀರ್ವಾದ ಬಲ ಪಡೆದುಕೊಂಡರೆ ನಿರುದ್ಯೋಗಿಗಳಿಗೆ ಅಡ್ಡಿ ನಿವಾರಣೆಯಾಗಿ ಅವಕಾಶ ಒದಗುವುದು. ಅಮ್ಮನವರಿಗೆ ಅರ್ಚನೆ ಮಾಡಿಸಿ.

Morning Routine: ಬೆಳಗ್ಗೆದ್ದ ಕೂಡ್ಲೇ ಇದ್ಯಾವ್ದನ್ನೂ ನೋಡ್ಬೇಡಿ, ದುರದೃಷ್ಟ ಬೆನ್ನು ಹತ್ತಬಹುದು

ವೃಶ್ಚಿಕ(Scorpio): ಇಂದು ನಿಮಗೆ ಅದೃಷ್ಟ ಬೆಂಬಲವಾಗಿ ನಿಲ್ಲಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ. ವಿವಾಹ ಕಾರ್ಯಕ್ಕೆ ಚಾಲನೆ. ಕಷ್ಟ ಪಟ್ಟರೆ ಅದೃಷ್ಟವೂ ಸಾಥ್ ಕೊಟ್ಟ ಕೈಗೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗುವುದು. ರಾಮಧ್ಯಾನ ಮಾಡಿ. 

ಧನುಸ್ಸು(Sagittarius): ಗಣ್ಯವ್ಯಕ್ತಿಗಳ ಭೇಟಿಯಿಂದ ಬಹಳ ದಿನದಿಂದ ಸ್ಥಗಿತಗೊಂಡಿದ್ದ ಕೆಲಸ ಮುಂದುವರೆಯುವುದು. ಹೊಸ ಸ್ನೇಹಿತರು ಸಿಕ್ಕು ಕೆಲಸ ಕಾರ್ಯಗಳು ಸುಗಮ. ದೂರ ಸಂಚಾರದಿಂದ ಕಾರ್ಯಾನುಕೂಲ. ಮಕ್ಕಳಿಂದ ಶುಭಸುದ್ದಿ. ಶಾರದಾಂಬೆಯ ಸ್ಮರಣೆ ಮಾಡಿ. 

ಮಕರ(Capricorn): ಕಚೇರಿಯಲ್ಲಿ ಸಹೋದ್ಯೋಗಿಗಳೊಡನೆ ಜಗಳ ತಪ್ಪಿಸಿ, ಆದಷ್ಟು ಕೆಲಸದೆಡೆ ಗಮನ ವಹಿಸಿ. ಹಿರಿಯರ ಮಾತಿನಿಂದ ಮನಸ್ಸಿಗೆ ಕ್ಲೇಶ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಹಾಗೂ ಕುಟುಂಬದವರ ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಿ. ರಾಮ ಭಜನೆಯಿಂದ ಒಳಿತಾಗುವುದು. 

ಕುಂಭ(Aquarius): ನಿಮ್ಮಿಂದ ಹೋಗುವುದೇ ಇಲ್ಲವೇನೋ ಎಂಬಂಥ ಕಷ್ಟಗಳ ಬಗ್ಗೆ ಚಿಂತೆಯಲ್ಲಿ ಮುಳುಗುವಿರಿ. ವೃಥಾ ಚಿಂತಿಸುವುದರಿಂದ ಫಲವಿಲ್ಲ. ಭವಿಷ್ಯದಲ್ಲಿ ಎಲ್ಲ ಒಳಿತಾಗುತ್ತದೆ. ಸಧ್ಯಕ್ಕೆ ಕೆಲಸ ಕಾರ್ಯಗಳ ಕಡೆ ಗಮನ ವಹಿಸಿ. ಸಂಗಾತಿಗೆ ಹೆಚ್ಚಿನ ಸಮಯ ಕೊಡಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಮೀನ(Pisces): ಹಣಕಾಸಿನ ಮುಗ್ಗಟ್ಟು ಬಾಧಿಸಲಿದೆ. ಹಣ ಎಲ್ಲೆಲ್ಲಿ ವ್ಯರ್ಥ ಪೋಲಾಗುತ್ತಿದೆ ಎಂಬ ಬಗ್ಗೆ ಅವಲೋಕನ ಅಗತ್ಯ. ದೊಡ್ಡದೊಂದು ಕನಸಿಗೆ ಕೈ ಹಾಕುವ ಮುನ್ನ ಚಿಕ್ಕ ಚಿಕ್ಕ ಮೆಟ್ಟಿಲುಗಳನ್ನು ಹತ್ತಿಯೇ ಮೇಲೆ ಹೋಗಬೇಕೆಂಬುದು ನೆನಪಿಡಿ. ತಾಯಿಯ ಕಾಲಿಗೆ ಮನಸ್ಕರಿಸಿ ದಿನ ಆರಂಭಿಸಿ.

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ