Daily Horoscope: ಈ ರಾಶಿವವರಿಗಿಂದು ತಪ್ಪಿ ಹೋದ ಸಂಬಂಧ ಮತ್ತೆ ಕೂಡುವ ಸಾಧ್ಯತೆ

By Suvarna NewsFirst Published Apr 17, 2022, 5:03 AM IST
Highlights

17 ಏಪ್ರಿಲ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾ ರಾಶಿಗೆ ಕಳುವು ಸಂಭವ, ಮಕರಕ್ಕೆ ಮಧುರ ದಾಂಪತ್ಯ

ಮೇಷ(Aries): ಕುಟುಂಬದಲ್ಲಿ ನಿಮ್ಮಿಂದಾಗಿ ಉತ್ತಮ ಕಾರ್ಯಗಳು ಜರುಗಲಿವೆ. ಬಹಳ ದಿನಗಳಿಂದ ಬರದಿದ್ದ ಸಾಲ ಕೈ ಸೇರಲಿದೆ. ಮನರಂಜನೆಗಾಗಿ ವ್ಯಯಿಸುವಿರಿ. ಮಾನಸಿಕ ಒತ್ತಡಗಳಿಂದ ಕೊಂಚ ಬಿಡುಗಡೆ ಸಿಕ್ಕಿ ಸಮಾಧಾನ ಸಿಗುವುದು. ಆದಿತ್ಯ ಹೃದಯ ಪಠಿಸಿ. 

ವೃಷಭ(Taurus): ಮಕ್ಕಳು ಮಾಡುವ ಒಳ್ಳೆಯ ಕೆಲಸ ನಿಮಗೆ ಸಂತೋಷ ತರಲಿದೆ. ಸ್ನೇಹಿತರು ಅಥವಾ ಕುಟುಂಬದೊಂದಿಗೆ ದೂರ ಪ್ರಯಾಣ ಮಾಡುವಿರಿ. ಆರೋಗ್ಯದ ಬಗ್ಗೆ ಎಚ್ಚರವಿರಲಿ.  ಹೊಸ ಉದ್ಯಮ ಆರಂಭಿಸಲು ಸಕಾಲ. ಸೂರ್ಯ ನಮಸ್ಕಾರ ಮಾಡಿ. 

Latest Videos

ಮಿಥುನ(Gemini): ಮಂಗಳ ಕಾರ್ಯಗಳಲ್ಲಿ ಭಾಗವಹಿಸುವಿರಿ. ನಿಮ್ಮ ಸಂಗಾತಿಯ ಆಲೋಚನೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಯೋಚಿಸದೇ ನಿರ್ಧಾರ ತೆಗೆದುಕೊಳ್ಳಬೇಡಿ. ವಿಷ್ಣು ಸಹಸ್ರನಾಮ ಹೇಳಿ. 

ಕಟಕ(Cancer): ಬಹಳ ಸಮಯದಿಂದ ತಪ್ಪಿ ಹೋಗಿದ್ದ ಸಂಬಂಧವೊಂದು ಮತ್ತೆ ಕೂಡಲಿದೆ. ವಾತದಿಂದ ದೇಹಾಯಾಸ. ನೆಂಟರಿಷ್ಟರ ಆಗಮನ, ಭಕ್ಷ್ಯ ಭೋಜನ ಸವಿಯುವ ಅವಕಾಶ. ವಿನಾ ಕಾರಣ ತಿರುಗಾಟ ಬೇಡ. ಮಕ್ಕಳ ಕಲಿಕೆಯಲ್ಲಿ ಪ್ರಗತಿ ಇರಲಿದೆ. ಸೂರ್ಯನಿಗೆ ಅರ್ಘ್ಯ ನೀಡಿ.

ಸಿಂಹ(Leo): ಮನೋರಂಜನೆಗಾಗಿ ಹೆಚ್ಚು ಧನ ವ್ಯಯವಾಗುವುದು. ಸ್ನೇಹಿತರ ಭೇಟಿಯಿಂದ ಉಲ್ಲಾಸ. ಹಿರಿಯರ ಆಸ್ತಿ ಸಂಬಂಧಿ ಕೆಲಸಗಳು ಮುಂದೆ ಹೋಗುವುದು. ಮುಂದಿನ ದಿನಗಳ ಬಗ್ಗೆ ಕೆಲ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಲಕ್ಷ್ಮೀ ವೆಂಕಟೇಶ್ವರ ಧ್ಯಾನ ಮಾಡಿ. 

ಕನ್ಯಾ(Virgo): ವ್ಯಾಪಾರ ಮತ್ತು ಹಣಕಾಸಿನ ದೃಷ್ಟಿಯಿಂದ ಮಿಶ್ರ ಫಲವಿದೆ. ಪ್ರೀತಿಯ ಸಂಬಂಧಗಳಲ್ಲಿ ಸೂಕ್ಷ್ಮವಾಗಿ ವರ್ತಿಸುವಿರಿ, ಚಿಂತನಶೀಲತೆಯಿಂದ ಮಾತನಾಡುವಿರಿ. ನಿಮ್ಮ ಕೆಲವು ಅಮೂಲ್ಯ ವಸ್ತುಗಳು ಕಳುವಾಗುವ ಸಾಧ್ಯತೆಯಿದೆ. ಎಚ್ಚರ ಇರಲಿ. ಆದಿತ್ಯ ಹೃದಯ ಪಠಣ ಮಾಡಿ.

ಹರಿಹರಪುರಕ್ಕೆ ಬರುವವರು ಜಾತಿ, ಪಕ್ಷವನ್ನು ಮಠದ ಹೊರಗೇ ಬಿಟ್ಟು ಬನ್ನಿ: ಶ್ರೀಗಳು

ತುಲಾ(Libra): ವ್ಯಾಪಾರದಲ್ಲಿ ಕಾಣುವ ಪ್ರಗತಿಯಿಂದಾಗಿ ಆತ್ಮವಿಶ್ವಾಸ ಹೆಚ್ಚಲಿದೆ. ಸಣ್ಣ ವಿಷಯಕ್ಕೆ ಅತಿಯಾಗಿ ಕೊರಗುವುದು ಬಿಟ್ಟರೆ ಮಾತ್ರ ನೆಮ್ಮದಿ ಸಾಧ್ಯ. ಮನೆಯಲ್ಲಿ ಮದುವೆ ಸಂಬಂಧ ಒತ್ತಡ ಹೆಚ್ಚಲಿದೆ. ಸಣ್ಣ ಪುಟ್ಟ ತಿರುಗಾಟ ಇರುವುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ವೃಶ್ಚಿಕ(Scorpio): ವ್ಯಾಪಾರಿಗಳು ಹಣಕಾಸಿನ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುವಾಗ ಪಾಲುದಾರರೊಂದಿಗೆ ಸಂಬಂಧ ಚೆನ್ನಾಗಿಟ್ಟುಕೊಳ್ಳಿ. ನಿಮ್ಮ ವೈವಾಹಿಕ ಜೀವನದಲ್ಲಿ ಅಪನಂಬಿಕೆಗಳು ದಂಪತಿಗಳ ನಡುವಿನ ಅಂತರವನ್ನು ಹೆಚ್ಚಿಸಬಹುದು. ಗೋ ಗ್ರಾಸ ನೀಡಿ. 

ಧನುಸ್ಸು(Sagittarius): ಸ್ನೇಹಿತರೊಂದಿಗೆ ಸಣ್ಣಪುಟ್ಟ ಜಗಳ, ಮನಸ್ತಾಪ ಉಂಟಾಗಬಹುದು. ಅತಿಯಾದ ಕೋಪ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕೋಪ ನಿಯಂತ್ರಿಸಲು ಪ್ರಯತ್ನಿಸಿ. ಆಸೆಗೆ ವಸ್ತುಗಳನ್ನು ಖರೀದಿಸಿ ನಂತರ ಧನನಷ್ಟ ಎಂದು ಕೊರಗುವಿರಿ. ಹಳದಿ ಧಾನ್ಯಗಳನ್ನು ದಾನ ಮಾಡಿ. 

Rahu Transit : ಈ ಮೂರು ರಾಶಿಯವರಿಗೆ ಬಂಪರ್ ಲಾಭ!

ಮಕರ(Capricorn): ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ. ಕುಟುಂಬ ಅಥವಾ ಪ್ರೀತಿ ಪಾತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಆರ್ಥಿಕವಾಗಿ ಸಾಮಾನ್ಯ ಸ್ಥಿತಿ ಮುಂದುವರಿಯಲಿದೆ. ವೆಚ್ಚಗಳು ಸ್ವಲ್ಪ ಕಡಿಮೆ ಇರುತ್ತದೆ. ತಂದೆ ತಾಯಿಯ ಆಶೀರ್ವಾದ ಪಡೆಯಿರಿ. 

ಕುಂಭ(Aquarius): ವೈವಾಹಿಕ ಜೀವನ ಚೆನ್ನಾಗಿರುತ್ತದೆ. ಒಂದು ವೇಳೆ ಏನಾದರೂ ಅಸಮಾಧಾನ ಅಥವಾ ತಪ್ಪು ಕಲ್ಪನೆಯಿದ್ದರೆ ಮಾತಿನ ಮೂಲಕ ಬಗೆಹರಿಸಲು ಪ್ರಯತ್ನಿಸಿ. ಇಂದು ನಿಮ್ಮಿಂದ ಉತ್ತಮವಾದ ಕಾರ್ಯವೊಂದು ನಡೆಯಲಿದೆ. ಮನೆ ದೇವರ ಸ್ಮರಣೆ ಮಾಡಿ. 

ಮೀನ(Pisces): ನಿಮ್ಮ ಪ್ರೇಮದ ಬಗ್ಗೆ ಹೇಳಿಕೊಳ್ಳೋದಕ್ಕೆ ಇದು ಸಕಾಲ. ಸೌಂದರ್ಯವರ್ಧಕಗಳಿಗಾಗಿ ಖರ್ಚು ಹೆಚ್ಚು. ಮನೆಯಲ್ಲಿ ವಿಪರೀತ ಕೆಲಸದಿಂದ ಆಯಾಸ. ಹಿಂದೆ ನಡೆದುದರ ಬಗ್ಗೆ ಆಲೋಚಿಸದೆ ಭವಿಷ್ಯದ ಬಗ್ಗೆ ಯೋಜಿಸಿ. ಕುಲದೇವರ ಸ್ಮರಣೆ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!