Daily Horoscope: ಹನುಮ ಜಯಂತಿಯ ಈ ದಿನ ಯಾರಿಗೆಲ್ಲ ಇರಲಿದೆ ಭಜರಂಗಿಯ ಕೃಪೆ?

Published : Apr 16, 2022, 07:20 AM IST
Daily Horoscope: ಹನುಮ ಜಯಂತಿಯ ಈ ದಿನ ಯಾರಿಗೆಲ್ಲ ಇರಲಿದೆ ಭಜರಂಗಿಯ ಕೃಪೆ?

ಸಾರಾಂಶ

16 ಏಪ್ರಿಲ್ 2022, ಶನಿವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಮಾಡಿದ್ದುಣ್ಣೋ ಮಹರಾಯ ಎಂಬ ಸ್ಥಿತಿ ಈ ರಾಶಿಯದ್ದು

ಮೇಷ(Aries): ವಿಷಯವನ್ನು ವೈಭವೀಕರಿಸದೇ ಇದ್ದ ಹಾಗೆ ನೋಡಲು ಪ್ರಯತ್ನಿಸಿ, ಆಗ ದಾಂಪತ್ಯ ಚೆನ್ನಾಗಿರಲಿದೆ. ನಿರೀಕ್ಷಿಸದ ಲಾಭಗಳು ಹುಡುಕಿಕೊಂಡು ಬರಲಿವೆ. ಮಕ್ಕಳ ದೆಸೆಯಿಂದ ಕೊಂಚ ಇರಿಸುಮುರಿಸಾಗುವ ಸಾಧ್ಯತೆ ಇದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ.

ವೃಷಭ(Taurus): ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಖರ್ಚಿನ ಕಡೆಗೆ ಗಮನ ಇರಲಿ. ದೂರ ಪ್ರಯಾಣದ ಸಾಧ್ಯತೆ ಇದ್ದು, ವಾಹನದಲ್ಲಿ ಎಚ್ಚರಿಕೆ ವಹಿಸಿ. ನಿದ್ರಾಹೀನತೆ ಕಾಡಬಹುದು. ದೈಹಿಕ ಚಟುವಟಿಕೆ ಹೆಚ್ಚಿಸಿ. ಭಜರಂಗ ಬಾಣ ಪಠಿಸಿ.

ಮಿಥುನ(Gemini): ಬಹಳ ವರ್ಷಗಳಿಂದ ಯಾವುದೋ ಯೋಜನೆಯಲ್ಲಿ ಸಿಲುಕಿಕೊಂಡ ಹಣ ಕೈ ಸೇರುವುದು. ಯಾವುದೋ ವಿಚಾರಕ್ಕೆ ಅನವಶ್ಯಕ ಸಮಯ ವ್ಯರ್ಥ ಮಾಡುತ್ತಿದ್ದೀರಿ. ಹಣೆಬರಹದಂತೆ ಆಗುವುದು ಎಂದುಕೊಂಡು ಒಂದು ನಿರ್ಧಾರ ತೆಗೆದುಕೊಳ್ಳಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಕಟಕ(Cancer): ವಾಹನಗಳು ದುರಸ್ತಿಗೆ ಬರಬಹುದು. ಮನೆಯ ಕೆಲ ವಸ್ತುಗಳು ರಿಪೇರಿಗೆ ಬಂದು ತಲೆನೋವಾಗಬಹುದು. ಇದರಿಂದ ಕೆಲಸಕಾರ್ಯಗಳು ವಿಳಂಬವಾಗಲಿವೆ. ಜಂಭದ ಮಾತುಗಳಿಗೆ ಬೆಲೆ ತೆರಬೇಕಾಗುತ್ತದೆ. ನಿಮ್ಮ ಮೇಲೆ ಶತ್ರುಗಳು ಕತ್ತಿ ಮಸೆಯಬಹುದು. ಶನಿ ಸ್ಮರಣೆ ಮಾಡಿ. 

ಸಿಂಹ(Leo): ನಿಮ್ಮ ಹಳೆಯ ಶ್ರಮದ ಪ್ರತಿಫಲ ಈಗ ಸಿಗಲಿದೆ. ಶಿಕ್ಷಣದ ಮಹತ್ವ ಅರಿವಾಗುವುದು. ಗೃಹನಿರ್ಮಾಣ ಕಾರ್ಯಭಾರಗಳು ಚುರುಕು ಪಡೆಯುವುವು. ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಲಿದೆ. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಅವಿವಾಹಿತರಿಗೆ ಕಂಕಣಬಲವಿದೆ. ಆಂಜನೇಯನಿಗೆ ವೀಳ್ಯದ ಹಾರ ಅರ್ಪಿಸಿ.

Hanuman Jayanti 2022: ನಿಮ್ಮ ನೆಂಟರಿಷ್ಟರಿಗೆ ಹೀಗೆ ಶುಭಾಶಯ ಹೇಳಿ..

ಕನ್ಯಾ(Virgo): ಅವಿವಾಹಿತರಿಗೆ ಕಂಕಣ ಬಲವಿದೆ. ನಿಮ್ಮ ಕನಸಿನ ಸಂಗಾತಿ ವಾಸ್ತವದಲ್ಲೂ ಹಾಗೇ ಇರಲು ಸಾಧ್ಯವಿಲ್ಲ ಎಂದರಿತು ಕೆಲವು ಹೊಂದಾಣಿಕೆ ಮಾಡಿಕೊಂಡರೆ ಒಳಿತಾಗಲಿದೆ. ಕುಟುಂಬದೊಂದಿಗೆ ಪ್ರವಾಸ ತೆರಳಲಿರುವಿರಿ. ಮಕ್ಕಳ ಮನೋವಿಕಾಸದ ಕಡೆ ಗಮನ ವಹಿಸಿ. ರಾಮಧ್ಯಾನ ಮಾಡಿ. 

ತುಲಾ(Libra): ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ ವಹಿಸುವಿರಿ. ಇಚ್ಛಾಶಕ್ತಿಯನ್ನು ಇಟ್ಟುಕೊಂಡು ನಡೆದರೆ ಖಂಡಿತ ನೀವು ಅಂದುಕೊಂಡದ್ದು ಸಾಧ್ಯವಾಗಲಿದೆ. ಆದಾಯ ನಷ್ಟಕ್ಕೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಮುಂದೆ ಲಾಭಗಳಿವೆ. ಅಶ್ವತ್ಥ ಎಲೆಯಲ್ಲಿ ರಾಮ ನಾಮ ಬರೆದು ಆಂಜನೇಯನಿಗೆ ಅರ್ಪಿಸಿ. 

ವೃಶ್ಚಿಕ(Scorpio): ಶಿಸ್ತುಬದ್ಧ ಸಮಯ ಪಾಲನೆ ಮಾಡದಿದ್ದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಆಗಬೇಕಾದ ಕೆಲಸಗಳಿಗೆ ಮೀನಾಮೇಷ ಎಣಿಸಬೇಡಿ. ಬೇಗ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಮಕ್ಕಳ ವಿಚಾರಕ್ಕೆ ನೋವಾಗಬಹುದು. ಕೆಂಪು ಹೂಗಳನ್ನು ಹನುಮನಿಗೆ ಅರ್ಪಿಸಿ.

ಶನಿವಾರ ಬಂದ Hanuman Jayanti; ಇಂದು ಹೀಗೆ ಮಾಡಿ ಶನಿ, ರಾಹು ಕಾಟದಿಂದ ತಪ್ಪಿಸಿಕೊಳ್ಳಿ

ಧನುಸ್ಸು(Sagittarius): ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಸಲೀಸಾಗಿ ಪೂರ್ಣಗೊಳ್ಳಲಿವೆ. ಮನರಂಜನೆಗಾಗಿ ವ್ಯಯಿಸುವಿರಿ. ಆರೋಗ್ಯದ ಕೆಲವು ಸಮಸ್ಯೆಗಳು ಆತಂಕ ಹೆಚ್ಚಿಸುತ್ತವೆ. ಸಂಗಾತಿಯ ಸಹಕಾರ ಇರುತ್ತದೆ. ಬೇಸನ್ ಲಡ್ಡುಗಳನ್ನು ಹನುಮನಿಗೆ ನೈವೇದ್ಯ ಮಾಡಿ. 

ಮಕರ(Capricorn): ಶತ್ರುಗಳು ನಿಮ್ಮ ಮೇಲೆ ಮುಗಿಬೀಳುವ ಸಾಧ್ಯತೆ ಇದೆ. ಸಣ್ಣ ಸಣ್ಣ ಖರ್ಚುಗಳನ್ನು ಮಾಡುವುದಕ್ಕೆ ಹೆದರುವ ನೀವು ದೊಡ್ಡ ಪ್ರಮಾಣದ ಖರ್ಚು ಮಾಡುವ ಪ್ರಮೇಯ ಬರುತ್ತದೆ. ಮನಸ್ಸಿನ ನೋವನ್ನು ಮತ್ತೊಬ್ಬರೊಂದಿಗೆ ಹೇಳಿಕೊಳ್ಳಿರಿ. ನಯವಂಚಕರ ಬಗ್ಗೆ ಎಚ್ಚರ ಇರಲಿ. ಮಂಗಗಳಿಗೆ ಆಹಾರ ನೀಡಿ. 

ಕುಂಭ(Aquarius): ಆತುರದ ನಿರ್ಧಾರವೊಂದರಿಂದ ದುಃಖ ಅನುಭವಿಸುವಿರಿ.  ನನಗೇ ಗೊತ್ತು, ನಾನೇ ಎಲ್ಲ, ಎಲ್ಲರೂ ನನ್ನನ್ನು ಗೌರವಿಸಬೇಕು ಎಂಬ ಹುಂಬತನ ಬಿಡಿ. ಇಲ್ಲದಿದ್ದಲ್ಲಿ ಹೆಚ್ಚು ವಾರತ್ವ ಕಟ್ಟಿಕೊಳ್ಳಲು ಸಿದ್ಧರಾಗಿ. ಇತರರ ಬಗ್ಗೆ ಸಹಾನುಭೂತಿ ಬೆಳೆಸಿಕೊಳ್ಳಿ. ಶ್ರೀರಾಮ ದೇವಾಲಯಕ್ಕೆ ಭೇಟಿ ನೀಡಿ. 

ಮೀನ(Pisces): ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ನಷ್ಟಭೀತಿಯಿಂದ ಆತಂಕ. ಕುಟುಂಬದಲ್ಲಿ ಸಂತಸ. ನಿಮ್ಮ ಬಹುದಿನಗಳ ನಂಬಿಕೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಮನಸ್ಸು ಆಧ್ಯಾತ್ಮದತ್ತ ವಾಲುವ ಸಾಧ್ಯತೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

PREV
Read more Articles on
click me!

Recommended Stories

ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಮಂಗಳವಾರ ಈ ರಾಶಿಗೆ ಶುಭ, ಅದೃಷ್ಟ