Daily Horoscope: ಮೀನಕ್ಕೆ ಗುರು ಎಂಟ್ರಿ, ಹೀಗಿರಲಿದೆ ಎಲ್ಲ ರಾಶಿಗಳ ಇಂದಿನ ಫಲ

Published : Apr 13, 2022, 07:03 AM ISTUpdated : Apr 13, 2022, 11:03 AM IST
Daily Horoscope: ಮೀನಕ್ಕೆ ಗುರು ಎಂಟ್ರಿ, ಹೀಗಿರಲಿದೆ ಎಲ್ಲ ರಾಶಿಗಳ ಇಂದಿನ ಫಲ

ಸಾರಾಂಶ

13 ಏಪ್ರಿಲ್ 2022, ಬುಧವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ವೃಷಭಕ್ಕೆ ಶುಭ ದಿನ

ಮೇಷ(Aries): ಒಂದೇ ಬಾರಿಗೆ ಎಲ್ಲ ಕಾರ್ಯಗಳು ಮುಗಿದು ಹೋಗಬೇಕು ಎನ್ನುವ ಆತುರ ಬೇಡ. ನಿಧಾನವಾದರೂ ತಪ್ಪಿಲ್ಲದಂತೆ, ಬಹಳ ಚೆನ್ನಾಗಿ ಆಗುವಂತೆ ಮಾಡುವ ನಿರ್ಧಾರ ಉತ್ತಮ. ಇಬ್ಬರ ನಡುವೆ ತಂದಿಡುವ ಕೆಲಸ ಸಲ್ಲದು. ಗಾಸಿಪ್ ಹತ್ತಿರ ಹೋಗಿ ಗಾಳಿಯೂದಬೇಡಿ. ಗಣಪತಿಯ ಸ್ಮರಣೆ ಮಾಡಿ. 

ವೃಷಭ(Taurus): ಶುಭ ದಿನಗಳು ಆರಂಭವಾಗುತ್ತಿದೆ. ಆದಾಯ ಹೆಚ್ಚಲಿದೆ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಪಡೆಯುವಿರಿ. ಭವಿಷ್ಯದಲ್ಲಿ ಲಾಭ ತರುವ ಹೊಸ ಡೀಲ್‌ಗಳಿಗೆ ಸಹಿ ಹಾಕುವಿರಿ. ಸಂಗಾತಿಯೊಂದಿಗೆ ಸಮನ್ವಯ ಸಾಧಿಸಲು ಯತ್ನ ಹೆಚ್ಚಿಸಬೇಕು. ಗುರು ಸ್ಮರಣೆ ಮಾಡಿ. 

ಮಿಥುನ(Gemini): ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎನ್ನುವ ಹಾಗೆ ನಿಮಗೆ ಇಷ್ಟವಿಲ್ಲದೇ ಇದ್ದರೂ ಕಾರ್ಯವಾಗಲು ಮತ್ತೊಬ್ಬರನ್ನು ಇಂದ್ರ ಚಂದ್ರ ಎನ್ನಬೇಕಾಗುತ್ತದೆ. ತೊಂದರೆಯಿಲ್ಲ, ಲಾಭವೇ ಇರಲಿದೆ. ಹೊಸ ಉದ್ಯೋಗಾವಕಾಶಗಳು ಎದುರಾಗಲಿವೆ. ಗುರು ಸ್ಮರಣೆ ಮಾಡಿ. 

ಕಟಕ(Cancer): ಹೆಚ್ಚು ಕೆಲಸ ಕಡಿಮೆ ಪ್ರತಿಫಲ. ಹಾಗಂಥ ನಿರಾಶೆ ಆಗುವುದು ಬೇಡ. ಮುಂದೆ ಶುಭ ದಿನಗಳು ಇವೆ. ಮನೆಯಲ್ಲಿ ಶಾಂತಿ ನೆಲೆಯಾಗಲಿದೆ. ನಿರುದ್ಯೋಗಿಗಳಿಗೆ ಅವಕಾಶ ಬರಲಿದೆ. ಗುರುವು ನಿಮ್ಮ ಅದೃಷ್ಟದ ಮನೆಗೆ ಪ್ರವೇಶಿಸಿದ್ದಾನೆ. ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಸಿಂಹ(Leo): ಸ್ನೇಹಿತರು, ಬಂಧುಗಳು ನಿಮಗೆ ನೆರವು ನೀಡುವರು. ನಿಮ್ಮ ಬೆಳವಣಿಗೆ ಕಂಡು ಹೊಟ್ಟೆಕಿಚ್ಚು ಪಡುವವರೂ ಇದ್ದಾರೆ. ಅವರ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಮನೆಯಲ್ಲಾಗಬೇಕಾದ ಶುಭ ಕಾರ್ಯಗಳಿಗಾಗಿ ಹೆಚ್ಚಿನ ಪ್ರಯತ್ನ ಅಗತ್ಯ. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಕನ್ಯಾ(Virgo): ಮತ್ತೊಬ್ಬರ ಹಂಗಿನಲ್ಲಿ ಸಿಲುಕುವುದಕ್ಕೆ ಹೋಗದಿರಿ. ಸ್ನೇಹಿತರ ಸಹಕಾರಕ್ಕೆ ನಿಲ್ಲಲಿದ್ದೀರಿ. ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ. ಮಕ್ಕಳ ಬೆಳವಣಿಗೆ ನೆಮ್ಮದಿ ತರುವುದು. ಧನ ಹಾನಿ ಸಂಭವವಿದ್ದು, ಮೈಯೆಲ್ಲ ಎಚ್ಚರವಾಗಿ ವ್ಯವಹರಿಸಿ. ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ. 

Chikkamagaluru: ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಭರ್ಜರಿ ಸಿದ್ಧತೆ

ತುಲಾ(Libra): ಕಪಟಿಗಳು, ಜೊತೆಗೇ ಇದ್ದು ಮೋಸ ಮಾಡುವವರ ವಿಚಾರದಲ್ಲಿ ಎಚ್ಚರಿಕೆ ಇರಲಿ. ಎಲ್ಲರನ್ನೂ ಅತಿಯಾಗಿ ನಂಬಿಕೊಳ್ಳಲು ಹೋಗಬೇಡಿ. ಕೊಟ್ಟ ಸಾಲ ಹಿಂದಿರುಗದೆ ಕಂಗಾಲಾಗಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಸಂಗಾತಿಯೊಂದಿಗೆ ನೆಮ್ಮದಿಯ ದಿನ. ಬೃಹಸ್ಪತಿ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಯಾವುದೇ ಘಟನೆ ಆದರೂ ಥಟ್ಟನೆ ಪ್ರತಿಕ್ರಿಯೆ ನೀಡುವುದು ಬೇಡ. ತಾಯಿಯ ಅಗತ್ಯಗಳೇನು ಕೇಳಿ ಈಡೇರಿಸಿ. ಹೊಸ ಭರವಸೆಗಳು ಮೈಗೂಡುವುವು. ಅವಿವಾಹಿತರಿಗೆ ಉತ್ತಮ ಫಲಗಳಿವೆ.  ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಗಣಪತಿಗೆ ದೂರ್ವೆ ಅರ್ಪಿಸಿ. 

ಧನುಸ್ಸು(Sagittarius): ಒಂದು ಪಡೆಯುವುದಕ್ಕಾಗಿ ಎರಡು ಕಳೆದುಕೊಳ್ಳುವ ಸ್ಥಿತಿಗೆ ತಲುಪುವುದು ಬೇಡ. ಜಾಣ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿರಿ. ಹತ್ತಿರದವರ ಜೊತೆ ಕಲಹ ಸಂಭವವಿದೆ. ಹೆಚ್ಚಿನ ಹಾನಿ ತಪ್ಪಿಸಲು ಮೌನವಾಗಿರಲು ಪ್ರಯತ್ನಿಸಿ. ಹಲ್ಲು ನೋವು, ಮೂಳೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಸಿರು ಧಾನ್ಯಗಳನ್ನು ದಾನ ಮಾಡಿ.

ಮಕರ(Capricorn): ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಂಬಂಧಿಗಳು ಕಷ್ಟದಲ್ಲಿ ಇದ್ದಾರೆ ಎಂದು ತಿಳಿದು ನೀವಾಗಿಯೇ ಸಹಾಯ ಮಾಡಲಿದ್ದೀರಿ. ಹೇಳಿದ್ದು, ಕೇಳಿದ್ದು ಎಲ್ಲ ಸುಳ್ಳಾಗಿರಬಹುದು ಎಂಬ ಪ್ರಜ್ಞೆ ಇರಲಿ. ಶೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಹಸಿರು ವಸ್ತ್ರ ದಾನ ಮಾಡಿ. 

ರಾಹು ಕೇತು ಗೋಚಾರ: ಈ ಐದು ರಾಶಿಗಳಿಗೆ ಬಂತು ಕಂಟಕ ಕಾಲ

ಕುಂಭ(Aquarius): ದುಂದು ವೆಚ್ಚಕ್ಕೆ ಕಡಿವಾಣ ಹಾಕಿರಿ. ಸಂಸಾರದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಕೋಪದ ಕೈಗೆ ಬುದ್ದಿ ಕೊಟ್ಟು ಚೆನ್ನಾಗಿರುವುದನ್ನು ಹಾಳು ಮಾಡಿಕೊಳ್ಳುವ ಸಂಭವವಿದೆ. ಸಂಯಮ ವಹಿಸಿ. ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯವಿರಲಿ. ಯೋಗ, ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. 

ಮೀನ(Pisces): ಕೂತು ತಿಂದರೆ ಕುಡಿಕೆ ಹೊನ್ನೂ ಸಾಲುವುದಿಲ್ಲ. ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲವೆಂದು ಎಲ್ಲ ಅವಕಾಶಗಳನ್ನೂ ಕಳೆದುಕೊಳ್ಳಬೇಡಿ. ಕಷ್ಟ ಪಟ್ಟರೆ ಫಲವಿರಲಿದೆ. ವೃತ್ತಿರಂಗದಲ್ಲಿ ಏಳ್ಗೆ ಇರುತ್ತದೆ. ಹೊಸ ವಸ್ತುಗಳ ಖರೀದಿ ಖುಷಿ ತರಲಿದೆ. ನಿಮ್ಮ ಗುರುವಿನ ಸ್ಮರಣೆ ಮಾಡಿ. 

 

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ