11 ಏಪ್ರಿಲ್ 2022, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕುಂಭಕ್ಕೆ ಉದರ ಸಮಸ್ಯೆ
ಮೇಷ(Aries): ಪಿತ್ರಾರ್ಜಿತ ಆಸ್ತಿ ತಗಾದೆ ಹೆಚ್ಚುವುದು. ಸರ್ಕಾರಿ ಕೆಲಸ ಕಾರ್ಯದಲ್ಲಿ ಜಯ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ. ಸಾಲದ ಹಣ ಮರು ಪಾವತಿಯಾಗುವುದು. ಕುಟುಂಬದಲ್ಲಿ ನಿಮ್ಮಿಂದಾಗಿ ಉತ್ತಮ ಕಾರ್ಯಗಳು ಜರುಗಬಹುದು. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ.
ವೃಷಭ(Taurus): ಸ್ನೇಹಿತರು ಶತ್ರುಗಳಾಗಿ ಪರಿವರ್ತನೆಯಾಗಿ ಆಘಾತವಾಗಬಹುದು. ಸಹೋದ್ಯೋಗಿಗಳಿಂದ ಉದ್ಯೋಗ ನಷ್ಟ ಸಂಭವ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಂದು ಆಯಾಸ ಹೆಚ್ಚು. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ಈಶ್ವರನಿಗೆ ಜಲಾಭಿಷೇಕ ಮಾಡಿ.
ಮಿಥುನ(Gemini): ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗ ಸ್ಥಳದಲ್ಲಿ ಅಶಾಂತಿ ತಲೆದೋರುವುದು. ಮಕ್ಕಳಲ್ಲಿ ಅಹಂಭಾವ, ಮೊಂಡುತನ ಅಧಿಕವಾಗಿ ಚಿಂತೆಯಾಗಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.
ಕಟಕ(Cancer): ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ರೈತರಿಗೆ ತಾವು ಬೆಳೆದ ವಸ್ತುಗಳಿಗೆ ಉತ್ತಮ ಲಾಭದಾಯಕ ಆದಾಯ ದೊರೆಯಲಿದೆ. ಬ್ಯಾಂಕ್ ಕೆಲಸಗಳು ನೆರವೇರಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ದಿನವಾಗಿದೆ. ಆಯಾಸ ಕಾಡುವುದು. ಶಿವ ಶತನಾಮಾವಳಿ ಹೇಳಿಕೊಳ್ಳಿ.
ಸಿಂಹ(Leo): ಸಹೋದ್ಯೋಗಿಗಳೊಡನೆ ಇರುವ ಮನಸ್ಥಾಪಗಳು ಹೆಚ್ಚುವುವು. ಉದ್ಯೋಗದಲ್ಲಿ ಎಡವಟ್ಟುಗಳಾಗುವ ಸಾಧ್ಯತೆ. ವ್ಯಾಪಾರದಲ್ಲಿ ಗಲಾಟೆ, ವಿವಾದಗಳಾದಾವು. ಅವಿವಾಹಿತರಾಗಿದ್ದರೆ ನಿಮ್ಮ ಮದುವೆಯ ಬಗ್ಗೆ ಮನೆಯಲ್ಲಿ ಚರ್ಚಿಸಬಹುದು. ಸತತ ಕಾಡುತ್ತಿರುವ ತಲೆನೋವಿಗೆ ವೈದ್ಯರ ನೆರವು ಪಡೆಯಿರಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಸ್ಥಿರಾಸ್ತಿ ಮಾರಾಟದಿಂದ ನಷ್ಟ, ಅಧಿಕವಾದ ಉಷ್ಣ ಬಾಧೆ ಕಾಡಲಿದೆ. ಅಕ್ರಮ ಹಣ ಸಂಪಾದನೆಯಿಂದ ತೊಂದರೆ ಹೆಚ್ಚುವುದು. ಇಚ್ಛಾಶಕ್ತಿಯನ್ನು ಇಟ್ಟುಕೊಂಡು ನಡೆದರೆ ಖಂಡಿತ ನೀವು ಅಂದುಕೊಂಡದ್ದು ಸಾಧ್ಯವಾಗಲಿದೆ. ಶಿವನಿಗೆ ಬಿಲ್ವಾರ್ಚನೆ ಮಾಡಿಸಿ.
ತುಲಾ(Libra): ಲೇವಾದೇವಿ ವ್ಯವಹಾರಗಳಲ್ಲಿ ಹಿನ್ನಡೆ ಉಂಟಾಗುತ್ತದೆ. ಷೇರು ವ್ಯವಹಾರಗಳು ಬೇಡ. ಪ್ರೀತಿಯ ಸಂಬಂಧಗಳಲ್ಲಿ ಸೂಕ್ಷ್ಮವಾಗಿ ವರ್ತಿಸಿ. ಮಾತಿನಲ್ಲಿ ದೂರಾಲೋಚನೆ ಇಟ್ಟುಕೊಳ್ಳಿ. ಹೊಸ ಕಲಿಕೆಯಲ್ಲಿ ತೊಡಗಿ. ಉದರ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಸುಬ್ರಹ್ಮಣ್ಯ ಸ್ಮರಣೆ ಮಾಡಿ.
Jupiter Transit: 12 ವರ್ಷಗಳ ಬಳಿಕ ಗುರು ಮೀನಕ್ಕೆ, ಈ 5 ರಾಶಿಗಳಿಗಿನ್ನು ಪರ್ವ ಕಾಲ
ವೃಶ್ಚಿಕ(Scorpio): ಕೋಪ ನಿಯಂತ್ರಿಸಲು ಪ್ರಯತ್ನಿಸಿ. ಸೋಮಾರಿತನ ಬೇಡ. ನಿಮ್ಮ ವೈವಾಹಿಕ ಜೀವನದಲ್ಲಿ ಅಪನಂಬಿಕೆಗಳು ದಂಪತಿಗಳ ನಡುವಿನ ಅಂತರವನ್ನು ಹೆಚ್ಚಿಸಬಹುದು. ನಿಮ್ಮ ಅತಿಯಾದ ಆತ್ಮವಿಶ್ವಾಸದಿಂದ ಜನರನ್ನು ಕಳೆದುಕೊಳ್ಳಲಿರುವಿರಿ. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.
ಧನುಸ್ಸು(Sagittarius): ಮಾನಸಿಕ ಒತ್ತಡಗಳಿಂದ ಕೊಂಚ ಬಿಡುಗಡೆ ಸಿಕ್ಕಿ ಸಮಾಧಾನ ಸಿಗುವುದು. ದೊಡ್ಡ ಪ್ರಮಾಣದ ಖರ್ಚು ಮಾಡುವ ಪ್ರಮೇಯ ಬರುತ್ತದೆ. ಷೇರು ವ್ಯವಹಾರಗಳಲ್ಲಿ ಅಲ್ಪ ಲಾಭ. ನಿರುದ್ಯೋಗಿಗಳಿಗೆ ಅವಕಾಶ ಎದುರಾಗುತ್ತದೆ. ಬೆನ್ನುನೋವು ಬಾಧಿಸಲಿದೆ.
ಮಕರ(Capricorn): ಸ್ನೇಹಿತರೊಂದಿಗೆ ಸಣ್ಣಪುಟ್ಟ ಜಗಳ, ಮನಸ್ತಾಪ ಉಂಟಾಗಬಹುದು. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಬೇರೆ ಹೂಡಿಕೆಗೂ ಉತ್ತಮ ದಿನ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಬಹುದು. ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಒಳಿತಾಗುವುದು.
ಕುಂಭ(Aquarius): ಉದ್ಯೋಗ ಸ್ಥಳದಲ್ಲಿ ಸೌಹಾರ್ದಯುತ ವಾತಾವರಣ ಇರುತ್ತದೆ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ, ಹೊರಗಿನ ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶಿವ ಶತನಾಮಾವಳಿ ಹೇಳಿಕೊಳ್ಳಿ.
Chikkamagaluru: ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಅದ್ಧೂರಿ ಸಿದ್ಧತೆ: ಅಲಂಕೃತಗೊಂಡ ಪಟ್ಟಣ
ಮೀನ(Pisces): ಕೆಲಸದಲ್ಲಿ ಕಲಿಯಲು ಸಹಾಯ ಮಾಡುವ ಮತ್ತು ಮಾರ್ಗದರ್ಶನ ನೀಡುವ ಒಳ್ಳೆಯ ಜನರೊಂದಿಗೆ ನೀವು ಸಂಪರ್ಕವನ್ನು ಸ್ಥಾಪಿಸುವಿರಿ. ಮನಸ್ಸಿನ ನೋವನ್ನು ಮತ್ತೊಬ್ಬರೊಂದಿಗೆ ಹೇಳಿಕೊಳ್ಳಿರಿ. ನಯವಂಚಕರ ಬಗ್ಗೆ ಎಚ್ಚರ ಇರಲಿ. ರುದ್ರಾಭಿಷೇಕ ಮಾಡಿಸಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.