Daily Horoscope: ಮಿಥುನಕ್ಕೆ ಆಪದ್ಬಾಂದವರ ನೆರವು, ಮೀನಕ್ಕೆ ಶುಭಫಲ

Published : Apr 12, 2022, 08:03 AM IST
Daily Horoscope: ಮಿಥುನಕ್ಕೆ ಆಪದ್ಬಾಂದವರ ನೆರವು, ಮೀನಕ್ಕೆ ಶುಭಫಲ

ಸಾರಾಂಶ

12 ಏಪ್ರಿಲ್ 2022, ಮಂಗಳವಾರದ ಭವಿಷ್ಯ ಹೇಗಿದೆ? ಯಾವ ರಾಶಿಗೆ ಶುಭ ಫಲವಿದೆ? ಈ ರಾಶಿಯವರ ಚಿಂತೆ ದೂರಾಗುವುದು..

ಮೇಷ(Aries): ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಎಲ್ಲವೂ ನನ್ನ ಕಾಲ ತುದಿಗೆ ಬಂದು ಬೀಳಬೇಕು ಎನ್ನುವ ಸ್ವಭಾವ ಸರಿಯಲ್ಲ. ನಿಮ್ಮ ಕರ್ತವ್ಯ ಪ್ರಜ್ಞೆಯಿಂದಲೇ ಲಾಭ ಪಡೆದುಕೊಳ್ಳಿ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ವೃಷಭ(Taurus): ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರಿಕೆ ಇರಲಿ. ಉದಾಸೀನಕ್ಕೆ ಆರೋಗ್ಯ ಸಮಸ್ಯೆ ಕಾರಣವಾಗುತ್ತಿರಬಹುದು. ವಿಟಮಿನ್ ಕೊರತೆಯನ್ನು ನೀಗಿಸಿಕೊಳ್ಳುವತ್ತ ಗಮನ ಹರಿಸಿ. ಲಕ್ಷ್ಮೀ ಪೂಜೆ ಮಾಡಿ. 

ಮಿಥುನ(Gemini): ಅಂದುಕೊಂಡ ಕಾರ್ಯಗಳು ಬೇಗೆ ಬೇಗ ನೆರವೇರಲಿವೆ. ಯಾರೋ ಆಪದ್ಭಾಂಧವರಂತೆ ಬಂದು ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ನಿಮಗೆ ಇಷ್ಟವಾದ ವಸ್ತುಗಳು ಈ ವಾರದಲ್ಲಿ ನಿಮ್ಮ ಮನೆ ಸೇರಲಿವೆ. ಆದಾಯದಲ್ಲೂ ಏರಿಕೆ ಆಗಲಿದೆ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಕಟಕ(Cancer): ವ್ಯಾಪಾರಿಗಳು ಹಣಕಾಸಿನ ವಿಷಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಗಾಸಿಪ್‌ ಮಾಡುವುದನ್ನು ತಪ್ಪಿಸಿ, ಇಲ್ಲವಾದರೆ ಅದರಿಂದ ವಿವಾದ ಉಂಟಾಗುವ ಸಾಧ್ಯತೆಯಿದೆ. ಸುಖಾಸುಮ್ಮನೆ ಕೆಲವರ ದ್ವೇಷ ಕಟ್ಟಿಕೊಳ್ಳಬೇಕಾಗುವುದು. ಜಗನ್ಮಾತೆಯ ಸ್ಮರಣೆ ಮಾಡಿ. 

ಸಿಂಹ(Leo): ನಿಮ್ಮ ಒಂದು ದೊಡ್ಡ ಚಿಂತೆ ಇಂದು ದೂರವಾಗುವುದು. ಮನಸ್ಸು ಸಂತೋಷವಾಗಿರುತ್ತದೆ.  ಶೀತ, ಕಫ, ಕೆಮ್ಮು ಮುಂತಾದ ಸಮಸ್ಯೆಗಳು ಎದುರಾಗಬಹುದು. ಮಕ್ಕಳೊಂದಿಗೆ ಸಮಯ ಕಳೆದು ಸಂತಸವಾಗುವುದು. ಮನೆಯ ಖರೀದಿ ಪೂರ್ವಾಭಾವಿ ಕೆಲಸಗಳು ನಡೆಯುವುವು. ಆಂಜನೇಯನಿಗೆ ಕೆಂಪು ಹೂವು ಅರ್ಪಿಸಿ. 

Weekly Horoscope: ಸಿಂಹಕ್ಕೆ ಈ ವಾರ ಆರೋಗ್ಯ ಸಮಸ್ಯೆ, ಮಕರಕ್ಕೆ ಮಾನಭಂಗ

ಕನ್ಯಾ(Virgo): ಹಣದ ಪರಿಸ್ಥಿತಿಯಲ್ಲಿ ದೊಡ್ಡ ಸುಧಾರಣೆಯಾಗುವ ಸಾಧ್ಯತೆಯಿದೆ. ಹೊಸ ಆದಾಯದ ಮೂಲವನ್ನು ಕಾಣಬಹುದು. ದೂರ ಪ್ರಯಾಣಗಳು ಆಯಾಸವಾದರೂ ಯಶಸ್ಸು ತರಲಿವೆ. ತಂದೆ ತಾಯಿಯೊಂದಿಗೆ ವಾದಿಸಲು ಹೋಗಬೇಡಿ. ಅವರ ಆಶೀರ್ವಾದ ಪಡೆದುಕೊಳ್ಳಿ. 

ತುಲಾ(Libra): ನಿಮ್ಮ ವೇಗದ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ದೊರೆಯಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸ್ವಂತ ಬಲ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಪಠ್ಯೇತರ ವಿಷಯಗಳಲ್ಲಿ ಸಂತಸ ಕಾಣುವರು. ಅವಿವಾಹಿತರಿಗೆ ಕಂಕಣಬಲವಿದೆ. ಮನೆ ದೇವರ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಚಿನ್ನ ಮತ್ತು ಬೆಳ್ಳಿಯನ್ನು ವ್ಯಾಪಾರ ಮಾಡುವವರು ಅಪಾರ ಆರ್ಥಿಕ ಲಾಭಗಳನ್ನು ಪಡೆಯಬಹುದು. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ಮನೆಯಲ್ಲಿ ಕಿರಿಕಿರಿ ಹೆಚ್ಚಬಹುದು. ವಾತ ಸಂಬಂಧಿ ಸಮಸ್ಯೆಗಳು ಕಾಡುವುವು. ಆಂಜನೇಯನಿಗೆ ವೀಳ್ಯದ ಹಾರ ಅರ್ಪಿಸಿ. 

ಧನುಸ್ಸು(Sagittarius): ನಿಮ್ಮ ಪ್ರೇಮದ ಬಗ್ಗೆ ಹೇಳಿಕೊಳ್ಳೋದಕ್ಕೆ ಇದು ಸಕಾಲ. ವಿವಾಹಿತ ದಂಪತಿಗಳ ಸಂಬಂಧ ಉತ್ತಮವಾಗಲಿದೆ. ವೃತ್ತಿಜೀವನದಲ್ಲಿ ಕೆಲ ಮನಸ್ಸಿಗೆ ಕಿರಿಕಿರಿ ತರುವ ವಿಚಾರಗಳು ಜರುಗಬಹುದು. ಮಕ್ಕಳ ಕಡೆ ಹೆಚ್ಚಿನ ನಿಗಾ ವಹಿಸಿ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ. 

ಮಕರ(Capricorn): ಸಂಗಾತಿಯ ಮನಸ್ಥಿತಿಯಿಂದ ಇರಿಸು ಮುರಿಸಾಗಬಹುದು. ಈ ಸಂದರ್ಭ ಅವರ ಭಾವನೆಗಳಿಗೆ ಸ್ಪಂದಿಸುವುದು ಉತ್ತಮ. ಕೆಲವೊಂದು ನಿರ್ಧಾರಗಳು ತಲೆ ಕೆಳಗಾಗಲಿವೆ. ಯೋಜಿಸಿದ ದೂರ ಪ್ರಯಾಣ ತಪ್ಪಬಹುದು. ನವಗ್ರಹ ಸ್ಮರಣೆ ಮಾಡಿ. 

ಕುಂಭ(Aquarius): ಉದ್ಯೋಗಿಗಳು ಕಚೇರಿಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಹೊಸ ದಾರಿಯಲ್ಲಿ ನೂತನ ಪ್ರಯಾಣ ಆರಂಭವಾಗಲಿದೆ. ವ್ಯವಹಾರದಲ್ಲಿ ಸೂಕ್ತ ಎಚ್ಚರಿಕೆ ಇದ್ದರೆ ಒಳಿತು. ಯಾರ ಬಗ್ಗೆಯೂ ಲಘುವಾಗಿ ಮಾತನಾಡದಿರಿ. ರಾಮ ಧ್ಯಾನ ಮಾಡಿ. 

ಬೇಗ ಮದುವೆಯಾಗೋ ಯೋಗ ಈ ರಾಶಿಯವರಿಗಿಲ್ಲ!

ಮೀನ(Pisces): ಹಣದ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಇರಬಹುದು. ಹೆಚ್ಚು ಕಾರ್ಯಗಳನ್ನು ಇಂದು ಮಾಡಿ ಮುಗಿಸುವಿರಿ.  ಹಿಂದೆ ಕೂಡಿಟ್ಟಿದ್ದ ಉಳಿತಾಯದ ಹಣ ಇಂದಿಗೆ ಉಪಯೋಗಕ್ಕೆ ಬರಲಿದೆ.  ಶುಭ ಸಮಾಚಾರ ಕೇಳಲಿದ್ದೀರಿ. ಆಂಜನೇಯ ಸ್ಮರಣೆ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

ಇಂದು ಶುಕ್ರವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ