* 21 ಜುಲೈ 2021 ಬುಧವಾರದ ಭವಿಷ್ಯ
* ಮೇಷ ರಾಶಿಯವರಿಗಿಂದು ಅಶಾಂತಿ
* ಮಿಥುನ ರಾಶಿಯವರಿಗೆ ಸಮಾಧಾನವೂ ಇರಲಿದೆ
* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಜನರಲ್ಲಿ ಅಶಾಂತಿ, ಕೆಲಸದಲ್ಲಿ ಆತಂಕ, ಬುದ್ಧಿ ಶಕ್ತಿ ಕುಂಠಿತವಾಗಲಿದೆ, ದುರ್ಗಾ ಪ್ರಾರ್ಥನೆ ಮಾಡಿ
ವೃಷಭ - ಆತಂಕದ ವಾತಾವರಣ ದೂರಾಗಲಿದೆ, ಮಾನಸಿಕ ಅಸಮಧಾನ, ಇತರರಿಗೆ ತೊಂದರೆಯಾಗದಂತೆ ವರ್ತಿಸಿ, ದುರ್ಗಾ ಸ್ತೋತ್ರ ಪಠಿಸಿ
ಮಿಥುನ - ಸಮಾಧಾನವೂ ಇರಲಿದೆ, ಆದರೆ ಆತಂಕದ ವಾತಾವರಣವೂ ಇದೆ, ಆರೋಗ್ಯದ ಕಡೆ ಗಮನವಿರಲಿ, ವಿಷ್ಣು ಸಹಸ್ರನಾಮ ಪಠಿಸಿ
ಕಟಕ - ಸಾಮಾಧಾನ ಇರಲಿ, ಕುಟುಂಬದಲ್ಲಿ ಸಮಸ್ಯೆ, ಕ್ಲಿಷ್ಟಕರ ವಾತಾವರಣ, ಸಂಗಾತಿಯಲ್ಲಿ ಮನಸ್ತಾಪ ಸಾಧ್ಯತೆ, ದುರ್ಗಾ ಕವಚ ಪಠಿಸಿ
ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ!
ಸಿಂಹ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.
ಕನ್ಯಾ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.
ತುಲಾ: ರಾಜಕೀಯ ಪ್ರಗತಿಗೆ ಪೂರಕವಾಗಿ ಇಂದು ಕೆಲವು ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬರಲಿವೆ. ಮನೆಯಲ್ಲಿ ಸಂತಸ ಹೆಚ್ಚಲಿದೆ.
ವೃಶ್ಚಿಕ: ಕಣ್ಣಿಗೆ ಕಾಣುವುದೆಲ್ಲವೂ ಸತ್ಯವಲ್ಲ. ಸರಿಯಾಗಿ ವಿವೇಚನೆ ಮಾಡಿ ನಿರ್ಧಾರ ಕೈಗೊಳ್ಳಿ. ನಿಮ್ಮಿಂದ ಇತರರು ಖುಷಿಯಾಗಿರಲಿದ್ದಾರೆ.
ನೀವು ಹುಟ್ಟಿದ ವಾರಕ್ಕೂ ನಿಮ್ಮ ಬದುಕಿಗೂ ಸಂಬಂಧ ಇದ್ಯಾ?
ಧನಸ್ಸು: ಸಿಗದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ನಿಮ್ಮ ಪಾಲಿನ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡಿ ಮುಗಿಸಿ.
ಮಕರ: ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹರಸಿ ಬರಲಿವೆ. ಆರ್ಥಿಕವಾಗಿ ಒಳ್ಳೆಯ ದಿನವಿದು.
ಕುಂಭ: ಸಂಜೆ ವೇಳೆಗೆ ಶುಭ ಸುದ್ದಿ ಕೇಳಲಿದ್ದೀರಿ. ಆರೋಗ್ಯದಲ್ಲಿ ಸ್ಥಿರತೆ. ಸಣ್ಣ ಸಣ್ಣ ವಿಚಾರಗಳನ್ನು ಕಡೆಗಣನೆ ಮಾಡಬೇಡಿ.
ಮೀನ: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದು ಬೇಡ. ಹೊಸ ವಸ್ತುಗಳನ್ನು ಕೈಗೆತ್ತಿಕೊಳ್ಳಲಿದ್ದೀರಿ. ಶುಭ ಫಲ.