Daily Horoscope| ದಿನ ಭವಿಷ್ಯ: ಈ ರಾಶಿಯವರು ಮುಖ್ಯ ಕಡತಗಳಿಗೆ ಸಹಿ ಹಾಕುವಾಗ ಎಚ್ಚರವಹಿಸಿ!

By Suvarna News  |  First Published Oct 11, 2021, 7:11 AM IST

* 11 ಅಕ್ಟೋಬರ್ 2021 ಸೋಮವಾರದ ಭವಿಷ್ಯ

* ಈ ರಾಶಿಯವರು ಮುಖ್ಯ ಕಡತಗಳಿಗೆ ಸಹಿ ಹಾಕುವಾಗ ಎಚ್ಚರವಹಿಸಿ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ


ಗ್ರಹಗತಿ:

ವೃಷಭ ರಾಶಿಯಲ್ಲಿ ರಾಹು

Tap to resize

Latest Videos

ಕನ್ಯಾ ರಾಶಿಯಲ್ಲಿ ರವಿ, ಬುಧ ಹಾಗೂ ಕುಜರಿದ್ದಾರೆ. 

ವೃಶ್ಚಿಕ ರಾಶಿಯಲ್ಲಿ ಚಂದ್ರ, ಕೇತು ಹಾಗೂ ಶುಕ್ರ ಇದ್ದಾನೆ. 

ಮಕರ ರಾಶಿಯಲ್ಲಿ ಗುರು, ಶನಿ, ಮಾಂದಿ

ಹೀಗಿರುವಾಗ ಹನ್ನೆರಡು ರಾಶಿಗಳ ಫಲಾಫಲ ಹೇಗಿರುತ್ತದೆ? ನಿಮ್ಮ ರಾಶಿಗೇನು ಫಲ? ಇಲ್ಲಿದೆ ವಿವರ
 
ಮೇಷ(Aries): ವೃತ್ತಿಯಲ್ಲಿ ಕರ್ಮ ಸ್ಥಾನದಲ್ಲಿರುವ ಮಾಂದಿಯಿಂದ ವೃತ್ತಿಯಲ್ಲಿರುವವರಿಗೆ ಕಿರಿ ಕಿರಿ. ಜೊತೆಗೆ ಜೊಸ ಅವಕಾಶಗಳಿಗೆ ತೊಂದರೆಯುಂಟಾಗುತ್ತದೆ. ಅಲ್ಲದೇ ನಿಮ್ಮ ಕೆಲಸ ಕೂಡಾ ಅವಕಾಶಗಳನ್ನು ಕೊಡುವುದಿಲ್ಲ. ಕೆಲಸ ಪೂರ್ಣಗೊಳಿಸಲು ಅನುಕೂಲ ಮಾಡಿಕೊಡುವುದಿಲ್ಲ. ಇನ್ನು ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಡಕಿದೆ, ಮಾನಸಿಕವಾಗಿ ಎದೆಗುಂದಬಹುದು. ಇನ್ನು ನೀರಿನ ಸಮೀಪದಲ್ಲಿ ಕೆಲಸ ಮಾಡುವವರು ಎಚ್ಚರದಿಂದಿರಿ. ಆದರೆ ಬಂಧುಗಳಿಂದ ಸ್ವಲ್ಪ ಸಹಾಯ ಸಿಗಲಿದೆ. ಪರಿಹಾರಕ್ಕಾಗಿ ಜಲದುರ್ಗೆಯ ಪ್ರಾರ್ಥನೆ ಮಾಡಿ.

ವೃಷಭ(Taurus):ಈ ರಾಶಿಯಿಂದ ಭಾಗ್ಯದಲ್ಲಿರುವ ಮಾಂದಿ ಸ್ವಲ್ಪ ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡುತ್ತದೆ. ಪಂಚಮದಲ್ಲಿ ಕುಜನ ಜೊತೆ ರವಿ ಇದ್ದಾನೆ. ಹೀಗಾಗಿ ಸ್ವಲ್ಪ ಅಸಮಾಧಾನ ಉಂಟಾಗಲಿದೆ. ಸಪ್ತಮದಲ್ಲಿ ಚಂದ್ರ, ಕೇತು ಇದ್ದಾರೆ ಹೀಗಾಗಿ ಸಂಗಾತಿಯ ಸಹಾಯವೂ ಸಿಗುವುದಿಲ್ಲ. ವ್ಯತಿರಿಕ್ತವಾದ ಫಲ ನೀಡುವ ಸೂಚನೆ ಸಿಗುತ್ತಿದೆ. ರಸ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ. ಇನ್ನು ಪರಿಹಾರಕ್ಕಾಗಿ ಚಂಡಿ ಪಾರಾಯಣ ಮಾಡಿ.

ಮಿಥುನ(Gemini):ನಿಮ್ಮ ರಾಶಿಯಿಂದ ಚಂದ್ರ ಷಷ್ಠ ಸ್ಥಾನದಲ್ಲಿದ್ದಾನೆ. ಹೀಗಾಗಿ ಸ್ತ್ರೀಯರ ಆರೋಗ್ಯದಲ್ಲಿ ಏರುಪೇರಾಗಲಿದೆ. ವಸ್ತು ನಷ್ಟತೆ ಕೂಡಾ ಆಗುವ ಸಾಧ್ಯತೆ ಇದೆ. ಅಲ್ಲದೇ ಇಂದು ನಿಮಗೆ ಸೋಲುಂಟಾಗಲಿದೆ. ಹೀಗಾಗಿ ವಾಗ್ವಾದ- ಘರ್ಷಣೆ ಮಾಡಬೇಡಿ. ಅಲ್ಲದೇ ಕರ್ಮ ಸ್ಥಾನದ ಅಧಿಪತಿಯೂ ಅಷ್ಟಮದಲ್ಲಿ ಸೇರಿರುವುದರಿಂದ ಉದ್ಯೋಗಿಗಳು ಎಚ್ಚರದಿಂದಿರಿ. ಕೆಲಸ ನಷ್ಟವಾಗಬಹುದು, ಅತಂತ್ರದ ವಾತಾವರಣ ನಿರ್ಮಾಣವಾಗಲಿದೆ. ಜೊತೆಗೆ ಪ್ರಯಾಣದಲ್ಲೂ ಎಚ್ಚರದಿಂದಿರಿ. ಪರಿಹಾರಕ್ಕಾಗಿ ಗುರು ಚರಿತ್ರೆ ಓದಿ.

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಕಟಕ(Cancer): ಈ ರಾಶಿಯಿಂದ ಚಂದ್ರ ಪಂಚಮದಲ್ಲಿದ್ದಾನೆ, ಸಪ್ತಮದಲ್ಲಿ ಶನೇಶ್ಚರನ ಜೊತೆ ಮಾಂದಿ ಇದ್ದಾನೆ. ಹೀಗಾಗಿ ದಾಂಪತ್ಯದಲ್ಲಿ ಅಸಮಾಧಾನ, ವ್ಯಾಪಾರದಲ್ಲಿ ತೊಡಕು, ವಿದೇಶ ಪ್ರಯಾಣದಲ್ಲಿ ತೊಂದರೆ ಎದುರಾಗಬಹುದು. ಮನಸ್ಸು ಕೂಡಾ ಅಸಮಾಧಾನದಿಂದ ಕೂಡಲಿದೆ. ಚಂದ್ರ ಕೇತುಯುಕ್ತವಾಗಿದ್ದಾನೆ. ಹೀಗಾಗಿ ಗಣಪತಿ ಪ್ರಾರ್ಥನೆ ಮಾಡಿ. 

ಸಿಂಹ(Leo): ನಿಮ್ಮ ರಾಶಿಯಿಂದ ಚಂದ್ರ ಕೇತುಯುಕ್ತನಾಗಿ ಚತುರ್ಥದಲ್ಲಿದ್ದಾನೆ. ಕೃಷಿಕರು ಎಚ್ಚರದಿಂದಿರಿ. ನೀರು ಸಂಬಂಧ ಕೆಲಸ ಮಾಡುವವರೂ ಎಚ್ಚರ ವಹಿಸಿ. ತಂದೆಯ ಬಂಧುಗಳ ಜೊತೆ ವ್ಯವಹರಿಸಬೇಡಿ. ಪೆಟ್ಟು ಬೀಳುವ ಸಾಧ್ಯತೆ ಇದೆ. ತಂದೆ ಮಕ್ಕಳಲ್ಲೂ ವಿರೋಧ ಬರುವ ಸೂಚನೆ ಇದೆ. ಪರಿಹಾರಕ್ಕಾಗಿ ಈಶ್ವರನನ್ನು ಆರಾಧಿಸಿ.
 
ಕನ್ಯಾ(Virgo): ನಿಮ್ಮ ರಾಶಿಯಿಂದ ಪಂಚಮದಲ್ಲಿರುವ ಮಾಂದಿ ಮಕ್ಕಳಲ್ಲಿ ವಿರೋಧ ಉಂಟು ಮಾಡುತ್ತದೆ. ಮಕ್ಕಳ ನಡೆ, ನುಡಿ ಬೇಸರ ಮೂಡಿಸುತ್ತದೆ. ಮನಸ್ಸು ಕೊಂಚ ಕದಡಿ ಹೋಗುತ್ತದೆ. ಯಾವುದಾದರೂ ಮುಖ್ಯ ಕಡತಗಳಿಗೆ ಸಹಿ ಹಾಕುವಾಗ ತಾಳ್ಮೆ ಇರಲಿ. ಈ ಕೆಲಸ ಮುಂದೂಡಿದರೆ ಇನ್ನೂ ಉತ್ತಮ. ಪರಿಹಾರಕ್ಕಾಗಿ ಕೃಷ್ಣನಿಗೆ ತುಳಸಿ ಸಮರ್ಪಿಸಿ. 

ತುಲಾ(Libra): ಆಹಾರದಲ್ಲಿ ವ್ಯತ್ಯಾಸ, ನೀರಿನ ವ್ಯತ್ಯಾಸ ಕಾಣಲಿದೆ. ಜ್ವರ, ನೆಗಡಿ ಮುಖದಲ್ಲಿ ಅಸಮಾಧಾನದ ಭಾವ ಕಾಡಲಿದೆ. ಪ್ರಯಾಣದಲ್ಲಿ ಎಚ್ಚರವಿರಲಿ. ಸಿವಿಲ್ ಕೆಲಸ ಮಾಡುವವರು, ಬೆಂಕಿ, ಸಿಮೆಂಟ್ ಕೆಲಸ ಮಾಡುವವರು ಎಚ್ಚರದಿಂದಿರಿ. ವಿಷ ಜಂತುಗಳ ಭಯ ಕಾಣಲಿದೆ. ಹೃದಯ ಭಾಗದಲ್ಲಿ ಹಾಗೂ ಶ್ವಾಸಕೋಶದಲ್ಲಿ ಸಮಸ್ಯೆ ಕಾಣುವ ಲಕ್ಷಣಗಳಿವೆ. ಹೀಗಾಗಿ ಧನ್ವಂತರಿ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ನಿಮ್ಮ ರಾಶಿಯಲ್ಲಿರುವ ಚಂದ್ರ ಕೇತುವಿನಿಂದ ತಲೆಬಿಸಿ. ಹೆಣ್ಮಕ್ಕಳು ಟೆನ್ಶನ್ ಮಾಡ್ತಾರೆ. ವೃತ್ತಿಯಲ್ಲಿರುವವರಿಗೆ ಅಸಮಾಧಾನ. ಸಹೋದರನೊಂದಿಗೆ ವ್ಯವಹರಿಸುವಾಗ ಸ್ವಲ್ಪ ಶಾಂತಿಯಿಂದಿರಿ. ಇಂದು ಈಶ್ವರ ಹಾಗೂ ಸುಬ್ರಹ್ಮಣ್ಯನ ಪ್ರಾರ್ಥಿಸಿ.

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು(Sagittarius): ರಾಶಿಯವರಿಗೆ ಇಂದು ಆಹಾರದಲ್ಲಿ ವ್ಯತ್ಯಾಸ ಕಾಣಬಹುದು. ಕಹಿ ಅಥವಾ ಸಾತ್ವಿಕ ಆಹಾರ ಸೇವನೆ ಮಾಡಿ. ನವರಾತ್ರಿ ಸಮಯದಲ್ಲಿ ಈ ಆಹಾರ ಅತ್ಯಂತ ಸೂಕ್ತ. ಇನ್ನು ಉದ್ಯೋಗಿಗಳಿಗೆ ಅನುಕೂಲದ ಫಲ ತೋರಿಸುತ್ತಿದೆ, ಇದರಲ್ಲಿ ಸಂಶಯ ಇಲ್ಲ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.

ಮಕರ(Capricorn): ಮಕರ ರಾಶಿಯವರಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಿಇಯರು ಎಚ್ಚರದಿಂದಿರಿ. ತಿಂಡಿ, ಊಟ ವ್ಯತ್ಯಾಸವಾಗಿ ಆರೋಗ್ಯ ಹದಗೆಡಬಹುದು. ಶಾಂತತೆ ಬೇಕು, ಹೀಗಾಗಿ ಆಲೋಚನೆಯನ್ನು ಬಿಟ್ಟುಬಿಡಿ. ಅಮ್ಮನವರ ಪ್ರಾರ್ಥನೆ ಮಾಡಿ.

ಕುಂಭ(Aquarius): ನಿಮ್ಮ ರಾಶಿಯಲ್ಲಿ ಕರ್ಮ ಸ್ಥಾನದಲ್ಲಿ ಶುಕ್ರನೊಂದಿಗೆ ಚಂದ್ರ, ಕೇತು ಇದ್ದಾರೆ. ಹೀಗಾಗಿ ಸ್ತ್ರೀಯರು ಕೆಲಸದ ವಿಚಾರದಲ್ಲಿ ತೊಂದರೆ ಮಾಡಿಕೊಳ್ಳುವ ಸಾಧ್ಯತೆ. ಬಲ ಇದೆ, ಶುಕ್ರನೂ ಇದ್ದಾನೆ ಎಲ್ಲವೂ ಸರಿಯಾಗುತ್ತದೆ. ಹೆಣ ಹೆಚ್ಚು ಖರ್ಚಾಗಲಿದೆ, ಹೀಗಾಗಿ ಗಮನಹರಿಸಿ. ಅಲ್ಲದೇ ಅಮ್ಮನವರ ನಾಮಾವಳಿ ಪಠಿಸಿ. 

ಮೀನ(Pisces): ಈ ರಾಶಿಯವರಿಗೆ ಲಾಭ ತುಂಬಾ ವಚೆನ್ನಾಗಿದೆ. ಉದ್ಯೀಗದಲ್ಲೂ ಅನುಕೂಲದ ವಾತಾವರಣ ಸೂಚಿಸುತ್ತಿದೆ. ನಿಮ್ಮ ಬಂಧುಗಳ ಹಾಗೂ ಸಂಗಾತಿಯ ಸಹಕಾರ ಚೆನ್ನಾಗಿದೆ. ಕೊಂಚ ರಗಳೆ ಇದೆ. ಶಾಂತಿಗಾಗಿ ಮೈತ್ರೀಕರಣ ಮಂತ್ರ ಜಪಿಸಿ. 

click me!