
ಬೆಂಗಳೂರು(ಮಾ.17): ಜೋಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಭಾರಿ ಅನುಕಂಪ ಗಿಟ್ಟಿಸಿದ ಹಿತೇಶಾ ಚಂದ್ರಾಣಿಗೆ ಸಂಕಷ್ಟದ ದಿನ ಸನಿಹವಾಗಿದೆ. ಡೆಲಿವರಿ ಬಾಯ್ ಕಾಮರಾಜ್ ಪ್ರತಿ ದೂರು ದಾಖಲಿಸುತ್ತಿದ್ದಂತೆ ಇದೀಗ ಹಿತೇಶಾ ಚಂದ್ರಾಣಿ ಬೆಂಗಳೂರಿನಿಂದ ಜಾಗ ಖಾಲಿ ಮಾಡಿದ್ದಾರೆ.
ಮಹಿಳೆಗೆ ಶಾಕ್, ಜೋಮ್ಯಾಟೋ ಕೇಸ್‌ಗೆ ಮತ್ತೊಂದು ಟ್ವಿಸ್ಟ್
ಕಾಮಾರಾಜ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಿಚಾರಣೆಗಾಗಿ ಚಂದ್ರಾಣಿ ಕರೆಸಲು ಪೊಲೀಸರು ನಿರ್ಧರಿಸಿದ್ದಾರೆ. ಅಷ್ಟರೊಳಗೆ ಹಿತೇಶಾ ಚಂದ್ರಾಣಿ ಬೆಂಗಳೂರು ಖಾಲಿ ಮಾಡಿದ್ದಾರೆ. ಇದೀಗ ಚಂದ್ರಾಣಿ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದಾರೆ.
ಚಂದ್ರಾಣಿ ವಿಡಿಯೋ ಮೂಲಕ ತನ್ನ ಮೇಲಿನ ಹಲ್ಲೆ ಹಾಗೂ ಸಮರ್ಥನೆ ನೀಡಿದ್ದರು. ಆದರೆ ಈ ವೇಳೆ ತಮ್ಮ ವಿಳಾಸ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ಇತ್ತ ಫುಡ್ ಡೆಲಿವರಿ ಬಾಯ್ ಕಾಮರಾಜ್‌ಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದಂತೆ, ಚಂದ್ರಾಣಿಗೆ ನಡುಕು ಶುರುವಾಗಿದೆ. ಬೆಂಗಳೂರು ಖಾಲಿ ಮಾಡಿ ನಾಪತ್ತೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ