ಬೆಳಗಾವಿ: ಬಾವಿಯಲ್ಲಿ ರುಂಡ ಇಲ್ಲದ ಯುವಕನ ಮೃತದೇಹ, ಬೆಚ್ಚಿಬಿದ್ದ ಜನತೆ

Published : Jul 05, 2022, 12:20 PM IST
ಬೆಳಗಾವಿ: ಬಾವಿಯಲ್ಲಿ ರುಂಡ ಇಲ್ಲದ ಯುವಕನ ಮೃತದೇಹ, ಬೆಚ್ಚಿಬಿದ್ದ ಜನತೆ

ಸಾರಾಂಶ

*   ಬೆಳಗಾವಿ ತಾಲೂಕಿನ ಮುತಗಾ ಬಳಿ ನಡೆದ ಘಟನೆ  *  ಹೊಲದಲ್ಲಿರುವ ಬಾವಿಯಲ್ಲಿ ರುಂಡ ಇಲ್ಲದ ಯುವಕನ ಮೃತದೇಹ ಪತ್ತೆ •  ರುಂಡಕ್ಕಾಗಿ ಪೊಲೀಸರ ಶೋಧ ಕಾರ್ಯ 

ಬೆಳಗಾವಿ(ಜು.05):  ಜಮೀನಿನ ಬಾವಿಯೊಂದರಲ್ಲಿ ರುಂಡವಿಲ್ಲದ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಬಳಿ ಇಂದು(ಮಂಗಳವಾರ) ನಡೆದಿದೆ. ಸುಮಾರು 30 ವರ್ಷದ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. 

ಮುತಗಾ-ಮುಚ್ಚಂಡಿ ಗ್ರಾಮದ ಮಾರ್ಗ ಮಧ್ಯೆ ಇರುವ ರೈತ ಸುನೀಲ್ ಅಷ್ಟಗೇಕರ್ಎಂಬುವರಿಗೆ ಸೇರಿದ ಜಮೀನಿನಲ್ಲಿ ಇರುವ ಬಾವಿಯಲ್ಲಿ ರುಂಡ ಇಲ್ಲದ ದೇಹ ತೇಲುತ್ತಿರುವುದನ್ನು ಕಂಡು ಮಾರಿಹಾಳ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ

ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಬಾವಿಯ ಸುತ್ತಮುತ್ತ ಯುವಕನ ರುಂಡಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಯುವಕನ ಕೊಲೆ ಮಾಡಿ ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಯುವಕನ ರುಂಡ ಕತ್ತರಿಸಿ ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಮೃತದೇಹಕ್ಕೆ ಕಲ್ಲು ಕಟ್ಟಿ ಬಾವಿಗೆ ಎಸೆದಿದ್ದಾರೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನಿಖೆ ಮುಂದುವರಿದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಜಯಪುರದಲ್ಲಿ ವಿಕೃತ ಘಟನೆ, ಹಾಲು ತರಲು ಹೋದ ಮಹಿಳೆಯ ಕಿವಿ ಕತ್ತರಿಸಿ ಚಿನ್ನ ಕದ್ದ ಕಳ್ಳರು!
ಶಿಡ್ಲಘಟ್ಟದ 'ಹನಿ' ಹಿಂದೆ ಹೋದ ಚಿಕ್ಕಬಳ್ಳಾಪುರದ ಬಾಲಾಜಿ, ಟ್ರ್ಯಾಪ್‌ ಆಗಿದ್ದಕ್ಕೆ ಜೀವನವನ್ನೇ ಮುಗಿಸಿದ!