ಅತ್ತೆ ಜತೆ ಅಕ್ರಮ ಸಂಬಂಧ: ಸ್ನೇಹಿತನ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಬೆಸ್ಟ್‌ಫ್ರೆಂಡ್‌

Published : Jul 30, 2022, 10:17 AM IST
ಅತ್ತೆ ಜತೆ ಅಕ್ರಮ ಸಂಬಂಧ: ಸ್ನೇಹಿತನ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಬೆಸ್ಟ್‌ಫ್ರೆಂಡ್‌

ಸಾರಾಂಶ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ನಡೆದ ಘಟನೆ 

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್, ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ(ಜು.30): ಅತ್ತೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಬೆಳಗೊಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ 28 ವರ್ಷದ ರವಿ ಎಂಬಾತನೆ ಸ್ನೇಹಿತನಿಂದಲೇ ಹತನಾಗಿದ್ದು, ಸ್ನೇಹಿತ ಶರತ್ ರವಿಯ ಕುತ್ತಿಗೆ ಕೂಯ್ದು ಭೀಕರ ಕೊಲೆ ಮಾಡಿದ್ದಾನೆ. ಜುಲೈ 27ರ ರಾತ್ರಿ 8:30ರ ಸಮಯದಲ್ಲಿ ಬೆಳಗೊಳ ಗ್ರಾಮದ ಸವಿತಾ ವೈನ್ ಸ್ಟೋರ್ ಬಳಿ ಘಟನೆ ನಡೆದಿದೆ. ಬಾರ್ ಮುಂಭಾಗ ನಿಂತಿದ್ದ ರವಿಯನ್ನು ಮಾತನಾಡಿಸುವ ನೆಪದಲ್ಲಿ ಬರುವ ಶರತ್ ರವಿ ಹಿಂಭಾಗ ತೆರಳಿ ಮೊದಲಿಗೆ ಕತ್ತು ಕೂಯ್ದಿದ್ದಾನೆ. ನಂತರ ಕೆಳಗೆ ಬಿದ್ದ ರವಿ ತಲೆ ಭಾಗಕ್ಕೆ ಮಚ್ಚಿನಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದು, ಬಿಡಿಸಲು ಬಂದ ಸ್ಥಳೀಯರು ಕೈ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದನು. ಕೊಲೆಯ ಭಯಾನಕ ದೃಶ್ಯಗಳು ಬಾರ್‌‌ನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಅಂದಹಾಗೆ ರವಿ ಮತ್ತು ಶರತ್ ಇಬ್ಬರು ಆತ್ಮೀಯ ಸ್ನೇಹಿತರು. ಮನೆಯ ಜವಾಬ್ದಾರಿ ಹೊತ್ತು ಹಗಲಿರುಳು ದುಡಿಯುತ್ತಿದ್ದ‌ ರವಿ. ಹಗಲಿನಲ್ಲಿ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಶಾಲಾ ಮಕ್ಕಳನ್ನು ಡ್ರಾಪ್ ಪಿಕಪ್ ಮಾಡಿ ಸಂಜೆ ವೇಳೆ ಬೆಳಗೊಳ ಗ್ರಾಮದಲ್ಲಿರುವ ಬಾರ್‌ನಲ್ಲಿ ಸಪ್ಲೆಯರ್ ಕೆಲಸ ಮಾಡುತ್ತಿದ್ದ. ಕಳೆದ 10 ತಿಂಗಳ ಹಿಂದೆ ಸ್ನೇಹಿತ ಶರತ್‌ಗೆ ಕೊಟ್ಟಷ್ಟು ಬಾಡಿಗೆ ಕೊಡು ಅಂತ ಹೇಳಿ ತನ್ನ ಮನೆಯನ್ನೇ ಬಾಡಿಗೆ ಕೊಟ್ಟಿದ್ದನು. ಅಪ್ಪ ಅಮ್ಮ ಇಲ್ಲದ ಕಾರಣ ತನ್ನ ಅತ್ತೆ ಮಾವನ ಜೊತೆಯಲ್ಲಿ ಬಂದಿದ್ದ ಶರತ್ ರವಿ ಮನೆಯಲ್ಲಿ ಬಾಡಿಗೆಗೆ ವಾಸವಿದ್ದನು. 

ಸ್ಕೂಟಿ ರಿಪೇರಿಗೆ ಹೋದ ಆಂಟಿಗೆ ಮೆಕ್ಯಾನಿಕ್ ಮೇಲೆ ಲವ್, ನಂತರ ನಡೆದಿದ್ದು ಯುಗಪುರುಷ ಸಿನಿಮಾ ಸ್ಟೈಲ್

ರವಿ ಬಾರ್ ಕೆಲಸ ಮಾಡ್ತಿದ್ರೆ ಬಾರ್ ಮುಂಭಾಗ ಕಬಾಬ್ ಅಂಗಡಿ ನಡೆಸುತ್ತಾ ಶರತ್ ಬದುಕು ಸಾಗಿಸುತ್ತಿದ್ದ. ಆದರೆ ದಿನ ಕಳೆದಂತೆ ಶರತ್ ಅತ್ತೆ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದ ರವಿ ಕದ್ದು ಮುಚ್ಚಿ ಆಕೆ ಜೊತೆ ಲವ್ವಿಡವ್ವಿ ಶುರುಮಾಡಿದ್ದನು. ಮನೆಯಲ್ಲಿ ಯಾರು ಇಲ್ಲದ ವೇಳೆ ಅವರ ಮನೆಯಲ್ಲೇ ಕಾಲ‌ ಕಳೆಯುತ್ತಿದ್ದನು. ಬಾರ್‌ನಲ್ಲಿ ಕೆಲಸ ಮುಗಿಸಿ ಶರತ್ ಮನೆಯಲ್ಲಿ ಸೇರಿಕೊಳ್ತಿದ್ದ ರವಿ ಆತನ ಜೊತೆ ಸೇರಿ ದಿನನಿತ್ಯ ಪಾರ್ಟಿ ಮಾಡ್ತಿದ್ದ. ಸದಾ ಪಕ್ಕದ ಮನೆಯಲ್ಲೇ ಇರ್ತಿದ್ದ ರವಿಯನ್ನ ಪ್ರಶ್ನಿಸಿದ್ದ ಅಜ್ಜಿ ಆತನ ಬೈಗುಳಕ್ಕೆ ಹೆದರಿ ಸುಮ್ಮನಾಗಿದ್ರು. ಆದರೆ ರವಿಯನ್ನು ನಂಬಿದ್ದ ಶರತ್ ಆತ ಮನೆಗೆ ಬರ್ತಿರೋದು ತನ್ನ ಅತ್ತೆಗಾಗಿ ಅನ್ನೋದನ್ನ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ರವಿಯ ಪಲ್ಲಂಗದಾಟ ಬಯಲಾಗಿದೆ. ತನ್ನ ಅತ್ತೆ ಜೊತೆಗೆ ಮಂಚವೇರುತ್ತಿದ್ದ ವಿಷಯ ಶರತ್‌ಗೆ ತಿಳಿದಿತ್ತು. ಈ ವಿಚಾರವಾಗಿ ಗಲಾಟೆ ಕೂಡ ಮಾಡಿದ್ದ. ಆದರೆ ಮಾತುಕೇಳದ ಸ್ನೇಹಿತ ರವಿ ತನ್ನ ಚಾಳಿ ಮುಂದುವರೆಸಿದ್ದನು. 

ಜುಲೈ 27ರ ಮಧ್ಯಾಹ್ನ ತನ್ನ ಅತ್ತೆ ಜೊತೆ ರವಿ ಜಗಳವಾಡಿದ್ದನು. ಮೊದಲೇ ಅಕ್ರಮ ಸಂಬಂಧಕ್ಕೆ ಬೇಸತ್ತಿದ್ದ ಶರತ್ ಜಗಳ ನೆಪವಿಟ್ಟುಕೊಂಡು ಈ ಬಾರಿ ಸ್ನೇಹಿತನನ್ನು ಮುಗಿಸುವ ಪ್ಲಾನ್ ಮಾಡಿದ್ದ. ರಾತ್ರಿ ವೇಳೆ ಬಾರ್ ಬಳಿ ರವಿ ಇರುವುದನ್ನು ತಿಳಿದಿದ್ದ ಶರತ್ ಮಚ್ಚು ಹಿಡಿದು ಕೊಲೆ ಮಾಡಲು ಹೊರಟಿದ್ದನು. 

ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು

ರಾತ್ರಿ 8:30ರ ಸಮಯದಲ್ಲಿ ಬಾರ್ ಬಳಿ ಬಂದ ಆತ ಅಲ್ಲೆ ನಿಂತಿದ್ದ ರವಿ ಬಳಿ ಹೋಗಿದ್ದಾನೆ. ಆತನ ಹಿಂಬದಿ ನಿಂತು ಏಕಾಏಕಿ ಕತ್ತು ಕೂಯ್ದಿದ್ದಾನೆ. ಬಳಿಕ ರವಿ ತಲೆ ಭಾಗಕ್ಕೆ ಮಚ್ಚಿನಿಂದ ಮನಸ್ಸೋ‌ ಇಚ್ಛೆ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವಿ ಸಹಾಯಕ್ಕೆ ಓಡೋಡಿ ಬಂದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಧಿಯಾಟ ಆಸ್ಪತ್ರೆ ಮುಟ್ಟುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. 

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೆಆರ್‌ಎಸ್‌ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಪರಾರಿಯಾಗಿದ್ದ ಹಂತಕ ಶರತ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!