ಲವ್‌ ಕೇಸ್‌: ಯುವಕನಿಗೆ ನೇಣು ಹಾಕಿ ಕೊಲೆ..!

By Kannadaprabha News  |  First Published Jul 29, 2021, 8:32 AM IST

* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದ ಘಟನೆ
*  ಯುವತಿಯನ್ನು ಪ್ರೇಮಿಸುತ್ತಿದ್ದ ಕೊಲೆಯಾದ ಯುವಕ
*  ತನಿಖೆ ಆರಂಭಿಸಿದ ಪೊಲೀಸರು


ಗಂಗಾವತಿ(ಜು.29):  ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನಿಗೆ ನೇಣು ಹಾಕಿ ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಜರುಗಿದೆ. 

ಹನುಮೇಶ ವಡ್ಡರ್‌ (22) ಎನ್ನುವಾತ ಕೊಲೆಯಾದ ಯುವಕ. ಹನುಮೇಶ ವಡ್ಡರ್‌ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸುತ್ತಿದ್ದ. ಅದಕ್ಕೆ ಯುವತಿಯ ತಂದೆ, ತಾಯಿ ಮತ್ತು ಕುಟುಂಬದವರ ವಿರೋಧವಿತ್ತು ಎಂದು ಹೇಳಲಾಗುತ್ತಿದೆ.

Tap to resize

Latest Videos

ಪ್ರವಾಸಿ ತಾಣದ ಗುಹೆಯಲ್ಲಿ ಪತ್ನಿಯೊಂದಿಗೆ ಸೆಕ್ಸ್ ನಂತರ ಹತ್ಯೆ!

ಯುವತಿಯ ಕಡೆಯವರು ಹನುಮೇಶನನ್ನು ತೋಟ ಒಂದಕ್ಕೆ ಕರೆದುಕೊಂಡು ಹೋಗಿ ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ಹನುಮೇಶನ ಸಹೋದರ ಪರಶುರಾಮ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

click me!