40ರ ಪತ್ನಿಯ  45ರ ಬಾಯ್ ಫ್ರೆಂಡ್ ಮರ್ಮಾಂಗಕ್ಕೆ ಶೂಟ್ ಮಾಡಿದ 46ರ ಪತಿರಾಯ!

By Suvarna News  |  First Published Jul 28, 2021, 5:41 PM IST

* ಪತ್ನಿ ಗೆಳೆಯನ ಮರ್ಮಾಂಗಕ್ಕೆ ಶೂಟ್ ಮಾಡಿದ ಪತಿರಾಯ
* ವಿಚ್ಛೇದನಕ್ಕೆ ಅರ್ಜಿ ಹಾಕಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು
* ಪತ್ನಿ ಇದ್ದ ಜಾಗಕ್ಕೆ ತೆರಳಿ ಏರ್ ಗನ್ ನಿಂದ ಶೂಟ್


ಕೊಟ್ಟಾಯಮ್(ಜು. 28) ಇದೊಂದು ವಿಚಿತ್ರ ಪ್ರಕರಣ.  ಪತ್ನಿಯ ಬಾಯ್ ಫ್ರೆಂಡ್  ಮರ್ಮಾಂಗದ ಮೇಲೆ ಪರಿರಾಯ ಹಲ್ಲೆ ಮಾಡಿದ್ದಾನೆ. 46 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ 45 ವರ್ಷದ ಪ್ರೇಮಿಯ  ಖಾಸಗಿ  ಅಂಗಕ್ಕೆ  ಏರ್ ಗನ್ನಿಂದ ಗುಂಡು ಹಾರಿಸಿದ್ದಾನೆ. ಗಾಯಗೊಂಡಿರುವ ಬಾಯ್ ಫ್ರೆಂಡ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

40 ವರ್ಷದ ಮಹಿಳೆ  ಗಂಡನ ತೊರೆದು ಪ್ರಿಯತಮನೊಂದಿಗೆ ಅಲಪ್ಪುಳ ಜಿಲ್ಲೆಯ ಚೆಂಗಣ್ಣೂರು ಪ್ರದೇಶದ ಮುಂಡಂಕವಿಯಲ್ಲಿ ವಾಸಿಸುತ್ತಿದ್ದಳು.  ಗಂಡನಿಂದ ಬೇರೆಯಾಗುವ ನಿರ್ಧಾರ ಮಾಡಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಶನಿವಾರ ಇದ್ದಕ್ಕಿದ್ದಂತೆ ಮಹಿಳೆ ವಾಸಿಸುತ್ತಿದ್ದೆ ಜಾಗಕ್ಕೆ ಬಂದ ಪತಿರಾಯ ಆಕೆಯ ಪ್ರಿಯತಮನ ಮೇಲೆ ದಾಳಿ ಮಾಡಿದ್ದಾನೆ.

Tap to resize

Latest Videos

undefined

ಸೆಕ್ಸ್ ನಲ್ಲಿದ್ದಾಗ ಕಿರುಚಿದ್ರೆ ದಂಪತಿ ವಿರುದ್ಧ ಕೇಸ್

ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆದು ಮನೆಗೆ ಬಂದವನ ಖಾಸಗಿ ಅಂಗಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಿದೆ. ನಂತರ ಮತ್ತೆ ಆಸ್ಪತ್ರೆಗೆ ತೆರಳಬೇಕಾಗಿದೆ. ಆಸ್ಪತ್ರೆಯವರು ಪೊಲೀಸರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.  ಅದರೆ ಯಾರೂ ಲಿಖಿತ ದೂರು ದಾಖಲಿಸದ ಕಾರಣ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ.

 

 

click me!