ಅತ್ಯಾಚಾರದ ದೂರು ಕೊಡಲು ಬಂದ ಬಾಲಕಿಗೆ ಪೊಲೀಸ್ ಠಾಣೆಯಲ್ಲೇ ಹೆರಿಗೆ

By Suvarna News  |  First Published Jul 28, 2021, 4:09 PM IST

* ಪೊಲೀಸ್ ಠಾಣೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ
* ಊರಿನ ಯುವಕನಿಂದಲೇ ಅತ್ಯಾಚಾರ
* ಮಗು ಹುಟ್ಟುವುದರೊಳಗೆ ಮದುವೆಯಾಗುತ್ಥೆನೆ ಎಂದು ನಂಬಿಸಿದ್ದ
* ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ


ಭೋಪಾಲ್(ಜು. 28)  ಅತ್ಯಾಚಾರಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿ ಪೊಲೀಸ್ ಸ್ಟೇಶನ್ ಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ.  ಮಧ್ಯಪ್ರದೇಶದ ಚಿಂದ್ವಾರಾದ ಪೊಲೀಸ್ ಠಾಣೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬಾಲಕಿಯು ಸಂಬಂಧಿಕರ ಜೊತೆ ಮಂಗಳವಾರ ಸಂಜೆ  ಪೊಲೀಸ್ ಠಾಣೆಗೆ  ಬಂದಿದ್ದಾರೆ. ತಮ್ಮದೆ ಊರಿಯ ಯುವಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಿಸಲು ಮುಂದಾಗಿದ್ದಾರೆ.  ಇದ್ದಕ್ಕಿದ್ದಂತೆ ಬಾಲಕಿ ಹೆರಿಗೆ ನೋವಿನಿಂದ ಚಡಪಡಿಸಲು ಆರಂಭಿಸಿದ್ದಾಳೆ. ತಕ್ಷಣ ಆಕೆಯನ್ನು  ಪೊಲೀಸ್ ಠಾಣೆಯ ಇನ್ನೊಂದು ಕೊಠಡಿಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಯೇ ಆಕೆ ಜನ್ಮ ನೀಡಿದ್ದಾಳೆ.

Tap to resize

Latest Videos

ಪ್ರವಾಸಿ ತಾಣದಲ್ಲಿ ಪತ್ನಿಯೊಂದಿಗೆ ಸೆಕ್ಸ್ ನಡೆಸಿ ಹತ್ಯೆ ಮಾಡಿದ

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಚೌರಾಸಿಯಾ,  ಯುವಕ ಮುದುವೆಯಾಗುವುದಾಗಿ ನಂಬಿಸಿ ಕಳೆದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಅತ್ಯಾಚಾರ ಎಸಗಿದ್ದ.  ಮದುವೆಯಾಗುತ್ತೇನೆ ಎಂದು ಹೇಳಿಕೊಂಡೇ ಒಂಭತ್ತು ತಿಂಗಳು ದೂಡಿದ್ದ.  ಮಗು ಹುಟ್ಟುವ ಮುನ್ನ ಮದುವೆಯಾಗುವ ಭರವಸೆ ಕೊಟ್ಟಿದ್ದ. ಆದರೆ ಕೊನೆ ಕ್ಷಣದಲ್ಲಿ ಮದುವೆಯಾಗುವುದಿಲ್ಲ ಎಂದು ಆಟ ಆಡಿದ್ದಾನೆ. ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಕುಟುಂಬ ಬಂದಿದೆ. ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 

 

click me!