Shivamogga: ಗಂಡ-ಹೆಂಡತಿ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯ!

By Govindaraj S  |  First Published Sep 7, 2022, 1:53 PM IST

ಪತಿ-ಪತ್ನಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ಮಂಜುಳಾ (35) ಎಂದು ಗುರುತಿಸಲಾಗಿದೆ.  ಶಿವಮೊಗ್ಗದ ಪ್ರಿಯಾಂಕಾ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಚಾಕುವಿನಿಂದ ಕತ್ತಿಗೆ ಚುಚ್ಚಿದ ಸ್ಥಿತಿಯಲ್ಲಿ ಮಂಜುಳಾ ಶವ ಪತ್ತೆಯಾಗಿದೆ.


ಶಿವಮೊಗ್ಗ (ಸೆ.07): ಪತಿ-ಪತ್ನಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತರನ್ನು ಮಂಜುಳಾ (35) ಎಂದು ಗುರುತಿಸಲಾಗಿದೆ.  ಶಿವಮೊಗ್ಗದ ಪ್ರಿಯಾಂಕಾ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ಚಾಕುವಿನಿಂದ ಕತ್ತಿಗೆ ಚುಚ್ಚಿದ ಸ್ಥಿತಿಯಲ್ಲಿ ಮಂಜುಳಾ ಶವ ಪತ್ತೆಯಾಗಿದೆ. ಪತ್ನಿಯನ್ನು ಕೊಂದ ಬಳಿಕ ಪತಿ ದಿನೇಶ್ ತನ್ನ ಕೈಯನ್ನೂ ಚಾಕುವಿನಿಂದ ಕತ್ತರಿಸಿ ಕೊಂಡಿದ್ದಾನೆ. ಮಕ್ಕಳು ಬೆಳಿಗ್ಗೆ ಎದ್ದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ತಂದೆ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಕಂಡಿದ್ದಾರೆ.  

ಕೂಡಲೇ ಮಕ್ಕಳು ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಸಂಬಂಧಿಕರು ಬಂದು ದಿನೇಶ್‌ನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಕಳೆದ ರಾತ್ರಿ ಪತಿ-ಪತ್ನಿಯ ನಡುವೆ ಜಗಳವಾಗಿತ್ತು. ಎಂದು ದಂಪತಿಗಳ ಮಕ್ಕಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾಳಾ..?  ಅಥವಾ ಪತಿಯಿಂದಲೇ ನಡೆದ ಕೊಲೆಯೇ ಎಂಬುದು ಪೊಲೀಸ್ ತನಿಖೆಯಲ್ಲೇ ಗೊತ್ತಾಗಲಿದೆ. ತುಂಗಾನಗರ ಠಾಣೆ ಪಿಐ ಮಂಜುನಾಥ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದು, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

ಶಾಲಾ ಶೌಚಾಲಯದಲ್ಲಿ ಹೆರಿಗೆ: ಪೆನ್ನಿಂದ ಹೊಕ್ಕುಳಬಳ್ಳಿ ಕತ್ತರಿಸಿಕೊಂಡ ವಿದ್ಯಾರ್ಥಿನಿ

ಪ್ರೇಯಸಿಗಾಗಿ ಸ್ನೇಹಿತನನ್ನೇ ಕೊಂದ ಬಾಲ್ಯ ಸ್ನೇಹಿತ: ತನ್ನ ಪ್ರೇಯಸಿಯನ್ನು ಮದುವೆ ಮಾಡಿಕೊಂಡ ಎಂಬ ಕಾರಣಕ್ಕೆ ಕೋಪಗೊಂಡು ನವವಿವಾಹಿತನೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿರುವ ಘಟನೆ ಬೈಯಪ್ಪನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಳೇ ಬೈಯಪ್ಪನಹಳ್ಳಿ ಸಮೀಪದ ಗಜೇಂದ್ರ ನಗರದ ಸತೀಶ್‌ (24) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಮೃತನ ಸ್ನೇಹಿತ ರಾಕೇಶ್‌ ಹಾಗೂ ದೀಪಕ್‌ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಮದುವೆ ಮಾಡಿಕೊಂಡಿರುವ ವಿಚಾರವಾಗಿ ಬೈಯ್ಯಪನಹಳ್ಳಿ ಮೇಲ್ಸೇತುವೆ ಸಮೀಪ ಗೆಳೆಯರ ಮಧ್ಯೆ ಶುಕ್ರವಾರ ರಾತ್ರಿ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ರಾಕೇಶ್‌, ಗೆಳೆಯನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಸತೀಶ್‌ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಸತೀಶ್‌ ಹಾಗೂ ರಾಕೇಶ್‌ ಬಾಲ್ಯ ಸ್ನೇಹಿತರಾಗಿದ್ದು, ಗಜೇಂದ್ರ ನಗರದಲ್ಲಿ ಅವರು ನೆರೆಹೊರೆಯಲ್ಲೇ ನೆಲೆಸಿದ್ದರು. ಹೂ ಅಲಂಕಾರದ ಕೆಲಸ ಮಾಡಿಕೊಂಡು ಈ ಗೆಳೆಯರು ಜೀವನ ಸಾಗಿಸುತ್ತಿದ್ದರು. 

ಮುರುಘಾ ಶ್ರೀ ಫೋಕ್ಸೋ ಕೇಸ್: 2ನೇ ಆರೋಪಿ ಲೇಡಿ ವಾರ್ಡನ್‌ ಪೊಲೀಸ್ ಕಸ್ಟಡಿಗೆ

ಶ್ರೀರಾಮಪುರದ ಸ್ವರ್ಣ ಎಂಬಾಕೆಯನ್ನು ರಾಕೇಶ್‌ ಪ್ರೀತಿಸುತ್ತಿದ್ದ. ಆದರೆ ತಿಂಗಳ ಹಿಂದೆ ಆಕೆಯ ಜತೆ ಸತೀಶ್‌ ಮದುವೆಯಾಗಿದ್ದ. ಇದರಿಂದ ಕೆರಳಿದ ರಾಕೇಶ್‌, ತನಗೆ ದ್ರೋಹ ಬಗೆದು ನಾನು ಪ್ರೀತಿಸಿ ಹುಡುಗಿಯನ್ನು ವಿವಾಹವಾಗಿದ್ದೀಯಾ ಎಂದು ಸತೀಶ್‌ ಮೇಲೆ ಹಗೆ ಸಾಧಿಸುತ್ತಿದ್ದ. ಇದೇ ವಿಚಾರವಾಗಿ ಕೆಲವು ಬಾರಿ ಮಾತಿನ ಚಕಮಕಿ ಸಹ ನಡೆದಿತ್ತು. ಅಂತೆಯೇ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸತೀಶ್‌ನನ್ನು ಅಡ್ಡಗಟ್ಟಿರಾಕೇಶ್‌ ಹಾಗೂ ದೀಪಕ್‌ ಜಗಳ ಮಾಡಿದ್ದರು. ಆಗ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

click me!