ಬೈಕ್ ಮೇಲೆ ಹೋಗುತ್ತಾ ಯುವತಿಯರ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾಗೆ ಹಾಕಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದ ಯುವಕ. ಅಲ್ಲದೇ ವಿಡಿಯೋ ಮಾಡಿ ತನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಳ್ಳುತ್ತಿದ್ದ. ಸದ್ಯ ಯುವಕನನ್ನ ಹಿಡಿದು ಬಿಫೋರ್ ಮತ್ತು ಆಫ್ಟರ್ ಎನ್ನುವ ಯುವಕನ ವಿಡಿಯೋ ಮಾಡಿ ಹರಿ ಬಿಟ್ಟು ಬುದ್ಧಿ ಕಲಿಸಿದ ಧಾರವಾಡ ಉಪನಗರ ಪೊಲೀಸರು
ಧಾರವಾಡ(ಆ.10): ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರ ಸೆಲ್ಫಿ ವಿಡಿಯೋ ಮಾಡುತ್ತಿದ್ದ ರೋಹಿತ್ ಎಂಬ ಯುವಕನನ್ನ ವಶಕ್ಕೆ ಪಡೆದ ಪೊಲೀಸರು, ಆತನ ಬಿಫೋರ್-ಆಫ್ಟರ್ ವಿಡಿಯೋ ಮಾಡಿ ಬುದ್ಧಿ ಕಲಿಸಿದ್ದಾರೆ.
ಈತ ಬೈಕ್ ಮೇಲೆ ಹೋಗುತ್ತಾ ಯುವತಿಯರ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾಗೆ ಹಾಕಿ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದ. ಅಲ್ಲದೇ ವಿಡಿಯೋ ಮಾಡಿ ತನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿಕೊಳ್ಳುತ್ತಿದ್ದ. ಸದ್ಯ ಯುವಕನನ್ನ ಹಿಡಿದ ಧಾರವಾಡ ಉಪನಗರ ಪೊಲೀಸರು, ಬಿಫೋರ್ ಮತ್ತು ಆಫ್ಟರ್ ಎನ್ನುವ ಯುವಕನ ವಿಡಿಯೋ ಮಾಡಿ ಹರಿ ಬಿಟ್ಟು ಬುದ್ಧಿ ಕಲಿಸಿದ್ದಾರೆ.
ಯುವತಿಯ ಪೋಟೋ ಅಶ್ಲೀಲವಾಗಿ ಎಡಿಟ್ ಮಾಡಿ ಅಪ್ಲೋಡ್: ಆರೋಪಿ ರಜತ್ ಬಂಧನ
ಕಳೆದ 15 ದಿನಗಳ ಹಿಂದೆಯೂ ಇದೇ ರೀತಿ ಸೋಷಿಯಲ್ ಮಿಡಿಯಾ ಹುಚ್ಚು ಹಿಡಿದಿದ್ದ ಯುವಕನ ಹುಚ್ಚನ್ನು ಧಾರವಾಡ ಉಪನಗರ ಪೊಲೀಸರು ಬಿಡಿಸಿದ್ದರು. ಸದ್ಯ ಇಂತಹ ಪುಂಡರನ್ನು ಹಿಡಿದು ಅವರ ಈ ಪುಂಡಾಟಿಕೆ ಬಯಲು ಮಾಡುವ ಕೆಲಸ ಪೊಲೀಸರು ಮುಂದುವರಿಸಿದ್ದಾರೆ.