
ಹುಬ್ಬಳ್ಳಿ, (ಫೆ.05): ಪೊಲೀಸ್ ಪೇದೆಯಿಂದ ಲವ್ ಸೆಕ್ಸ್ ದೋಖಾ ಆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಘಟನೆಯಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಆಸ್ತಕಟ್ಟಿ ಗ್ರಾಮದ ಮೋಹನ್ ಲಮಾಣಿ ಮೋಸ ಮಾಡಿದ ಯುವಕ. ಕಲಘಟಗಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಡುಗಿಯರಿಗೆ ಅಶ್ಲೀಲ ಮೇಸೆಜ್ ಆರೋಪ: ಸಹೋದ್ಯೋಗಿಗೆ ಚೂರಿ ಇರಿದಿದ್ದ ನಾಲ್ವರ ಬಂಧನ!
ಮೋಹನ ಮಂಗಳೂರಿನಲ್ಲಿ ಪೊಲೀಸ್ ಪೇದೆ ಆಗಿ ಕಾರ್ಯನಿರ್ವಹಿಸುತ್ತಿದ್ದು, ಧಾರವಾಡದಲ್ಲಿ ಕಾಲೇಜಿಗೆ ಹೋಗುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.
ಕಳೆದ ಕೇಲವು ದಿನಗಳಿಂದ ಮದುವೆಗೆ ವಿರೋದ ವ್ಯಕ್ತಪಡಿಸಿದ್ದ ಯುವಕನ ವಿರುದ್ಧ ಕಲಘಟಗಿ ಠಾಣೆಯಲ್ಲಿ ಯುವತಿ ದೂರು ನೀಡಿದ್ದರು.
ಬಳಿಕ ಮದುವೆಯಾಗುವುದಾಗಿ ಹೇಳಿದ್ದ ಯುವಕನನ್ನು ನಂಬಿ ಯುವತಿ ಮನೆಯವರು ಮದುವೆ ಲಗ್ನ ಪತ್ರಿಕೆ ಪ್ರಿಂಟ್ ಹಾಕಿದ್ದರು. ಈಗ ಮತ್ತೆ ಯುವಕ ಮದುವೆಗೆ ನಿರಾಕರಿಸಿ, ಬೆದರಿಕೆ ಹಾಕಿದ್ದು, ಯುವತಿ ಮನನೊಂದು ಆತ್ಮಹತ್ಯೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾಳೆ.
ಶೀಲ ಶಂಕಿಸಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಪತಿ
ಗದಗ: ಶೀಲ ಶಂಕಿಸಿ ಪತಿ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮದಲ್ಲಿ ನಡೆದಿದೆ. ಹಾರೂಗೇರಿಯಲ್ಲಿ ಲಕ್ಷ್ಮವ್ವ ಚವಳಮ್ಮನವರ (38) ಹತ್ಯೆ ಮಾಡಲಾಗಿದೆ. ಪತಿ ತಿಮ್ಮಣ್ಣ, ಸಲಿಕೆಯಿಂದ ಹೊಡೆದು ಲಕ್ಷ್ಮವ್ವ ಹತ್ಯೆಗೈದಿದ್ದಾನೆ. ಆರೋಪಿ ತಿಮ್ಮಣ್ಣನನ್ನು ಮುಂಡರಗಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಗಾರ ನೀಡುವುದಾಗಿ ನಂಬಿಸಿ ಹಣ ದೋಚುತ್ತಿದ್ದವರು ಅಂದರ್
ಕೊಪ್ಪಳ: ಕಡಿಮೆ ದರದಲ್ಲಿ ಬಂಗಾರ ನೀಡುವುದಾಗಿ ನಂಬಿಸಿ ಹಣ ದೋಚುತ್ತಿದ್ದವರ ಬಂಧನ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸರಿಂದ ಹರಪನಹಳ್ಳಿ ಮೂಲದ ನಾಲ್ಕು ಜನರ ಬಂಧನ ಮಾಡಲಾಗಿದೆ. ಬುನಾದಿ ತೆಗೆಯುವಾಗ ಬಂಗಾರ ಸಿಕ್ಕಿದೆ. ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಣಗೆರಿಯ ವೆಂಕಟೇಶ ಎಂಬುವವರನ್ನು ನಂಬಿಸಿ 5 ಲಕ್ಷ ಹಣ ದೋಚಿದ್ದರು. ರಮೇಶ ಚಿಕ್ಕಮಗಳೂರು ಎಂದು ಹೇಳಿ ವೆಂಕಟೇಶಗೆ ಫೋನು ಮಾಡಿದ್ದ ಆರೋಪಿಗಳು, ಹಲಗೆರಿ ಬಳಿ ಹಣ ತಂದರೆ ಬಂಗಾರ ಕೊಡುವುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.
ಹಲಗೆರಿಗೆ ಬಂದಾಗ ವೆಂಕಟೇಶರಿಂದ 5 ಲಕ್ಷ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಫೆಬ್ರವರಿ 1 ರಂದು ಘಟನೆ ನಡೆದಿತ್ತು. ಹರಪನಹಳ್ಳಿ ಮೂಲದ 6 ಜನತ ತಂಡದಿಂದ ಘಟನೆ ನಡೆದಿದೆ. ಪರಾರಿಯಾಗಿದ್ದ 6 ಜನರಲ್ಲಿ 4 ಜನರ ಬಂಧನ ಮಾಡಲಾಗಿದೆ. ಅಳವಂಡಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ