* ಲಂಚ ಸಮೇತ ಸಿಕ್ಕಿ ಬಿದ್ದ ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪುಷ್ಪಲತಾ
* ಜಮೀನೊಂದರ ಖಾತೆ ಮಾಡಿ ಕೊಡಲು ರೈತನಿಗೆ 500 ರೂ. ಲಂಚಕ್ಕೆ ಬೇಡಿಕೆ
* ಎಸಿಬಿಗೆ ದೂರು ನೀಡಿದ್ದ ರೈತ
ಹಾಸನ(ಫೆ.05): ರೈತನಿಂದ(Farmer) ಲಂಚ ಪಡೆಯುವ ವೇಳೆ ಪಿಡಿಓ ಮತ್ತು ಕಾರ್ಯದರ್ಶಿ ಎಸಿಬಿ ಬಲೆಗೆ(ACB Raid) ಬಿದ್ದಿದ್ದಾರೆ. ಇಂದು(ಶನಿವಾರ) ಎಸಿಬಿ ಅಧಿಕಾರಿಗಳು ಮಾಡಿದ ವೇಳೆ ಹಾಸನ(Hassan) ತಾಲೂಕಿನ ಕೌಶಿಕ ಗ್ರಾಮ ಪಂಚಾಯ್ತಿ ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪುಷ್ಪಲತಾ ಲಂಚಸಮೇತ ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಜಮೀನೊಂದರ(Land) ಖಾತೆ ಮಾಡಿ ಕೊಡಲು ರೈತನಿಗೆ 500 ರೂ. ಲಂಚ(Bribe) ನೀಡಲು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ರೈತ ದೂರು(Complaint) ನೀಡಿದ್ದರು. ಲಂಚ ಪಂಚಾಯ್ತಿ ಕಚೇರಿಯಲ್ಲಿ ಲಂಚ ಪಡೆಯೋ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಈ ಭ್ರಷ್ಟ ಅಧಿಕಾರಿಗಳು. ಎಸಿಬಿ ಡಿವೈಎಸ್ಪಿ ಸತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ACB Raids ಕಾಲು ನೋವಿನ ಚಿಕಿತ್ಸೆಗೆ 12000 ರೂ ಲಂಚ ಕೇಳಿದ ಸರ್ಕಾರಿ ವೈದ್ಯ, ಸ್ವೀಕರಿಸುವಾಗ ಎಸಿಬಿ ಬಲೆಗೆ
ಎಸಿಬಿ ಬಲೆಗೆ ಬಿದ್ದ ದ್ವಿತೀಯ ದರ್ಜೆ ನೌಕರ
ಮುಧೋಳ: ಬಾಗಲಕೋಟೆ(Bagalkot) ಜಿಲ್ಲೆಯ ಮುಧೋಳ(Mudhol) ನಗರಸಭೆಯ ಆಶ್ರಯ ವಿಭಾಗದಲ್ಲಿ ದ್ವಿತೀಯ ದರ್ಜೆಯ ನೌಕರ ಸದಾಶಿವಯ್ಯಾ ಗುರುಪಾದಯ್ಯಾ ಕತ್ತಿ 10 ಸಾವಿರ ಲಂಚ ಸ್ವಿಕರಿಸುತ್ತಿದ್ದ ಸಂದರ್ಭದಲ್ಲಿ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಬಲೆಗೆ ಬಿದ್ದ ಘಟನೆ ಜ.31 ರಂದು ನಡೆದಿತ್ತು.
ಜ.31ರಂದು ಮಧ್ಯಾಹ್ನ ನಗರಸಭೆ ಕಾರ್ಯಾಲಯದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿ ದಸ್ತಗೀರ ಮಾಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದರು. 2019-20ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಮನೆ ಮಂಜೂರಾಗಿದ್ದು, ಸದರಿ ಮನೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರ ಬಗ್ಗೆ ಸದಾಶಿವಯ್ಯಾ ಗುರುಪಾದಯ್ಯ ಕತ್ತಿ ಅವರನ್ನು ಪ್ರಮಾಣ ಪತ್ರ ಕೊಡುವಂತೆ ವಿನಂತಿಸಿದಾಗ . 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ 5 ಸಾವಿರನ್ನು ಪಡೆದು ಉಳಿದ . 10 ಸಾವಿರನ್ನು ತಂದು ಕೊಡುವಂತೆ ತಿಳಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜ.28ರಂದು ಮುಧೋಳದ ಜಯನಗರ ಬಡಾವಣೆಯ ಮಂಜುನಾಥ ಮೋಹನ ತೋಟದಾರ ಎಂಬಾತ ಬಾಗಲಕೋಟೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜ.31ರಂದು ದ್ವಿತೀಯ ದರ್ಜೆ ನೌಕರ ಸದಾಶಿವಯ್ಯಾ ಲಂಚ ಸ್ವೀಕರಿಸುವಾಗ ಎಸಿಬಿ ದಾಳಿಗೆ ಸಿಕ್ಕಿ ಬಿದ್ದಿದ್ದನು.
Belagavi: ಸಚಿವೆ ಜೊಲ್ಲೆ ತವರು ಜಿಲ್ಲೆಯಲ್ಲಿ ಭ್ರಷ್ಟಾಚಾರ ಬಟಾಬಯಲು: ಇಬ್ಬರ ಬಂಧನ
ಈ ಕಾರ್ಯಾಚರಣೆಯನ್ನು ಉತ್ತರ ವಲಯದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಂ.ಎಸ್.ಸುರೇಶ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಇನ್ಸಪೆಕ್ಟರ್‌ಗಳಾದ ವಿಜಯಮಹಾಂತೇಶ ಮಠಪತಿ, ಸಮೀರ್ ಮುಲ್ಲಾ, ಸಿಬ್ಬಂದಿಗಳಾದ ಹೂಗಾರ, ಅಚನೂರ, ಪಾಟೀಲ, ಚುಚ್ರ್ಯಾಳ, ಮುಲ್ಲಾ, ಕಾಖಂಡಕಿ, ಸುನಗದ, ಶ್ರೀಮತಿ ರಾಠೋಡ, ಪೂಜಾರಿ ಇದ್ದರು.
ಅಮಾನತುಗೊಂಡ ಪಿಎಸ್‌ಐ ಸೇರಿ 12 ಜನರ ವಿರುದ್ಧ ಪ್ರಕರಣ
ಕೊಟ್ಟೂರು(Kotturu): ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ದಾಳಿ ವೇಳೆ ಬಂಧನಕ್ಕೊಳಗಾಗಿದ್ದ ಅಮಾನತುಗೊಂಡ ಪಿಎಸ್‌ಐ ಎಚ್. ನಾಗಪ್ಪ ಜಾಮೀನು ಪಡೆದು ಹೊರಗೆ ಬಂದ ಹಿನ್ನೆಲೆಯಲ್ಲಿ ಕೊಟ್ಟೂರು ಪಟ್ಟಣದಲ್ಲಿ ಅಂಬೇಡ್ಕರ್ ಕಾಲನಿ ಮತ್ತಿತರ ಕಡೆಗಳಲ್ಲಿ ನಾಗಪ್ಪರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಅಭಿಮಾನಿಗಳು ಕೋವಿಡ್ ನಿಯಮ ಉಲ್ಲಂಘಿಸಿದ್ದರು.
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಸೋಂಕು ಹರಡುವ ಸಂಭವನೀಯ ಪರಿಸ್ಥಿತಿ ನಿರ್ಮಾಣದ ಸಂದರ್ಭವನ್ನು ಸೃಷ್ಟಿಸಿದ್ದರು ಎಂದು ಕೊಟ್ಟೂರು ಪ್ರಭಾರಿ ಸರ್ಕಲ್ ಇನ್‌ಸ್ಪೆಕ್ಟರ್ ವಸಂತ್ ವಿ. ಅಸೂದೆ ಪ್ರಕರಣವನ್ನು ದಾಖಲಿಸಿದ್ದರು. ಈ ಬಗ್ಗೆ ಅಮಾನತುಗೊಂಡ ಪಿಎಸ್‌ಐ ನಾಗಪ್ಪ ಮತ್ತು ಇತರ 12 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ಪಿಎಸ್‌ಐ ವಡಕಪ್ಪ ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್(Police) ಪ್ರಕಟಣೆ ತಿಳಿಸಿದೆ.