Bengaluru: ಪಾಗಲ್ ಪ್ರೇಮಿ ಕಾಟಕ್ಕೆ ದಂತ ವೈದ್ಯೆ ಆತ್ಮಹತ್ಯೆ: ಸಹಪಾಠಿ ಅಪಪ್ರಚಾರ ಕಾರಣ?

By Kannadaprabha News  |  First Published Feb 3, 2023, 8:25 AM IST

ಪ್ರೀತಿಯ ವಿಚಾರವಾಗಿ ಬೇಸರಗೊಂಡು ಖಾಸಗಿ ಆಸ್ಪತ್ರೆ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 


ಬೆಂಗಳೂರು (ಫೆ.03): ಪ್ರೀತಿಯ ವಿಚಾರವಾಗಿ ಬೇಸರಗೊಂಡು ಖಾಸಗಿ ಆಸ್ಪತ್ರೆ ಮಹಿಳಾ ವೈದ್ಯೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಜಯನಗರದ ನಾಗಶೆಟ್ಟಿಹಳ್ಳಿ ನಿವಾಸಿ ಪ್ರಿಯಾಂಶಿ ತ್ರಿಪಾಠಿ (28) ಮೃತ ದುರ್ದೈವಿ. ಇತ್ತೀಚೆಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಿಯಾಂಶಿ ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಮಗಳಿಗೆ ಮದುವೆ ವಿಚಾರವಾಗಿ ನೀಡಿದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ವೈದ್ಯ ಸುಮೀತ್‌ ವಿರುದ್ಧ ಸಂಜಯನಗರ ಠಾಣೆಗೆ ಮೃತರ ಪೋಷಕರು ದೂರು ನೀಡಿದ್ದರು. 

ಅದರನ್ವಯ ಸುಮೀತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಪ್ರಿಯಾಂಶಿ ಮೂಲತಃ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯವರಾಗಿದ್ದು, ಎರಡು ವರ್ಷಗಳ ಹಿಂದೆ ಯಶವಂತಪುರ ಮತ್ತಿಕೆರೆಯ ಎಂ.ಎಸ್‌.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಅವರು ವೈದ್ಯಕೀಯ ಶಿಕ್ಷಣ ಮುಗಿಸಿದ್ದರು. ಆನಂತರ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ದಂತ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

Tap to resize

Latest Videos

ಕಾಲೇಜಿನ ಓದುವಾಗ ಸಹಪಾಠಿ ಸುಮೀತ್‌ ಪರಿಚಯವಾಗಿ ಇಬ್ಬರ ನಡುವೆ ಪ್ರೇಮವಾಗಿತ್ತು. ಇತ್ತೀಚೆಗೆ ವೈಯಕ್ತಿಕ ವಿಚಾರವಾಗಿ ಈ ಜೋಡಿ ನಡುವೆ ಮನಸ್ತಾಪವಾಗಿತ್ತು ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಬೇಸರಗೊಂಡು ಪ್ರಿಯಾಂಶಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಮದುವೆಯಾಗುವಂತೆ ಮಗಳಿಗೆ ಪ್ರಿಯಾಂಶಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದ. 

ಸಿಬಿಐಗೆ ಸಿಡಿ ಕೇಸ್‌: ಅಮಿತ್‌ ಶಾ ಭೇಟಿಗಾಗಿ ದೆಹಲಿಗೆ ತೆರಳಿದ ರಮೇಶ್‌ ಜಾರಕಿಹೊಳಿ

ಇದಕ್ಕೊಪ್ಪದೆ ಹೋದಾಗ ಮಗಳು ಮದ್ಯ ಮತ್ತು ಸಿಗರೆಟ್‌ ಸೇದುತ್ತಾಳೆ ಎಂದು ಆತ ಅಪಪ್ರಚಾರ ಮಾಡುತ್ತಿದ್ದ. 2022ರ ಮೇನಲ್ಲಿ ಬೆಂಗಳೂರಿಗೆ ಬಂದು ಡಾ.ಸುಮೀತ್‌ಗೆ ಮಗಳ ತಂಟೆಗೆ ಬಾರದಂತೆ ತಾಕೀತು ಮಾಡಿದ್ದೇವು. ಇದಾದ ನಂತರ ಆತ ವರ್ತನೆ ಬದಲಾಯಿಸಿಕೊಳ್ಳಲಿಲ್ಲ. ಈ ಬೆಳವಣಿಗೆಯಿಂದ ನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

click me!