ಬಾಲ್ಯ ವಿವಾಹದ ವಿರುದ್ಧ ಸಿಎಂ ಹಿಮಂತ್ ದಿಟ್ಟ ಹೆಜ್ಜೆ, ನಾಳೆಯಿಂದಲೇ ಅರೆಸ್ಟ್!

By Suvarna News  |  First Published Feb 2, 2023, 9:48 PM IST

ಬಾಲಕಿಯರ ಮೇಲಿನ ಲೈಂಕಿಗ ದೌರ್ಜನ್ಯ, ಬಾಲ್ಯ ವಿವಾಹಕ್ಕೆ ಸಂಪೂರ್ಣ ಕಡಿವಾಣ ಹಾಕಲು ಅಸ್ಸಾಂ ಸಿಎಂ ಮುಂದಾಗಿದ್ದಾರೆ. ನಾಳೆಯಿಂದಲೇ ಅಪ್ರಾಪ್ತರ ವಿವಾಹವಾದರು ಜೈಲು ಸೇರಲಿದ್ದಾರೆ. ಈ ರೀತಿಯ ಮಹತ್ವದ ಆದೇಶ ನೀಡಲಾಗಿದೆ.


ಅಸ್ಸಾಂ(ಫೆ.02):  ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಮ್ಮ ಪ್ರಖರ ಮಾತು ಹಾಗೂ ಕಠಿಣ ಕಾನೂನುಗಳಿಂದಲೇ ಹೆಚ್ಚು ಪ್ರಸಿದ್ದಿಯಾಗಿದ್ದಾರೆ. ಇದೀಗ ಬಾಲ್ಯ ವಿವಾಹ ತಡೆಯಲು ಅತ್ಯಂತ ಕಠಿಣ ನಿರ್ಧಾರ ಘೋಷಿಸಿದ್ದಾರೆ. ಈ ಕುರಿತು ಅಸ್ಸಾಂ ಸಂಪುಟ ಸಭೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ನಾಳೆಯಿಂದಲೇ(ಫೆ.03) ಬಾಲ್ಯ ವಿವಾಹವಾದವರನ್ನು ಬಂಧಿಸಲು ಆದೇಶ ನೀಡಿದ್ದಾರೆ. ಅಪ್ರಾಪ್ತ ಬಾಲಕಿಯರನ್ನು ಮದುವೆಯಾದ ಪುರುಷರಿಗೆ ಇದೀಗ ಸಂಕಷ್ಟ ಎದುರಾಗಿದೆ. ಸರ್ಕಾರ ಆದೇಶದಲ್ಲಿ ಮತ್ತೊಂದು ಮಹತ್ವದ ಆಂಶ ಸೇರಿಸಲಾಗಿದೆ. ಇತ್ತೀಚೆಗಿನ ಬಾಲ್ಯ ವಿವಾಹ ಹಾಗೂ ವರ್ಷಗಳ ಹಿಂದಿನ ಬಾಲ್ಯ ವಿವಾಹ ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಲಾಗಿದೆ.

ಹಿಮಂತ್ ಬಿಸ್ವಾ ಶರ್ಮಾ ಸೂಚನೆ ಬೆನ್ನಲ್ಲೇ ಅಸ್ಸಾಂ ಪೊಲೀಸರು ಸದ್ಯ 4,000 ಬಾಲ್ಯ ವಿವಾಹ ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ಇದರ ಜೊತೆಗೆ ರಹಸ್ಯವಾಗಿ ಆಗಿರುವ ಮದುವೆಗಳ ಕುರಿತು ಗಮನಹರಿಸಿದ್ದಾರೆ. ನಾಳೆಯಿಂದ ಪೊಲೀಸರು ಬಾಲ್ಯ ವಿವಾಹವಾಗಿರುವರ ಮೇಲೆ ದಾಳಿ ನಡೆಸಲಿದ್ದಾರೆ. 

Tap to resize

Latest Videos

16ರ ಅಪ್ರಾಪ್ತೆಗೆ ತಾಳಿ ಕಟ್ಟಿದ 17ರ ಬಾಲಕ, ಮದುವೆಯಾದ ಬೆನ್ನಲ್ಲೇ ಅರೆಸ್ಟ್!

ಮುಂದಿನ 6 ರಿಂದ 7 ದಿನಗಳಲ್ಲಿ ಅಪ್ರಾಪ್ತ ಬಾಲಕಿಯರನ್ನು ಮದುವೆಯಾಗಿರುವ ಪುರುಷರನ್ನು ಬಂಧಿಸಲಾಗುವುದು. ರಾಜ್ಯದಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ.  ಹೆಣ್ಣುಮಕ್ಕಳ ಹಕ್ಕುಗಳ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಬಾಲ್ಯ ವಿವಾಹ ವಿರುದ್ದ ಕಠಿಣ ಕಾನೂನು ಎಲ್ಲಾ ರಾಜ್ಯದಲ್ಲಿರುವಂತೆ ಅಸ್ಸಾಂನಲ್ಲೂ ಜಾರಿಯಲ್ಲಿದೆ. ಆದರೆ ಬಾಲ್ಯ ವಿವಾಹ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಬಾಲ್ಯ ವಿವಾಹವಾಗಿರುವ ಪುರುಷರು ಜೈಲು ಸೇರಲಿದ್ದಾರೆ. ಇದು ಎಲ್ಲರಿಗೂ ಎಚ್ಚರಿಕೆ ಕರೆಗಂಟೆಯಾಗಿದೆ. ಬಾಲ್ಯ ವಿವಾಹಕ್ಕೆ ಮುಂದಾಗುವ ಪುರುಷರ ಮುಂದಿನ ಜೀವನ ಜೈಲಿನಲ್ಲಿ ಎಂದು ಹಿಮಂತ್ ಬಿಸ್ವಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

14 ವರ್ಷಕ್ಕಿಂತ ಕಳೆಗಿನ ಬಾಲಕಿಯರನ್ನು ಮದುವೆಯಾಗಿರುವ ಪುರುಷರ ಮೇಲೆ ಪೋಕ್ಸೋ ಕೇಸ್ ಹಾಕಲು ಸೂಚಿಸಲಾಗಿದೆ. 18 ವರ್ಷಕ್ಕಿಂತ ಕಳೆಗಿನ ಬಾಲಕಿಯರ ಮದುವೆಯಾಗಿರುವ ಪುರುಷರೂ ಕೂಡ ಜೈಲು ಸೇರಲಿದ್ದಾರೆ. ಬಾಲ್ಯ ವಿವಾಹವಾಗಿ ಇದೀಗ ಬಾಲಕಿಗೆ 18 ವರ್ಷ ತುಂಬಿದರೂ ಪತಿಗೆ ಸಂಕಷ್ಟ ತಪ್ಪಿದ್ದಲ್ಲ. ಬಂಧನದಿಂದ ಮುಕ್ತಿ ಇಲ್ಲ. 

ಅತೀ ಹೆಚ್ಚು ಬಾಲ್ಯ ವಿವಾಹ ನಡೆಯುತ್ತಿರುವ ರಾಜ್ಯದ ಹೆಸರು ಪ್ರಕಟಿಸಿದ ಕೇಂದ್ರ!

ಬಾಲ್ಯ ವಿವಾಹ ವಿರುದ್ಧ ನಡೆಯುತ್ತಿರುವ ಈ ದಾಳಿ ಯಾವುದೇ ಸಮುದಾಯವನ್ನು ಗುರಿಯಾಗಿಸಿಲ್ಲ. ಇಲ್ಲಿ ಕೇವಲ ಬಾಲ್ಯ ವಿವಾಹ ಮಾತ್ರ ನೋಡಲಾಗುತ್ತದೆ. ಅವರ ಧರ್ಮ, ಜಾತಿಗಳನ್ನು ನೋಡಲಾಗುವುದಿಲ್ಲ. ಕಾನೂನು ಪ್ರಕಾರವೇ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ಪೊಲೀಸರು 4,000 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾರೆ. ನಾಳೆಯಿಂದ ಕ್ರಮ ಜಾರಿಯಾಗಲಿದೆ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಬಾಲ್ಯ ವಿವಾಹದಿಂದ ಅಸ್ಸಾಂನಲ್ಲಿ ಶಿಶುಮರಣ ಪ್ರಮಾಣ ಹೆಚ್ಚಾಗಿದೆ. ಬಾಲಕಿಯರನ್ನು ಸಂಕಷ್ಟದ ಕೂಪಕ್ಕೆ ತಳ್ಳಲಾಗುತ್ತಿದೆ. ಅಸ್ಸಾಂನಲ್ಲಿ ಸರಾಸರಿ ಶೇಕಡ 31 ರಷ್ಟು ಬಾಲ್ಯ ವಿವಾಹ ನಡೆಯುತ್ತಿದೆ ಎಂದು ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.  ಈ ಬಾಲ್ಯವಿವಾಹಕ್ಕೆ ತಡೆಯೊಡ್ಡಲಾಗುತ್ತದೆ. ಯಾರು ಎಲ್ಲೇ ಅವಿತರೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

click me!