ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗದಕ್ಕೆ ಫ್ಲೈ ಓವರ್‌ನಿಂದ ಜಿಗಿದ ಯುವ ಕ್ರಿಕೆಟಿಗ... ಇಡೀ ಸೀಸನ್ ತಯಾರಿ ನಡೆಸಿದ್ದ!

Published : Jul 27, 2024, 05:41 PM IST
ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗದಕ್ಕೆ ಫ್ಲೈ ಓವರ್‌ನಿಂದ ಜಿಗಿದ ಯುವ ಕ್ರಿಕೆಟಿಗ... ಇಡೀ ಸೀಸನ್ ತಯಾರಿ ನಡೆಸಿದ್ದ!

ಸಾರಾಂಶ

ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಪಡೆದುಕೊಳ್ಳಬೇಕೆಂದು ಸತತವಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದನು. ಆದರೆ ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗಿರಲಿಲ್ಲ. 

ಚೆನ್ನೈ: ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗದಕ್ಕೆ ನೊಂದ ತಮಿಳುನಾಡಿನ ಯುವ ಕ್ರಿಕೆಟಿಗ (Tamil nadu Young Cricketer) ಫ್ಲೈ ಓವರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 20 ಅಡಿ ಎತ್ತರದಿಂದ (20 Feet Flyover) ಜಿಗಿದಿರುವ ಕಾರಣ ಯುವ ಆಟಗಾರನ ಪ್ರಾಣಪಕ್ಷಿ ಹಾರಿ ಹೋಗಿದೆ. ಸ್ಥಳದಲ್ಲಿ ಯಾವುದೇ ಡೆತ್ ನೋಟ್ (Death Note) ಲಭ್ಯವಾಗಿಲ್ಲ. ಸ್ನೇಹಿತರು ಹಾಗೂ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸಿದಾಗ ತಮಿಳುನಾಡು ಪ್ರೀಮಿಯರ್ ಲೀಗ್‌-2024ಕ್ಕೆ (Tamil Nadu Premier League 2024) ಆಯ್ಕೆಯಾಗದ ಹಿನ್ನೆಲೆ ನೊಂದಿದ್ದನು ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ಮೃತ ಯುವ ಆಟಗಾರನನ್ನು ವಿರುಗಕ್ಕಂಬಾಕ್ಕಂ ನಿವಾಸಿ 26 ವರ್ಷದ ಎಸ್‌.ಸ್ಯಾಮೂಯಲ್ ರಾಜಾ (S Samuel Raj suicide) ಎಂದು ಗುರುತಿಸಿದ್ದಾರೆ. ಜುಲೈ 265ರಂದು ಕಾಠೀಪುರದ ಗುಯಿಂಡಿಯ (Kathipara flyover in Guindy) 20 ಅಡಿ ಎತ್ತರ ಫ್ಲೈ ಓವರ್‌ನಿಂದ ಜಿಗಿದು ಸ್ಯಾಮೂಯಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎಸ್‌.ಸ್ಯಾಮೂಯಲ್ ರಾಜಾ ಪ್ರೀಮಿಯರ್ ಲೀಗ್‌ನಲ್ಲಿ ಅವಕಾಶ ಪಡೆದುಕೊಳ್ಳಬೇಕೆಂದು ಸತತವಾಗಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದನು. ಆದರೆ ಪ್ರೀಮಿಯರ್ ಲೀಗ್‌ಗೆ ಸೆಲೆಕ್ಟ್ ಆಗಿರಲಿಲ್ಲ. ತನ್ನ ಬೈಕ್‌ನಲ್ಲಿ ಎಸ್‌.ಸ್ಯಾಮೂಯಲ್ ರಾಜಾ ಬಟ್ ರಸ್ತೆಯ ಮಾರ್ಗವಾಗಿ ತೆರಳುತ್ತಿದ್ದನು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಫ್ಲೈಒವರ್ ಮೇಲೆ ಬೈಕ್ ನಿಲ್ಲಿಸಿದ ಸ್ಯಾಮೂಯಲ್ ನೋಡನೋಡುತ್ತಿದ್ದಂತೆ ಕೆಳಗೆ ಜಿಗಿದಿದ್ದಾನೆ. ಕೂಡಲೇ ಸ್ಥಳೀಯರು ಅಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದ್ರೆ ವೈದ್ಯರು ಎಸ್‌.ಸ್ಯಾಮೂಯಲ್ ರಾಜಾ ಮೃತವಾಗಿರೋದನ್ನು ವೈದ್ಯರು ಘೋಷಣೆ ಮಾಡಿದ್ದಾರೆ. ಎಸ್‌.ಸ್ಯಾಮೂಯಲ್ ರಾಜಾ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಬ್ಲೂಫಿಲಂ ನೋಡಿ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿ ಬಾಯಿ ಮುಚ್ಚಿ 13ರ ಅಣ್ಣನಿಂದ ರೇಪ್; ಮಗನಿಗೆ ತಾಯಿ ಸಾಥ್!

ಪೊಲೀಸರಿಂದ ಮಾಹಿತಿ ಸಂಗ್ರಹ 

ಎಸ್‌.ಸ್ಯಾಮೂಯಲ್ ರಾಜಾ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಟಿಎನ್‌ಪಿಎಲ್-2024ಕ್ಕೆ ಆಯ್ಕೆಯಾಗದ ಹಿನ್ನೆಲೆ ಸ್ಯಾಮೂಯಲ್ ನೊಂದಿದ್ದನು. ಟಿಎನ್‌ಪಿಎಲ್‌ಗಾಗಿ ಸ್ಯಾಮೂಯಲ್ ಇಡೀ ಸೀಸನ್ ತಯಾರಿ ನಡೆಸಿದ್ದನು ಎಂದು ಮೃತನ ಆಪ್ತ ಗೆಳೆಯರು ಹಾಗೂ ಕುಟುಂಬಸ್ಥರು ಹೇಳಿದ್ದಾರೆ. ಆದ್ರೆ ಮನೆ ಅಥವಾ ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ.

ಮದ್ವೆಯಾಗಿ ಒಂದೂವರೆ ವರ್ಷ, ಜೊತೆಯಲ್ಲಿದಿದ್ದು 8 ದಿನ.. ಸಂಬಂಧ ಬೆಳೆಸದ IRS ಅಧಿಕಾರಿ ಗಂಡನ ವಿರುದ್ಧ ಪತ್ನಿ ದೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ