ಪ್ರಕರಣವೊಂದರ ಸ್ಥಳ ಮಹಜರು ಮಾಡಲು ರೌಡಿ ಶೀಟರ್ ಮನು ಎಂಬಾತನನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತುಮಕೂರು ನಗರ ಪೊಲೀಸ್ ಠಾಣೆ ಸಿಪಿಐ ದಿನೇಶ್ ಅವರು ರೌಡಿಶೀಟರ್ ಮನು ಕಾಲಿಗೆ ಗುಂಡು ಹಾರಿಸಿದ್ದಾರೆ.
ತುಮಕೂರು(ಜು.26): ಪ್ರಕರಣವೊಂದರ ಸ್ಥಳ ಮಹಜರು ಮಾಡಲು ಸ್ಥಳಕ್ಕೆ ಕರೆದೊಯ್ದ ವೇಳೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಘಟನೆ ನಡೆದಿರೋದು ತುಮಕೂರು ನಗರದ ದಿಬ್ಬೂರು ಬಳಿ ಇಂದು(ಶುಕ್ರವಾರ) ನಡೆದಿದೆ.
ಪ್ರಕರಣವೊಂದರ ಸ್ಥಳ ಮಹಜರು ಮಾಡಲು ರೌಡಿ ಶೀಟರ್ ಮನು ಎಂಬಾತನನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ತುಮಕೂರು ನಗರ ಪೊಲೀಸ್ ಠಾಣೆ ಸಿಪಿಐ ದಿನೇಶ್ ಅವರು ರೌಡಿಶೀಟರ್ ಮನು ಕಾಲಿಗೆ ಗುಂಡು ಹಾರಿಸಿದ್ದಾರೆ. ಹೀಗಾಗಿ ರೌಡಿ ಶೀಟರ್ ಕಾಲಿಗೆ ಗುಂಡೇಟು ತಗುಲಿದೆ. ಘಟನೆಯಲ್ಲಿ ಪೊಲೀಸರೂ ಕೂಡ ಗಾಯಗೊಂಡಿದ್ದಾರೆ.
undefined
ಚಿಕ್ಕಮಗಳೂರು: ಕಾಡು ಹಂದಿ ಬೇಟೆಗೆ ತೆರಳಿದ ಯುವಕರು, ಗುಂಡೇಟಿನಿಂದ ಓರ್ವ ಸಾವು..?
ಪೊಲೀಸರಿಗೆ ಶರಣಾಗುವಂತೆ ಸಿಪಿಐ ದಿನೇಶ್ ಅವರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ರೌಡಿ ಶೀಟರ್ ಮನು ಪೊಲೀಸರಿಗೆ ಶರಣಾಗದೇ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ್ದನು. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿಶೀಟರ್ ಮನು ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ. ಗಾಯಾಳು ಪೊಲೀಸ್ ಸಿಬ್ಬಂದಿ ಹಾಗೂ ರೌಡಿಶೀಟರ್ ಮನುಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.